ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › shylaswamy ರವರ ಬ್ಲಾಗ್

ಒಂದು ಕಥೆ, ಒಂದುವ್ಯಥೆ

June 14, 2008 - 11:51am — shylaswamy

ಒಂದು ಕಥೆ ಒಂದು ವ್ಯಥೆ
[ ನಾನು ಈ ಕಥೆಯನ್ನು internetನಲ್ಲಿ ಓದಿದ್ದೆ]
ಚಿಕ್ಕ ವಯಸ್ಸಿನಲ್ಲಿ ಕೇಳುತ್ತಿದ್ದ ಕಥೆಯೊಂದನ್ನು ನೆನಪಿಸಿಕೊಳ್ಳಿ.
ಒಂದೂರಲ್ಲಿ ಒಬ್ಬ ಅಗಸ. ಅವನ ಬಳಿ ಒಂದು ನಾಯಿ ಹಾಗೂ ಒಂದು ಕತ್ತೆ ಇದ್ದವು. ಒಂದು ರಾತ್ರಿ ಇಡೀ ಪ್ರಪಂಚವೇ ಸುಖ ನಿದ್ರೆಯಲ್ಲಿ ಮುಳುಗಿದ್ದ ವೇಳೆ, ಕಳ್ಳನೊಬ್ಬ ನುಗ್ಗಿದ ಅಗಸನ ಮನೆಗೆ. ಆಗ ಅಗಸ ಮಲಗಿದ್ದರೂ ನಾಯಿ ಮತ್ತು ಕತ್ತೆ ಎಚ್ಚರವಾಗಿಯೇ ಇದ್ದವು. ನಾಯಿಗೆ ಅಗಸ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲವೆಂಬ ಅಭಿಪ್ರಾಯವಿದ್ದ ಕಾರಣ ಅದಕ್ಕೆ ಅಗಸನ ಮೇಲೆ ಕೋಪವಿತ್ತು.ಆ ಕಾರಣ ಈದಿನ ಕಳ್ಳ ಎಲ್ಲಾ ದೋಚಿಕೊಂಡು ಹೋದರೆ ಹೋಗಲಿ, ಅಗಸನ ಮೇಲೆ ತನ್ನ ಸೇಡು ತೀರಿಸಿಕೊಳ್ಳಲು ಇದುವೇ ಸರಿಯಾದ ಸಮಯವೆಂದು ಪರಿಗಣಿಸಿ ಕಳ್ಳನನ್ನು ನೋಡಿದರೂ ಬೊಗಳದೇ ಸುಮ್ಮನಾಯಿತು. ಆದರೆ ಕತ್ತೆಗೆ ನಾಯಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿಲ್ಲ ಎಂಬ ಆತಂಕವಾಯಿತು. ನಾಯಿಗೆ “ನೀನು ಈಗ ಬೊಗಳಲೇಬೇಕು. ಇದು ನಿನ್ನ ಕರ್ತವ್ಯ” ಎಂದು ಸೂಚಿಸಿತು. ಆದರೂ ನಾಯಿ ಕತ್ತೆಯ ಮಾತಿಗೆ ಕಿವಿ ಕೊಡಲಿಲ್ಲ. ಕೊನೆಗೆ ಕತ್ತೆಯು ತಾನೇ ಆ ಕಲಸವನ್ನು ಮಾಡಬೇಕೆಂದು ನಿರ್ಧರಿಸಿ ತಾನೆ ಅರಚಿಕೊಂಡಿತು. ಕತ್ತೆಯ ಅರಚಾಟ ಕೇಳಿ ಕಳ್ಳ ಓಡಿ ಹೋದ. ಎಚ್ಚರಗೊಂಡ ಅಗಸ ಎದ್ದುಬಂದು ನೋಡುತ್ತಾನೆ. ಅವನಿಗೆ ಏನೂ ಕಾಣುವುದಿಲ್ಲ. ಯಾವ ಕಾರಣವೂ ಇಲ್ಲದೇ ನಡುರಾತ್ರಿಯಲ್ಲಿ ಅರಚುತ್ತಿರುವ ಕತ್ತೆಯ ಮೇಲೆ ಕೋಪಗೊಂಡು ಅದನ್ನು ಹೊಡೆದು ಹಣ್ಣುಗಾಯಿ ನೀರುಗಾಯಿ ಮಾಡುತ್ತಾನೆ.
ಕಥೆಯನೀತಿ :- ತನ್ನ ಕೆಲಸದ ಹೊರತಾಗಿ ಇನ್ನೊಬ್ಬರ ಕರ್ತವ್ಯವನ್ನು ನಿನ್ನ ತಲೆಯ ಮೇಲೆ ಹೊತ್ತುಕೊಳ್ಳಬೇಡ.
