ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › Shyam Kishore ರವರ ಬ್ಲಾಗ್

ಹಬ್ಬಗಳ ಮೂಲಕ ಪಾಡ್ಯ, ಬಿದಿಗೆ, ತದಿಗೆ... ಬಾಯಿಪಾಠ

January 16, 2007 - 4:27am — Shyam Kishore

     ಚಿಕ್ಕಂದಿನಲ್ಲಿ ನಾವೆಲ್ಲ "ಪಾಡ್ಯ, ಬಿದಿಗೆ, ತದಿಗೆ.....ಹುಣ್ಣಿಮೆ/ಅಮಾವಾಸ್ಯೆ" ಅಂತ ಹದಿನೈದು ದಿನಗಳ ಬಾಯಿಪಾಠ ಮಾಡಿರುತ್ತೀವಿ ಅಲ್ಲವೇ? ಮನೆಯಲ್ಲಿ ಅಜ್ಜ ಅಥವಾ ಅಜ್ಜಿ ಇದ್ದರಂತೂ, ಈ ಬಾಯಿಪಾಠಗಳು ಬಹುತೇಕ "ಕಂಪಲ್ಸರಿ"ಯೇ ಬಿಡಿ! ಸುಮ್ಮನೆ ಪಾಡ್ಯ, ಬಿದಿಗೆ ಅಂತ ಬಾಯಿಪಾಠ ಮಾಡಿಸುವುದು ಒಂದು ರೂಢಿಯಾದರೆ, ಪ್ರತಿ ತಿಥಿ(ದಿನ)ಗೂ ಒಂದು ಹಬ್ಬವನ್ನು ತಳಕು ಹಾಕಿ ಅದರ ಮೂಲಕ ಬಾಯಿಪಾಠದಲ್ಲಿ ಇನ್ನಷ್ಟು ಆಸಕ್ತಿ ಚಿಗುರುವಂತೆ ಮಾಡುವುದು ಇನ್ನೊಂದು ಪದ್ಧತಿ. ನಮ್ಮಲ್ಲಿ ಹಬ್ಬಗಳಿಗೇನು ಕೊರತೆ ಹೇಳಿ? ಅದರಲ್ಲಿ ಪ್ರಸಿದ್ಧವಾದ ಹಬ್ಬಗಳನ್ನು ಆಯಾ ದಿನಕ್ಕೆ ಜೋಡಿಸಿ ಬಾಯಿಪಾಠದಲ್ಲಿ ಅಳವಡಿಸಿರುತ್ತಾರೆ.

     ಸಣ್ಣವನಿದ್ದಾಗ ನನಗೆ ಈ ರೀತಿ ಬಾಯಿಪಾಠ ಆಗಿತ್ತು:

ಬಲಿ ಪಾಡ್ಯಮಿ
ಸೋದರ ಬಿದಿಗೆ
ಅಕ್ಷಯ ತದಿಗೆ (ತೃತೀಯ)
ಗಣೇಶ ಚೌತಿ
ನಾಗರ ಪಂಚಮಿ
ಸುಬ್ರಹ್ಮಣ್ಯ ಷಷ್ಠಿ (ಸುಬ್ಬರಾಯನ ಷಷ್ಠಿ)
ರಥ ಸಪ್ತಮಿ
ದುರ್ಗಾ ಅಷ್ಟಮಿ
ಮಹಾ ನವಮಿ (ಮಾರನವಮಿ)
ವಿಜಯ ದಶಮಿ
ವೈಕುಂಠ ಏಕಾದಶಿ
ಉತ್ಥಾನ ದ್ವಾದಶಿ (ತುಳಸಿ ಹಬ್ಬ)
??? ತ್ರಯೋದಶಿ
ಅನಂತನ ಚತುರ್ದಶಿ / ನರಕ ಚತುರ್ದಶಿ
ಮಹಾಲಯ ಅಮಾವಾಸ್ಯೆ
ಗುರು ಪೌರ್ಣಮಿ (ಹುಣ್ಣಿಮೆ)

"ತ್ರಯೋದಶಿ"ಗೆ ಏನು ಹಬ್ಬ ಅಂತ ಮರೆತು ಹೋಗಿದೆ. ದಯವಿಟ್ಟು ಯಾರಾದರೂ ತಿಳಿಸುತ್ತೀರಾ?

     ಈ ರೀತಿ ಹೇಳಿಕೊಡೋದು ಎಷ್ಟು ಚೆನ್ನ ಅಲ್ಲವಾ? ಹಾಗೇ ಒಮ್ಮೆ ಕಣ್ಣು ಮುಚ್ಚಿ ಜ್ಞಾಪಿಸಿಕೊಳ್ಳಿ. "ಬಲಿ ಪಾಡ್ಯಮಿ" ಅಂತ ಅಜ್ಜ/ಅಜ್ಜಿ/ಅಮ್ಮ ಶುರು ಮಾಡಿದ ತಕ್ಷಣ ಅಲ್ಲೇ ಮೊದಲ ಬ್ರೇಕು! "ಅಮ್ಮ, ಈ ಬಲಿ ಯಾರು?". ತಗೋ, ಅಲ್ಲಿ "ಬಲೀಂದ್ರ"ನ ಕಥೆ ಕೇಳು. "ಸೋದರ ಬಿದಿಗೆ"ಯ ಮೂಲಕ "ರಾಖಿ ಹಬ್ಬ, ಸೋದರ-ಸೋದರಿ ಸಂಬಂಧ" ಇವುಗಳ ಬಗ್ಗೆ ತಿಳಿದುಕೊಂಡು, "ವಿಜಯ ದಶಮಿ"ಯ ಮೂಲಕ ಮಹಾಭಾರತಕ್ಕೂ ಒಂದು ಎಂಟ್ರಿ ಹೊಡೆದು, ಒಟ್ಟಾರೆ ಬಾಯಿಪಾಠ ಅಲ್ಲಿ ನೆಪಕ್ಕೆ ಮಾತ್ರ. ಸಂಜೆ ಆಡಿ ಬಂದ ಮನಸ್ಸಿಗೆ ಕಥೆಗಳ ಮೂಲಕ ನಮ್ಮ ಸಂಸ್ಕೃತಿಯ, ಸೊಗಡಿನ ದರ್ಶನ. ಅದಕ್ಕೆ ತಕ್ಕ ಹಿನ್ನೆಲೆಯೆಂಬಂತೆ ಸೂರ್ಯ ಮುಳುಗುವ ಸಮಯ, ಆ ಮಬ್ಬು ವಾತಾವರಣ; ಅಂಗಳದಲ್ಲಿ ತುಳಸಿಕಟ್ಟೆಯ ಮುಂದೆಯೋ, ಅಥವಾ ಒಳಮನೆಯಲ್ಲಿ ದೇವರ ಗೂಡಿನ ಮುಂದೋ ಅಜ್ಜನೋ, ಅಜ್ಜಿಯೋ ಇವುಗಳನ್ನು ಹೇಳಿಕೊಡುತ್ತಾ ಇದ್ದರೆ, ಈಗಲೂ ಒಮ್ಮೆ ಕೂತು ಹೇಳಿಸಿಕೊಳ್ಳೋಣ ಅಂತ ಅನ್ನಿಸುವುದಿಲ್ಲವೇ?

     ನಿಮ್ಮ ಭಾಗದಲ್ಲಿ ಈ ಬಾಯಿಪಾಠದ ಇತರೆ ರೂಢಿಗಳಿದ್ದಲ್ಲಿ(ಪಾಠಾಂತರ) ದಯವಿಟ್ಟು ಹಂಚಿಕೊಳ್ಳಿ. ಎಲ್ಲರೂ ಕೇಳಿ ಖುಷಿ ಪಡುತ್ತೀವಿ. ಹಾಗೂ ಒಟ್ಟಿಗೆ ಸಂಗ್ರಹಿಸಲು ಅನುಕೂಲವಾಗುತ್ತದೆ.

~.~
  • Shyam Kishore ರವರ ಬ್ಲಾಗ್
  • Login or register to post comments
  • 566 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 16, 2007 - 9:44am — savaj_mng

Re: ಹಬ್ಬಗಳ ಮೂಲಕ ಪಾಡ್ಯ, ಬಿದಿಗೆ, ತದಿಗೆ... ಬಾಯಿಪಾಠ

savaj_mng's picture

ಲೇಖನ ಚೆನ್ನಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 16, 2007 - 10:25am — Sunil Jayaprakash

ದನಿಗೂಡು: ಹಬ್ಬಗಳ ಮೂಲಕ ಪಾಡ್ಯ, ಬಿದಿಗೆ, ತದಿಗೆ... ಬಾಯಿಪಾಠ

Sunil Jayaprakash's picture

ನಾನು ಹಬ್ಬಗಳ ಮೂಲಕ ಬಾಯಿಪಾಠ ಮಾಡಲಾಗಲಿಲ್ಲ. ಸೀದಾ, "ಪಾಡ್ಯ, ಬಿದಿಗೆ, ತದಿಗೆ, ಚೌತಿ....ಹುಣ್ಣಿಮೆ"ಯನ್ನು ಕಲಿತಿದ್ದೆ.

ಇದಾದ ಮೇಲೆ ಕ್ರಮವಾಗಿ,
ಚೈತ್ರ, ವೈಶಾಖ, ಜ್ಯೇಷ್ಠ, ಆಷಾಡ, ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘ. ಫಾಲ್ಗುಣಆಆಆಆಆ... ಹೇಳಬೇಕಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 16, 2007 - 8:49pm — srivathsajoshi

Re: ಹಬ್ಬಗಳ ಮೂಲಕ ಪಾಡ್ಯ, ಬಿದಿಗೆ, ತದಿಗೆ... ಬಾಯಿಪಾಠ

srivathsajoshi's picture

ನಮ್ಮ ಬಾಯಿಪಾಠವೂ ಹೆಚ್ಚುಕಡಿಮೆ ಇದೇ ರೀತಿ ಇತ್ತು. ಬದಲಾವಣೆಗಳು (ನಿಮ್ಮ versionಗಿಂತ) ಈ ಕೆಳಗಿನವು:

ಪಾಡ್ಯ - ಯುಗಾದಿ ಪಾಡ್ಯ
ಬಿದಿಗೆ - ಸೋಮನ ಬಿದಿಗೆ
...
ಅಷ್ಟಮಿ - ಗೋಕುಲಾಷ್ಟಮಿ
...
ಏಕಾದಶಿ - ಪ್ರಥಮೈಕಾದಶಿ (ಆಷಾಢ ಮಾಸದ್ದು)
...
ತ್ರಯೋದಶಿ - ಶನಿತ್ರಯೋದಶಿ
...
ಹುಣ್ಣಿಮೆ - ನೂಲಹುಣ್ಣಿಮೆ
ಅಮಾವಾಸ್ಯೆ - ಎಳ್ಳಮಾವಾಸ್ಯೆ
=======
ಮತ್ತೆ ನಾವು ತಿಥಿ, ಋತು, ನಕ್ಷತ್ರ, ತಿಂಗಳುಗಳ ಹೆಸರು (ಚಾಂದ್ರಮಾನ, ಸೌರಮಾನ, ಇಂಗ್ಲಿಷ್, ಮುಸಲ್ಮಾನ, ತುಳು), ಸಂವತ್ಸರಗಳು - ಇವಿಷ್ಟನ್ನೂ ಹೇಳುತ್ತಿದ್ದೆವು. ಹೆಮ್ಮೆಯೆನಿಸುವುದೇನೆಂದರೆ ಅವೆಲ್ಲವೂ ನನಗೆ ಈಗಲೂ ಬಾಯಿಪಾಠ ಬರುತ್ತಿವೆ. ಕೆಲವನ್ನು ನನ್ನ ಮಗನಿಗೂ (೭ ವರ್ಷ) ಕಲಿಸುತ್ತಿದ್ದೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 19, 2007 - 4:32am — Shyam Kishore

ಉ: Re: ಹಬ್ಬಗಳ ಮೂಲಕ ಪಾಡ್ಯ, ಬಿದಿಗೆ, ತದಿಗೆ... ಬಾಯಿಪಾಠ

Shyam Kishore's picture

ಶ್ರೀವತ್ಸ ಜೋಶಿಯವರೇ,

ನಿಮ್ಮ ಮಗನಿಗೂ "ಬಾಯಿಪಾಠ" ಕಲಿಸುತ್ತಿದ್ದೀರ ಅಂತ ಓದಿ ಸಂತಸವಾಯಿತು. "ಬಾಯಿಪಾಠ"ವೆಂಬ ಅಮೂಲ್ಯ ಪರಂಪರೆಯೇ ಈ ದಿನಗಳಲ್ಲಿ ಮರೆಯಾಗುತ್ತಿದೆ ಅಲ್ಲವೇ? ನನಗೂ ಸುಮಾರು ಮಟ್ಟಿಗೆ ಬಾಯಿಪಾಠ ನೆನಪಿದೆ. ಆಗ (ನಮ್ಮಜ್ಜ ಹೇಳಿಕೊಡಿತ್ತಿದಾಗ) ಅಂದುಕೊಂಡಿದ್ದಕ್ಕಿಂತ ಹೆಚ್ಚು, ಬೇರೆಯದೇ ರೀತಿಗಳಲ್ಲಿ, ನನಗೀಗ ಅವೆಲ್ಲ ಉಪಯೋಗಕ್ಕೆ ಬರುತ್ತಿದೆ.

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನ್ನ ಕಾವ್ಯ
  • ರಾಜಕೀಯ
  • ಪ್ರೇಮದ ಓಲೆ
  • "ವಿಧಿ"
  • "ಪ್ರೀತಿಯ ಗೆಳೆಯ"
Syndicate content

ಲೇಖಕರು

Shyam Kishore's picture

ಪರಿಚಯ

ವೃತ್ತಿಯಿಂದ ನಾನೊಬ್ಬ ಸಾಫ್ಟ್‌ವೇರ್ ಇಂಜಿನಿಯರ್. ಪ್ರವೃತ್ತಿಯಿಂದ ಸಾಹಿತ್ಯ ಮತ್ತು ಕಲಾಭ್ಯಾಸಿ. ಓದುವುದು, ಚಿತ್ರ ಬಿಡಿಸುವುದು, ಆಗಾಗ ಕವನ-ಚುಟುಕ-ಲೇಖನ ಬರೆಯುವುದು, ಹರಟೆ ಕೊಚ್ಚೋದು, ಕನ್ನಡ ಸಿನಿಮಾ ನೋಡುವುದು ಇತ್ಯಾದಿ ಹವ್ಯಾಸಗಳು.
ಮತ್ತಷ್ಟು ವಿವರಗಳಿಗೆ ನನ್ನ ಬ್ಲಾಗ್ ಪುಟ ಮನದ ಮಾತು ನೋಡಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 25 ಅತಿಥಿಗಳು ಆನ್ಲೈನ್ ಇರುವರು.


ಅತ್ಮದ ಸತ್ಯವು ಪರಮ ಸತ್ಯದೊಡನೆ ನೆಡೆಸುವ ಸಂಭಾಷಣೆಯೇ ಪ್ರಾರ್ಥನೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator