ಏನಿದೇನು?!
ಕಲಿ.. ತಿಳಿ.. ಆನಂದಿಸು!
ದೊಡ್ಡವರೆಲ್ಲಾ ಜಾಣರಲ್ಲಾ..
ಬ್ಲಾಗಿನ ಶೀರ್ಷಿಕೆ ಓದುತ್ತಿದ್ದಂತೆ, I am sure, ನೀವು ಮನಸ್ಸಿನಲ್ಲೇ ಗುನುಗೋದಿಕ್ಕೆ ಶುರು ಹಚ್ಚಿಕೋತೀರಾ..
ದೊಡ್ಡವರೆಲ್ಲಾ ಜಾಣರಲ್ಲಾ..
ಚಿಕ್ಕವರೆಲ್ಲಾ ಕೋಣರಲ್ಲಾ..
ಅಂತ. ಹಾಗೇ ಗುರು-ಶಿಷ್ಯರು movie ನೆನಸಿಕೊಂಡು, 'ಎನ್ ಕಾಮಿಡಿ ಮೂವಿ ಪ್ಪಾ' ಅಂತ ಖುಷಿ ಪಡ್ತೀರಾ, ನನಗೆ ಗೊತ್ತು!
ಆದ್ರೆ, ನಿಜಾ ಹೇಳಿ, ಎಷ್ಟು ಜನ ಈ ಹಾಡಿನ ಸತ್ಯಾ-ಸತ್ಯತೆ ಯ ಬಗ್ಗೆ (literally) ಯೋಚನೆ ಮಾಡಿದೀರಾ?!
ನಾನೂನು ಮಾಡಿರ್ಲಿಲ್ಲ ಕಣ್ರೀ.. until it occured to me suddenly that grown ups/elders ones are not that smart.
ಯಾರೋ ಚಿಕ್ಕ ಹುಡುಗ/ಹುಡುಗಿ ಹತ್ತಿರ ಮಾತಾಡಿರ್ತೀರಾ, ಆಗ ಇದು ನಿಮಗೆ 'sudden' ಆಗಿ ಗೊತ್ತಾಗಿರುತ್ತೆ, ಈಗಿನ ಮಕ್ಕಳು ಭಾರಿ ಚೂಟಿ ಬಿಡಿ ಅಂತ ನೀವೇನಾದ್ರು
ಯೋಚನೆ ಮಾಡ್ತಾ ಇದ್ದರೆ, ಇಲ್ಲಿಲ್ಲ. ಅಲ್ವೇ ಅಲ್ಲ!! ಹಾಗೇನೂ ಇಲ್ಲ. ಇತ್ತೀಚಿಗೆ ನನಗೆ ದೊಡ್ಡವರ 'ಕೋಣತನ' ಜಾಸ್ತಿ ಜಾಸ್ತಿ ಅನುಭವ ಆಗ್ತಿರೋ ಹಾಗೆ ಇದೆ. ಚಿಕ್ಕ ಮಕ್ಕಳು
ಆರಾಮಾಗಿ ತಗೊಳೋ ಎಷ್ಟೊಂದು ವಿಷಯಗಳನ್ನ ದೊಡ್ಡವರು ಭಾರಿ complicated issue ಮಾಡ್ತಾರೆ. ಅದನ್ನೇ ತಿರುಚಿ ತಿರುಚಿ ಹಿಗ್ಗಾ ಮುಗ್ಗಾ ಎಳೆದಷ್ಟು ಅವರಿಗೆ
ಅದೇನೊ ಸಂತೋಷ/ದುಃಖ. ಅರ್ಥಾತೀತರು!! ( ಹ್ಹೆ.. ಹ್ಹೆ.. ಸಂಸ್ಕ್ರತ ಶಬ್ದವಲ್ಲ ಇದು.. ಅರ್ಥ- ಅರ್ಥವಾಗುವುದು ಎಂದರೆ ನಮ್ಮ ಕನ್ನಡದಲ್ಲಿ 'ತಿಳುವಳಿಕೆ' ಅಲ್ಲವೇ?-
ತಿಳುವಳಿಕೆಗೆ ಅತೀತರು, ಸಿಗದವರು ಎಂಬರ್ಥದಲ್ಲಿ ಓದಿಕೊಳ್ಳುವುದು ಕ್ಷೇಮ
) I am afraid, but elders are loosing their attitude to see
the funny side of a joke or whatever. ಹೋಗ್ಲಿ ಬಿಡಿ.. ಅವರವರ ಭಾವಕ್ಕೆ ತಕ್ಕಂತೆ! ಇದು 'sudden' ಆಗಿ realise ಆಗಿದ್ದು ಎಲ್ಲಿ ಅಂತೀರಾ?
ನಂಬಿದರೆ ನಂಬಿ, ಬಿಟ್ಟರೆ ಬಿಡಿ ಸ್ವಾಮಿ.. ಇವತ್ತು ಬೆಳಿಗ್ಗೆ toilet ಲ್ಲಿ ಕೂತಾಗ.
ಕಳೆದ 15 ದಿನಗಳಿಂದ ನಾನು ಮನೆಯಲ್ಲಿಯೇ ಇದ್ದೇನೆ. ಅಂದ್ರೆ free ಯಾಗಿ. ಯಾವುದೇ ಕೆಲಸವಿಲ್ಲದೇ ಆರಾಮವಾಗಿ. ಹಾಗಾಗಿ ನಮ್ಮ ಕನ್ನಡ chnnel ಗಳು T.V.
ಯನ್ನು ಎಷ್ಟು ಚೆನ್ನಾಗಿ ಉಪಯೋಗಿಸಿಕೊಳ್ತಿದಾರೆ ಎಂದು observe ಮಾಡಲು ನನಗೊಂದು ಸದವಕಾಶ. ಸುಮಾರಾಗಿ ಎಲ್ಲಾ channel ಗಳನ್ನು ನೋಡಿದ್ದೇನೆ, ಸ್ವಾಮಿ.
ನನಗೆ ಅನ್ನಿಸಿದ್ದು: ಎಲ್ಲಾchannel ನವರು survey ಮಾಡಿದ್ದಾರೆ. ಯಾರು ತಮ್ಮ ಧಾರವಾಹಿ ಗಳನ್ನು ನೊಡುತ್ತಾರೆ ಮತ್ತು ಅವರಿಗೆ ಎನು ಬೇಕು? ಅದಕ್ಕನುಗುಣವಾಗಿ
they will try to produce serials/ programes/ whatever. ಪರಿಣಾಮ : ಎಲ್ಲಾ ಡಬ್ಬ ಧಾರವಾಹಿಗಳು.
'ಸೀರೆ show ' ಗಳು. ನನಗೆ ಬೇಜಾರಾಗಿ ಬಿಟ್ಟಿದೆ ಸ್ವಾಮಿ. ನಿಜವಾಗ್ಲು ಉರಿದು ಹೊಗಿ ಬಿಟ್ಟಿದೆ. ನಮ್ಮ ಜನ ಉಪಚಾರಿಕವಾಗಿ ಚೆನ್ನಾಗಿರುವ ಮಾತುಗಳನ್ನು ಆಡುತ್ತರಷ್ಟೆ,
ನಿಜದಲ್ಲಿ ಅವರಾರಿಗೂ ತಮ್ಮ ಜೀವನದಲ್ಲಿ ಎನೊಂದೂ ಮಾಡುವ ಉತ್ಸಾಹವಿಲ್ಲ. ಧಾರವಾಹಿಗಳನ್ನು ನೋಡುವ ತವಕ ಒಂದನ್ನು ಬಿಟ್ಟು.
ಚಿಕ್ಕ ಮಕ್ಕಳು ನೊಡುವ 'ಸಿಲ್ಲಿ ಲಲ್ಲಿ' ( 4 ಘಂಟೆ ಶೋ ಮಾತ್ರ) ದೊಡ್ಡವರು ನೊಡುವ ಎಲ್ಲಾ programe ಗಳಿಗಿಂತ meaningful ಆಗಿದೆ.
ಜೀವನದಲ್ಲಿ ಉತ್ಸಾಹ ತುಂಬುವಂಥ ಕನ್ನಡ ಲ್ಲಿ ಬರುವ ಯಾವುದಾದರೂ ಒಂದು ಪ್ರೊಗ್ರಾಮ್ ಇದ್ದರೆ ಹೇಳಿ ಬಿಡಿ ಸ್ವಾಮಿ. ನೋಡಿ ಧನ್ಯನಾಗುತ್ತೇನೆ
.

- shrivalli ರವರ ಬ್ಲಾಗ್
- Login or register to post comments
- 470 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ದೊಡ್ಡವರೆಲ್ಲಾ ಜಾಣರಲ್ಲಾ..
ಶ್ರೀವಲ್ಲಿ ಅವರೆ,
ನಾನು ಸದ್ಯಕ್ಕೆ ನೀಡಬಹುದಾದ ಎರಡೇ ಎರಡು ಸಲಹೆಯೆಂದರೆ (ಬಿಟ್ಟಿ ಎಂದುಕೊಳ್ಳಿ
)
೧. ಯು೨ ಗಮನಿಸಿ. ಅದರಲ್ಲಿ ಹಾಡು ಅಥವಾ ಆಂಕರುಗಳ ಮಾತಿಗಿಂತ ಯು೨ಗೆ ಕರೆ ಮಾಡುವ ಉತ್ತರಕರ್ನಾಟಕದವರ ಮಾತುಗಳನ್ನು ಕೇಳಿ. ಟೈಂ ಪಾಸೂ ಆಗತ್ತೆ. ಅಲ್ಲಿಯವರ ಮಾತುಗಳನ್ನು ಕೇಳಿದ ಹಾಗೂ ಆಗತ್ತೆ.
೨. ಟಿವಿ೯-ಕನ್ನಡದಲ್ಲಿ ಕೆಲವು ಒಳ್ಳೆಯ ಕಾರ್ಯಕ್ರಮಗಳು ಪ್ರಸಾರ ಆಗ್ತಾ ಇರತ್ತೆ. ಇಂಗ್ಲೀಷ್ ನ್ಯೂಸ್ ಚಾನೆಲ್ಲುಗಳಿಗಿಂತ ವಿಭಿನ್ನವಾಗಿದೆ ಇದರ ಪ್ರಯೋಗಗಳು.
ಅಂದಹಾಗೆ, ನಮ್ಮ ನೆಂಟರು ಮಾತನಾಡಿಕೊಳ್ಳುವ ಹಾಗೆ. ಮಂಥನ, ಮಿಂಚು ಚೆನ್ನಾಗಿದೆಯಂತೆ. "ಪ್ರೀತಿ ಇಲ್ಲದ ಮೇಲೆ" ಅಂತೂ ಪೂರ್ತಿ ಅಂದರೆ ಪೂರ್ತಿ ವೇಸ್ಟಂತೆ.
ಉ: ದೊಡ್ಡವರೆಲ್ಲಾ ಜಾಣರಲ್ಲಾ..
"ಮಿಂಚು" ಇಷ್ಟು ದಿನ ಏನೋ ಸ್ವಲ್ಪ ಪರವಾಗಿಲ್ಲ ಅನ್ನಿಸಿತ್ತು. ಆದರೆ ಈಚೆಗೆ ಅದಕ್ಕೂ ಯಾಕೋ ಬಬಲ್ ಗಮ್ ರೋಗ ಅಂಟಿಕೊಳ್ಳುತ್ತಿರುವಂತಿದೆ. ಯಾವ ಕಿರುತೆರೆ ಧಾರಾವಾಹಿಗಳಿಗೂ ಅದರಿಂದ ಮುಕ್ತಿ ಇಲ್ಲ ಅಂತ ಕಾಣತ್ತೆ
ಉ: ದೊಡ್ಡವರೆಲ್ಲಾ ಜಾಣರಲ್ಲಾ..
ಈಗಿನ ‘ಧಾರಾ’ವಾಹಿಗಳನ್ನು ನೋಡಿದರೆ, ಸಿಎನ್‍ಬಿಸಿಯೊ ಅಥವಾ ಎನ್ಡಿಟಿವಿಯ ಅರ್ಥವಾಗದ ಬಿಸಿನೆಸ್ ಸಂಬಂಧಿ ಕಾರ್ಯಕ್ರಮಗಳನ್ನಾದರೂ ನೋಡುವುದು ಬೆಟರ್ರು, atleast ನಿದ್ದೆಯಾದರೂ ಬರುತ್ತೆ!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
ಉ: ದೊಡ್ಡವರೆಲ್ಲಾ ಜಾಣರಲ್ಲಾ..
'ಮಂಥನ' ಮಾತುಗಳು ಸೂಪರ್. ಸಕ್ಕತ್ತಾಗಿದೆ.
ಸುನಿಲ್ ಹೇಳಿದ ಹಾಗೆ u2 ಚೆನ್ನಾಗಿದೆ. tv9 ಪರವಾಗಿಲ್ಲ.
ಉ: ದೊಡ್ಡವರೆಲ್ಲಾ ಜಾಣರಲ್ಲಾ..
ನಾನು ಟಿವಿ ಹೆಚ್ಚು ನೋಡೋದಿಲ್ಲ - ಕ್ರಿಕೆಟ್ ಬಂದಾಗ ಮಾತ್ರ ನನ್ನ ರೂಮಿನ ಟಿ ವಿ ಆನ್ ಆಗುತ್ತೆ. ಒಂದು ದಿನ ಚ್ಯಾನಲ್ ಹುಡುಕುವಾಗ u2 ಮೂಲಕ ಹಾದು ಹೋಗಬೇಕಾಯಿತು... ಯಾರೋ ಮಹಿಳೆಯೊಬ್ಬರು ನಿಂತುಕೊಂಡು ಕೆಟ್ಟದಾಗಿ ಹಾಡುತ್ತಿದ್ದರು. ಫೋನಿನಲ್ಲಿ ಮತ್ತೊಬ್ಬರು ತದನಂತರ ಆ ಮಹಿಳೆಯನ್ನೂ ನಾಚಿಸುವಷ್ಟು ಕೆಟ್ಟ ರಾಗದಲ್ಲಿ ಹಾಡಿದರು. ಅದಾದ ಮೇಲೆ u2 ಚ್ಯಾನೆಲ್ ಕಡೆ ಹಾದದ್ದಿಲ್ಲ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ದೊಡ್ಡವರೆಲ್ಲಾ ಜಾಣರಲ್ಲಾ..
ಕನ್ನಡದ ಯೆಲ್ಲ ಚಾನೆಲ್ಗಳಾ ಹಣೆ ಬರಹ ಒಂದೆ. ಸ್ವಲ್ಪ ಚೆನ್ನಾಗಿದೆ ಅಂದ್ರೆ ಸಾಕು ಅದನ್ನು ರುಬ್ಬರ್ ಯೆಳ್ದಹಾಗೆ ಯೆಳಿತಾರೆ. ದಾರವಾಹಿಗಳ ಬಗ್ಗೆ ಹೇಳೊದೇ ಬೇಡ. TV9 ಈಗ ಬರೀ ಕ್ರೈಂ ವಾರ್ತ ಚನ್ನಾಲ್ ಆಗಿದೆ. ಮಲಯಾಳಂ ಚನ್ನಲ್ ನವರು ಯೆಸ್ಟೊಂದು ಚೆನ್ನಾಗಿ ಪ್ರಹಸನ ಗಳನ್ನು ತೊರಿಸ್ತರೆ. ನಮ್ಮಲ್ಲಿ ಶಿವರಾತ್ರಿಗೋಮ್ಮೆ ಯುಗದಿಗೊಮ್ಮೆ ಒಳ್ಳೆ ಮತುಗಾರರನ್ನು ತಂದು ಹರಟೆ ತೊರಿಸ್ತಾರೆ.
ಉ: ದೊಡ್ಡವರೆಲ್ಲಾ ಜಾಣರಲ್ಲಾ..
ಸುನಿಲ್ ಜಯಪ್ರಕಾಶ್, ನಿಜ U2 ಒಳ್ಳೇ time pass. TV9-Times of India ತದ್ರೂಪಿ media ಅನ್ನಿಸೋಲ್ವೆ?
ಚಿತ್ರಾ, ಛೇ, ಪಾಪ
uniquesupri, ಹ್ಹೆ.. ಹೆ.. ಚೆನ್ನಾಗಿದೆ!
ವೈಭವ, 15 ದಿನಕ್ಕಿಂತ ಜಾಸ್ತಿ ಯಾವುದೇ ಧಾರಾವಾಹಿಗಳನ್ನು bear ಮಾಡಿಕೊಳ್ಳೊದು ದುಃಸ್ಸಾಧ್ಯ..
ಉ: ದೊಡ್ಡವರೆಲ್ಲಾ ಜಾಣರಲ್ಲಾ..
TV9ಗೂ ಟೈಮ್ಸ್ ಆಫ್ ಇಂಡಿಯಾಗೂ ಎಲ್ಲಿಯ ಹೋಲಿಕೆ?
"ಮಾಯಾಮೃಗ" ಹಾಗೂ "ಗರ್ವ" ಬರುತ್ತಿದ್ದ ಕಾಲಕ್ಕೆ ತಡೆದುಕೊಳ್ಳಬಹುದಿತ್ತು. ಈಗ ಕಥೆಯನ್ನ ಹಿಗ್ಗಾಮುಗ್ಗಿ ಎಳೆದಾಡುತ್ತಾರೆ.
ದೂರದರ್ಶನದಲ್ಲಿ ಅನ್ಸುತ್ತೆ, "ಕಥೆಗಾರ" ಅನ್ನೋ ಕಾರ್ಯಕ್ರಮ ಬರುತ್ತಿತ್ತು. ಸಣ್ಣ ಕಥೆಗಳನ್ನ ಪ್ರತಿ ಸಂಚಿಕೆಗೂ ಒಂದರಂತೆ ತೋರಿಸುತ್ತಿದ್ದರು. ಬಹಳ ಚೆನ್ನಾಗಿರುತ್ತಿತ್ತು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ದೊಡ್ಡವರೆಲ್ಲಾ ಜಾಣರಲ್ಲಾ..
ಹೌದು ಕನ್ನಡ ಚಾನೆಲ್ ಗಳ ಕಾರ್ಯಕ್ರಮಗಳಲ್ಲಿ ವಿವಿದತೆಯ ಕೊರತೆಯಿದೆ. ಎಲ್ಲಾ ಕಾರ್ಯಕ್ರಮಗಳೂ ಸ್ಟಿರಿಯೋ ಟೈಪ್. ನೀವು ಹೇಳಿದ ಹಾಗೆ ನೋಡುಗರನ್ನ ಸರ್ವೇ ಮಾಡಿ ಒ೦ದಷ್ಟು ದಾರವಾಹಿಗಳನ್ನ ತುರುಕಿ ಸುಮ್ಮನಾಗಿದ್ದಾರೆ ನಮ್ಮ ಚಾನಲ್ ಗಳ ಆಯೋಜಕರು!.
. ಸಿಲ್ಲಿ ಲಲ್ಲಿ ಕಾರ್ಯಕ್ರಮ ಹಳೆಯ ಕಲಾವಿದರಿದ್ದಾಗ ತಪ್ಪದೇ ವಿಕ್ಷಿಸುತ್ತಿದ್ದೆ, ಆದರೆ ಈಗ ಯಕೋ ಅದೂ ಕೂಡ ಬೋರು!
.
ಮೊದ ಮೊದಲು ಈಟೀವಿ ಯ ಕಾರ್ಯಕ್ರಮಗಳು ಮೆಚ್ಚುಗೆಗೆ ಪಾತ್ರವಾಗಿದ್ದವು, ನ೦ತರ ಅದರಲ್ಲಿ ಕೂಡ ಸೃಜನಶೀಲತೆ ಕೊರತೆಯಿದ ಹಾಗೂ ಕಾರ್ಯಕ್ರಮಗಳಲ್ಲಿ ವಿವಿದತೆಯಿಲ್ಲ. ನನಗೆ ತೀರ ಮೆಚ್ಚುಗೆಯಾದ ಕಾರ್ಯಕ್ರಮ ಹಾಸ್ಯೋತ್ಸವ ಕಾರ್ಯಕ್ರಮ, ಅದರಲ್ಲೂ "ಬಳ್ಳಾರಿ ಬೀಚಿ" ಎ೦ದೇ ಖ್ಯಾತಿಯಾಗಿರುವ ಪ್ರಾಣೇಶ್ ಅವರ ಮಾತುಗಾರಿಕೆ
ಇನ್ನು ನಮ್ಮ ಕುಮಾರಣ್ಣನ ಚಾನೆಲ್ ಬರುವ ಮಾಹಿತಿಯಿದೆ. ಎಲ್ಲ ಕೆಲಸವನ್ನೂ ಡಿಫ಼ರೆ೦ಟ್ ಆಗಿ ಮಾಡುವ ಕುಮಾರಣ್ಣನವರು ತಮ್ಮ ಚಾನಲ್ ಪ್ರೊಗ್ರಾಮ್ ಕೂಡ ಹಾಗೇ ಮಾಡುತ್ತಾರೆ ಎ೦ಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಕಾದು ನೋಡೋಣ!.