ಈಗ ಈ ಕಥೆಯನ್ನು ಹೊಸ ಕೋನದಿಂದ ನೋಡೋಣ.
ಈ ಅಗಸ ವಿದ್ಯಾವಂತ. ಒಂದು ಕಂಪೆನಿಯ M.D. ಯಾವ ಚಟುವಟಿಕೆಯನ್ನೇ ಆಗಲಿ, ವಿಶ್ಲೇಷಣಾತ್ಮಕವಾಗಿ ನೋಡಬಲ್ಲವನಾಗಿ ಇದ್ದ. ಸರಿ, ಇವನ ಮನೆಗೆ ಕಳ್ಳ ನುಗ್ಗಿದ. ಮಾಮೂಲಿನಂತೆ ನಾಯಿ ಬೊಗಳಲಿಲ್ಲ, ಕತ್ತೆ ಅರಚಿತು. ಕಳ್ಳ ಓಡಿ ಹೋದ. ಎಚ್ಚರಗೊಂಡು ಹೊರಗೆ ಬಂದ ಅಗಸ ಕತ್ತೆಯನ್ನು ನೋಡಿದ. ಅದು ಒಂದೇ ದಿಕ್ಕನ್ನು ನೋಡಿ ಅರಚುತ್ತಿರುವುದನ್ನು ಕಂಡ. ಅವನೂ ಆ ದಿಕ್ಕಿನತ್ತ ತಿರುಗಿ ನೋಡಿದ. ಅಲ್ಲಿ ಯಾರೂ ಕಾಣಲಿಲ್ಲ. ಆದರೂ ಅವನು ಪರೀಕ್ಷಿಸುತ್ತಾ ಹೋದಾಗ ಅಲ್ಲಲ್ಲಿ ಕಳ್ಳನ ಹೆಜ್ಜೆಗುರುತು ಕಣ್ಣಿಗೆ ಬಿತ್ತು. ಇದರರ್ಥವನ್ನು ಅವನು ಊಹಿಸಿದ. ಕತ್ತೆಯನ್ನು ಪ್ರೀತಿಯಿಂದ ನೋಡಿ ಅದರ ಬೆನ್ನು ಸವರಿ ಅದಕ್ಕೆ ಬಹುಮಾನವೆಂಬಂತೆ ಒಂದಷ್ಟು ಹುಲ್ಲು ಹೊರೆ ಜಾಸ್ತಿ ಹಾಕಿದ. ಹೀಗಾಗಿ ಅಂದಿನಿಂದ ಕತ್ತೆಗೆ ತನ್ನ ಕೆಲಸಗಳೊದಿಗೆ ನಾಯಿಯ ಕೆಲಸದ ಹೊರೆಯನ್ನೂ ಹೊರುವಂತಾಯಿತು. ಆದರೆ ಇದಕ್ಕಾಗಿ ನಾಯಿಯನ್ನು ಅಗಸ ಹೊರಗೇನೂ ಹಾಕಲಿಲ್ಲ. ನಾಯಿಯ ಪರಿಸ್ಥಿತಿ ಮೇಲೇರಲೂ ಇಲ್ಲ, ಕೆಳಗಿಳಿಯಲೂ ಇಲ್ಲ. ಹೇಗೂ ಕೆಲಸದ ಹೊರೆ ಕಡಿಮೆಯಾದ ಸಂತೋಷದಿಂದ ನೆಮ್ಮದಿಯಾಗಿ ಜೀವನ ನಡೆಸುತ್ತಿತ್ತು. ಆದರೆ ಕತ್ತೆಗೆ ‘Star Performer” ಎಂಬ ಬಿರುದಿನೊಂದಿಗೆ ಕೆಲಸದ ಹೊರೆಯೂ ಹೆಚ್ಚಾಗಿ ಒತ್ತಡವೂ ಹೆಚ್ಚಾಯಿತು. ಅದು ತನ್ನ ಜೀವನವಿಡೀ ಒತ್ತಡದಿಂದಲೇ ಕಳೆಯುವಂತಾಯಿತು. ಈಗ ಕತ್ತೆ ತನ್ನ ಒತ್ತಡ ಕಡಿಮೆ ಮಾಡಿಕೊಳ್ಳಲು ಹೆಣಗಾಡುತ್ತಿದೆಯಂತೆ. ಒತ್ತಡ ಕಡಿಮೆ ಇರುವ ಬೇರೆ ಕೆಲಸ ಕತ್ತೆಗೆ ಎಲ್ಲಾದರೂ ಸಿಗುವುದೇ?
ಕಥೆಯ ನೀತಿ:- ಮೇಲಿನದೇ ನೀತಿ, ಏನೂ ವ್ಯತ್ಯಾಸವಿಲ್ಲ.
ಒಂದು ಅರಿಕೆ:- ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳು ವಾಸ್ತವಿಕ, ಕಾಲ್ಪನಿಕವಲ್ಲ. ಯಾವುದಾದರೂ ವ್ಯಕ್ತಿಯ ಜೀವನಕ್ಕೆ ಹೋಲಿಕೆಯಾಗಿದ್ದಲ್ಲಿ ಅದು ಉದ್ದೇಶಪೂರ್ವಕವೆಂದು ನಂಬಲಾಗಿದೆ.

  • ಸಣ್ಣ ಕಥೆ
~.~
  • shylaswamy ರವರ ಬ್ಲಾಗ್
  • Login or register to post comments
  • 300 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 16, 2008 - 10:48am — roopablrao

ಉ: ಒಂದು ಕಥೆ, ಒಂದುವ್ಯಥೆ

roopablrao's picture

ತುಂಬಾ ಒಳ್ಳೆಯ ನೀತಿ ಮೇಡಮ್
ಒಂದಾನೊಂದು ಕಾಲದಲ್ಲಿ ನಾನು ಕತ್ತೆ ಥರಾನೆ ಆಗಿಬಿಟ್ಟಿದ್ದೆ .(ಎಲ್ಲರ ಕೆಲಸಾನ ಬೆನ್ನ ಮೇಲೆ ಹೊತ್ತುಕೊಂಡು ) Smiling

ಈಗ ಈಗಿನ ಕಾಲದ ಅಗಸನ ಥರಾ ಆಗಿದೀನಿ.
Smiling

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 16, 2008 - 12:54pm — shylaswamy

ಉ: ಒಂದು ಕಥೆ, ಒಂದುವ್ಯಥೆ

shylaswamy's picture

ಸದ್ಯ ಕತ್ತೆ ಸ್ಥಾನದಿಂದ ಅಗಸನ ಸ್ಥಾನಕ್ಕೆ promote ಆದ್ರಲ್ಲ. Very Good. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 21, 2008 - 7:00am — pinkzangel

ಉ: ಒಂದು ಕಥೆ, ಒಂದುವ್ಯಥೆ

pinkzangel's picture

ಹೇ ಹೇ ಹೇ!! ಕಥೆ ಚೆನ್ನಾಗಿದೆ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಗಸ ಮತ್ತವನ ಮೂರ್ಖ ಕತ್ತೇ ಕತೆಯ ರೀಮೇಕ್
  • ಒಂದು ನಾಯಿ ಕತೆ
  • ಮುಲ್ಲಾ ಕತೆ: ೩: ಆಚೆ ಈಚೆ ೪: ಒಂಟೆ ೫: ಕತ್ತೆ ಮನುಷ್ಯ
  • ಜೀವನ ರಹಸ್ಯ
  • ಸತ್ತ ನಾಯಿಗಾಗಿ...!!!
Syndicate content

ಲೇಖಕರು

shylaswamy's picture

ಪೂರ್ಣ ಹೆಸರು
shylaswamy

ಪರಿಚಯ

ನಾನು ಶಿವಮೊಗ್ಗಾದಲ್ಲಿ ವಾಸ ಮಾಡುತ್ತಿರುವ ಗೃಹಿಣಿ. ದೀರ್ಘಕಾಲ ಶಿಕ್ಷಕಿಯಾಗಿ ಈಗ ಸ್ವಯಂ ನಿವೃತ್ತಿಹೊಂದಿ ಮನೆಯಲ್ಲಿದ್ದೇನೆ. ನನ್ನ ಆಸಕ್ತಿಯ ಕ್ಷೇತ್ರಗಳೆಂದರೆ, ಸಂಗೀತ, ಸಾಹಿತ್ಯ ಮತ್ತು ನಾಟಕ. ನಾನು ಕೆಲವು ನಾಟಕಗಳನ್ನು ಬರೆದು ನಿರ್ದೇಶಿಸಿದ್ದೇನೆ. ಹೆಚ್ಚಾಗಿ ಬರೆದಿರುವುದು ಮತ್ತು ನಿರ್ದೇಶಿಸಿರುವುದು ಮಕ್ಕಳ ನಾಟಕಗಳನ್ನು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಕ್ಕಾ..ಅಕ್ಕಾ..ನಾನೂ ಬತ್ತೀನಿ...
  • ಮಳೆಯ ಮೇಲೇಕೆ ದೂರು?
  • ಎಲ್ಲ ತುಸುಹೊತ್ತು...
  • ಕನ್ನಡ ತಾಯಿಗೆ ನಮನ
  • ನೋಡಿ ಕಂಡದ್ದು
  • ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....
  • ‘............’
  • ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
  • ಇನಿಯ
  • ಮಾಯಾಂಗಿನಿ ಮೋಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.


ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ |
ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ ||
ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ |
ಆನಂದ ಧರೆಗಂದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator