ಈಗಿನಂತೆ 5 ಸದಸ್ಯರು ಮತ್ತು 69 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ವ್ಯಾನಿಟಿ ಬ್ಯಾಗಿನಲಿ ಕೈ ಹಾಕಿ ನೋಡುವುದು ಎಂದಿಗೂ ಉಚಿತವಲ್ಲ ಪುರುಷರೇ......
uday_itagi's picture
ಉದಯ್ ಇಟಗಿ
06
Feb
2010
ಪುಟ

ವ್ಯಾನಿಟಿ ಬ್ಯಾಗ್ ಒಯ್ಯದೇ ಇರುವ ಹೆಂಗಸರು ಯಾರು ಇದ್ದಾರೆ? ಕಾಲೇಜು ಲಲನಾಂಗೆಯರಿಂದ ಹಿಡಿದು ಗೃಹಿಣಿ, ಉದ್ಯೊಗಸ್ಥ ಮಹಿಳೆ, ಮುದಕಿಯರು ಎಲ್ಲರೂ ಸಾಮಾನ್ಯವಾಗಿ ಹೊರಗೆ...

ಪ್ರತಿಕ್ರಿಯೆಗಳು: 13
ಹಿಟ್ಸ್ : 2,431
ಬೆಂಗಳೂರು ಮಳೆ : ತಲೆಬರಹಗಳ ಸೊಗಸು
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
25
Sep
2010
ಪುಟ

 
  ಇಲಿಗೆ ಪ್ರಾಣಸಂಕಟವಾಗಿರುವಾಗ ಬೆಕ್ಕಿಗೆ ಚೆಲ್ಲಾಟವಂತೆ. ಕರ್ನಾಟಕದ ಹಲವು ಪ್ರದೇಶಗಳು ಮಳೆಯ ಹೊಡೆತಕ್ಕೆ ಬಕ್ಕಬೋರಲಾಗಿ ಬಿದ್ದಿರುವಾಗ ನಾನಿಲ್ಲಿ ತಲೆಬರಹ...

ಪ್ರತಿಕ್ರಿಯೆಗಳು: 11
ಹಿಟ್ಸ್ : 1,340
ಬನ್ನಂಜೆ ಗೋವಿಂದಾಚಾರ್ಯರಿಗೆ ಅಭಿನಂದನೆ
sada samartha's picture
ಸದಾನಂದ
07
Mar
2011
ಬ್ಲಾಗ್ ಬರಹ

ಬನ್ನಂಜೆ ಗೋವಿಂದಾಚಾರ್ಯರಿಗೆ ಅಭಿನಂದನೆ

ಋಷಿಯಂತೆ ಸಾಧನೆಯು ಹಸನಾದ ಹೊಂಗನಸು
ಹೊಸಹೊಸತರಲಿ ಭಾಷ್ಯೆ ಹೊಸಬಗೆಯ  ಮೀಮಾಂಸೆ
ವಿಷಯ ವಿಸ್ತಾರಗಳ ಮೂಲ...

ಪ್ರತಿಕ್ರಿಯೆಗಳು: 16
ಹಿಟ್ಸ್ : 790
ಪರಮಾತ್ಮ - ಚಲನಚಿತ್ರ ವಿಮರ್ಶೆ
inchara123's picture
ಇಂಚರ
10
Oct
2011
ಬ್ಲಾಗ್ ಬರಹ

ಈ ನಮ್ಮ ಪರಮಾತ್ಮನಿಗೆ ಹಣ ಮಾಡುವುದರಿಂದ ಆಧ್ಯಾತ್ಮದವರೆಗೂ ಎಲ್ಲವೂ ಸುಲಭ. ಆದರೆ ಎಮ್ ಎಸ್ ಸಿ ಪರೀಕ್ಷೆ ಮಾತ್ರ ಬಿಡಿಸಲಾರದಷ್ಟು ಕಗ್ಗಂಟು.  ಈತನ ತಂದೆ ಪ್ರಖ್ಯಾತ ಹೃದಯ...

ಪ್ರತಿಕ್ರಿಯೆಗಳು: 3
ಹಿಟ್ಸ್ : 655
ಗೌಡಪ್ಪ ಇನ್ ಟೂರಿಂಗ್ ಟಾಕೀಸ್
komal kumar1231's picture
komal
23
Aug
2010
ಬ್ಲಾಗ್ ಬರಹ

ಬೆಳಗ್ಗೆನೇ ಸುಬ್ಬ ಮನೆಗೆ ಬಂದ, ಏನಲಾ, ಲೇ ಪಿಚ್ಚರ್ ನೋಡದೆ ಸಾನೆ ದಿನಾ ಆಗೈತೆ. ನಮ್ಮೂರ ಟೆಂಟ್ ನಾಗೆ ಭಾಗ 1 ಮತ್ತು ಭಾಗ 2 ಹಾಕವ್ರೆ ಹೋಗೋಣ ಅಂದಾ. ಯಾವುದು ಸಾಂಗ್ಲಿಯಾನನ...

ಪ್ರತಿಕ್ರಿಯೆಗಳು: 11
ಹಿಟ್ಸ್ : 862
ರಾಹುಲ್ ದ್ರಾವಿಡ್ - ಶ್ರೇಷ್ಠತೆಯ ಪ್ರತೀಕ (೧)
rajeshnaik111's picture
17
Jun
2010
ಬ್ಲಾಗ್ ಬರಹ

...

ಪ್ರತಿಕ್ರಿಯೆಗಳು: 12
ಹಿಟ್ಸ್ : 1,239
ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು
ismail's picture
ismail
03
Mar
2006
ಬ್ಲಾಗ್ ಬರಹ
ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಈ ಗಾದೆ ಕನ್ನಡಿಗರಿಗೆಲ್ಲಾ ಪರಿಚಿತ. ರೈತರಂತೂ ಇದನ್ನು ಅಕ್ಷರಾರ್ಥದಲ್ಲೇ ಕಲ್ಪಿಸಿಕೊಂಡು ಸ್ವಾರಸ್ಯವನ್ನು ಗ್ರಹಿಸಿಯಾರು. ಒಂದು...
ಪ್ರತಿಕ್ರಿಯೆಗಳು: 1
ಹಿಟ್ಸ್ : 3,373
ಸ್ವಾಭಿಮಾನಿ ಕನ್ನಡ ಮೇಷ್ಟ್ರು
bharath.6070's picture
Bharath M
24
Apr
2010
ಪುಟ

ಸುಬ್ಬರಾವ್ ಅಶ್ವತ್ ನಾರಾಯಣ ಅಂದ್ರೆ ಬಹುಶ: ಯಾರಿಗೂ ಥಟ್ ಅಂತ ನೆನಪಾಗುವುದಿಲ್ಲ. ಅದೇ ಚಾಮಯ್ಯ ಮೇಷ್ಟ್ರು ಅಂದ್ರೆ ಬೇಗ ನೆನಪಾಗುತ್ತೆ. "ನಾಗರಹಾವಿನ" ಆ ಹಾವಾಡಿಗನ (ಮೇಷ್ಟ್ರಿನ...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,125
ಬಾರೊ ಸಂತೆಗೆ ಹೋಗೋಣ ಬಾ....
Shyam Kishore's picture
10
Sep
2006
ಪುಟ

ಮನೆಗೆ ಬೇಕಾದ ಸಾಮಾನುಗಳನ್ನು ತರುವ ಕೆಲಸ 4-5 ದಿನಗಳಿಂದ ಬಾಕಿ ಇತ್ತು. ವಾರಾಂತ್ಯಕ್ಕಿಂತ ಒಳ್ಳೆಯ ದಿನ ಇನ್ನ್ಯಾವುದಿದೆ ಅಂತ ನಾನು, ನನ್ನಾಕಿ ಹತ್ತಿರದ ವಾಣಿಜ್ಯ...

ಪ್ರತಿಕ್ರಿಯೆಗಳು: 0
ಹಿಟ್ಸ್ : 1,182
ಮಾನವೀಯತೆಯ ಸಾಕ್ಷಾತ್ಕಾರ; ಬಾನಾಡಿಯಾದ ಕೆಂಪು ಬಾಲದ ಪಿಕಳಾರ ಮರಿಗಳು.
harshavardhan v.sheelavant's picture
harshavardhan v. sheelavant
25
May
2010
ಪುಟ

...

ಪ್ರತಿಕ್ರಿಯೆಗಳು: 18
ಹಿಟ್ಸ್ : 1,075

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

Shyam Kishore ರವರ ಬ್ಲಾಗ್

ಕ್ರಿಕೆಟ್ ವಿಶ್ವಕಪ್ ೨೦೦೭ - ಮೊದಲ ಸುತ್ತಿನ ವೇಳಾಪಟ್ಟಿ - ಕನ್ನಡದಲ್ಲಿ

ಆತ್ಮೀಯ ಸಂಪದಿಗರೇ,

ಇಂದಿನಿಂದ ಕ್ರಿಕೆಟ್ ವಿಶ್ವಕಪ್ - ೨೦೦೭ ಪ್ರಾರಂಭವಾಗಲಿದೆ. ನಮ್ಮವರು ಗೆಲ್ಲುತ್ತಾರೋ ಇಲ್ಲವೋ ಅದು ಎರಡನೆಯ ಮಾತು. ಆದರೆ "ಗೆಲ್ರೋ ಅಣ್ಣಾ" ಅಂತ ಹಾರೈಸುವದನ್ನಂತೂ ನಾನು ಬಿಡುವುದಿಲ್ಲ. ನಿಮ್ಮೆಲ್ಲರ ಬಳಿಯೂ ಈಗಾಗಲೇ ಪಂದ್ಯಾವಳಿಯ ವೇಳಾಪಟ್ಟಿ ಇರಬಹುದು. ಆದರೂ, ಸಂಪದದಲ್ಲೂ ಒಂದು ಕ್ರಿಕೆಟ್ ವೇಳಾಪಟ್ಟಿ ಇರಲೆಂದು, ಮೊದಲ ಸುತ್ತಿನ ಪಂದ್ಯಗಳ ವೇಳಾಪಟ್ಟಿಯನ್ನು ಇಲ್ಲಿ ಹಾಕುತ್ತಿದ್ದೀನಿ.

ಅಂದಹಾಗೆ ಈ "ಕ್ರಿಕೆಟ್ ವಿಶ್ವಕಪ್ - ೨೦೦೭"ರ ವೇಳಾಪಟ್ಟಿ ಕನ್ನಡದಲ್ಲಿದೆ. ಇದನ್ನು ನೀವು ನಿಮ್ಮ ಕಚೇರಿಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ಲಗತ್ತಿಸಿಕೊಳ್ಳಲೂಬಹುದು. ನಾನಂತೂ ನನ್ನ ಕ್ಯೂಬಿಕಲ್ಲಿನಲ್ಲಿ ಒಂದು ಘಂಟೆಯ ಹಿಂದೆ ಲಗತ್ತಿಸಿಕೊಂಡೆ. ಆಗಲೇ ನಾಲ್ಕು ಜನರು ಬಂದು, "ಇದ್ಯಾವ ಭಾಷೆ? ಯಾವ ಊರಿನದ್ದು, ಯಾವ ಲಿಪಿ?" ಅಂತೆಲ್ಲ ಕೇಳಿದರು. "ರೋಗಿ ಬಯಸಿದ್ದೂ ಹಾಲು ಅನ್ನ..." ಎಂಬಂತೆ ನನಗೆ ಬೇಕಾದದ್ದೂ ಅದೇ ಎನ್ನಿ! ಬೇಸರವಿಲ್ಲದೆ ಎಲ್ಲರಿಗೂ ಕನ್ನಡದ ಬಗ್ಗೆ ಸಣ್ಣದಾಗಿ ಕೊರೆದೆ. Wink "ಕೆನಡಾ" ಅಲ್ಲ ಸ್ವಾಮೀ, "ಕ-ನ್ನ-ಡ" ಅಂತ ಬಿಡಿಸಿ ಹೇಳಿಕೊಡುವಷ್ಟರಲ್ಲಿ ಸಾಕಾಯಿತು. ಅವರಲ್ಲಿ ಇಬ್ಬರು ಹೇಳಿದ್ದು: "ನಾವೆಲ್ಲ ಇಷ್ಟು ದಿನ ಭಾರತೀಯ ಭಾಷೆಗಳಲ್ಲಿ ಹಿಂದಿ, ಗುಜರಾತಿ ಮತ್ತು ತಮಿಳು ಭಾಷೆಗಳ ಬಗ್ಗೆ ಕೇಳಿದ್ದೆವು. ಇವತ್ತು ನಾಲ್ಕನೆಯ ಹೆಸರು ಕೇಳಿದಂತಾಯಿತು". ನನಗಂತೂ ತುಂಬಾ ಸಂತೋಷವಾಯಿತೆಂಬುದನ್ನು ಬಿಡಿಸಿ ಹೇಳಬೇಕೆ?

       
 ದಿನಾಂಕಸ್ಥಳತಂಡಎದುರಾಳಿ ತಂಡ 
 13 ಮಾರ್ಚ್ಜಮೈಕವೆಸ್ಟ್ ಇಂಡೀಸ್ ವಿಪಾಕಿಸ್ತಾನ 
 14 ಮಾರ್ಚ್ಸೈಂಟ್ ಕಿಟ್ಸ್ & ನೆವಿಸ್ಆಸ್ಟ್ರೇಲಿಯ ವಿಸ್ಕಾಟ್‍ಲ್ಯಾಂಡ್ 
 14 ಮಾರ್ಚ್ಸೈಂಟ್ ಲೂಸಿಯಕೆನ್ಯಾ ವಿಕೆನಡ 
 15 ಮಾರ್ಚ್ಟ್ರಿನಿದಾದ್ & ಟೊಬಾಗೊಶ್ರೀಲಂಕಾ ವಿಬರ್ಮುಡ 
 15 ಮಾರ್ಚ್ಜಮೈಕಜಿಂಬಾಬ್ವೆ ವಿಐರ್‍ಲ್ಯಾಂಡ್ 
 16 ಮಾರ್ಚ್ಸೈಂಟ್ ಕಿಟ್ಸ್ & ನೆವಿಸ್ದ. ಆಫ್ರಿಕ ವಿನೆದರ್‍ಲ್ಯಾಂಡ್ಸ್ 
 16 ಮಾರ್ಚ್ಸೈಂಟ್ ಲೂಸಿಯಇಂಗ್ಲೆಂಡ್ ವಿನ್ಯೂಜಿಲೆಂಡ್ 
 17 ಮಾರ್ಚ್ಟ್ರಿನಿದಾದ್ & ಟೊಬಾಗೊಭಾರತ ವಿಬಾಂಗ್ಲಾದೇಶ 
 17 ಮಾರ್ಚ್ಜಮೈಕಪಾಕಿಸ್ತಾನ ವಿಐರ್‍ಲ್ಯಾಂಡ್  
 18 ಮಾರ್ಚ್ಸೈಂಟ್ ಕಿಟ್ಸ್ & ನೆವಿಸ್ಆಸ್ಟ್ರೇಲಿಯ ವಿನೆದರ್‍ಲ್ಯಾಂಡ್ಸ್ 
 18 ಮಾರ್ಚ್ಸೈಂಟ್ ಲೂಸಿಯಇಂಗ್ಲೆಂಡ್ ವಿಕೆನಡ  
 19 ಮಾರ್ಚ್ಟ್ರಿನಿದಾದ್ & ಟೊಬಾಗೊಭಾರತ ವಿಬರ್ಮುಡ  
 19 ಮಾರ್ಚ್ಜಮೈಕವೆಸ್ಟ್ ಇಂಡೀಸ್ ವಿಜಿಂಬಾಬ್ವೆ 
 20 ಮಾರ್ಚ್ಸೈಂಟ್ ಕಿಟ್ಸ್ & ನೆವಿಸ್ದ. ಆಫ್ರಿಕ ವಿಸ್ಕಾಟ್‍ಲ್ಯಾಂಡ್  
 20 ಮಾರ್ಚ್ಸೈಂಟ್ ಲೂಸಿಯನ್ಯೂಜಿಲೆಂಡ್ ವಿಕೆನ್ಯಾ 
 21 ಮಾರ್ಚ್ಟ್ರಿನಿದಾದ್ & ಟೊಬಾಗೊಶ್ರೀಲಂಕಾ ವಿಬಾಂಗ್ಲಾದೇಶ  
 21 ಮಾರ್ಚ್ಜಮೈಕಜಿಂಬಾಬ್ವೆ ವಿಪಾಕಿಸ್ತಾನ 
 22 ಮಾರ್ಚ್ಸೈಂಟ್ ಕಿಟ್ಸ್ & ನೆವಿಸ್ಸ್ಕಾಟ್‍ಲ್ಯಾಂಡ್ ವಿನೆದರ್‍ಲ್ಯಾಂಡ್ಸ್ 
 22 ಮಾರ್ಚ್ಸೈಂಟ್ ಲೂಸಿಯನ್ಯೂಜಿಲೆಂಡ್ ವಿಕೆನಡ  
 23 ಮಾರ್ಚ್ಟ್ರಿನಿದಾದ್ & ಟೊಬಾಗೊಭಾರತ ವಿಶ್ರೀಲಂಕಾ 
 23 ಮಾರ್ಚ್ಜಮೈಕವೆಸ್ಟ್ ಇಂಡೀಸ್ ವಿಐರ್‍ಲ್ಯಾಂಡ್  
 24 ಮಾರ್ಚ್ಸೈಂಟ್ ಕಿಟ್ಸ್ & ನೆವಿಸ್ಆಸ್ಟ್ರೇಲಿಯ ವಿದ. ಆಫ್ರಿಕ 
 24 ಮಾರ್ಚ್ಸೈಂಟ್ ಲೂಸಿಯಇಂಗ್ಲೆಂಡ್ ವಿಕೆನ್ಯಾ 
 25 ಮಾರ್ಚ್ಟ್ರಿನಿದಾದ್ & ಟೊಬಾಗೊಬರ್ಮುಡ ವಿಬಾಂಗ್ಲಾದೇಶ  
       

2086 ಹಿಟ್ಸ್

DLI ಎಂಬ ಪುಸ್ತಕಾರಣ್ಯದಲ್ಲಿ ಹುಡುಕಾಟ...

ನೀವು "ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ(DLI)"ಗೆ ನಿಯಮಿತವಾಗಿ ಭೇಟಿನೀಡಿ ಪುಸ್ತಕಗಳನ್ನು ಹುಡುಕಿ, ತಿರುವುಹಾಕುವ ಆಸಕ್ತರಲ್ಲೊಬ್ಬರಾದಲ್ಲಿ, ಆ ಹುಡುಕಾಟದ ಕಷ್ಟ-ಸುಖ ನಿಮಗೀಗಾಗಲೇ ಮನದಟ್ಟಾಗಿರುತ್ತದೆ. "ಎ, ಬಿ, ಸಿ..." ಎಂದು ನೇರವಾಗಿ ಅಕ್ಷರಗಳ ರೀತ್ಯಾ ಹುಡುಕಾಡುವುದಾದಲ್ಲಿ ಅಂತಹ ಸಮಸ್ಯೆಯೇನಿಲ್ಲ. ಆದರೆ ಹಾಗೆ ಹುಡುಕಲು ಪುಸ್ತಕದ ಹೆಸರು ಮೊದಲೇ ತಿಳಿದಿರಬೇಕಾಗುತ್ತದೆ. ಅದರ ಬದಲು ಬರೆದವರ (ಕರ್ತೃ) ಹೆಸರನ್ನಾಧರಿಸಿ ಬೇಗ ಹುಡುಕೋಣ, ಆ ಲೇಖಕರ ಯಾವ್ಯಾವ ಪುಸ್ತಕಗಳು ದೊರಕುತ್ತವೆ ನೋಡೋಣವೆಂದು ಹೊರಟಿರೋ, ಆಗ ಶುರು ತಮಾಷೆ! ಇನ್ನೂ ಇದರ ಅನುಭವವಿಲ್ಲದೆ ಇರುವವರು ಪ್ರಯತ್ನಿಸಿ ನೋಡಿ; ಬಹಳ ತಮಾಷೆಯಾಗಿರುತ್ತದೆ. ಹುಡುಕಾಟ ಫಲಿಸುತ್ತದೆ, ಇಲ್ಲವೆಂದಲ್ಲ. ಆದರೆ ಅದಕ್ಕೆ ತಗುಲುವ ಸಮಯ ತುಸು ಹೆಚ್ಚಾಯಿತೇನೋ ಎಂದು ನನ್ನ ಅಭಿಪ್ರಾಯ. ಒಟ್ಟಿನಲ್ಲಿ ಪುಸ್ತಕಗಳನ್ನು ಹುಡುಕಾಡುವುದರಲ್ಲೂ ಇಂತಹ ಪರದಾಟವಿದೆಯೆಂದು ನನಗೆ ಗೊತ್ತಾಗಿದ್ದೇ DLIನಲ್ಲಿ ಲೇಖಕರ ಹೆಸರನ್ನಾಧರಿಸಿ ಪುಸ್ತಕಗಳನ್ನು ಹುಡುಕಲು ಪ್ರಾರಂಭಿಸಿದಾಗಲಿನಿಂದ.  ಮುಂದೆ ಓದಿ »

2091 ಹಿಟ್ಸ್

ಎಂದೂ ಮರೆಯದ ಹಾಡು: ಸ್ವಾಮಿ ದೇವನೆ ಲೋಕ ಪಾಲನೆ...

ಚಿತ್ರಗೀತೆಗಳೆಂದರೆ ಕೇವಲ ಕಾಲಕಳೆಯಲು ಇರುವ ಗೀತೆಗಳಲ್ಲ; ಅಥವಾ ಬರಿದೇ ಮನರಂಜನೆಗಾಗಿ ಇರುವ ಹಾಡುಗಳೂ ಅಲ್ಲ. ಉತ್ತಮ ಜೀವನ ತತ್ವಗಳನ್ನು, ಸಾಮಾಜಿಕ-ನೈತಿಕ ಸಂದೇಶಗಳನ್ನು, ಆದರ್ಶದ ಹೊಂಗನಸುಗಳನ್ನು ಜನಸಾಮಾನ್ಯರಿಗೆ ಅತಿಬೇಗನೆ, ಮನಮುಟ್ಟುವಂತೆ ತಲುಪಿಸುವ ಸಾಮರ್ಥ್ಯ ಚಿತ್ರಗೀತೆಗಳಿಗಿದೆ. ಆದರೆ ಅವುಗಳ ಸತ್ವವನ್ನು ಅರಿತು ದುಡಿಸಿಕೊಳ್ಳುವ ನಿರ್ದೇಶಕರು ಬೇಕಷ್ಟೇ! ಇತ್ತೀಚಿನ ದಿನಗಳಲ್ಲಂತೂ ಚಿತ್ರಗೀತೆಗಳಲ್ಲಿನ ಸಾಹಿತ್ಯದ ಪಾಡು "ಹೇಳಬಾರದು, ಕೇಳಬಾರದು" ಎಂಬಂತಾಗಿದೆ. ಎಲ್ಲೋ ಒಮ್ಮೊಮ್ಮೆ "ಮುಂಗಾರು ಮಳೆ" ಸುರಿದು ಕಾದ ಮನಗಳಿಗೆ ತಂಪೆರದರೂ, ಆ ರೀತಿಯ ಮಳೆ ಸುರಿಯುವುದು ವರ್ಷದಲ್ಲಿ ಎರಡು ಇಲ್ಲವೆ ಮೂರು ಬಾರಿ ಮಾತ್ರ ಎನ್ನುವಂತಹ ಸ್ಥಿತಿ ಬಂದೊದಗಿದೆ.  ಮುಂದೆ ಓದಿ »

2038 ಹಿಟ್ಸ್

ಮೋಜು-ಗೋಜು: ಕಪ್ಪು ಕುಂಕುಮ...

ಮೊನ್ನೆ ಟಿವಿಯಲ್ಲಿ ಮಕ್ಕಳ ಕಾರ್ಯಕ್ರಮವೊಂದರಲ್ಲಿ ಇಂಗ್ಲೀಷಿನ ನಾಲಗೆ ತಿರುಚೊಂದು (ಟಂಗ್ ಟ್ವಿಸ್ಟರ್) ಬರುತ್ತಿತ್ತು. "ಬಿಟ್ಟಿ ಬಾಟ್ ಸಮ್ ಬಟರ್, ಬಟ್ ದ ಬಟರ್ ವಾಸ್ ಬಿಟ್ಟರ್..." ಹೀಗೆ ಸಾಗುತ್ತದೆ ಆ ಸಾಲು. ಆಗ ನನ್ನ ಗಮನ ಕನ್ನಡದಲ್ಲಿನ ನಾಲಗೆ ತಿರುಚುಗಳ ಬಗ್ಗೆ ಹರಿಯಿತು. ನನಗೆ ಕನ್ನಡದ ಎರಡು ಸರಳವಾದ, ಆದರೆ ಬಹಳ ಸೊಗಸಾದ ನಾಲಗೆ ತಿರುಚುಗಳು ಗೊತ್ತು.

೧. ಕಪ್ಪು ಕುಂಕುಮ, ಕೆಂಪು ಕುಂಕುಮ
೨. ಕಾಗೆ ಪುಕ್ಕ, ಗುಬ್ಬಿ ಪುಕ್ಕ

ಎಲ್ಲಿ, ಮೇಲಿನ ಸಾಲುಗಳಲ್ಲಿ ಯಾವುದಾದರೂ ಒಂದನ್ನು ವೇಗವಾಗಿ ಹೇಳಲು ಪ್ರಯತ್ನಿಸಿ. ನಿಧಾನವಾಗಿ ಹೇಳಿದರೆ ಏನೂ ಗಮ್ಮತ್ತಿರುವುದಿಲ್ಲ. ಸಾಧ್ಯವಾದಷ್ಟೂ ವೇಗವಾಗಿ ಹೇಳಬೇಕು. ಆದರೆ, ವೇಗ ಹೆಚ್ಚಿಸಬೇಕೆ ಹೊರತು ಪದಗಳು ಕಲಸಿಕೊಂಡು ಹೋಗಬಾರದು; ನಾಲಗೆ ತಡವರಿಸಬಾರದು. ಇದು ನಾಲಗೆ ತಿರುಚುಗಳ ಮೂಲ ನಿಯಮ. ಸುಮಾರು ಮೂರು ಅಥವ ನಾಲ್ಕನೇ ಸಾರಿ ವೇಗವಾಗಿ ಹೇಳುವಷ್ಟರಲ್ಲಿ ನಿಮ್ಮ ನಾಲಗೆ ಹೇಗೆ ತೊಡರಿಕೊಳ್ಳುತ್ತೆ ಅಂತ ನೀವೇ ಅನುಭವಿಸಿ, ಆನಂದಿಸಿ! ಅಂದಹಾಗೆ, ಈ ತಮಾಷೆಯ ನಾಲಗೆ ತಿರುಚಿನ ಆಟ ಹೇಗಿತ್ತು ಅಂತ ಹೇಳೋದನ್ನು ಮರೆಯದಿರಿ.

ಮೇಲಿನ ಸಾಲುಗಳು ನೋಡಲು ಎಷ್ಟು ಚಿಕ್ಕದಾಗಿ, ಸರಳವಾಗಿ ಕಂಡರೂ, ಅದರ ಪೂರ್ಣ ರೂಪ ನಮ್ಮ ಅರಿವಿಗೆ ಬರುವುದು ವೇಗವಾಗಿ ಹೇಳಿದಾಗ ಮಾತ್ರ.

ಆದರೆ, ಬೇಸರವಾಗುತ್ತಿರುವ ವಿಚಾರವೆಂದರೆ ನನಗೆ ಕನ್ನಡದಲ್ಲಿ ಈ ರೀತಿಯ ಒಂದೆರಡು ನಾಲಗೆ ತಿರುಚುಗಳು ಮಾತ್ರ ಗೊತ್ತು. ನಿಮ್ಮಲ್ಲಿ ಯಾರಿಗಾದರೂ ಇನ್ನೂ ಹಲವಾರು ಕನ್ನಡದ ನಾಲಗೆ ತಿರುಚುಗಳು ತಿಳಿದಿದ್ದಲ್ಲಿ, ದಯವಿಟ್ಟು ಹಂಚಿಕೊಳ್ಳುತ್ತೀರಾ?

2286 ಹಿಟ್ಸ್

ಅಯ್ಯೋ! ನಾವು ಯಾವ ಕಾಲದಲ್ಲಿದ್ದೀವಿ?

ಈ ಸುದ್ದಿ ಓದಿದಾಗಿನಿಂದ ಏನೊಂದನ್ನು ಮಾಡಲೂ ಮನಸ್ಸಾಗುತ್ತಿಲ್ಲ. ಮೊನ್ನೆ ಬೆಂಗಳೂರಿನ ಬಿಇಎಂಎಲ್ ಲೇಔಟಿನಲ್ಲಿ ನಾಲ್ಕೈದು ವರ್ಷದ ಪುಟ್ಟ ಬಾಲಕನನ್ನು ಸುಮಾರು ಹದಿನೈದು ಬೀದಿ ನಾಯಿಗಳು ಕಚ್ಚಿ ಕಚ್ಚಿ ಕೊಂದಿವೆಯಂತೆ! ದಟ್ಸ್ ಕನ್ನಡದಲ್ಲಿ ಈಗ ತಾನೇ ಓದಿದೆ. ನಾವು ಯಾವ ಕಾಲದಲ್ಲಿದ್ದೀವಿ ಎನಿಸುತ್ತಿದೆ. ಇನ್ನೂ ಕೇವಲ ಒಂದೂವರೆ ತಿಂಗಳ ಹಿಂದೆ ಚಂದ್ರಾ ಲೇಔಟಿನಲ್ಲಿ ಪುಟ್ಟ ಬಾಲಕಿಯೊಬ್ಬಳನ್ನು ಇದೇ ರೀತಿ, ಬೀದಿ ನಾಯಿಗಳು ಕಚ್ಚಿ ಸಾಯಿಸಿದ ಘಟನೆ ವರದಿಯಾಗಿತ್ತು. ನಮ್ಮ ಆಳರಸರನ್ನು ನಿದ್ದೆಯಿಂದ ಎಬ್ಬಿಸಲು ವಿಶ್ವೇಶ್ವರ ಭಟ್ ಅವರು ಬಹಳ ಒಳ್ಳೆಯ ಸಂಪಾದಕೀಯ ಸಹಾ ಬರೆದಿದ್ದರು.  ಮುಂದೆ ಓದಿ »

2218 ಹಿಟ್ಸ್

Syndicate content