ಲೀನಕ್ಸು , ಉಬುಂಟು , ಕನ್ನಡ ( ಕನ್ನಡ ಕಂಪ್ಯೂಟರ್ ಪಾಠ )
ಲಿನಕ್ಸ್ ಅನ್ನೋದು ವಿಂಡೋಸ್ ತರಹ - ಕಾರ್ಯಕಾರೀ ವ್ಯವಸ್ಥೆ . ಆಪರೇಟಿಂಗ್ ಸಿಸ್ಟಮ್ಮು .
ವಿಂಡೋಸ್ ಗೆ ಬದಲಿ ಆಗಿ ಬಳಸಬಹುದು . ಅಗ್ಗ ; ಅನೇಕಸಲ ಪುಕ್ಕಟೆ !
ಬಹಳ ಹಣ ಕೊಟ್ಟು ವಿಂಡೋಸ್ ಖರೀದಿ ಮಾಡುವ ಬದಲು ಅಥವಾ ಕಳ್ಳ ವಿಂಡೋಸ್ ಬಳಸುವ ಬದಲು ಇದನ್ನು ಬಳಸಬಹುದು .
ಈಗ ಸಾಮಾನ್ಯ ಕಂಪ್ಯೂಟರ್ ನಲ್ಲಿ ಬಳಸುವ ಹಾಗೆ ಸಿಗುತ್ತದೆ . ಈ ಲೀನಕ್ಸ್ ಬಗೆಗಳಲ್ಲಿ ಉಬುಂಟುವೂ ಒಂದು. www.ubuntu.com ನಲ್ಲಿ ರಜಿಸ್ಟರ್ ಮಾಡಿದರೆ ನಿಮಗೆ ಪುಕ್ಕಟೆಯಾಗಿ ಬಂದು ತಲಪುತ್ತದೆ .
ಹೀಗೆ ನಾನು ಹಿಂದೊಮ್ಮೆ ತರಿಸಿದ್ದೆ - ಅದರ ಆವೃತ್ತಿ 6.06 . ಅದು ಲೈವ್ ಸೀಡಿ ಆಗಿತ್ತು . ಲೈವ್ ಸೀಡಿ ಅಂದರೇನು ? ಅದನ್ನು ನಿಮ್ಮ ಸೀಡೀ ಡ್ರೈವ್ ನಲ್ಲಿ ಹಾಕಿ ಅದರಿಂದ ನಿಮ್ಮ ಕಂಪ್ಯೂಟರ್ ಶುರು ಆಗೋ ಹಾಗೆ ಮಾಡಿದರೆ ( ಹೀಗೆ ಶುರು ಮಾಡೋದನ್ನೇ ಬೂಟಿಂಗ್ ಅಂತಾರೆ - ಕನ್ನಡದಲ್ಲಿ ಬೂಟ್ ಮಾಡು ಅಂತಾರೆ :)
ಲೀನಕ್ಸ್ ಲೋಡ್ ಆಗುತ್ತದೆ . ಇದನ್ನು ನಿಮ್ಮ ಕಂಪ್ಯೂಟರಿನಲ್ಲಿ ನೆಲೆಗೊಳಿಸದೇ ( ಇನ್‌ಸ್ಟಾಲ್ ಮಾಡದೇನೇ) ಬಳಸಬಹುದು .
ಹೀಗೆ ಲೀನಕ್ಸ್ ಲೋಡ್ ಆದಾಗ ನಿಮ್ಮ ತೆರೆಯ ಮೇಲೆ ಎಂಬ - ಇನ್‌ಸ್ಟಾಲ್ ಐಕಾನು( ಐಕಾನ್ - ಸಾಂಕೇತಿಕ ಸಣ್ಣ ಚಿತ್ರ ) ಕಾಣುವದು . ಅದನ್ನು ಕ್ಲಿಕ್ಕಿಸಿದರೆ ... ನಿಮ್ಮ ಕಂಪ್ಯೂಟರಿನಲ್ಲಿ ಅದನ್ನು ನೆಲೆಗೊಳಿಸುವಿಕೆ ಆರಂಭವಾಗುವದು .
ಹೀಗೆ ನಾನು ಪಡೆದ ಸೀಡಿಯನ್ನು ನಾನು ಪ್ರಯತ್ನಿಸಿದರೆ . ... ನನ್ನ ಕಂಪ್ಯುಟರ್ ನಲ್ಲಿ ಆಗುತ್ತಿರಲಿಲ್ಲ . ಅದೇನೋ xconfig ಅಂತೆ , ಅದರಲ್ಲೇನೂ ತೊಂದರೆ .. ಹಾಗಾಗಿ ಗ್ರಾಫಿಕಲ್ ಮೋಡ್ -( ಚಿತ್ರ , ಬಣ್ಣ ಕಾಣುವ ಬಗೆ) ಗೆ ಹೋಗುತ್ತಿರಲೇ ಇಲ್ಲ ; ಹಾಗಾಗಿ ಇನ್‍ಸ್ಟಾಲ್ ಐಕಾನ್ ಬರ್ತಲೇ ಇರ್ಲಿಲ್ಲ ; ಇನ್ನು ಇನ್‌ಸ್ಟಾಲ್ ಮಾಡೋದೇನು ?
ಆದರೆ ನನ್ನಂತಹದೇ ಬೇರೆ ಕಂಪ್ಯೂಟರ್ ನಲ್ಲಿ ಈ ತೊಂದರೆ ಇರಲಿಲ್ಲ . ಅಲ್ಲಿ ಲೈನಕ್ಸ್ ಶುರುವಾಗಿ ತೆರೆಯ ಮೇಲೆ ಎಂಬ - ಇನ್‌ಸ್ಟಾಲ್ ಐಕಾನು ಕಾನುತ್ತಿತ್ತು ... ಅದು ಬೇರೆಯವರ ಕಂಪ್ಯೂಟರ್ ಆದ್ದರಿಂದ ನಾನು ಮುಂದುವರೆವ ಹಾಗಿರಲಿಲ್ಲ . ಹಾಗಾಗಿ ಅಷ್ಟಕ್ಕೆ ಬಿಟ್ಟಿದ್ದೆ .
ನಾವು ಕಛೇರಿಯಲ್ಲಿ ಬಳಸೋದು ವಿಂಡೋಸ್ . ಹೇಗೂ ಅದು ಇತ್ತಲ್ಲಾ ?
ಇತ್ತೀಚೆಗೆ ಹೊಸ ಆವೃತ್ತಿ - ೭.೧ ಬಿಡುಗಡೆಯಾದ ಬಗ್ಗೆ ಸಂಪದದಲ್ಲಿ ಓದಿ ನಾನೂ ತರಿಸಿಕೊಂಡೆ . ಬೇರೆ ಬೇರೆ ಆವೃತ್ತಿಗಳಿಗೆ ಬೇರೆ ಬೇರೆ ಹೆಸರನ್ನು ಇಡುತ್ತಾರೆ . ಇದರ ಹೆಸರು ಗಟ್ಸಿ ಗಿಬ್ಬನ್ ಅಂತೆ . ಇದೂನೂ ಲೈವ್ ಸೀಡೀನೇ . ಕನ್ನಡವು out-of-the-box ಬರುತ್ತದೆ ಅಂತಾನೂ ಓದಿದೆ .
( out-of-the-box ಅಂದ್ರೆ ಏನೋ ? ಹುಡುಕಬೇಕು !)
ನೋಡೋಣ ಅಂತ ಪ್ರಯತ್ನಿಸಿದೆ . ನಾಳೆ ನನ್ನ ಇನ್ಸ್ಟಾಲ್ಲೇಶನ್ ಅನುಭವ ಬರೆವೆ . ಆಮೇಲೆ ಅದರಲ್ಲಿ ಇಂಟರ್ನೆಟ್ ಬರಲು ನಾನು ಮಾಡಿದ್ದೇನು ? ಅದನ್ನು ಬರೆಯುವೆ .. ಆಮೇಲೆ ... ಅಲ್ಲಿ ಕನ್ನಡ ಕಾಣ್ತಿರಲಿಲ್ಲ ....ಅದಕ್ಕೆ ನಾನು ಮಾಡಿದ್ದೇನು ? ಬರೆಯುವೆ . ನೆಟ್ಟಿನಲ್ಲಿ ಈಗಾಗಲೇ ಇದ್ದ ಮಾಹಿತಿ ಎಷ್ಟು ನೆರವಾಯಿತು ಅನ್ನೋದನ್ನೂ ಬರೆಯುವೆ. ಸ್ವಲ್ಪ ವ್ಯತ್ಯಾಸಗಳೂ ಇದ್ದವೆನ್ನಿ .
... ದಾರಿ ನೋಡಿ .. (’ನಿರೀಕ್ಷಿಸಿ, ಪ್ರತಿಷ್ಠಾಪನೆ’ ಇತ್ಯಾದಿ ಬರೆದಿಲ್ಲ .. ಗಮನಿಸಿದಿರಾ?)
- shreekant.mishrikoti's blog
- Login or register to post comments
- 866 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಉ: ಲೀನಕ್ಸು , ಉಬುಂಟು , ಕನ್ನಡ ( ಕನ್ನಡ ಕಂಪ್ಯೂಟರ್ ಪಾಠ )
ಈ ನಮ್ಮ ಮಿಶ್ರಿಕೋಟಿ ಹೇಗಪ್ಪಾ ಅಂದ್ರೆ, "ಬರೆಯೋಕ್ಕೆ ಸ್ವಲ್ಪ ಬಿಡುವು ನೀಡ್ತಾ ಇದ್ದೀನಿ" ಅಂತ ಹೇಳ್ತಾರೆ. ಆದರೆ ಅದರ ಬಗಲಲ್ಲೇ ಸಖತ್ತಾಗಿರೋ ಯಾವುದಾದರೂ ವಿಷಯದ ಬಗ್ಗೆ ಸೂಪರ್ರಾಗಿ ಬರೆದಿರುತ್ತಾರೆ. ಬೇಗ ಬೇಗ ಬರೀರಿ ಮಿಶ್ರಿಕೋಟಿ, ಅಲ್ಲಿಯ ತನಕ ನಾವು ದಾರಿ ಕಾಣದಾಗಿದೆ ರಾಘವೇಂದ್ರನೇ(ಅಥವಾ ಮಿಶ್ರಿಕೋಟಿಯೇ) ಅಂತ ಧ್ಯಾನದಲ್ಲಿರುತ್ತೇವೆ.
ಉ: ಲೀನಕ್ಸು , ಉಬುಂಟು , ಕನ್ನಡ ( ಕನ್ನಡ ಕಂಪ್ಯೂಟರ್ ಪಾಠ )
ಲಿನಕ್ಸ್‌ನಲ್ಲಿ ಕನ್ನಡ ಬಂತಾ ಅಂತ ಕುತೂಹಲದಿಂದ ಕಾಯ್ತಾ ಇದ್ದೇನೆ. ನನಗೆ ಲಿನಕ್ಸ್‌ನಲ್ಲಿ ಇಂಟರ್‌ನೆಟ್ ತುಂಬಾ ಸುಲಭವಾಗಿ ಬಂತು,... ಆದರೆ ಕನ್ನಡ ಮಾತ್ರ ಇಲ್ಲ. ಕಾಂಕರರ್‌ನಲ್ಲಿ ಕನ್ನಡ ಬ್ರೌಸ್ ಮಾಡಬಹುದು, ಬರೆಯುವುದು ಹೇಗೆ? ನಿಮ್ಮ ಪ್ರಯತ್ನ ಯಶ (ಜಸ?) ಕಂಡಿದೆಯೇ?
ಉ: ಲೀನಕ್ಸು , ಉಬುಂಟು , ಕನ್ನಡ ( ಕನ್ನಡ ಕಂಪ್ಯೂಟರ್ ಪಾಠ )
ನೀವು ಬಹುಶಃ ಪ್ರಯತ್ನಿಸಿ ನೋಡಿಲ್ಲ - ಕನ್ನಡ ಲಿನಕ್ಸಿನಲ್ಲಿ ಅಷ್ಟೇನೂ ಕಷ್ಟವಲ್ಲ. ಈ ಹಿಂದೆ ನಾನೊಮ್ಮೆ ಹೇಳಿದಂತೆ ನೀವೆಲ್ಲರೂ ಒಮ್ಮೆ ಒಟ್ಟಾದರೆ ಖುದ್ದಾಗಿ ನಾನೇ ಬಂದು ಕನ್ನಡ ಬಳಸುವುದು ಹೇಗೆ ಎಂಬುದನ್ನು ತೋರಿಸಿಕೊಡುವೆ.
ಮಿಶ್ರಿಕೋಟಿಯವರೆ, ಔಟ್ ಆಫ್ ಬಾಕ್ಸ್ ಅಂದರೆ ನೀವೇನೂ ಮಾಡದೆ ಕನ್ನಡ ಬರೋದು ಅಂತ. ಉಬುಂಟು ಗಟ್ಸಿ ಆವೃತ್ತಿಯನ್ನು ಇದುವರೆಗೂ ಹಲವಾರು ಕಂಪ್ಯೂಟರುಗಳಿಗೆ ಹಾಕಿರುವೆ. ಎಲ್ಲದರಲ್ಲೂ ಕನ್ನಡ ಔಟ್ ಆಫ್ ಬಾಕ್ಸ್ ಏ ಬಂದದ್ದು. ನೀವೆಲ್ಲೋ ಕನ್ನಡ ಲೊಕ್ಯಾಲೆ ಹಾಕಿಕೊಂಡಿರಲಿಕ್ಕಿಲ್ಲ. ಅಥವ ಏನೋ ಚಿಕ್ಕ ಪುಟ್ಟ ತಪ್ಪು ಮಾಡಿಕೊಂಡಿರುತ್ತೀರಿ. ಅಥವ ಆ ದಿನ ಎಡ ಬದಿಗೇ ಎದ್ದಿರೋ ಏನೊ. :P
ಜೊತೆಗೆ ಲೈವ್ ಸಿ ಡಿಪ್ರಯತ್ನಿಸಿ ಕನ್ನಡ ಬರಲಿಲ್ಲ ಎನ್ನಬೇಡಿ. ಕನ್ನಡದ ಲೊಕ್ಯಾಲೆ ಅದರಲ್ಲಿರೋದಿಲ್ಲ.
ನೆಟ್ಟಿನಲ್ಲಿದ್ದ ಮಾಹಿತಿ ನಿಮಗೆಷ್ಟು ನೆರವಾಯಿತು ಬರೆಯುತ್ತೇನೆ ಎಂದು ಬರೆದಿರುವುದನ್ನು ಓದಿ ನಗು ಬಂತು. ಡಾಕ್ಯುಮೆಂಟು ಬರೆಯುತ್ತಿರುವವ ಮರ ಹತ್ತಿಸುತ್ತಿರುವವನಂತೆ - ಕೈಗೆ ಎಟುಕುವಷ್ಟು ಹತ್ತಿಸುತ್ತಾನೆ, ಮುಂದೆ ನೀವೇ ಹತ್ತಬೇಕು. ಜೊತೆಗೆ ಲಿನಕ್ಸ್ ನಿತ್ಯ ಬದಲಾಗುತ್ತಿರುತ್ತದೆ. ಪ್ರತಿ ನಿತ್ಯ ಹೊಸ ಅಪ್ಡೇಟುಗಳು ಬರುತ್ತಿರುತ್ತವೆ. ಡಾಕ್ಯುಮೆಂಟು ಈ ಸಂದರ್ಭದಲ್ಲಿ ಕೇವಲ ದಾರಿ ತೋರಿಸಬಲ್ಲುದು, ಜೊತೆಗೆ ನಡೆಸಿಕೊಂಡು ಹೋಗಲಾರದು. ನೀವು ಏನಾದರೂ ಕಂಡುಕೊಂಡಿರಾದರೆ ಅದನ್ನು ಉಳಿದವರೊಂದಿಗೆ ಬರೆದು ಹಂಚಿಕೊಂಡು ಮರ ಹತ್ತಿಸುವವರಾಗಿ ಪಾಲ್ಗೊಳ್ಳಿ ;-)
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಲೀನಕ್ಸು , ಉಬುಂಟು , ಕನ್ನಡ ( ಕನ್ನಡ ಕಂಪ್ಯೂಟರ್ ಪಾಠ )
ಕನ್ನಡ ಲೋಕ್ಯಾಲೆ ಹಾಕಿಕೊಳ್ಳುವದೆಂದರೇನು ?
ಇನ್‌ಸ್ಟಾಲ್ ಮಾಡುವಾಗ ಮೊದಲಿಗೇ ಭಾಷೆಯ ಒಂದು ಮೆನು ಬರುತ್ತಲ್ಲ , ಅಲ್ಲಿ ಕನ್ನಡ ಸೆಲೆಕ್ಟ್ ಮಾಡೋದಾ ? ಆದ್ರೆ ಅಲ್ಲಿ ಕನ್ನಡ ಭಾಶೆ ಬರೋದೇ ಇಲ್ವಲ್ಲ ? ಹಿಂದಿ ಬಂಗಾಲಿ ಗುಜರಾತಿ ತಮಿಳು ಮಲಯಾಳಂ ಎಲ್ಲಾ ಇವೆ ?
ವಿಂಡೋಸ್ ನಲ್ಲಿದ್ದ ನೆಟ್ವರ್ಕ್ ಸೆಟ್ಟಿಂಗ್ಸ್ ಉಬುಂಟುನಲ್ಲಿ ಹಾಕಿಕೊಂಡ ಮೇಲೆ ಇಂಟರ್ನೆಟ್ಟು ಬಂತು .
ಆಮೇಲೆ ನಾನು ಮಾಡಿದ್ದು ಇಷ್ಟು
http://dev.sampada.n... ಪುಟದಲ್ಲಿ ಹೇಳಿದ ಹಾಗೆ
Malige* ಇರುವ ಸ್ಥಳಕ್ಕೆ ಹೋಗಿ ( ಅವು ಅಲ್ಲಿ ಹೇಳಿದ ಸ್ಥಳದಲ್ಲಿಲ್ಲ)
sudo rm -rf Malige*
ಆದೇಶ ಬರೆದು ಡಿಲೀಟ್ ಮಾಡಿದೆ
ಆಮೇಲೆ http://dev.sampada.n... ಪುಟದಲ್ಲಿ ಕೊಟ್ಟಿರುವ fonts from TDIL. ಲಿಂಕ್ ಅನ್ನು ಕ್ಲಿಕ್ಕಿಸಿ ಅವನ್ನು ಡೌನ್ಲೋಡ್ ಮಾಡಿ ,
ಅಲ್ಲಿಂದ KN ದಿಂದ ಶುರು ಆಗುವ ಫಾಂಟುಗಳನ್ನು ಮೊದಲು Malige* ಇದ್ದ ಸ್ಥಳಕ್ಕೆ ಕಾಪಿ ಮಾಡಿದೆ .
ಆಮೇಲೆ
fc-cache -fv
ಆದೇಶ ಬರೆದು ಎಂಟರ್ ಒತ್ತಿ
ನಂತರ
ರಿಬೂಟ್ ಮಾಡಿದಾಗ
firebox ಬ್ರೌಸರ್ ನಲ್ಲಿ ಸಂಪದ ತಾಣಕ್ಕೆ ಹೋದಾಗ ಕನ್ನಡ ಕಂಡಿತು .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಲೀನಕ್ಸು , ಉಬುಂಟು , ಕನ್ನಡ ( ಕನ್ನಡ ಕಂಪ್ಯೂಟರ್ ಪಾಠ )
ಕನ್ನಡ ಲೊಕಾಲೆ ಹಾಕಿಕೊಳ್ಳುವುದು ಎಂದರೆ ಕನ್ನಡ ಭಾಷೆಯ ಪರದೆ ಹಾಕಿಕೊಳ್ಳುವುದು. ಕನ್ನಡ ಭಾಷೆಯ ಪರದೆಯೊಂದಿಗೆ ಕನ್ನಡಕ್ಕೆ ಬೇಕಾದ ಎಲ್ಲ ಪ್ಯಾಕೇಜುಗಳು ತಂತಾನೆ ಇನ್ಸ್ಟಾಲ್ ಆಗುತ್ತವೆ.
ಉಬುಂಟು ಹಾಗೂ ಡೆಬಿಯನ್ನಿನಲ್ಲಿ ಇದು - language-support-kn ಪ್ಯಾಕೇಜು. ಇದನ್ನ ಹಾಕಿಕೊಳ್ಳಲು:
System -> Administration -> Synaptic Package Manager
ಗೆ ಹೋಗಿ
ಅಲ್ಲಿ "language-support-kn" ಹುಡುಕಿ ಇನ್ಸ್ಟಾಲ್ ಮಾಡಿಕೊಳ್ಳಿ,
ಅಥವ
ಟರ್ಮಿನಲ್ ಒಂದನ್ನು ಓಪನ್ ಮಾಡಿ,
sudo apt-get install language-support-kn
ಎಂದು ಟೈಪಿಸಿ ಅದು ಕೇಳಿದಾಗ ನಿಮ್ಮ ಪಾಸ್ವರ್ಡ್ ಟೈಪಿಸಿ.
*********
ವಿಂಡೋಸ್ ನಲ್ಲಿದ್ದ ನೆಟ್ವರ್ಕ್ ಸೆಟ್ಟಿಂಗ್ಸ್ ಹಾಕಿಕೊಂಡಾಗ ಉಬುಂಟುವಿನಲ್ಲೂ ಬಂದಿತು ಅನ್ನೋದು obvious. ಯಾಕಂದ್ರೆ ನೆಟ್ವರ್ಕ್ ಸೆಟ್ಟಿಂಗ್ಸ್ ಎಲ್ಲದರಲ್ಲೂ ಒಂದೇ. ಕಂಪ್ಯೂಟರಿಗೆ ಅದು ತಿಳಿಯದೆ ಇಂಟರ್ನೆಟ್ಟಿಗೆ ಸಂಪರ್ಕ ಸಿಗದು.
*********
ಮಲ್ಲಿಗೆ ಫಾಂಟು IIScಯವರಿಂದ ಕೇದಗೆಯೊಂದಿಗೆ ಬಂದ buggy fontಉ. ttf-kannada-fonts ಪ್ಯಾಕೇಜಿನಲ್ಲಿ ಇದನ್ನು ಸೇರಿಸಿ ಕೊಡಲಾಗುತ್ತಿದೆ, ಡೆಬಿಯನ್ ಮತ್ತು ಉಬುಂಟುವಿನಲ್ಲಿ. ಇದನ್ನು ನೋಡಿಕೊಳ್ಳುತ್ತಿರುವವರು ಸೌಮ್ಯದೀಪ್ ಮೋದಕ್ ಅಂತ ಒಬ್ಬರು. ಇದನ್ನು ತೆಗೆದುಹಾಕಿ ಎಂದು ಅವರಿಗೆ ಕೋರಿಕೆ ಸಲ್ಲಿಸಿದ್ದೆ. ಅದ್ಯಾಕೋ ಇನ್ನೂ ಮಲ್ಲಿಗೆ ಉಳಿಸಿಕೊಂಡಿರುವಂತಿದೆ. ಜೊತೆಗೆ ಫೆಡೋರಾದೊಂದಿಗೆ ಬರುವ "ಲೋಹಿತ್ ಕನ್ನಡ" ಕೂಡ ಸೇರಿಸಲ್ಪಟ್ಟಿದೆ. ಲೋಹಿತ್ ಕನ್ನಡದ ಅಕ್ಷರಗಳು ಓದಲು ತುಂಬಾ ಕೆಟ್ಟದಾಗಿವೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಲೀನಕ್ಸು , ಉಬುಂಟು , ಕನ್ನಡ ( ಕನ್ನಡ ಕಂಪ್ಯೂಟರ್ ಪಾಠ )
ಅದು installer. ಡೆಬಿಯನ್ ಹಾಗೂ ಉಬುಂಟು installerಗೆ ಇನ್ನೂ ಕನ್ನಡದ ಅನುವಾದ ಲಭ್ಯವಿಲ್ಲ. translate.sampada ದಲ್ಲಿ ಕೆಲವೊಂದು ನೀವುಗಳೇ ಅನುವಾದ ಮಾಡಿದ್ದಿರಿ - ಅದನ್ನ ಒಮ್ಮೆ ಕುಳಿತು review ಮಾಡಿ ಕಳುಹಿಸಿಕೊಡಬಹುದು, ಆಗ ಕನ್ನಡವೂ ಅಲ್ಲಿ ಲಭ್ಯವಾಗುತ್ತದೆ.
ಇದನ್ನೆಲ್ಲ ಚರ್ಚಿಸಲು ಒಮ್ಮೆ off-line ಎಲ್ಲರೂ ಭೇಟಿಯಾದರೆ ಚೆನ್ನ. :-)
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಲೀನಕ್ಸು , ಉಬುಂಟು , ಕನ್ನಡ ( ಕನ್ನಡ ಕಂಪ್ಯೂಟರ್ ಪಾಠ )
language-support-kn ಪ್ಯಾಕೇಜು Synaptic Package Manager ನಲ್ಲಿ ಇಲ್ಲ !
ಟರ್ಮಿನಲ್ ಒಂದನ್ನು ಓಪನ್ ಮಾಡಿ,
sudo apt-get install language-support-kn
ಎಂದು ಟೈಪಿಸಿದಾಗಲೂ package not found ಬರುತ್ತದೆ !!
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"