ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ನಾನೂ ಉಬುಂಟು ಹಾಕ್ಕೊಂಡೆ ( ಕನ್ನಡದಲ್ಲಿ ಕಂಪ್ಯುಟರ್ ಪಾಠ! )

November 29, 2007 - 4:00pm — shreekant.mishrikoti

ನಿನ್ನೆ ನಾನು ಹೇಳ್ದೆ , ಮೊದಲು ನಾನು ಉಬುಂಟುವಿನ ೬.೦೬ ಆವೃತ್ತಿಯನ್ನು ತರಿಸ್ಕೊಂಡಿದ್ದೆ ಅಂತ .
ಈ ನಡುವೆ ಕಚೇರಿಯಲ್ಲಿ ಖಾಲೀ ಬಿದ್ದಿದ್ದ ಒಂದು ಲ್ಯಾಪ್ ಟಾಪ್ ಅನ್ನು ಮನೆಗೆ ತಕೊಂಡು ಹೋದೆ.
ಕಂಪ್ಯೂಟರ್ ಗಳಲ್ಲಿ ಅನೇಕ ಪ್ರಕಾರಗಳು -
ದೊಡ್ಡ ದೊಡ್ಡ ಗಣಕಗಳು - ಸರ್ವರ್ ಗಳು .
ನೀವು ಸಾಮಾನ್ಯ ವಾಗಿ ಟೇಬಲ್ ಮೇಲೆ ನೋಡೋದು ಡೆಸ್ಕ್-ಟಾಪ್ ಕಂಪ್ಯೂಟರ್ ಗಳು - ಇವಕ್ಕೆ ಪರ್ಸನಲ್ ಕಂಪ್ಯೂಟರ್ - ಖಾಸಾಗಣಕ ಅಂತಾರೆ .
ಬೇಕು ಬೇಕಾದಲ್ಲಿ ತಕೊಂಡು ಹೋಗುವಂತೆ ಲ್ಯಾಪ್-ಟಾಪ್ ಗಳು ( ತೊಡೆಗಳ ಮೇಲೆ ಇಟ್ಟು ಬಳಸುವರು) ತೊಡೆ-ಗಣಕ ಅನ್ನೋಣವೇ ?.
ಅದೇ ತರಹ ನೋಟ್‌ಬುಕ್ ಗಳು (( ಲ್ಯಾಪ್ ಟಾಪ್ ಗೂ ನೋಟ್ ಬುಕ್ ಗೂ ಏನ್ವತ್ಯಾಸ ಅಂತ ಒಂದಿನ ಪತ್ತೆ(ದಾರಿ ) / ರೀ-ಸರ್ಚ್ ಮಾಡಿ ಬರೀತೀನಿ ! )

ಅದರಲ್ಲಾಗಲೇ ವಿಂಡೋಸ್ ಇತ್ತು ; ನಾನು ಕಳ್ಕೊಳ್ಳೋದು ಏನೂ ಇರಲಿಲ್ಲ Smiling ( ಕಾರಣ - ಅದು ಕಚೇರಿಯದು Smiling ಮತ್ತು ಅದರಲ್ಲಿ ಏನೂ ಅಂಥ ವಿಶೇಷ ಡಾಟಾ ( ಮಾಹಿತಿ) ಇರಲಿಲ್ಲ ) ಆದ್ದರಿಂದ ಉಬುಂಟು ಹಾಕಿ ನೋಡಿದೆ .
ಈಗಾಗಲೇ ನಿಮ್ಮ ಕಂಪ್ಯೂಟರ್ ನಲ್ಲಿ ವಿಂಡೋಸ್ ಅಥವಾ ಬೇರೆ ಕಾರ್ಯಕಾರೀ ವ್ಯವಸ್ಥೆ ಇದ್ದಿರಬಹುದು .
ಅದರ ಜತೆಗೇ ಉಬುಂಟು ಲೈನಕ್ಸ್ ಅನ್ನೂ ಹಾಕಿಕೊಂಡು , ಕಂಪ್ಯೂಟರ್ ಶುರು( ಬೂಟ್) ಮಾಡುವಾಗ ನಿಮಗೆ ಯಾವುದು ಬೇಕೋ ಅದನ್ನು ಆರಿಸಿಕೊಂದು ಶುರುಮಾಡಬಹುದು . ಈ ವ್ಯವಸ್ಥೆಗೆ ಮಲ್ಟಿ-ಬೂಟ್ ಅನ್ನುತ್ತಾರೆ .

ಅದರಲ್ಲಿರುವ ಹಾರ್ಡ್ ಡಿಸ್ಕ್ ಗಳೂ , ಡ್ರೈವ್ ( C , D ಇತ್ಯಾದಿ) ಗಳ ಒಟ್ಟು ಜಾಗ (space !) , ಖಾಲೀ ಜಾಗ ಎಷ್ಟು ಎಂಬ ವಿವರ ಬರೆದಿಟ್ಟುಕೊಳ್ಳಿ . ಉಬುಂಟು ಲೋಡ್ ಮಾಡುವಾಗ ಬೇಕಾಗುತ್ತದೆ .
ಒಂದು ಡ್ರೈವ್ ಅನ್ನು ಖಾಲಿ ಮಾಡಿಟ್ಟುಕೊಳ್ಳಿ .

ಹಾಗೇ ನಿಮ್ಮ ಕಂಪ್ಯೂಟರ್ ಗೆ ಜಾಲ / ಅಂತರ್ಜಾಲ ಸಂಪರ್ಕ ಇದ್ದರೆ ಅದು ಹೇಗೆ ಸಂಪರ್ಕ ಪಡೆಯುತ್ತದೆ ಎಂಬುದನ್ನೂ ತಿಳಿದಿಟ್ಟುಕೊಳ್ಳಿ ; ಸಂಬಂಧಿಸಿದ ಸೆಟ್ಟಿಂಗ್ಸ್ ಅನ್ನೂ ಬರೆದಿಟ್ಟುಕೊಳ್ಳಿ .

ಒಂದು ಕಂಪ್ಯೂಟರ್ ಅನ್ನು ಬೂಟ್ ಮಾಡೋದು ಫ್ಲಾಪ್ಪಿ ಯಿಂದ ಮಾಡಬಹುದು ; ಹಾಗೇ ಸಿ.ಡಿ. ಇಂದನೂ ಮಾಡಬಹುದು .
ಕಂಪ್ಯೂಟರ್ ಶುರು ಮಾಡುವಾಗ ಈ ಸಂಬಂಧ ಕೆಲವು ಅಯ್ಕೆಗಳನ್ನು ಮಾಡಬೇಕಾಗುತ್ತದೆ .
ಕಂಪ್ಯೂಟರ್ ಶುರು ಆಗುವಾಗ ತೆರೆಯ ಮೇಲೆ ಕೆಲವು ಸಂದೇಶ ಬರುತ್ತವೆ .. ಅಲ್ಲಿ ಗಮನಿಸಿದರೆ , ಮಾಮೂಲಿನಂತೆ ಶುರುವಾಗುವದನ್ನು ತಡೆಯಲು ಇಂಥಿಂಥ ಕೀಯನ್ನು ಒತ್ತಿ ಅಂತ ಇರುತ್ತದೆ . ಅಲ್ಲಿ ಇಂಥ ಆಯ್ಕೆಗಳನ್ನು ಮಾಡಬೇಕಾಗಬಹುದು .

ನಾನು ಉಬುಂಟು ಸೀ.ಡೀ ಅನ್ನು ಅದರ ಡ್ರೈವ್ ನಲ್ಲಿಟ್ಟು ನನ್ನ ಲ್ಯಾಪ್ಟಾಪ್ ಕಂಪ್ಯೂಟರ್ ಅನ್ನು ಶುರು ಮಾಡಿ ಮೇಲೆ ಹೇಳಿದ ಬದಲಾವಣೆಗಳನ್ನು ಮಾಡಿ ಸೀಡೀಯಿಂದ ಶುರು ಆಗುವ ಹಾಗೆ ನೋಡಿಕೊಂಡೆ .
ಏನೂ ತೊಂದರೆ ಇಲ್ಲದೆ ತೆರೆಯ ಮೇಲೆ ಮೂಡಿ ಬಂದಿತು ಉಬುಂಟು .
ಅಲ್ಲಿ ಇನ್ಸ್ಟಾಲ್ ಐಕಾನ್ ಇತ್ತು .
( ಇನ್‌ಸ್ಟಾಲ್ - ಗೆ ಪ್ರತಿಷ್ಟಾಪಿಸು , ನೆಲೆಗೊಳಿಸು , ಇನ್‌ಸ್ಟಾಲ್ ಅಂತೆಲ್ಲ ಬೇರೇ ಶಬ್ದ ಯಾಕೇ ? ಹಾಕಿಕೋ ಅನ್ನೋದೇ ಇರುವಾಗ ? Smiling

ಅದನ್ನು ಕ್ಲಿಕ್ಕಿಸಿದರೆ ಇನ್ಸ್ಟಾಲ್ ಪ್ರಕ್ರಿಯೆ ಶುರು ಆಯಿತು -
ಇನ್‌ಸ್ಟಾಲ್ ಮಾಡದೇನೇ ಉಬುಂಟು ಬಳಸಬಹುದು ನೆನಪಿರಲಿ . ಅದಕ್ಕೆ ಲೈವ್ ಸೀಡೀ ಅಂತಾರೆ ; ಆದರೆ ಸೀಡೀಯು ಡ್ರೈವ್ ನಲ್ಲೇ ಇರಬೇಕಾಗುತ್ತದೆ .

ಇನ್ಸ್ಟಾಲ್ ಪ್ರಕ್ರಿಯೆ ಬಹಳ ಸುಲಭ ಇದೆ .
ನಿಮ್ಮ ಕಂಪ್ಯೂಟರ್ ನ ಎಲ್ಲ ಭಾಗಗಳನ್ನು ಸರಿಯಾಗೇ ಗುರುತಿಸುವದು . ನಿಮ್ಮ ದೇಶ-ಕಾಲ ನೀವು ತಿಳಿಸಬೇಕಾಗುತ್ತದೆ . ಕೆಲವು ಹಂತ ಸುಮ್ಮನೆ ಮುಂದಕ್ಕೆ ಹೋದರಾಯಿತು .

ಒಂದೆಡೆ ಮಾತ್ರ ಹುಶಾರಾಗಿ ಹೆಜ್ಜೆ ಇಡಬೇಕಾಗುವದು - ಇಲ್ಲದಿದ್ದರೆ ಈಗಾಗಲೇ ಕಂಪ್ಯೂಟರ್ ನಲ್ಲಿ ಇರೋದನ್ನೆಲ್ಲ ಕಳಕೋಬೇಕಾದೀತು .
ಅದೇ ಪಾರ್ಟಿಶನಿಂಗ್ ಹಂತ ; ಎರಡು ಮೂರು ಅಯ್ಕೆಗಳಿದ್ದರೂ , ನಾನೇ ನಿರ್ದೇಶಿಸಬಹುದಾದ ಗೈಡೆಡ್ ರೀತಿ ಅಯ್ದುಕೊಂಡು , ಖಾಲೀ ಇರುವ ಹಾರ್ಡ್ -ಡಿಸ್ಕ್ ಭಾಗವನ್ನು ಗುರುತಿಸಿ ಅದರಲ್ಲಿ ext3 ಫೈಲ್ ಸಿಸ್ಟಮ್ ಅನ್ನು "/" ಎಂದು ಗುರುತಿಸಿದೆ. ಇಲ್ಲಿ ಕಡೇ ಪಕ್ಷ ಎರಡು ಜೀಬಿ (Giga bytes) ಬೇಕೆಂದಿದ್ದರೂ ಉದಾರವಾಗಿ ಹತ್ತು ಜೀಬಿ ಕೊಟ್ಟೆ . swap ಗೆಂದು 256 MB ( Mega Bytes ) ಕಡೇಪಕ್ಷ ಬೇಕಿದ್ದರು ಎರಡು ಜೀಬಿ ಕೊಟ್ಟೆ .
ಈ ಹಂತದಲ್ಲಿ ಹಾರ್ಡ್ ಡಿಸ್ಕ್ ಅನ್ನು ’ಚೆನ್ನಾಗಿ’ ಗುಡಿಸಿ ರಂಗೋಲಿ ಹಾಕಿದ ಹಾಗೆ ಬಳಸಲು ಸಿದ್ಧಗೊಳಿಸುತ್ತದೆ. ಇದುವೇ ಫಾರ್ಮ್ಯಾಟ್ಟಿಂಗ್ ; ಫಾರ್ಮ್ಯಾಟ್ ಮಾಡುವದು . ಆದ್ದರಿಂದ ಇಲ್ಲಿ ಎಚ್ಚರಿಕೆ ಅವಶ್ಯ . ನಂತರ ... ಸುಮಾರು ೧೦ ನಿಮಿಷ ತಗೊಂಡು ರೀಬೂಟ್ (ಮರುಶುರು) ಮಾಡಲು ಹೇಳುತ್ತದೆ . ಈ ಹಂತದಲ್ಲಿ ನೀವು ಆ ಸೀಡೀ ಯನ್ನು ಕಂಪ್ಯೂಟರಿನಿಂದ ಹೊರತೆಗೆಯಬೇಕು ...
ಅಷ್ಟೇ ..
( ಹಿಂದೆ ಯಾವಾಗಲೂ ಈ ಪಾರ್ಟೀಷನ್ ವ್ಯವಹಾರಕ್ಕೆ ನಾನು ಕೈ ಹಾಕಿರಲಿಲ್ಲ ; ಈಗ ಪಾರ್ಟಿಶನಿಂಗ್ ಬಗ್ಗೆ ತಿಳಿದಂತಾಯ್ತು ! )

ಕಂಪ್ಯೂಟರ್ ಬಂದ್ ಆಗಿ --- ( ಇದೇ ಶಟ್-ಡೌನ್ ) ಮತ್ತೆ ಶುರು (ಬೂಟ್ ) ಆಗುತ್ತದೆ .
ಈ ಹಂತದಲ್ಲಿ ಪ್ರಾರಂಭಕ್ಕೆ ನಿಮ್ಮ ಉಬುಂಟು ಮತ್ತು ಇತರ ಕಾರ್ಯಕಾರೀ ವ್ಯವಸ್ಥೆ ಗಳು ತೆರೆಯ ಮೇಲೆ ಕಂಡು - ನಿಮ್ಮ ಆಯ್ಕೆಗೆ ಸಮಯಾವಕಾಶ ಇರುತ್ತದೆ . ಏನೂ ಮಾಡದಿದ್ದರೆ - ಡಿಫಾಲ್ಟ್ - ಆಗಿ ( .... ಈ ಡಿಫಾಲ್ಟ್ ಶಬ್ದಕ್ಕೆ ಇನ್ನೂ ಕನ್ನಡ ಶಬ್ದ ಸಿಕ್ಕ ಹಾಗಿಲ್ಲ - ಪೂರ್ವ ನಿಯೋಜಿತವಾಗಿ ಎಂಬ ಶಬ್ದ ಸದ್ಯಕ್ಕೆ ಇಟ್ಟುಕೊಳ್ಳಬಹುದು . "ಪೂರ್ವ ನಿಯೋಜಿತ" - ಸಂಸ್ಕೃತ ತಿಳಿಯದಿದ್ದರೆ , ಇಂಗ್ಲೀಷ್ಜಿನ "ಡಿಫಾಲ್ಟ್ " ಏ ಗತಿ! ಅದನ್ನೇ ತಿಳ್ಕೊಳ್ಳಿ Smiling ? )

ಹೀಗೆ ನನ್ನ ಲ್ಯಾಪ್ ಟಾಪಲ್ಲಿ ಉಬುಂಟು ಹಾಕ್ಕೊಂಡೆ. ಮನೆಯಲ್ಲಿ ಇಂಟರ್ನೆಟ್ ಇಲ್ಲವಾದ್ದರಿಂದ ಅದರಲ್ಲಿನ ಹೊಸ ಆಟಗಳು ಮನೆಯವರಿಗೆ ಕೆಲವು ಕಾಲ ಆಡಲು ಸಿಕ್ಕವು . ಡಾಕ್ಟರ್ ಹೆಂಡತಿಗೆ ಔಷಧ-ರೋಗ ವಿಚಾರ ಒಂದಿಷ್ಟು ಗೊತ್ತಾಗೋ ಹಾಗೆ , ಮನೆಯಲ್ಲಿರೋರ್ಗೆ OS , linux, ubuntu ಗೊತ್ತಾಗುವವು Smiling

ಉಬುಂಟು ಜತೆ MS-Office ನಂಥ ತಂತ್ರಾಂಶವೂ ಲೋಡ್ ಆಗುವದು .

ನಾಳೆ ಉಬುಂಟು ೭.೧ ಆವೃತ್ತಿ ವಿಚಾರ ಹೇಳುವೆ .

  • ಉಬುಂಟು
  • ಕಂಪ್ಯೂಟರ್
  • ಕನ್ನಡ
  • ಲೀನಕ್ಸ್
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 304 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಲೀನಕ್ಸು , ಉಬುಂಟು , ಕನ್ನಡ ( ಕನ್ನಡ ಕಂಪ್ಯೂಟರ್ ಪಾಠ )
  • ಹಾರ್ಡ್ ಡಿಸ್ಕ್ ವಿಭಜನೆ ಮತ್ತು ಬೂಟ್ ಲೋಡರ್
  • ಲಿನಕ್ಸಾಯಣ - ೫- ಉಬುಂಟು ಇನ್ಸ್ಟಾಲೇಶನ್ - ನೀನೇ ಮಾಡಿ ನೋಡು
  • ಉಬುಂಟು ಬ್ರೀಝಿ ಸಿಡಿಗಳು ಬೇಕೆ?
  • ಲಿನಕ್ಸಾಯಣ -೪- ಬಯೋಸ್ (BIOS)
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಜಗನ್ನಾಥನ ತಬ್ಬಲಿ ಮಕ್ಕಳು
  • ಕನಸಿನ ಕನ್ಯ
  • ’ಹಾಸ್ಯದರಸ’
  • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
  • ಹೊಗೆಯಾಗುಳಿದಿರುವ ನೆನಪುಗಳು
  • ಕವಿತೆಗೆ ಹೆಸರು ಕೊಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 12:15am
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 11:03pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:35pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:32pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:28pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:25pm
  • rameshbalaganchi
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 10:12pm
  • benaka
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:02pm
  • kishorpatwardhan
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 9:20pm
  • kalpana
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 5, 2008 - 9:15pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 13 ಅತಿಥಿಗಳು ಆನ್ಲೈನ್ ಇರುವರು.


ಮಾತನಾಡುವ ಹತ್ತು ಜನರು ಮಾತನಾಡದ ಹತ್ತು ಸಾವಿರ ಜನರಿಗಿಂತ ಹೆಚ್ಚು ಗದ್ದಲ ಮಾಡುತ್ತಾರೆ

— ನೆಪೊಲಿಯನ್ ಬೊನಾಪಾರ್ಟೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator