Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › shrivalli ರವರ ಬ್ಲಾಗ್

ಏನಿದೇನು?!

ಕಲಿ.. ತಿಳಿ.. ಆನಂದಿಸು!

ಚಿಂಟು: ನಂಗೆ ಇಷ್ಟ ಆಗದೇ ಇರೋದು!

August 23, 2007 - 3:46pm — shrivalli
[Please refer : ನಾ ಮೆಚ್ಚಿದ ಕಥೆ ಕನ್ನಡದಲ್ಲಿ..]
ಈ ಹಲ್ಲು ಡಾಕ್ಟರ್ ಹತ್ತಿರ ಜನ ಯಾಕಪ್ಪಾ ಹೋಗ್ತಾರೇ.. ಛೀ.. ಅಲ್ಲಿರೋ ಖರ್.. ಅಂತಾ ಸದ್ದು ಮಾಡ್ತಾನೇ ಇರೋ ಆ ಖುರ್ಚಿ ನೋಡಿದ್ರೆ.. ವ್ಯಾಕ್.. ನಂಗೆ ಎಲ್ಲ್ಗಾದ್ರೂ ಓಡಿ ಹೋಗಿ ಬಿಡಬೇಕು ಅನ್ನಿಸುತ್ತೆ. ನೆಂಟರು ಬಂದಾಗ ಸ್ಕೂಲಲ್ಲಿ ಕಲ್ತಿರೋ ಪದ್ಯಗಳನ್ನ ಅವ್ರ ಎದುರಿಗೆ ಒಳ್ಳೆ ಪೆಕರನ ಹಾಗೆ ನಿಂತು ಹೇಳೋದು ನಂಗೆ ಖಂಡಿತಾ ಇಷ್ಟ ಇಲ್ಲ.
ಅಪ್ಪ, ಅಮ್ಮ  ನಾಟಕ ನೋಡಕ್ಕೆ ಅಂತ ಹೋಗಿಬಿಡ್ತಾರೆ. ಅವರು ಯಾಕೆ ಹೋಗಬೇಕೂ ಅಂತ.. ಆಮೇಲೆ, ಉಪ್ಪಿಟ್ಟು ನಂಗೆ ಇಷ್ಟ ಇಲ್ಲ.
ನಾನು, ಅಮ್ಮ ತಿರುಗಾಡಕ್ಕೆ ಅಂತಾ ಹೊರಗಡೆ ಹೋದಾಗ ಪಕ್ಕದ ಮನೆ ಆಂಟಿ ಸಿಕ್ಕಿಬಿಡ್ತಾರೆ ಒಮ್ಮೊಮ್ಮೆ. ಅಮ್ಮ ಮತ್ತು ಆಂಟಿ ಪರಸ್ಪರ ಬ್ಲೇಡು ಹಾಕಕ್ಕೆ ಶುರು ಹಚ್ಕೊಂಡು ಬಿಡ್ತಾರೆ! ನಾನೇನು ಮಾಡಬೇಕು ಆಗ?
ಹೊಸ ಬಟ್ಟೆ ಹಾಕ್ಕೊಳೋದು ನಂಗೆ ಅಷ್ಟಕ್ಕೆ ಅಷ್ಟೇ! ಹೊಲಸಾಗದೆ ಇರೋ ಹಾಗೆ ಕೂತೇ ಇರಬೇಕು.. ಅದ್ಯಾವನಿಗೆ ಇಷ್ಟ ಆಗುತ್ತಪ್ಪಾ..
ನಂಗೆ ಕಳ್ಳ-ಪೋಲೀಸ್ ಆಡೋವಾಗ ಪೋಲೀಸ್ ಆದ್ರೆ ಇಷ್ಟ ಇಲ್ಲಪ್ಪಾ. ಆಗ ಅಟಕ್ಕೇ ಹೊಗಲ್ಲ ನಾನು. ಕಳ್ಳ ಆದ್ರೆ, ಕಳ್ಳತನ ಮಾಡ್ಬೇಕು, ಅದಿಕ್ಕೆ ಇಷ್ಟ ಇಲ್ಲ. ಒಟ್ಟಿನಲ್ಲಿ ನಾನು ಕಳ್ಳ-ಪೋಲೀಸ್ ಆಡಲ್ಲ.
ನನಗೆ ಸೋಲೋದು ಅಂದ್ರೆ ಇಷ್ಟ ಇಲ್ಲ.
ಬರ್ತ್ ಡೇ ಪಾರ್ಟಿಗಳಲ್ಲಿ ಸಣ್ಣ ಮಕ್ಕಳ ಥರಾ ಆಟ ಆಡಕ್ಕೆ ನಂಗೆ ಇಷ್ಟ ಇಲ್ಲ. ನಾನೇನೂ ಚಿಕ್ಕವನಲ್ಲಾ.
ಕೈ ಗೆ ಗಾಯ ಆದಾಗ ಐಯೊಡಿನ್ ಹಚ್ಚಿಕೊಳೋಕ್ಕೆ ನಂಗೆ ಇಷ್ಟ ಇಲ್ಲ. ಮೊದಲೇ ಗಾಯ ಉರೀತಾ ಇರುತ್ತೆ. ಮೇಲಿಂದ ಇದು ಬೇರೆ.
ನಾನು ನಿದ್ದೆ ಮಾಡೋವಾಗ ಯಾರದ್ರೂ ಸದ್ದು ಮಾಡಿದ್ರೆ ನಂಗೆ ಸಿಕ್ಕಾಪಟ್ಟೆ ಸಿಟ್ಟು ಬರುತ್ತೆ.
  • dennis
Ornamental seperator
  • shrivalli ರವರ ಬ್ಲಾಗ್
  • Login or register to post comments
  • 437 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 23, 2007 - 4:24pm — shas3n

ಉ: ಚಿಂಟು: ನಂಗೆ ಇಷ್ಟ ಆಗದೇ ಇರೋದು!

shas3n's picture

ಶ್ರೀವಲ್ಲಿಯವರೆ,
ಚೆನ್ನಾಗಿ ಬರೆಯುತ್ತಿದೀರ, ಮುಂದುವರೆಸಿ. ಬೇರೆ ಭಾಷೆಯ ಕಥೆಯನ್ನು ಮೂಲತಃ ನಮ್ಮವೇ ಏನೋ ಎಂದು ಅನಿಸುವಷ್ಟು ಸೊಗಸಾಗಿ ಭಾವಂತರ ಮಾಡುತ್ತಿದೀರ. ಸಾಂಧರ್ಬಿಕ poetic licenseಗಳು ಈ ರೀತಿಯ ಭಾಷಾಂತರಗಳಿಗೆ ಅವಶ್ಯ ಮತ್ತು ನೀವು ಅವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದೀರ.
ಚಿಂಟುನ ಉಳಿದ ಅಧ್ಯಾಯಗಳಿಗೆ ಕಾಯುತ್ತಿರುತ್ತೇನೆ!

hpn ಅವರೆ, ಈ ಲೇಖನಗಳನ್ನು 'ಪುಸ್ತ್ರಕ'ವಾಗಿ ಮಾಡಿದರೆ ಹೇಗೆ?

  • Login or register to post comments
  • link
  • Email this ಪ್ರತಿಕ್ರಿಯೆ
August 24, 2007 - 3:57pm — ಸಂಗನಗೌಡ

ಉ: ಚಿಂಟು: ನಂಗೆ ಇಷ್ಟ ಆಗದೇ ಇರೋದು!

ಸಂಗನಗೌಡ's picture

ನಿಮ್ಮ ಹಿಂದಿನ reference ಕತೆ ಮತ್ತು ಬೇರು ಕತೆಗಳಿಗೆ ಕೊಂಡಿ ಹಾಕಿ. ಹುಡಕಿಕೊಂಡು ಹೋಗುವ ರಗಳೆ ತಪ್ಪುತ್ತದೆ. ಚೆನ್ನಾಗಿದೆ, ಮುಂದುವರೆಸಿ. "ಬ್ಲೇಡು ಹಾಕ್ತಾರೆ" ಅಂತಾ ಎಲ್ಲಾ ಬೇಡ ಅನಿಸುತ್ತೆ. ನಿಮ್ಮ ಹಿಂದಿನ ಕತೆಯಂತೆ ಸರಳ ಸೈಲಿಯಲ್ಲಿ ಬರೆಯಿರಿ, ಚೆನ್ನಾಗಿರುತ್ತೆ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಿಂಟು: ನಂಗೇನಿಷ್ಟ ಅಂದ್ರೆ...
  • ಸಂಪದ ಕ್ಕೆ ...ಜೈ!
  • ಚರ್ಚೆ-ಸಂಧಾನ
  • ಬಿಟ್ಟಿ ಉಪದೇಸದಿಂದ ತುಟ್ಟಿಯಾದವರು!
  • ಮಾತಾಡ್ ಮಾತಾಡು ಮಲ್ಲಿಗೆ - ಮಲ್ಲಿಗೆಯೂ ಮಾತಾಡಬೇಕಂತೆ!!
Syndicate content

ಲೇಖಕರು

shrivalli's picture

ಪೂರ್ಣ ಹೆಸರು
ಶ್ರೀವಲ್ಲಿ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 12 ಅತಿಥಿಗಳು ಆನ್ಲೈನ್ ಇರುವರು.

ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator