ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಜೀವನದಲ್ಲಿ ನಮ್ಮದೇ ದಾರಿ ಕಂಡುಕೊಳ್ಳಬೇಕೇ ?
"ಜೀವನದಲ್ಲಿ ನಮ್ಮದೇ ದಾರಿಯನ್ನು ಹುಡುಕಿಕೊಂಡು ಸ್ವಂತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳುವವವರ ಮಾತಿಗೆ ನಾನು ಸೊಪ್ಪು ಹಾಕುವದಿಲ್ಲ. ಏಕೆಂದರೆ ನಶ್ವರವಾದ ಈ ಮನುಷ್ಯ ದೇಹದ ಆಯಸ್ಸು ಬಹಳ ಎಂದರೆ ೬೦-೭೦ ವರ್ಷ. ಅದರಲ್ಲಿ ನಾವು ಸುಖಪಡಲು ಸಿಗುವ ವರ್ಷ ಬಹಳ ಎಂದರೆ ಇಪ್ಪತ್ತು. ಈ ಅಲ್ಪಕಾಲಾವಧಿಯಲ್ಲಿ ತಣ್ಣಗೆ ನಿರ್ಯೋಚನೆಯಿಂದ ಸುಖಪಡುವದು ಬಿಟ್ಟು ನಮ್ಮದೇ ದಾರಿಯನ್ನು ಹುಡುಕಿ ಅಲ್ಲಿಯ ಕಲ್ಲು ಮುಳ್ಳು ಆರಿಸುತ್ತ ಕೂಡುವದು ಯಾವ ಜಾಣತನ ಹೇಳಿ ? ಅದಕ್ಕಾಗಿಯೇ ನಾನು ಯಾವಾಗಲೂ ಸ್ವಂತ ದಾರಿಯನ್ನು ಸೃಷ್ಟಿಸಿಕೊಳ್ಳುವ ಮೂರ್ಖತನಕ್ಕೆ ಹೋಗದೆ ಬೇರೆಯವರು ರೆಡಿ ಮಾಡಿಟ್ಟಿರುವ ಸಿಮೆಂಟ್ ದಾರಿಯಲ್ಲಿ ತಣ್ಣಗೆ ನಡೆದು ನನ್ನ ಜೀವನವನ್ನು ಸುಖವಾಗಿ ಕಳೆಯಲು ನಿರ್ಧರಿಸಿದ್ದೇನೆ."
ಇತ್ತೀಚೆಗೆ ನಾನು ಎರಡು ಪುಸ್ತಕ ಓದಿದೆ. ಅವು ಎಂ. ಪಿ. ಮನೋಹರಚಂದ್ರನ್ ಮತ್ತು ಅನಂತ ಕಲ್ಲೋಳರು ಬರೆದದ್ದು ( ಪ್ರತ್ಯೇಕವಾಗಿ ಬರೆದದ್ದು , ಜತೆಯಾಗಿ ಅಲ್ಲ ). ಒಂದು ಪತ್ತೆದಾರಿ ಕಾದಂಬರಿ , ಇನ್ನೊಂದು ಹಾಸ್ಯ ಲೇಖನಗಳ ಸಂಗ್ರಹ . ಈ ಹಾಸ್ಯ ಲೇಖನಗಳ ಸಂಗ್ರಹದಲ್ಲಿ ಕಂಡ ವಿಚಾರ ಇದು. ನಿಮಗೆ ಏನಾದರೂ ಉಪಯೋಗ ಆಗಬಹುದೇನೋ ಎಂದು ಈ ವಿಚಾರ ಇಲ್ಲಿ ಹಾಕಿದ್ದೇನೆ.

- shreekant.mishrikoti ರವರ ಬ್ಲಾಗ್
- Login or register to post comments
- 318 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಜೀವನದಲ್ಲಿ ನಮ್ಮದೇ ದಾರಿ ಕಂಡುಕೊಳ್ಳಬೇಕೇ ?
ನನ್ನದಾರಿ ನನಗೆ, ನಿಮ್ಮದಾರಿ ನಿಮಗೆ, ಇದನ್ನು ನಾವು ಯಾವಾಗಲೂ ಕೇಳುವ ಮಾತು. ಅಂದರೆ, ನಾವು ಒಮ್ಮೊಮ್ಮೆ ನಮ್ಮದಾರಿಯಲ್ಲಿ ಹೋಗಲಿಕ್ಕೆ ತವಕಸಿವುದು ಕಂಡುಬರುವುದು ಸ್ವಾಭಾವಿಕ. ಮೊದಲು ಈಗಾಗಲೇ ಸಿದ್ಧಪಡಿಸಿರುವ ರಸ್ತೆಯಮೇಲೆ ನಡೆಯೋಣ. ನಂತರ ಅದರ ಅನುಭವದಮೇಲೆ ನಾವೇ ಹೊಸದಾರಿ ನಿರ್ಮಿಸಿ ಇನ್ನೂ ಹಲವರಿಗೆ ಮಾರ್ಗದರ್ಶನ ಮಾಡೋಣ. ಇದು ಈಗಾಗಲೆ ಎಲ್ಲರಿಗೂ ಗೊತ್ತಿರುವ ಸಂಗತಿ. ಗೊತ್ತಿಲ್ಲದ ದುರ್ಗಮ ರಸ್ತೆಯಾರಿಗೂ ಮುದಕೊಡುವುದಿಲ್ಲ. ಅಲ್ಲವೆ.
ಈ ಮಾತು ಅನ್ವಯಿಸುವುದು, ಏನಾದರೂ ಹೊಸದನ್ನು ಮಾಡಹೊರಟವರಿಗೆ ಮಾತ್ರ. ಸುಮ್ಮನೆ ಕೂಡ್ರುವರಿಗಲ್ಲ.
ಉ: ಜೀವನದಲ್ಲಿ ನಮ್ಮದೇ ದಾರಿ ಕಂಡುಕೊಳ್ಳಬೇಕೇ ?
ಈ ಮಾತು ಜೀವವಿಕಾಸದ ದೃಷ್ಟಿಯಿಂದ ಸರಿಯಿಲ್ಲ.
ಮನುಷ್ಯನನ್ನು ನಾವು `ಹೋಮೋ ಸೆಪಿಯನ್ಸ್` ಎಂದು ಕರೆಯುತ್ತೇವೆ. `ಮತಿವಂತ ಮಾನವ` ಎಂದು ಇದರ ಅರ್ಥ. ಮನುಷ್ಯನನ್ನು ಮತಿವಂತ ಎಂದು ಕರೆಯಲು ಅವನ ಅನ್ವೇಷಣಾ ಮನೋಭಾವ ಮುಖ್ಯ ಕಾರಣ. ಹೊಸತನ್ನು ಹುಡುಕುವುದು ಅವನ ಹುಟ್ಟುಗುಣ. ಹಾಗೆ ಹುಡುಕಿ, ನಮ್ಮ ಅರಿವಿನ ಪ್ರಪಂಚ ಹೆಚ್ಚಿಸಿದ ಮಹನೀಯರ ಕಾರಣ ನಮ್ಮ ಬದುಕು ಸಹನೀಯವಾಗಿದೆ. ಉದಾ: ಚಕ್ರವನ್ನೇ ಕಂಡು ಹಿಡಿಯದಿದ್ಧಿದ್ದರೆ ನಮ್ಮ ಬದುಕು ಹೇಗಿರುತ್ತಿತ್ತು ಒಮ್ಮೆ ಯೋಚಿಸಿ.
ಯಾರಿಗಾದರೂ ಏನನ್ನು ಮಾಡದೆ, ಯಾವುದೇ ಕ್ರಿಯಾತ್ಮಕ ಕೆಲಸಗಳಲ್ಲಿ ತೊಡಗದೆ, ಬದುಕಿನ ಅರ್ಥವನ್ನು ತಿಳಿಯುವ ಗೊಡವೆಗೆ ಹೋಗದೆ, ಸುಮ್ಮನೇ ಉ.ಮ.ಹೇ ಮಾತ್ರ ಮಾಡಿಕೊಂಡು ಒಂದು ದಿವಸ ಸಾಯೋಣ ಎಂದು ಅನಿಸಿದರೆ ಅವರು ಹಾಗೆಯೇ ಮಾಡಬಹುದು. ಈ ಹಿಂದೆ ಹಾಗೆ ಮಾಡಿದ್ದಾರೆ. ಈಗಲೂ ಮಾಡುವರಿದ್ದಾರೆ. ಮುಂದೆಯೂ ಮಾಡುವವರು ಇರುತ್ತಾರೆ.
- ನಾಸೋ
ಉ: ಜೀವನದಲ್ಲಿ ನಮ್ಮದೇ ದಾರಿ ಕಂಡುಕೊಳ್ಳಬೇಕೇ ?
ಸೋಮಾರಿತನಕ್ಕೊಂದು ತಾತ್ವಿಕ ಸಮರ್ಥನೆ
ಅಂತ ಇಲ್ಲಿ ಈ ಆಯ್ದ ಭಾಗ ಹಾಕಿದ್ದೀನಿ !
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"