ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › shrivalli ರವರ ಬ್ಲಾಗ್

ಏನಿದೇನು?!

ಕಲಿ.. ತಿಳಿ.. ಆನಂದಿಸು!

ಸದ್ದು ಮಾಡುವ ಪಕ್ಷಿಗಳು?!

August 20, 2007 - 10:03pm — shrivalli
ಪ್ರಶ್ನೆ: ಪಕ್ಷಿಗಳು ಹಿಂದಕ್ಕೆ ಹಾರಬಲ್ಲವೆ?
ಉತ್ತರ: ಸದ್ದು ಮಾಡುವ ಪಕ್ಷಿಗಳು ಹಾರಬಲ್ಲವು. ಅತೀ ವೇಗದ ರೆಕ್ಕೆಗಳನ್ನು ಹೊಂದಿರುವ ಈ ಪುಟ್ಟ ಪಕ್ಷಿಗಳು ಯಾವುದೇ ದಿಕ್ಕಿನಲ್ಲಾದರೂ ಹಾರಬಲ್ಲವು. ಆಕಾಶದ ಮಧ್ಯೆ ತಟಸ್ಥ್ವಾಗಿ ನಿಲ್ಲಬಲ್ಲವು!!
Ref: ಇಂದಿನ 'ಯಕ್ಷಪ್ರಶ್ನೆ' ವಿ.ಕ.
ಸದ್ದು ಮಾಡುವ ಪಕ್ಷಿ??!! ಅರ್ಥವಾಗಲಿಲ್ಲ ಅಲ್ಲವೆ? humming bird ಇರಬಹುದೆ?! :D 
ಸದ್ದು ಮಾಡುವ ಪಕ್ಷಿ ಎಂದು ಭಾಷಂತರಿಸುವ ಬದಲು ಹಮ್ಮಿಂಗ್ ಬರ್ಡ್ ಎಂತಲೇ ಟೈಪಿಸಿದ್ದರೆ ಅರ್ಥವಾಗುವುದು ಸುಲಭವಾಗಿರುತ್ತಿತ್ತು ಅಲ್ಲವೆ?!
~.~
  • shrivalli ರವರ ಬ್ಲಾಗ್
  • Login or register to post comments
  • 421 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 20, 2007 - 11:27pm — hpn

ಉ: ಸದ್ದು ಮಾಡುವ ಪಕ್ಷಿಗಳು?!

hpn's picture

ನಿಮ್ಮ ಪಕ್ಷಿಗೆ ಕನ್ನಡದಲ್ಲಿ ಹೊಸ ನಾಮಧೇಯ ಸದ್ಯದಲ್ಲೇ ಬರಲಿದೆ. ಬರುವ ಮುನ್ನ ನಾನು ಕಾಮೆಂಟ್ ಹಾಕಿಬಿಡುತ್ತೇನೆ.

ಸದ್ಯ, ಸದ್ದು ಪಕ್ಷಿ ಅಥವ ಸದ್ಹಾಮ್ (ಸದ್ದು + ಹಮ್) ಪಕ್ಷಿ ಎಂದು ಬರೆಯಲಿಲ್ಲವಲ್ಲ! ಇವೆರಡರಲ್ಲಿ ಎರಡನೆಯದಾಗಿದ್ದರೆ ಅಮೇರಿಕದವರು ಏನು ಮಾಡುತ್ತಿದ್ದರು ಗೊತ್ತಲ್ಲ? Eye-wink

--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 21, 2007 - 10:54am — shrivalli

ಉ: ಸದ್ದು ಮಾಡುವ ಪಕ್ಷಿಗಳು?!

shrivalli's picture

hpn, ಸದ್ದಾಮ್ PJ ಚೆನ್ನಾಗಿದೆ Smiling ಎಲ್ಲಾ ಶಬ್ದಗಳನ್ನು ಕನ್ನಡಕ್ಕೆ ಅನುವಾದಿಸುವುದರ ಬದಲು ಕೆಲವು ಶಬ್ದಗಳನ್ನು ಹಾಗೆಯೇ ಕನ್ನಡೀಕರಿಸುವುದು ಉತ್ತಮ ಅಲ್ವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 21, 2007 - 11:48am — hpn

ಉ: ಸದ್ದು ಮಾಡುವ ಪಕ್ಷಿಗಳು?!

hpn's picture

hpn, ಸದ್ದಾಮ್ PJ ಚೆನ್ನಾಗಿದೆ Smiling ಎಲ್ಲಾ ಶಬ್ದಗಳನ್ನು ಕನ್ನಡಕ್ಕೆ ಅನುವಾದಿಸುವುದರ ಬದಲು ಕೆಲವು ಶಬ್ದಗಳನ್ನು ಹಾಗೆಯೇ ಕನ್ನಡೀಕರಿಸುವುದು ಉತ್ತಮ ಅಲ್ವೇ?

ಹೌದು, ಹಾಗೆ ಮಾಡಿದರೇ ಉತ್ತಮವೆಂದು ತೇಜಸ್ವಿಯವರು ಕೂಡ ಹೇಳುತ್ತಿದ್ದರು. ಆದರೆ ಇತ್ತೀಚೆಗೆ ಹೊಸ ಪದಗಳನ್ನ ಕಾಯಿನ್ ಮಾಡೋದು ಹೊಸ ಟ್ರೆಂಡ್ ಆದಂತಿದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 21, 2007 - 11:53am — ಸಂಗನಗೌಡ

ಉ: ಸದ್ದು ಮಾಡುವ ಪಕ್ಷಿಗಳು?!

ಸಂಗನಗೌಡ's picture

ಏನು ವಿಚಿತ್ತಿರ ಹೆಸರಿದು? ಎಲ್ಲಾ ಹಕ್ಕಿಗಳೂ ಸದ್ದು ಮಾಡಬಲ್ಲವು ತಾನೆ? humming ಅಂದರೆ ಗುಂಯ್ಗುಟ್ಟು. "ಗುಂಯ್ಗುಟ್ಟುವ ಹಕ್ಕಿ" ಅಂದರೆ ಆಗಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 21, 2007 - 11:57am — mahesha

ಉ: ಸದ್ದು ಮಾಡುವ ಪಕ್ಷಿಗಳು?!

mahesha's picture

ಸಂಗನ ಗೌಡ್ರಾ!!

ಈ ಸುದ್ದಿ ಬಂದಿರೋದು ವಿಕ.. ದಲ್ಲಿ.. ಆದುದರಿಂದ ಹೆಚ್ಚು ತಲೆಗೆಡಿಸಿಕೋಬ್ಯಾಡ್ರಿ!!

ಸದ್ಯ humming bird ಗೆ = "ಆಲಾಪ ಖಗ" ಅಂತ ಸುಸಂಸ್ಕೃತವಾದ ತರ್ಜಮೆ ಮಾಡಿಲ್ವಲ್ಲ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 21, 2007 - 12:37pm — mahesha

ಉ: ಸದ್ದು ಮಾಡುವ ಪಕ್ಷಿಗಳು?!

mahesha's picture

ಕನ್ನಡದಲ್ಲಿ ಹೆಸರನ್ನು ಮೆಚ್ಚೊರು

hummning birdಅನ್ನು ಗುನುಗುವಕ್ಕಿ ಅಂತ ಸಲೀಸಾಗಿ ಹೇಳಬೋದು.
ಆದ್ರೆ ಇಂಗ್ಲೀಸೇ ಇರಲಿ, ಅದೇ ಚನ್ನು ಅನ್ನೊರು ಏನಬೇಕಾದ್ರು ಹೇಳಿಕೋಬೋದು, ಆದ್ರೆ ಅದು ಕನ್ನಡ ಆಗಲ್ಲ ಅಷ್ಟೇ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 21, 2007 - 4:41pm — shas3n

ಉ: ಸದ್ದು ಮಾಡುವ ಪಕ್ಷಿಗಳು?!

shas3n's picture

ಇಂಗ್ಲೀಷೇ ಚೆನ್ನ ಅಂತ ಅಲ್ಲ ಸಾರ್, ನಾಮ ಪದಗಳನ್ನ ಅನುವಾದ ಮಾಡದೇ ಇರೋದು ಚೆನ್ನ ಅಂತ. ನಿಜ, 'ಹಮ್ಮಿಂಗ್ ಬರ್ಡ್' ಅನ್ನೋದು ತಕ್ಷಣ ಕನ್ನಡ ಆಗೊಲ್ಲ, ನಿಧಾನವಾಗಿ ಆಗುತ್ತೆ, ಕಾರು, ಬಸ್ಸು, ಆಫೀಸು, ಜಿರಾಫೆ ಇವೆಲ್ಲಾ ಆದಹಾಗೆ.
ನಾಮಪದ ಹಾಗು technical term ಗಳನ್ನು ಭಾಷಾಂತರ ಮಾಡಬಾರದು ಅನ್ನೋ ನಿಲುವು ನನ್ನದು.
ಹಮ್ಮಿಂಗ್ ಬರ್ಡ್ ಅನ್ನೋದನ್ನೇನೋ 'ಗುನುಗು ಹಕ್ಕಿ' ಅಂತ ಕರೆಯಬಹುದು. ಆದರೆ ಕ್ಯಾಸೋವರಿ, ಝೀಬ್ರ, ಆರ್ಮಡಿಲ್ಲೋ, ಸ್ಕಂಕ್ (Skunk), ಪೊಸ್ಸಮ್(Possum), ಇತ್ಯಾದಿಗಳ ಹೆಸರನ್ನೆಲ್ಲಾ ಭಾಷಾಂತರಿಸುತ್ತಾ ಕೂರೋದ್ರಲ್ಲಿ ಎನದ್ರು ಅರ್ಥ ಇದ್ಯಾ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 21, 2007 - 5:02pm — ಸಂಗನಗೌಡ

ಉ: ಸದ್ದು ಮಾಡುವ ಪಕ್ಷಿಗಳು?!

ಸಂಗನಗೌಡ's picture

ಅದನ್ನು ಭಾಷಾಂತರ ಅನ್ನುವದಕ್ಕಿಂತ ಕನ್ನಡದ್ದೇ ಹೆಸರು ಅನ್ನಬಹುದು. ಹಮ್ಮಿಂಗ್ ಬರ್ಡ್ ಅಂದರೆ ಪಾಪ ಹಳ್ಳಿಯವರಿಗೆ ಏನು ಅಂದರೆ ಏನು ಗೊತ್ತಾಗಲ್ಲ. ನಮಗೊಬ್ಬರಿಗೆ ಇಂಗ್ಲೀಶ್ ಬಂದ್ ಬಿಟ್ರೆ ಎಲ್ರಿಗೂ ಬರುತ್ತೆ ಅಂದುಕೋಬಾರದು. ’ಗುನುಗೋ ಹಕ್ಕಿ’ ಇಲ್ಲಾ ಗುಂಯ್ಗುಟ್ಟೋ ಹಕ್ಕಿ ಅಂದರೆ ಅವರಿಗೆ ತಿಳಿಯುತ್ತೆ. ಎಸ್ಟೋ ಮಂದಿಗೆ ಬರ್ಡ್ ಅಂದರೆ ಹಕ್ಕಿ ಅಂತಾನೆ ಗೊತ್ತಿರಲ್ಲ. ಹಳ್ಳಿಯವನೊಬ್ಬ ಜೀಬ್ರಾ ನೋಡಿದಾ ಅಂದರೆ ಅವನು ಇಂಗಲೀಸ್ ತಿಳಿದವರನ್ನು ಇದಕ್ಕೆ ಏನು ಅಂತಾರೆ ಅಂತ ಕೇಳುವ ಗೋಜಿಗೆ ಹೋಗಲ್ಲ, ತನ್ನದೇ ಹೆಸರೊಂದನ್ನು ಕೊಟ್ಟು ಬಿಡುತ್ತಾನೆ. "ಪಟ್ಟಿ ಕುದುರೆ" ಅನಬಹುದಲ್ಲಾ.

ಭಾಷಂತರವನ್ನು ಬರೀ ಪದಗಳ ಬದಲಾವಣೆ ಅಂದುಕೊಳ್ಳಬಾರದು, ಆ ಒಂದು ವಸ್ತುವಿಗೆ ಕನ್ನಡ ಹೆಸರು. ನೀವು ಹೇಳೋ ಹಾಗೆ ನಾಮಪದಗಳನ್ನು ಹಾಗಾಗೇ ಉಳಿಸಿಕೊಳ್ಳೋದಾದರೆ ಎಸ್ಟೋ ಕನ್ನಡದ್ದೇ ಒರೆಗಳು ನಮಗೆ ತಿಳಿದಿರಲ್ಲ, ಹಂಗಂತ ಅಂತ ಕಡೆ ಇಂಗಲೀಸೋ ಮತ್ತೊಂದೋ ಹಾಕ್ತಾ ಹೋದರೆ ಕನ್ನಡ ಕನ್ನಡವಾಗಿ ಉಳಿಯಲ್ಲ. Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 21, 2007 - 5:48pm — mahesha

ಉ: ಸದ್ದು ಮಾಡುವ ಪಕ್ಷಿಗಳು?!

mahesha's picture

"ಇತ್ಯಾದಿಗಳ ಹೆಸರನ್ನೆಲ್ಲಾ ಭಾಷಾಂತರಿಸುತ್ತಾ ಕೂರೋದ್ರಲ್ಲಿ ಎನದ್ರು ಅರ್ಥ ಇದ್ಯಾ?"

ನಿಮಗೆ ಅನುವಾದಗಳು ಬೇಡ ಅನ್ನುವುದು ನಿಮ್ಮ ಸ್ವಂತ ಇಷ್ಟಕಷ್ಟ.. ಹಾಗೆ ಕನ್ನಡಯಿಸುವಿಕೆ ಬೇಕು ಅನ್ನೋದು ಅವರವರ ಸೊಂತ ಇಷ್ಟಕಷ್ಟ!!

ನಿಮಗೆ ಬೇಡ ಅಂದ್ರೆ ಬೇಡ, ಬೇಕಾದೊರಿಗೆ ಬೇಕು!!

ಯಾರಿಗೆ ಬೇಕು ಅಂತ ಸಂಗನ ಹೇಳ್ಯಾನ. ನೀವು ಬಳಸಿ ಅಂತ ಯಾರು ನಿಮಗೆ ದಂಬಲು ಬೀಳಲ್ಲ, ಗಾಬರಿ ಬೇಡ!!

ಆದ್ರೆ ಯಾರಿಗೆ ಬೇಕೋ ಅವರು ಮಾಡಿಕೊಳ್ಳೋದಕ್ಕೆ ನಿಮ್ಮಂತಹ ಅಭಿವ್ಯಕ್ತಿ ಸ್ವಾತಂತ್ರ್‍ಯವನ್ನು ಗೌರವಿಸುವ, ಅರ್ಥಾನರ್ಥಗಳನ್ನು ಬಲ್ಲವರು, ಅಡ್ಡ ಬರಲ್ಲ ಅಂತ ನಂಬಬಹುದಾ?

ನಿಮ್ಮ ಎಲ್ಲ ನಿಲುವುಗಳು ನಿಮಗೆ ಸರಿಯಿರಬಹುದು, ಆದರೆ ಅದು ಎಲ್ಲರಿಗೂ ಸರಿಯಾಗಿರಬೇಕಿಂದಿಲ್ಲ, ಹಾಗೇ ಅದು ಮುಖ್ಯವಾಗಿ ಲೆಕ್ಕಕ್ಕೆ ತೆಗೆದುಕೊಳ್ಳುವಂತಹದ್ದಾಗಬೇಕಾಗೂ ಇಲ್ಲ.

ಇನ್ನೊಂದು ವಿಷಯ ನೀವು ಮಾಡೋ ಎಲ್ಲ ಕೆಲಸಕ್ಕೂ ಅರ್ಥ ಇದ್ಯಾ ಅಂತ ನೋಡಿ, ಅದರಲ್ಲೂ ಹಲವರು ಬಂದು "ನೀವು ಮಾಡೋ ಈ ಈ ಕೆಲಸಕ್ಕೆ ಅರ್ಥ ಇದ್ಯಾ?" ಅಂತ ಕೇಳಬೋದಲ್ಲ.

ಬೇರೆಯವರು ಕೆಲಸದ ಅರ್ಥಾನರ್ಥದ ಗೊಡವೆ ಯಾಕೆ ನಿಮಗೆ? ನಿಮಗೆ ಹೇಗೂ ಬೇಡವಲ್ಲ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 21, 2007 - 5:52pm — ಸಂಗನಗೌಡ

ಉ: ಸದ್ದು ಮಾಡುವ ಪಕ್ಷಿಗಳು?!

ಸಂಗನಗೌಡ's picture

ಸಕ್ಕತ್ತಾಗಿ ಹೇಳಿದೆ ಮಾಯ್ಸಾ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 21, 2007 - 5:56pm — mahesha

ಉ: ಸದ್ದು ಮಾಡುವ ಪಕ್ಷಿಗಳು?!

mahesha's picture

ನನ್ನಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಯೆಮು ಪಕ್ಷಿ ಮೊಟ್ಟೆಗಳು. ಇವು ನಿಜಕಣೋ ಅಣ್ಣ, !
  • ಹಸುವಿನ ಕರು.
  • ಶಿವಮೊಗ್ಗದ ಹತ್ತಿರದಲ್ಲಿನ ಸೇತುವೆಯ ಮೇಲಿನಿಂದ ತುಂಗಾನದಿಯ ನೋಟ !
  • ಹಕ್ಕಿಗಳಿಗೆ ಮುನಿಸ್ಯಾಕೋ?
  • ಕುರುಡು ಪ್ರೀತಿ
Syndicate content

ಲೇಖಕರು

shrivalli's picture

ಪೂರ್ಣ ಹೆಸರು
ಶ್ರೀವಲ್ಲಿ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 23 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator