ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ
ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ |
ವೆಲ್ಲವರಿಗಿಲ್ಲ ಸರ್ವಜ್ಞ |

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಗೆಳೆಯನಿಗಾಗಿ

ನನ್ನಯ ಗೆಳೆಯ ಹಾಸ್ಯದ ಸರದಾರ
ತಿಳಿ ಹಾಸ್ಯ ಚುಟುಕುಗಳ ಹರಿಕಾರ
ಬಾನಂಗಳ ಕಾದ ಸುಮನಸ
ಹರಿಸುವರು ಸಂಪದದಿ ನವರಸ

ಮಾಡಿದರಿವರ ಸಹವಾಸ
ಅನ್ನುವರಿವರು ನಕ್ಕು ನಗಿಸುವುದಕೇ
ಸಮಯ ಸಾಲದಿರುವಾಗ
ದುಡುಕು ಬಿಗುಮಾನಗಳೇಕೆ ಸಖೀ

ಮತ್ತೊಮ್ಮೆ ಹೇಳುವರು
ತಡೆಯಲಾಗದೆ
ಚಿಣ್ಣರ ಸುಖವ ಕಂಡು
ಅಳಲಾಗದು ಸಖೀ…!!!
ಈ ಹಿರಿತನ ಏಕೆ ಬೇಕಿತ್ತು

ಸಾಕಿರುವರು ಮನೆಯಲಿ
ಕೋಗಿಲೆಯ ಮರಿಯ
ಗೊತ್ತಿಲ್ಲದೇ ಪಾಪ
ಅಳಿಯನೆಂಬ ಕಾಗೆ ಕಾಯುತಿದೆ
ಬರಲು ಮರಿ ಹೊರಗೆ

ಅಂದು ಅಂದರು
ನೀನಾರೋ ನಾನಾರೋ

ನಂತರದಲ್ಲಿ
ನಾನು ರವಾನಿಸೋ

ಪ್ರೀತಿಯ ಎಸ್ಸೆಮ್ಮೆಸ್ ಗಳಿಗೆ,
ನೀನು ಉತ್ತರಿಸದಿದ್ದರೂ ಚಿಂತಿಲ್ಲ,

ನನಗೆಳ್ಳಷ್ಟೂ ಬೇಸರವಿಲ್ಲ;

ಈಗ ಅಂತಾರೆ
ನೀ ನನ್ನ ಜೀವ

ನನಗೂ ಗೊತ್ತು
ಈ ಸಂಬಂಧಗಳೇ ಹೀಗೆ
ಬೆಳೆದು ಬಿಡುತ್ತವೆ ಎಲ್ಲಾದರೂ
ಮನ ಬಂದ ಹಾಗೆ

ಕಾಯುತ್ತಿರುವೆ,
ಎಂದನ್ನುವರೋ ಬಾ ಗೆಳೆಯ ನನ್ನೆದೆಯ ಅರಮನೆಗೆ
ನಿನಗಾಗಿ ತೆರೆದಿದೆ ಬಾಗಿಲು…

 

 

ನನ್ನ ಹಿರಿಯ ಗೆಳೆಯ ಆಸುಹೆಗ್ಡೆಯವರಿಗೆ ನಾನು ಬರೆದದ್ದು ಮತ್ತು ನನ್ನ ಪ್ರಥಮ ಕನ್ನಡ ಕವಿತೆ

ಇಲ್ಲಿ ಬಳಕೆಯಾಗಿರುವುದು “ಬೆಣ್ಣೆಮಸಾಲೆ ದೋಸೆ” ಲೋಹಿತರ “ಲೋಹಿತತ್ರಾಂಶ

ಮತ್ತಿಲ್ಲಿ ಬಳಸುವುದು ಲೋಹಿತತ್ರಾಂಶ

ಇನ್ನಷ್ಟು

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಗೆಳೆಯನಿಗಾಗಿ

asuhegde's picture

ಸಂದೀಪ,

ನೀವೇನೋ ಕವನ ಬರೆದು ಹಾಕಿದಿರಿ ಅದು ನಿಮ್ಮ ಮರ್ಜಿ
ಹಲವರಿಗಾದೀತಿದು ಪಥ್ಯ ಇನ್ನು ಕೆಲವರಿಗಾದೀತು ಅಲರ್ಜಿ

ಆಸುಮನದ ಮಾತುಗಳನು ಸಾಕಷ್ಟು ಮೆಚ್ಚಿಕೊಂಡಂತಿದೆ ನೀವು
ನಿಮ್ಮ ನಿರೀಕ್ಷೆಯ ಈ ಮಟ್ಟದಲೇ ಉಳಿದರೆ ಸಾಕು ಸದಾ ನಾವು

ಗೆಳೆತನಕೆ ಅರ್ಥ ಬರುವುದು ಗೆಳೆಯರಂತೆ ಗೆಳೆತನಕೆ ಬೆಲೆಕೊಟ್ಟಾಗ
ಗೆಳೆತನ ಬೆಳೆಯುವುದು ಗೆಳೆಯರನ್ನೆಮ್ಮ ಹೃದಯದೊಳಗೆ ಇಟ್ಟಾಗ

- ಆತ್ರಾಡಿ ಸುರೇಶ ಹೆಗ್ಡೆ.

ಉ: ಗೆಳೆಯನಿಗಾಗಿ

sinchana's picture

ಗೆಳೆಯ,

ನಾನಿಷ್ಟೆ ಹೇಳಬಲ್ಲೆ

ಅವರವರ ಭಾವಕ್ಕೆ ಅವರವರ ಭಕುತಿಗೆ,

ಇಂತೀ ನಿಮ್ಮ ಪ್ರೀತಿಯ
ಸಂದೀಪ