19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಗ್ರಹಣ ಹಿಡಿದಿದೆ ಎನ್ನ ....flexible ಭಜನೆ!

January 27, 2009 - 3:28am
shreekant.mishrikoti
ಗ್ರಹಣ ಹಿಡಿದಿದೆ ಎನ್ನ | ಮನಕೆ | ಗ್ರಹಣ ಹಿಡಿದಿದೆ || ಪ|| ಶಾಲೆಕಾಲೇಜೆಂಬ ಗ್ರಹಣ , ನೌ- ಕರಿಚಾಕರಿಯ ಗ್ರಹಣ ಗಳಿಕೆಉಳಿಕೆಯ ಗ್ರಹಣ ||೧|| ಪ್ರೀತಿಪ್ರೇಮವೆಂಬೊ ಗ್ರಹಣ ,ಮ- ಡದಿಮಕ್ಕಳೆಂಬೊ ಗ್ರಹಣ ಬಂಧುಬಳಗವೆಂಬೊ ಗ್ರಹಣ ||೨|| ಟೀವಿಕಂಪ್ಯೂಟರ್ರೆಂಬೋ ಗ್ರಹಣ ,ಮೊ- ಬೈಲು ಇಂಟರ್ನೆಟ್ಟ ಗ್ರಹಣ ಸಿನಿಮಾ ಸಂಗೀತೆಂಬೋ ಗ್ರಹಣ ||೩|| ನಾನೆ ಜಾಣನೆಂಬ ಗ್ರಹಣ, ಅವ- ರಿವರ ಹಿಂದಿಕ್ಕುವೆನೆಂಬ ಗ್ರಹಣ ದೇವ ದಿಂಡಿರೆಂಬ ಗ್ರಹಣ ||೪|| ****ಅಡಿಟಿಪ್ಪಣಿ - ***೧) ಇದರ ಪಲ್ಲವಿಯ ಇನ್ನೊಂದು ಪಾಠವೂ ಇದ್ದು .... ಅದು ಹೀಗಿದೆ ಗ್ರಹಣ ಬಿಟ್ಟಿತು | ಎನ್ನ ಮನಕೆ | ಹಿಡಿದ ಗ್ರಹಣ ಬಿಟ್ಟಿತು || ಹೀಗಾಗಿ ನಿಮಗೆ ಬೇಕಾದ ಪಲ್ಲವಿಯನ್ನು ಹಾಡಿಕೊಳ್ಳುವುದು ! ****೨) ಕೃತಿಕಾರರ ಅಂಕಿತ ಭಾಗವು ಬಿಟ್ಟು ಹೋಗಿದ್ದು , ನಿಮಗೆ ಬೇಕಾದಂತೆ ನಿಮ್ಮ ಇಷ್ಟದೈವವನ್ನೋ , ನಿಮ್ಮ ಹೆಸರನ್ನೋ ಸೇರಿಸಿಕೊಂಡು ಇನ್ನೆರಡು ಸಾಲನ್ನು ಹೊಸೆದುಕೊಂಡು ಹಾಡಿಕೊಳ್ಳುವುದು !!
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by savithasr on
'ಗ್ರಹಣ ಹಿಡಿದಿದೆ' ಭಜನೆ ಚೆನ್ನಾಗಿದೆ. -ಸವಿತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shaamala on
ನೀವು ಪಟ್ಟಿ ಮಾಡಿರೋ ಗ್ರಹಣಗಳು ಅಷ್ಟು ಸುಲಭವಾಗಿ ಬಿಡುತ್ತವೆಯೇ, ಗ್ರಹಣ ಬಿಟ್ಟಿತು ಭಾಗವನ್ನು ಹಾಡಿಕೊಳ್ಳಲು? ಹಾಗೇ ಹಾಡಬಲ್ಲ ಪುಣ್ಯಾತ್ಮರು ಯಾರೋ, ಪುರಂದರದಾಸರನ್ನು ಬಿಟ್ಟರೆ? :) ಕವನ ಚೆನ್ನಾಗಿದೆ! ಧನ್ಯವಾದಗಳು ಶಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.