ಅಹರ್ನಿಶಿ
ನನ್ನ ಮನಸು
ಬ್ಲಾಗ್ .... ಬ್ಲಾಗ್ ......ಎಲ್ನೋಡಿ ಬ್ಲಾಗ್.
ಬ್ಲಾಗ್ ಎಂಬ ಬ್ಲಾಗಿಗೆ ಕನ್ನಡ ಪದ ಯಾವುದು ಅಂತ ಯೋಚ್ನೆ ಮಾಡೋಕೆ ಶುರು ಮಾಡಿದೆ.
ಏನು ಇರಬಹುದು.... ಕನ್ನಡ ಕಸ್ತೂರಿ ಡಾಟ್ ಕಾಮ್ ನಲ್ಲಿ ಕೂಡ ಸಿಗಲಿಲ್ಲ,ಬರಹ ಡಾಟ್ ಕಾಮ್ / ಕನ್ನಡ / ನಿಘಂಟು ಇಲ್ಲಿ ಕೂಡ ಸಿಗಲಿಲ್ಲ.ಎನು ಮಾಡೋದು ಅಂತ ಹಾಗೆ ಯೋಚ್ನೆ ಮಾಡ್ತಾ ಕುಳಿತಿರುವಾಗ ಹೊಳೆದ ಕೆಲವೇ ಅರ್ಥ ಗಳನ್ನ ನಿಮ್ಮ ಮುಂದೆ ಇಡ್ತಾ ಇದೀನಿ.
ಬ್ಲಾಗ್ ಅಂದರೆ ಜೋಳಿಗೆ , ಸರಿನಾ ಅಂತ ಯೋಚಿಸಿದೆ. ಆದ್ರೆ ನಾವು ಜೋಳಿಗೆಯನ್ನ ಇನ್ನೊಬ್ಬರ ಹತ್ತಿರ ಬೇಡೋದಕ್ಕೆ ಉಪಯೋಗಿಸುತ್ತೇವೆ , ಇದು ಹೇಗೆ ಬ್ಲಾಗಿಗೆ ಪರ್ಯಾಯ ಪದ ಆಗೋಕೆ ಸಾಧ್ಯ ಅಂತ ಕೈ ಬಿಟ್ಟೆ. ಸಾಕಷ್ಟು ತಲೆ ಕೆಡಿಸಿಕೊಂಡ ನಂತರ ನನಗೆ ಅನಿಸಿದ್ದು ಬ್ಲಾಗಿಗೆ ಸರಿಯಾದ ಕನ್ನಡ ಪದ "ಅಕ್ಷರ ಪಾತ್ರೆ" ಮೊಗೆದಷ್ಟು ಮುಗಿಯದ "ಅಕ್ಷಯ ಪಾತ್ರೆ" . ಇತ್ತೀಚೆಗೆ ಬ್ಲಾಗ್ ಬ್ಲಾಗ್ ಎಲ್ನೋಡಿ ಬ್ಲಾಗ್. ಗಣಕ ಕ್ರಾಂತಿ ಯೊಂದಿಗೆ ಅಕ್ಷರ ಕ್ರಾಂತಿ.
-ಶ್ರೀಧರ.

- Sreedhara ರವರ ಬ್ಲಾಗ್
- Login or register to post comments
- 598 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಬ್ಲಾಗ್ .... ಬ್ಲಾಗ್ ......ಎಲ್ನೋಡಿ ಬ್ಲಾಗ್.
ನಾನು ಬ್ಲಾಗ್‌ಗೆ "ತಾರಿ" ಎನ್ನುವ ಪದವನ್ನು ಹಿಂದೆ ಬಳಸಿದ್ದೇನೆ - ಈ ಕೆಳಗಿನ ಲಿಂಕ್ ನೋಡಿ.
http://antaranga.blogspot.com/
ಉ: ಬ್ಲಾಗ್ .... ಬ್ಲಾಗ್ ......ಎಲ್ನೋಡಿ ಬ್ಲಾಗ್.
ನಾನು ಬ್ಲಾಗ್‌ಗೆ "ತಾರಿ" ಎನ್ನುವ ಪದವನ್ನು ಹಿಂದೆ ಬಳಸಿದ್ದೇನೆ - ಈ ಕೆಳಗಿನ ಲಿಂಕ್ ನೋಡಿ.
http://antaranga.blogspot.com/2006/05/blog-post_20.html
....ಸರೀ, ಈ ಬ್ಲಾಗುಗಳಲ್ಲಿ (ಬ್ಲಾಗಿಗೆ 'ತಾರಿ' ಎಂದು ನಾನೊಂದು ಹೊಸಪದವನ್ನು ಪರಿಚಯಿಸಿದರೆ ಹೇಗೆ? ತಾಣದಲ್ಲಿ ಬರೆದ ದಿನಚರಿ - ಎಂಬುದರ ಮೊದಲ ಹಾಗು ಕೊನೆಯ ಅಕ್ಷರ - ತಾರಿ), ಅಲ್ಲ ತಾರಿಗಳಲ್ಲಿ ಯಾರು ಯಾರು ಏನೇನು ಬರೆದಿದ್ದಾರೆ ಎಂದು ನೋಡಿಕೊಂಡು ಬಂದೆ...
ಉ: ಬ್ಲಾಗ್ .... ಬ್ಲಾಗ್ ......ಎಲ್ನೋಡಿ ಬ್ಲಾಗ್.
ಬ್ಲಾಗಿಗೆ "ಬ್ಲಾಗು/ಬಲಾಗು" ಎನ್ನುವುದೇ ಭೂಷಣ.
ನನಗೆ "ವಿಷಯವಿನೋದಲೀಲಾಸ್ವಲೇಖನಾಂತರಜಾಲೀಯಂ" ಎನ್ನವು ಸುಸಂಸ್ಕೃತ ಪದ ಬ್ಗಾಗಿಗೆ ಇಷ್ಟ.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !