ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › shreenidhi ರವರ ಬ್ಲಾಗ್

```ಮಳೆ ಹೊಯ್ಯುತಿದೆ```

September 15, 2006 - 10:23am — shreenidhi

ನಿನ್ನೆ ಸಂಜೆ, ಕಿಟಕಿಯ ಹೊರಗೆ ಸಣ್ಣಗೆ ಮಳೆ.. ಬೆಂಗಳೂರಿಗೆ ತುಂತುರು ಸ್ನಾನ, ಬಹಳ ದಿನಗಳನಂತರ ಸಂಜೆಯ ಹೊತ್ತು ನೀರ ಸಿಂಚನ. ನನಗೆ ಮಳೆ ಅಂದರೆ ಯಾವತ್ತೂ ಇಷ್ಟ.. ಅದರಲ್ಲೂ ಇಂತಹ ತುಂತುರು ಮಳೆಯಲ್ಲಿ ನೆನೆಯುತ್ತಾ ನಡೆಯುವುದು..ಆಹ್!
ಮಳೆ ಬಂದ ದಿನ ಮನಸ್ಸು ಪ್ರಫುಲ್ಲ! ವರ್ಷಧಾರೆಗೆ ಮನದ ದುಗುಡವನ್ನ, ಬೇನೆ- ಬೇಸರವನ್ನ ಅರ್ಥ ಮಾಡಿಕೊಂಡು ನಮ್ಮನ್ನ ಸರಿಯಾದ ಲಹರಿಗೆ ತಂದು ನಿಲ್ಲಿಸುವ ಶಕ್ತಿ ಇದೆ. ಮಳೆಯನ್ನ ಸಹೃದಯರೆಲ್ಲ ಪ್ರೀತಿಸುತ್ತಾರೆ ಮತ್ತು ಮಳೆ ಪ್ರೀತಿಸುವುದನ್ನ ಕಲಿಸುತ್ತದೆ!
ಪ್ರಾಥಮಿಕ ಶಾಲೆಯ ಕಾಲದಲ್ಲಿ ಹರಿಯೋ ಕೆಂಪು ನೀರಲ್ಲಿ ಮಾಡಿ ಬಿಟ್ಟ ಕಾಗದದ ದೋಣಿ ಮತ್ತು ಆ ಗೆಳೆಯರು, ಕೆಸರು ನೀರಲ್ಲಿ ಆಟವಾಡಿ ಬಂದು ಅಮ್ಮನ ಕೈಲಿ ಬೈಸಿಕೊಂಡಿದ್ದು, ಒದ್ದೆ ಮಾವಿನಮರ ಹತ್ತಿ ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಒಡೆದ ಹಂಚಿನ ಸಂದಿಯಿಂದ ಬೀಳುತ್ತಿದ್ದ ನೀರ ಅಡಿಯಲ್ಲಿಟ್ಟ ಪಾತ್ರೆ, ಮನೆಯ ಅಂಗಳದ ತುಂಬ ನೀರು ನಿಂತು ನಿರ್ಮಾಣವಾದ ಪುಟ್ಟ ಕೆರೆ, ಧೋ ಅಂತ ಮಳೆ ಹೊಯ್ಯುವಾಗ ಮನೆ ಒಳಗೆ ಬೆಚ್ಚಗೆ ಕೂತು ತಿಂದ ಹಲಸಿನ ಹಪ್ಪಳ...
ಹುಚ್ಹಾಪಟ್ಟೇ ಮಳೆ ಬಂದು ಕರೆಂಟಿಲ್ಲದೆ ಕಳೆದ ಕಗ್ಗತ್ತಲ ರಾತ್ರಿ..ಅಪ್ಪನ ಗಾಡಿಯ ಹಿಂದೆ ಕೂತು ಅರೆ ಬರೆ ಒದ್ದೆಯಾಗಿ ಮನೆಗೆ ಬಂದ ಸಂಜೆ, ಮಳೆಯೊಳಗೇ ಆಡಿದ ಫುಟ್ಬಾಲು ಆಟ.. ಪ್ರೀತಿಸಿದ ಜೀವದ ಜೊತೆ ಮಳೆಯೊಳಗೆ ಮಳೆಯಾಗಿ ನಡೆದ ಘಳಿಗೆ...
ಇವೆಲ್ಲ ನೆನಪಾಗುವುದಿಲ್ಲವೇ ಸ್ನೇಹಿತರೇ ನಿಮಗೂ... ನನ್ನ ಹಾಗೆ!
ನೆನಪಿನ ಬುತ್ತಿಯನ್ನ ಬಿಚ್ಚಿಸುತ್ತಾನೆ ಮಳೆರಾಯ,ನಮಗೇ ತಿಳಿಯದಂತೆ..

ಮಳೆಯೇ ನಿನ್ನಯ ಮಾಯೆಗೆ ನಮನ!

~.~
  • shreenidhi ರವರ ಬ್ಲಾಗ್
  • Login or register to post comments
  • 519 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 16, 2006 - 7:22pm — ಸಂಗನಗೌಡ

ಮಳೆಯೇ ಬದುಕು

ಸಂಗನಗೌಡ's picture

ಸಕ್ಕತ್ತಾಗಿ ಬರೆದಿದ್ದೀರಿ ಗೆಳೆಯರೇ, 

Quote:

ಇವೆಲ್ಲ ನೆನಪಾಗುವುದಿಲ್ಲವೇ ಸ್ನೇಹಿತರೇ ನಿಮಗೂ... ನನ್ನ ಹಾಗೆ!

ಹೌದು, ಮಳೆ ಮದುರ ನೆನಪುಗಳ ಸರದಾರ. ಮಳೆಯೇ ಮನುಜನಿಗೆ ಜೀವಸೆಲೆ. ದೋs ಎಂದು ಸುರಿಯುವ ಮಳೆಗೆ ಮುಕವೊಡ್ಡಿ ನಿಲ್ಲುವ ಮನಸ್ಸಾಗುತ್ತದೆ ಏಸೋ ಸರತಿ. ಮಳೆಯಲ್ಲಿ ಮಗ ನೆನೆದು ಬಂದರೆ 'ಏನೋ ಇದು?' ಅಂತ ಮಗನ ತಲೆಯನ್ನು ಒರೆಸಿ ಮಮತೆ ತೋರುವ ಅವಕಾಸ ಹೆತ್ತೊಡಲಿಗೆ ನೀಡುವದೇ ಮಳೆ. "ಹುಯ್ಯೊ ಹುಯ್ಯೊ ಮಳೆರಾಯ, ಮಾವಿನ ತೋಟಕೆ ನೀರಿಲ್ಲ" ಅಂತ ಹಾಡಿ ಮಳೆರಾಯನನ್ನು ಮಕ್ಕಳು, ಮುದುಕರೊಳಗೊಂಡು ಎಲ್ಲರೂ ಕರೆಯುತ್ತಾರೆ. ಹುಟ್ಟಿನಿಂದ ಸಾವಿನವರೆಗೆ ಮನುಜನನ್ನು ಬಹಳಾಗಿ ಸೆಳೆಯುವುವುದೆಂದರೆ ನೀರು. ಮೊನ್ನೆ ನಮ್ಮ ಗುರುಗಳು ಹೇಳುತ್ತಿದ್ದರು, "ಜೀವ ಜಲಮಯ ಮತ್ತು ಮನಸ್ಸು ಅನ್ನಮಯ" ಎಂದು. ಅಂದರೆ ನಾವು ತಿನ್ನುವ ಆಹಾರದ ಮೇಲೆ ನಮ್ಮ ಮನಸ್ಸು ರೂಪಗೊಳ್ಳುವದಂತೆ, ಮತ್ತು ನೀರು ನಮನ್ನು ಜೀವಂತವಾಗಿಡುತ್ತದೆ. ಅದಕ್ಕಾಗಿ ಮಳೆಯೇ ಬದುಕು, "ಬದುಕು" ಎಂದರೆ "ಸಂಪತ್ತು" ಎಂಬ ತಿಳಿಯೂ ಇದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹಪ್ಪಳ ಎಂದರೆ ಹಲಸಿನ ಹಪ್ಪಳವಯ್ಯಾ
  • ಪಚ್ಚೆಕಲ್ಲು ಪಾಣಿ ಪೀಠ...
  • ಮಳೆಯೇ ನಿನ್ನ ಮಾಯವಿದೇನೇ...
  • ಕತೆ ಹೇಳಿದ ಕತೆ
  • *ಪ್ರೀತಿಯ ಹೊಳೆಯಲ್ಲಿ*
Syndicate content

ಲೇಖಕರು

shreenidhi's picture

ಪರಿಚಯ

ನಾನು ಶ್ರೀನಿಧಿ. ಬೆಂಗಳೂರಿನ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ, ಮಾನವ ಸಂಪನ್ಮೂಲ (HR )ವಿಭಾಗದಲ್ಲಿ ಉದ್ಯೋಗಿ. ಕಥೆ, ಕವನ ಬರೆಯುವಿಕೆ ಹವ್ಯಾಸ. ಮೂಲತ: ಮಂಗಳೂರಿನವನು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:40pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 11:40pm
  • uniquesupri
    ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
    July 24, 2008 - 11:39pm
  • uniquesupri
    ಉ: ಇದು ಬರಿ ಬೆಳಗಲ್ಲೋ...
    July 24, 2008 - 11:37pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:12pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 11:06pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 10:56pm
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:49pm
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:26pm
  • Jayalaxmi.Patil
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 24, 2008 - 10:19pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 39 ಅತಿಥಿಗಳು ಆನ್ಲೈನ್ ಇರುವರು.


ಮಾತನಾಡುವ ಹತ್ತು ಜನರು ಮಾತನಾಡದ ಹತ್ತು ಸಾವಿರ ಜನರಿಗಿಂತ ಹೆಚ್ಚು ಗದ್ದಲ ಮಾಡುತ್ತಾರೆ

— ನೆಪೊಲಿಯನ್ ಬೊನಾಪಾರ್ಟೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator