ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ರಾವಣ , ಕಣಸು ಮತ್ತು ಅಂತರ್ಜಾಲದಲ್ಲಿನ ನೀವೂ ನಾವು

January 29, 2008 - 12:19pm — shreekant.mishrikoti

ನಾವೂ ನೀವೂ ಈ ಅಂತರ್ಜಾಲದ ಮೂಲಕ ಜಗತ್ತಿಗೆ ಏನಾದರೂ ವ್ಯತ್ಯಾಸ ಮಾಡ್ತಾ ಇದ್ದೇವಾ ?
ಈ ಮೊದಲು ಮುದ್ರಣ-ಮಾಧ್ಯಮಗಳು , ಈ ಬರಹಗಾರರು , ಮುದ್ರಕರು ಒಂಥರಾ ಏಕಸ್ವಾಮ್ಯ ಸಾಧಿಸಿದ್ರು . ಅವರು ಪ್ರಿಂಟು ಮಾಡಿದ್ದೇ ಸರಿ , ಅವರ ಬರಹದ ಬಗ್ಗೆ ಓದುಗರು ತಮ್ಮ ಭಾವನೆ ತಿಳಿಸಲಿಕ್ಕೆ , ಇತರರ ಜತೆಗೆ ಹಂಚಿಕೊಳ್ಳಲಿಕ್ಕೆ ಅವರನ್ನೇ ಅವಲಂಬಿಸಬೇಕಾಗಿತ್ತು . ಈ ಅಂತರ್ಜಾಲ , ಮತ್ತು ಬ್ಲಾಗಿಂಗ್ ಬಂದು ಯಾರು ಬೇಕಾದರೂ ತಮ್ಮ ಅನಿಸಿಕೆಯನ್ನ ಪ್ರಕಟಿಸಿಅಬಹುದು . ಹೀಗಾಗಿ ಅಂತರ್ಜಾಲ ಒಂದು ಪ್ರಜಾಸತ್ತಾತ್ಮಕ ಮಾಧ್ಯಮ ಆಗಿ ಬಿಟ್ಟಿದೆ. ಅಂತರ್ಜಾಲದಲ್ಲಿ ನೀವು ಬರೆದುದಕ್ಕೆ ಒಂದು ಪತ್ರಿಕೆಯ ಸರ್ಕ್ಯುಲೇಶನ್ನಿನಷ್ಟು ಓದುಗರು ಇರಲಿಕ್ಕಿಲ್ಲ ; ಆದರೆ ನಿಮ್ಮ ಬರಹ ಖಂಡಿತ ಮುದ್ರಣ ಮಾಧ್ಯಮ ಕಡೆಗಣಿಸುವ ಹಾಗಿಲ್ಲ ; ಅಂತರ್ಜಾಲದಲ್ಲಿನ ಒಂದು ಬರಹಕ್ಕೆ ಪ್ರತಿಯಾಗಿ ಪ್ರಸಿದ್ಧ ಪತ್ರಕರ್ತರು ಜವಾಬು ಕೊಟ್ಟಿದ್ದನ್ನು ಹಿಂದೆ ನೋಡಿದ್ದೀವಿ.

ಇಲ್ಲಿನ ನಮ್ಮ ಹವ್ಯಾಸಿ ಬರಹಗಳನ್ನೂ ಪಂಡಿತರುಗಳು ಗಮನಿಸ್ತಾರೆ ಅಂತ ಅನ್ನಿಸುತ್ತೆ . ಇದು ನನ್ನ ಭ್ರಮೆ ಇರಲಿಕ್ಕಿಲ್ಲ .
ಇತ್ತೀಚೆಗೆ ಪ್ರಜಾವಾಣಿಯಲ್ಲಿ ಒಂದು ಸುದ್ದಿ ನೋಡಿದೆ . ಪ್ರಸಿದ್ಧರು ಯಾರೋ ’ ಗ್ರಂಥಸ್ಥ ಭಾಷೆಯಲ್ಲೇ ಕಾದಂಬರಿ/ಕತೆ/ಸಾಹಿತ್ಯ ರಚಿಸಬೇಕು’ ಅಂತ ಅಪ್ಪಣೆ ಕೊಡಿಸಿದ್ದಾರೆ . ಮುದ್ರಣಮಾದ್ಯಮದಲ್ಲಿನಂತೆ ಅಂತರ್ಜಾಲದಲ್ಲೂ ಆಡು ಭಾಷೆ ಬಳಕೆಗೆ ಬೆಂಬಲ ವ್ಯಕ್ತ ಆದದ್ದೇ ಇದಕ್ಕೆ ಕಾರಣವೋ ಏನೋ ?

’ನನ್ನಿ’ ಶಬ್ದ ಥ್ಯಾಂಕ್ಸ್ ಗೆ ಬದಲಿ ಆಗಿ ಬಳಕೆಗೆ ಬರುತ್ತಿದೆ .
ಹಿಂದೊಮ್ಮೆ ’ಕಣಸು’ ಎಂಬ ಶಬ್ದದತ್ತ ನಿಮ್ಮ ಗಮನ ಸೆಳೆದಿದ್ದೆವು. ಕನಸು ಡ್ರೀಂ , ಕಣಸು/ ಕಾಣ್ಕೆ - ವಿಷನ್ , ದರ್ಶನ . ಬೇಂದ್ರೆ ಅವರ ಒಂದು ಹಾಡಿನ ತಲೆಬರಹದಲ್ಲಿ ಇದನ್ನು ನೋಡಬಹುದು . ಬೇರೆಡೆ ಎಲ್ಲೂ ನಾನು ಕಣಸು ಶಬ್ದದ ಬಳಕೆ ನೋಡಿರ್ಲಿಲ್ಲ .
ಈಗ ರಾವಣನೂ ’ಕಣಸು’ ಕಂಡಿದ್ದಾನೆ !

ಇತ್ತೀಚೆಗೆ ’ ರಾವಣನ ಕಣಸು’ ಎಂಬ ನಾಟಕ ಆಡಿದರು .
ಈಗ
ಸುಧಾದಲ್ಲಿ ’ ರಾವಣನ ಕಣಸು’ - ಧಾರಾವಾಹಿ ಶುರು ಆಗಲಿದೆ ! Smiling

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 349 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 29, 2008 - 12:23pm — mahesha

ಉ: ರಾವಣ , ಕಣಸು ಮತ್ತು ಅಂತರ್ಜಾಲದಲ್ಲಿನ ನೀವೂ ನಾವು

mahesha's picture

ತುಳಿಲು

"’ನನ್ನಿ’ ಶಬ್ದ ಥ್ಯಾಂಕ್ಸ್ ಗೆ ಬದಲಿ ಆಗಿ ಬಳಕೆಗೆ ಬರುತ್ತಿದೆ ."

ಪಾಪಾ ನಮ್ಮ ನಲ್ಮೆಯ ಕನ್ನಡದ ನನ್ನಿ ಮೊದಮೊದಲ ಬಳಕೆ ಮರುಬರವಲ್ಲಿ ಪಟ್ಟ ಎಡರು ಅಶ್ಟಿಶ್ಟಲ್ಲ.. ನಿಮಗೆ ಚನ್ನಾಗೇ ಗೊತ್ತು...

ನಲ್ಮೆಯ ನನ್ನಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 29, 2008 - 12:33pm — csomsekraiah

ಉ: ರಾವಣ , ಕಣಸು ಮತ್ತು ಅಂತರ್ಜಾಲದಲ್ಲಿನ ನೀವೂ ನಾವು

csomsekraiah's picture

ಪ್ರೀತಿಯ ಶ್ರೀಕಾಂತ್, ಕಣಸು ಕನ್ನಡದಲ್ಲಿ ಚನ್ನಾಗಿಯೇ ಬಳಕೆಯಾಗಿರುವ ಶಬ್ದ, ಕುವೆಂಪು ಕಾನೂರು ಹೆಗ್ಗಡಿತಿಯಲ್ಲಿ ಕಣಸಿನ ಬಗ್ಗೆ ಒಂದು ವ್ಯಾಖ್ಯಾನವನ್ನೇ ಮಾಡಿದ್ದಾರೆ. ಸಾಕಷ್ಟು ಕನ್ನಡ ಸಾಹಿತ್ಯದಲ್ಲಿ ಕಣಸುಗಳು ಕಾಣಸಿಗುತ್ತವೆ . ಸಾಹಿತ್ಯವನ್ನು ಜನತಂತ್ರಗೊಳಿಸಿರುವಲ್ಲಿ ಬ್ಲಾಗುಗಳ ಮಹತ್ವದ ಬಗ್ಗೆ ನಿಮ್ಮ ಅಭಿಪ್ರಾಯ ತುಂಬಾ ಸರಿ. ಮಡಿವಂತಿಕೆ ಸರಿದು ಹೋಗಿ ಎಲ್ಲರಿಗೂ ಸಾಹಿತ್ಯದ ಹೆಬ್ಬಾಗಿಲು ತೆರೆದುಕೊಂಡಿದ್ದಕ್ಕಾಗಿ ಎಷ್ಟು ಸಂತೋಷಪಟ್ಟರೂ ಸಾಲದು .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 29, 2008 - 3:52pm — ASHOKKUMAR

ಉ: ರಾವಣ , ಕಣಸು ಮತ್ತು ಅಂತರ್ಜಾಲದಲ್ಲಿನ ನೀವೂ ನಾವು

ASHOKKUMAR's picture

ನಮ್ಮ ಸಂಸ್ಥೆಗಳ vision statementಗೆ ಕಣಸು ಶಬ್ದ ಸರಿಯಾದೀತೇನೋ?
mission statement ಅಂಥಾನೂ ಇರುತ್ತೆ. ಅದಕ್ಕೆ?
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 29, 2008 - 4:07pm — shreekant.mishrikoti

ಉ: ರಾವಣ , ಕಣಸು ಮತ್ತು ಅಂತರ್ಜಾಲದಲ್ಲಿನ ನೀವೂ ನಾವು

shreekant.mishrikoti's picture

mission statement ಗೆ ಸದ್ಯಕ್ಕೆ ಧ್ಯೇಯವಾಕ್ಯ ಅನ್ನಿ ...
ಯಾರಾದ್ರೂ ಒಳ್ಳೆಯ ಅಪ್ಪಟ ಕನ್ನಡ ಶಬ್ದ ಹುಡುಕುವವರೆಗೆ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾವಣನ ಪುನರ್ಜನ್ಮದ ಕಣಸು
  • ಕನಸು, ಕಣಸು
  • Sex - ಕಾಮ; ಅದರ ಮಹತ್ವ !
  • ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ
  • ಕೊಲೆಗಾರರು ಯಾರು ? ಒಂದು ಹಾಸ್ಯ ಲೇಖನ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕೊನೆಗೂ ಕುಮಾರಸ್ವಾಮಿ ರಾಮನಗರಕ್ಕೆ ಭೇಟಿ ನೀಡಿದರು!
  • ಓದಿದ್ದು ಕೇಳಿದ್ದು ನೋಡಿದ್ದು-2
  • ನೀನು ಯಾರೆ
  • ಚೈನಾ ೧೦೦ ನಾವು ೦
  • ಹರುಷ ತಂದ ಆರು ದಿನಗಳು (ನಮ್ಮೂರೇ ನನಗೆ ಮೇಲು| ಈ ಊರಿಗೆ ಕರೆದು ತಂದಿರುವುದು ಹಣದ ಗೀಳು|)
  • ಆರದ ದೀಪ
  • ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
  • ಈಗ "ನನ್ನ ವಯಸ್ಸೆಷ್ಟು?" ಹೇಳಿ
  • ಹುಡುಗಿಯಿಂದ ಆಯ್ತು
  • ಸುಭಾಷಿತ: ಐದು ಮರಗಳ ಸ್ವರ್ಗ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಏನಕ್ಕಾಗಿ, ನುಂಗಿಕೊಂಡದ್ದು
    August 29, 2008 - 8:29am
  • mahesha
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 8:12am
  • mahesha
    ಉ: ನೀನು ಯಾರೆ
    August 29, 2008 - 8:08am
  • mahesha
    ಉ: ಚೈನಾ ೧೦೦ ನಾವು ೦
    August 29, 2008 - 8:04am
  • amg
    ಉ: "ಈಗ" ಅಪ್ಪ ಎಲ್ಲಿದ್ದಾನೆ?!
    August 29, 2008 - 7:55am
  • mahesha
    ಉ: ರ, ಱ ಹಾಗೂ ಳ, ೞ ಬಗ್ಗೆ ವಿಚಾರವಿನಿಮಯ ಮಾಡಿಕೊಳ್ಳಲು ಸಂಪದದಲ್ಲಿ ಒಬ್ಬನೇ ಒಬ್ಬ ಕನ್ನಡಿಗ/ಕನ್ನಡಗಿತ್ತಿ ಇಲ್ಲ.
    August 29, 2008 - 7:35am
  • mahesha
    ಉ: ಈ ಇಂಗ್ಲಿಶ್ ಸಾಲುಗಳನ್ನು ಕನ್ನಡದಲ್ಲಿ ಹೇಳಿ...
    August 29, 2008 - 7:32am
  • mahesha
    ಉ: ಏನಕ್ಕಾಗಿ, ನುಂಗಿಕೊಂಡದ್ದು
    August 29, 2008 - 7:31am
  • mahesha
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 7:30am
  • mahesha
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 7:29am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 118 ಅತಿಥಿಗಳು ಆನ್ಲೈನ್ ಇರುವರು.


ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator