23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮಹಾಭಾರತದ ಕತೆ

December 26, 2007 - 3:12pm
shreekant.mishrikoti
ರಾಮಾಯಣ ಮಹಾಭಾರತದ ಕತೆ ನಮಗೆಲ್ಲ ಗೊತ್ತಿದ್ದದ್ದೇ - ಅಂತ ತಿಳುಕೊಂಡಿರ್ತೀವಿ . ಆದ್ರೆ ಅಲ್ಲಿನ ಘಟನೆಗಳ ಸೀಕ್ವೆನ್ಸು - ಅನುಕ್ರಮ - ಯಾವ್ದಾದ ಮೇಲೆ ಯಾವ್ದು - ( ಇಂಗ್ಲೀಷು , ಸಂಸ್ಕ್ರುತ - ಕನ್ನಡ ಎಲ್ಲದಕ್ಕೂ ನ್ಯಾಯ ಒದಗಿಸಿದ ಹಾಗಾಯ್ತು :) ) ನಮಗೆ ನೆನಪಿರೋದಿಲ್ಲ . ಇನ್ನೊಮ್ಮೆ ಓದಲುಕೂತಾಗಲೇ ಗೊತ್ತಾಗೋದು . ನಮ್ಮ ಪ್ರೈಮ್ ಮಿನಿಸ್ಟರ್ ಗಳ , ಚೀಫ್ ಮಿನಿಸ್ಟರ್ ಗಳ ಕ್ರಮಾನಾದ್ರೂ ನೀವು ಸರಿಯಾಗಿ ಹೇಳಬಹುದಾ ? ಹೋಗಲಿ ಬಿಡಿ , ಮಹಾಕಾವ್ಯಗಳ ವಿಷಯ ಮಾತಾಡುವಾಗ ಹುಲುಮಾನವರ ವಿಷಯ ಏಕೆ? ಕನ್ನಡದ ಆಸ್ತಿ - ಮಾಸ್ತಿ ವೆಂಕಟೇಶ್ ಅಯ್ಯಂಗಾರ ಅವರ ಆದಿಕವಿ ವಾಲ್ಮೀಕಿ ಮತ್ತು ಶ್ರೀ ರಾಮ ಪಟ್ಟಾಭಿಷೇಕ ಕಾವ್ಯ ಓದಿ , ರಾಮಾಯಣದ ನಿಜವಾದ ಭಾಗ ಯಾವುದು , ಅದು ಏಕೆ ಮಹಾಕಾವ್ಯ ಎಂದೆಲ್ಲ ತಿಳಿದು ರಸಗ್ರಹಣ ಮಾಡಿದ್ದೆನು . ಅಂತರ್ಜಾಲದಲ್ಲಿರುವ ಈ ಪುಸ್ತಕಗಳ ಲಿಂಕನ್ನೂ ಕೊಟ್ಟಿದ್ದೆ. ಇಲ್ಲಿ - ( http://www.sampada.n...) ಇದೀಗ ಅಂತರ್ಜಾಲದಲ್ಲೇ ಇರುವ , ಮಹಾಭಾರತ ಕುರಿತಾದ ಪುಸ್ತಕ , ’ಭಾರತತೀರ್ಥ’ ಓದುತ್ತಿರುವೆ. ಅದು ಇಲ್ಲಿದೆ . http://dli.iiit.ac.i... ಈಗ ಮೊದಲ ನಲವತ್ತು ಪುಟ ಓದಿದ್ದೇನೆ. ಸಂಕ್ಷಿಪ್ತವಾಗಿ ಮಹಾಭಾರತದ ಕತೆಯನ್ನು ಈ ಭಾಗದಲ್ಲಿ ಕೊಟ್ಟಿದ್ದಾರೆ . ಒಟ್ಟು ಕಥೆಯ ಘಟನಾಕ್ರಮ ತಿಳಕೊಂಡಂತಾಯಿತು. ಇಷ್ಟರಲ್ಲಿ ನಾನು ಕಂಡುಕೊಂಡ ಕೆಲ ವಿಷಯಗಳು . ೧. ರಾಮಾಯಣದಲ್ಲಿನಂತೆ ಇಲ್ಲೂ ಅನೇಕ ಭಾಗಗಳು ಯಾರ್ಯಾರೋ ಸೇರಿಸಿದ್ದು . ಒಂದು ಲಕ್ಷ ಶ್ಲೋಕಗಳ ಈ ಕಾವ್ಯದಲ್ಲಿ ಮೂಲಭಾಗ ೨೪,೦೦೦ ಶ್ಲೋಕದ್ದು ಮಾತ್ರ ೨. ಭರತನ ವಂಶಜರು ಈ ಕೌರವರು ಪಾಂಡವರು , ಅವರು ಭಾರತರು , ಅವರಕತೆಯೇ ಭಾರತ . ೩. ಈ ಕತೆಯನ್ನು ಹೇಳೋದು ವ್ಯಾಸರು . ಲೋಕದ ಜೀವನವನ್ನು ಚೆನ್ನಾಗಿ ಅರಿತ ಈತ ಬಾಳಿನ ತತ್ವವನ್ನು ತಿಳಿಸಿ ಕೃಷ್ಣನನ್ನು ಭಗವಂತನ ಅವತಾರ ಎಂದು ಗುರುತಿಸಿದ್ದಾನೆ. ಕೃಷ್ಣನ ಸ್ವರೂಪವನ್ನು ಜನಕ್ಕೆ ತಿಳಿಸಲು ಕೃಷ್ಣನೇ ತಳೆದ ಇನ್ನೊಂದು ರೂಪವೆ ಇವನು ಎಂದು - ಎರಡನೇ ಕೃಷ್ಣ ಅಥವಾ ಕೃಷ್ಣ ದ್ವೈಪಾಯನ ಎಂದು ಕರೆಯುತ್ತಾರೆ . ೪. ಪಾಂಡವರು ಮತ್ತು ಕೌರವರು ಇಬ್ಬರೂ ಕುರುವಂಶಜರೇ ಆದರೂ . ಯುಧಿಷ್ಟಿರ (ಧರ್ಮರಾಯ )ಮತ್ತು ಅವನ ನಾಲ್ವರು ಸೋದರರನ್ನು ಬಿಟ್ಟು ಉಳಿದವರಿಗಷ್ಟೇ ಕೌರವರು ಅಂದಾಗ ಈ ಪಾಂಡವರು ಅಧಿಕೃತವಾಗಿ ಕುರುವಂಶದವರಲ್ಲ ಅಂತ ಕತೆ ಹೇಳುವಾಗಲೆ ನಿರ್ಧರಿಸಿದ ಹಾಗೆ ಕಾಣುತ್ತೆ :) , ....(ಮುಂದುವರಿದೀತು)
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by hpn on
ಪರೀಕ್ಷಿತ ರಾಜನಿಗೆ ಮುನಿಯೊಬ್ಬರು (ಶುಕದೇವ?) ಹೇಳುವ ಕಥೆಯಲ್ಲಿ ಬರುತ್ತದಲ್ವೆ ಮಹಾಭಾರತ? (ಓದಿ ಬಹಳ ದಿನಗಳಾದುವು, ನನ್ನ ignorance ಮನ್ನಿಸಿ). ನೈಮಿಶಾರಣ್ಯದಲ್ಲಿ ಶೌನಕ ಮಹರ್ಷಿಗಳು ಹಲವು ಋಷಿಗಳನ್ನೊಡಗೂಡಿ ಕಥೆ ಕೇಳುತ್ತಾರೆ ಎಂದು ಓದಿದ ನೆನಪು. ವ್ಯಾಸರು ಹೇಳೋದು, ಗಣಪ ಬರೆದದ್ದು ಎಂಬುದೂ ಪ್ರಸಿದ್ಧ ಅಲ್ವೆ? -- ನನ್ನ ಬ್ಲಾಗ್: [:http://www.sampada.n...|ಪರಿವೇಶಣ] | [:http://www.hpnadig.n...|PariveshaNa]
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on
ಕಥೆ ಹೇಳುವುದು ಜನಮೇಜಯನಿಗೆ (ಪರೀಕ್ಷಿತನ ಮಗ) - ಹೇಳುವುದು ವೈಶಂಪಾಯನ. -ಹಂಸಾನಂದಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by karthik on
OT ಇಲ್ಲೊಂದು ಬೇರೆ ರೀತಿಯ ಮಹಾಭಾರತ ಇದೆ ನೋಡಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Sunil Jayaprakash on
....(ಮುಂದುವರಿದೀತು). ಮೆಗಾ ಧಾರವಾಹಿಗಳಿಗೆ ಹೊಸ ಆಯಾಮ ನೀಡಿದಿರಿ ಮಿಶ್ರಿಕೋಟಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.