ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › shylaswamy ರವರ ಬ್ಲಾಗ್

ಎಳನೀರು ಮಾರುವವರ ಸಾಮಾಜಿಕ ಕಳಕಳಿ

June 30, 2008 - 10:45am — shylaswamy

ಎಳನೀರು ಮಾರುವವರ ಸಾಮಾಜಿಕ ಕಳಕಳಿ
ಟೈಮ್ಸ್ ಆಫ್ ಇಂಡಿಯಾ ಕನ್ನಡ ದಿನಪತ್ರಿಕೆಯಲ್ಲಿ ಪ್ರತಿ ಭಾನುವಾರ ಶ್ರೀಯುತ ರವಿಶಂಕರ್ (Aim High consultantsನ C.E.O.) ಅವರ ’ಒಳನೋಟ’ ಎಂಬ ಅಂಕಣಬರಹ ಬರುತ್ತದೆ. ಅವರ ವಿಚಾರಗಳು ವೈವಿಧ್ಯಮಯ ಹಾಗೂ ಅರ್ಥಪೂರ್ಣವಾಗಿರುತ್ತವೆ. ಎಲ್ಲವನ್ನು regularಆಗಿ ಓದುವ ಓದುಗರಲ್ಲಿ ನಾನೂ ಒಬ್ಬಳು. ಅವುಗಳಲ್ಲಿ ಅವರು ಇತ್ತೀಚೆಗೆ ಬರೆದ “ಸಾಮಾಜಿಕ ಜವಾಬ್ದಾರಿ” ಎಂಬ ತಲೆಬರಹದ ಅಂಕಣ ನನಗೆ ಅತ್ಯಂತ ಸಂತಸ ನೀಡಿತು. ಅದನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಆಸೆ ನನಗೆ.
ಕೇರಳದ ಚಿರಾಯ್ ಬೀಚ್ ಕೊಚಿನ್ ಸಮೀಪದಲ್ಲಿದೆ. ಅತಿ ಸುಂದರವಾದ ಆ ತಾಣಕ್ಕೆ ಸಹಜವಾಗಿಯೇ ಅತಿ ಹೆಚ್ಚು ಪ್ರವಾಸಿಗರು ಬರುತ್ತಿರುತ್ತಾರೆ. ಆ ಬೀಚಿನ ಮೂಲೆಯಲ್ಲಿ ಒಬ್ಬ ವಯಸ್ಸಾದ ಮುದುಕರು ಎಳನೀರು ಮಾರುತ್ತಿದ್ದರು. ಅವರ ಬಳಿ ರವಿಶಂಕರ್ ಮತ್ತು ಅವರ ಗೆಳೆಯರು ಎಳನೀರು ಕುಡಿಯಲು ಹೋದಾಗ ಅವರನ್ನು ಮೂಕ ವಿಸ್ಮಿತರನ್ನಾಗಿ ಮಾಡಿದ ಒಂದು ವಿಷಯದ ವಿವರಣೆ ಇಲ್ಲಿದೆ.
ಪ್ರವಾಸಿಗರು ಕುಡಿದು ಎಸೆದ ಎಳನೀರಿನ ಚಿಪ್ಪುಗಳನ್ನು ಆತ ಚೆನ್ನಾಗಿ ಕೊಡವಿ ಒಂದರ ಮೇಲೊಂದು ಬೋರಲು ಹಾಕುತ್ತಿದ್ದ. ಅ ಬೋರಲು ಹಾಕಿದ ಚಿಪ್ಪುಗಳ ಗುಡ್ಡದ ಆಕಾರ ಮತ್ತು ವಿನ್ಯಾಸ ಅದರೊಳಗೆ ಒಂದು ಹನಿ ನೀರು ಇಳಿಯಲೂ ಸಾಧ್ಯವಾಗದಂತಿತ್ತು. ರವಿಶಂಕರ್ ಅವರು ಕುತೂಹಲ ತಡೆಯಲಾರದೇ ಕಾರಣ ಕೇಳಿದಾಗ ಆ ವ್ಯಕ್ತಿಯ ಉತ್ತರ ನಿಜಕ್ಕೂ ಆನಂದ ಮತ್ತು ಆಶ್ಚರ್ಯ ತರಿಸುವಂತಿತ್ತು.
ಅವರ ಉತ್ತರ, “ ಸೊಳ್ಳೆ ಹರಡದಿರಲಿ ಎಂದು ಹೀಗೆ ಜೋಡಿಸುತ್ತೇನೆ. ಚಿಪ್ಪನ್ನು ಅಂಗಾತ ಬಿಟ್ಟರೆ ಅದರಲ್ಲಿ ನೀರು ನಿಲ್ಲುತ್ತದೆ. ಸೊಳ್ಳೆಗಳ ವಾಸಕ್ಕೆ ಅಣಿ ಮಾಡಿಕೊಟ್ಟಂತಾಗುತ್ತದೆ. ಕೆಲವು ದಿನಗಳ ಹಿಂದೆ ಇಲ್ಲಿನ ಜನರನ್ನು ಮಲೇರಿಯಾ ಬೇರೆ ಕಾಡಿದೆ. ಮತ್ತೆ ನಾವೇ ಅದಕ್ಕೆ ದಾರಿ ಮಾಡಿಕೊಡಬಾರದಲ್ಲವೇ?” ಎಂಬುದು.
ಇವರ ಬಳಗಕ್ಕೆ ಆಶ್ಚರ್ಯ! ಮತ್ತೆ ಕೇಳಿದರು, “ಹೀಗೆ ಮಾಡಬೇಕೆಂದು ಸರ್ಕಾರ ಅಥವಾ ಯಾವುದಾದರೂ ಸಂಘ ಸಂಸ್ಥೆಗಳು ನಿಮಗೆ ತಿಳಿ ಹೇಳಿದವೇ?”
ಆ ವ್ಯಕ್ತಿ ನಕ್ಕು ಕೊಟ್ಟ ಉತ್ತರ, “ನಾವು ಹಾಕುವ ಕಸ ತೆಗೆಯಲು ಯಾರು ಯಾಕೆ ಹೇಳೀಕೊಡಬೇಕು?” ಹೀಗಿತ್ತು.
ಅವರು ಇದನ್ನು ಸ್ವಯಂಪ್ರೇರಣೆಯಿಂದ ಮಾಡುತ್ತಿದ್ದರು. ಅವರಿಗೆ ಇದರಿಂದ ಯಾವ ಲಾಭವೂ ಇಲ್ಲ. ಆದರೆ ಅವರಲ್ಲಿದ್ದ ಸಾಮಾಜಿಕ ಕಳಕಳಿ, ಸದುದ್ಧೇಶ ರವಿಶಂಕರ್ ಬಳಗವನ್ನು ಮೂಕ ವಿಸ್ಮಿತರನ್ನಾಗಿ ಮಾಡಿತಂತೆ. ನಾನೂ ಸಹಾ ಇದನ್ನು ಓದಿದಾಗ ಆ ಎಳನೀರು ಮಾರುವವರ ಬಗ್ಗೆ ಗೌರವ ತುಂಬಿದ ಚಿಂತನೆಯೊಂದಿಗೆ ಎಷ್ಟೋ ಹೊತ್ತು ದಂಗು ಬಡಿದವಳಂತೆ ಕುಳಿತಿದ್ದೆ.
ದೊಡ್ಡ ದೊಡ್ಡ ಉದ್ಯಮದವರು, “ನಮ್ಮ ಕಂಪೆನಿಗಳ ಸಾಮಾಜಿಕ ಜವಾಬ್ದಾರಿ ಹೆಚ್ಚು” ಎಂದು ಅತಿಯಾದ ಪರಿಸರ ಕಾಳಜಿ ಇರುವವರಂತೆ ಸೋಗು ಹಾಕಿಕೊಂಡು ಗಿಮಿಕ್ ಮಾಡುತ್ತಾರೆ. ಅವರೊಂದಿಗೆ ಎಳನೀರು ಮಾರುವ ಇವರನ್ನು ಹೋಲಿಸಿದಾಗ ಇವರು ಅದೆಷ್ಟು ಎತ್ತರದಲ್ಲಿ ನಿಲ್ಲುತ್ತಾರೆ ಅಲ್ಲವೇ?

  • ಪರಿಸರ
~.~
  • shylaswamy ರವರ ಬ್ಲಾಗ್
  • Login or register to post comments
  • 212 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 2, 2008 - 10:36pm — Rajeshwari

ಉ: ಎಳನೀರು ಮಾರುವವರ ಸಾಮಾಜಿಕ ಕಳಕಳಿ

Rajeshwari's picture

ಎಳನೀರು ಮಾರುವವರ ಕಾಳಜಿ ನಿಜಕ್ಕು ಮಚ್ಚುವಂತಹುದ್ದು. ಇವರು ಎಲ್ಲರಿಗು ಆದರ್ಶವಾಗಿದ್ದಾರೆ.

ಇಲ್ಲಿನ ಸಂಸ್ಕೃತಿಯ ಬಗ್ಗೆ ನಾನು ಹೆಚ್ಚಾಗಿ ಗಮನ ಕೊಟ್ಟಿಲ್ಲ. ಇಲ್ಲಿ ಒಂದೆರಡು ದಿನಗಳಿಂದ ಪಟಾಕಿಯನ್ನು ಹಾರಿಸುತ್ತಿದ್ದಾರೆ, ಒಂದು ದಿನವೂ ನಾನು ಅದರ ಕಸಗಳನ್ನು ಕಂಡಿರಲ್ಲಿಲ್ಲ. ನಾನು ನಿನ್ನೆ ವಾಕಿಂಗ್ಗೆ ಹೋದಾಗ ಒಂದು ದೃಶ್ಯ ಕಣ್ಣಿಗೆ ಬಿತ್ತು. ಪಟಾಕಿ ಹಾರಿಸಿದ ನಂತರ ಅದರ ಕಸಗಳನ್ನು ತಾವೇ ಕಸದ ಬುಟ್ಟಿಗೆ ಹಾಕುತ್ತಿದ್ರು. ಕೆಲವೊಮ್ಮೆ ದೊಡ್ದವರು ಕಸ ತೆಗೆದರೆ ,ಕೆಲವೊಮ್ಮೆ ಸಣ್ಣ ಮಕ್ಕಳು. ಹೀಗೆ ನಮ್ಮ ದೇಶದಲ್ಲಿದ್ದರೆ ಇಲ್ಲಿನಂತೆಯೆ ಸ್ವಚ್ಚವಾದ ವಾತವರಣ ಸಿಗುತ್ತಿತ್ತೇನೊ ಅಂದುಕೊಂಡು ಮನೆಯತ್ತ ಹೆಜ್ಜೆ ಹಾಕತೊಡಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವ್ಯಾಕರಣ : ಕೆಂದೆಳನೀರು
  • ಸೂರ್ಯನ ಶಿಕಾರಿ ಮತ್ತೆ ಆರಂಭವಾಗಿದೆ!!
  • ಸೀತಾ- ಸ್ವಯಂವರ- ಬೊಂಬೆಗಳ ಪ್ರದರ್ಶನದಲ್ಲಿ, ಅದೂ ಎಲ್ಲಿ ? ಅಮೆರಿಕದಲ್ಲಿ !
  • ರವಿಬೆಳೆಗೆರೆಯ ಅಭಿಮಾನಕ್ಕೊಂದು ಬ್ಲಾಗ್
  • ಆರ್ಟ್ ಆಫ್ ಲಿವಿಂಗ್ ಒಂದು ನೋಟ
Syndicate content

ಲೇಖಕರು

shylaswamy's picture

ಪೂರ್ಣ ಹೆಸರು
shylaswamy

ಪರಿಚಯ

ನಾನು ಶಿವಮೊಗ್ಗಾದಲ್ಲಿ ವಾಸ ಮಾಡುತ್ತಿರುವ ಗೃಹಿಣಿ. ದೀರ್ಘಕಾಲ ಶಿಕ್ಷಕಿಯಾಗಿ ಈಗ ಸ್ವಯಂ ನಿವೃತ್ತಿಹೊಂದಿ ಮನೆಯಲ್ಲಿದ್ದೇನೆ. ನನ್ನ ಆಸಕ್ತಿಯ ಕ್ಷೇತ್ರಗಳೆಂದರೆ, ಸಂಗೀತ, ಸಾಹಿತ್ಯ ಮತ್ತು ನಾಟಕ. ನಾನು ಕೆಲವು ನಾಟಕಗಳನ್ನು ಬರೆದು ನಿರ್ದೇಶಿಸಿದ್ದೇನೆ. ಹೆಚ್ಚಾಗಿ ಬರೆದಿರುವುದು ಮತ್ತು ನಿರ್ದೇಶಿಸಿರುವುದು ಮಕ್ಕಳ ನಾಟಕಗಳನ್ನು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಲಿಂಪಿಕ್ಸ್ : ಬರ ಕೊನೆಯಾಗುತ್ತದೆ, ಆದರೆ...
  • ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
  • ಅಕ್ಕಾ..ಅಕ್ಕಾ..ನಾನೂ ಬತ್ತೀನಿ...
  • ಮಳೆಯ ಮೇಲೇಕೆ ದೂರು?
  • ಎಲ್ಲ ತುಸುಹೊತ್ತು...
  • ಕನ್ನಡ ತಾಯಿಗೆ ನಮನ
  • ನೋಡಿ ಕಂಡದ್ದು
  • ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....
  • ‘............’
  • ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • sirisobagu
    ಉ: ನನ್ನವಳು
    August 22, 2008 - 10:15am
  • mahesha
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 10:05am
  • gururajkodkani
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:56am
  • mahesha
    ಉ: ಏಕೆ ಕರ್ನಾಟಕದೆಡೆಗೆ ತಾತ್ಸಾರ
    August 22, 2008 - 9:49am
  • uniquesupri
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:40am
  • Sunil Jayaprakash
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 9:33am
  • uniquesupri
    ಉ: ಎಲ್ಲ ತುಸುಹೊತ್ತು...
    August 22, 2008 - 9:22am
  • uniquesupri
    ಉ: ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
    August 22, 2008 - 9:18am
  • savithasr
    ಉ: ಲಾಲಿ
    August 22, 2008 - 9:16am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:14am
ಇನ್ನಷ್ಟು
ಈಗಿನಂತೆ 15 ಸದಸ್ಯರು ಮತ್ತು 52 ಅತಿಥಿಗಳು ಆನ್ಲೈನ್ ಇರುವರು.


ಹಂದಿ ಚಂದನದ ಸು
ಗಂಧವನು ಬಲ್ಲುದೆ?
ಒಂದನು ತಿಳಿಯಲರಿಯದ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator