ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › srichandra ರವರ ಬ್ಲಾಗ್

ಸ್ಪರ್ಶ.......ಸ್ಪರ್ಶ

February 5, 2007 - 1:09am — srichandra

ಸ್ಪರ್ಶ

ಆಗ ತಾನೆ ಹುಟ್ಟಿದ ಸೂರ್ಯನ ಕಿರಣಗಳು ನಿನ್ನ ಮುಂಗುರುಳ ಮುಟ್ಟಿ ಎಚ್ಚರಿಸುತ್ತದೆ. ನೀನು ಮುಗುಳು ನಕ್ಕು ಆ ಸೂರ್ಯನ ಕಿರಣ ಬಿದ್ದು ಪ್ರಜ್ವಲಿಸುವ ನೆಲವ ನೋಡಿ ಏಳುತ್ತೀಯ. ಎದ್ದು ಸ್ವಚ್ಛ ಸ್ನಾನ ಮಾಡಿ ಹಣೆಗೆ ಕುಂಕುಮದ ಬೊಟ್ಟಿಡುತ್ತೀಯ. ಹೂ ಹಾಸಿನ ಮೇಲೆ ನಿನ್ನ ಪಾದ ನಡೆದಾಡುತ್ತದೆ. ಹೂಗಳು ನಿನ್ನ ನೋಡಿ ನಾಚಿ ಘಮಿಸುತ್ತವೆ. ”ಎಲ್ಲಿಯ ಚೆಲುವು ನಿನ್ನದು?” ಎಂದು ತಲೆತಗ್ಗಿಸುತ್ತವೆ. ಮತ್ತೆ ಮುನ್ನಡೆಯುತ್ತೀಯ. ”ನಿಲ್ಲು”, ತಿರುಗಿ ನೋಡುತ್ತೀಯ. “ಮುಳ್ಳು ಚುಚ್ಚಿ ನಿನ್ನ ಪಾದ ಸ್ಪರ್ಶ ನಿಂತು ಹೋದೀತು” ಎಚ್ಚರಿಸುತ್ತದೆ ಆಕಾಶವಾಣಿ.

ಎಲ್ಲಿಂದಲೋ “ಸುಯ್” ಎಂದು ಬೀಸುವ ಗಾಳಿ ನಿನ್ನ ಮೈ ಸ್ಪರ್ಶಿಸಿ ಹೋಗುತ್ತದೆ. ಮತೆ ಮುಗುಳು ನಗುತ್ತೀಯ. ನಿನ್ನ ಮುಂಗುರುಳು ಮೇಲೆತ್ತುತ್ತೀಯ. ನಿನ್ನ ಅಂದದ ಮೊಗ ನಾಚಿ ನೀರಾಗುತ್ತದೆ. ನೀರಲಿ ಮೀನಾಗಿ ಓಡಾಡುತ್ತದೆ. ಈಜಾಡುತ್ತದೆ. ದಡಕ್ಕೆದ್ದು ಬಂದು ಗಾಳಿಯಾಗಿ ನನ್ನನ್ನು ಸ್ಪರ್ಶಿಸುತ್ತೀಯ. ಘಮಿಸುತ್ತಾ ಮಲ್ಲಿಗೆ ಮೊಗ್ಗಾಗಿ ಗಿಡದಲ್ಲಿ ಸೇರುತ್ತೀಯ. ಮೊಗ್ಗನ್ನು ಚಿವುಟಲು ಹಸಿಕಂದನಿಗೂ ಮನಸ್ಸಾಗದು. ಹೂವಾಗಿ ಅರಳಿ ನೆಲಕ್ಕುರುಳುತ್ತೀಯ. ನೆನನ್ನು ಎತ್ತಿಕೊಳ್ಳಲು ಬರುತ್ತೇನೆ. ಹಕ್ಕಿಯಾಗಿ ಆಗಸಕ್ಕೆ ಹಾರುತ್ತೀಯ. ರೆಕ್ಕೆ ಬಡಿಯುತ್ತೀಯ. ಚಿಲಿಪಿಲಿ ಹಾಡಿ ನನ್ನನ್ನು ನೋಡುತ್ತೀಯ.
ಹಾಡಿಹಾಡಿ ಹಾರಿಹಾರಿ ಮಾವಿನ ಮರದಿ ಕೂರುತ್ತೀಯ. ಮರ ನಿನಗೆ ಸಿಹಿ ಹಣ್ಣು ಕೊಡುತ್ತದೆ. ತಿಂದು ಮತ್ತಷ್ಟು ಸಿಹಿಯಾಗುತ್ತೀಯ. ಇರುವೆಗಳು ನಿನ್ನ್ನ್ನು ಮುತ್ತಲು ಬರುತ್ತವೆ. ಗಾಳಿ “ಭರ್ರನೆ” ಬೀಸಿ ಇರುವೆಗಳು ಅಪ್ಪಳಿಸುತ್ತವೆ ನೆಲಕೆ. ಮತ್ತೆ ಹಾರುತ್ತೀಯ. ಹಾರಿ ಹಾರಿ ಮೋಡದಲ್ಲಿ ಲೀನವಾಗುತ್ತೀಯ. ಮಳೆಯಾಗಿ ಹನಿಯುತ್ತೀಯ. ಪ್ರಪಂಚಕ್ಕೆ ತಫ್ಪು ನೀಡುತ್ತೀಯ. ಹನಿದು ಭೂಮಿಯಲ್ಲಿ ಒಂದಾಗುತ್ತೀಯ.

ಸಂಜೆಗತ್ತಲು ಕವೆಯುವ ಹೊತ್ತು...... ತಣ್ಣನೆಯ ಗಾಳಿಯೊಳಗೆ ಮತ್ತೆ ಒಂದಾಗಿದ್ದೀಯ. ಪೂರಾ ಕತ್ತಲು ಕವೆದಿದೆ. ಗಾಳಿಯು ಹಾಗೇ ತೇಲಿ ತೇಲಿ ನಿನ್ನನ್ನು ಮೇಲಕ್ಕೆ ಕರೆದೊಯ್ಯುತ್ತದೆ. ಅಲ್ಲಿಂದ ಪೂರ್ಣಚಂದಿರ ನಿನ್ನನ್ನು ಕರೆದೊಯ್ಯುತ್ತಾನೆ. ಅವನ ಜೊತೆ ಕಿಲಕಿಲನೆ ನಗುತ್ತೀಯ. ಅವನ ಜೊತೆಗಿರುವ ಕೋಟಿ ಕೋಟಿ ತಾರೆಗಳೊಂದಿಗೆ ನೀನೂ ಸಹ ಒಂದಾಗುತ್ತೀಯ. ಎಲ್ಲರ ಕಣ್ಣಿಗೂ ಖುಷಿ ನೀಡುತ್ತೀಯ. ಪುಟ ಮಕ್ಕಳ ಕೈಲಿ “ಹೊಳೆವ ಹೊಳೆವ ನಕ್ಷತ್ರವೋ....” ಹಾಡಿಸುತ್ತೀಯ.

ನನ್ನೆರಡೂ ತೋಳುಗಳನ್ನು ಚಾಚಿ ನಿನ್ನ ಬಳಿ ಬರುತ್ತೇನೆ. ನೀನು ನನ್ನೆದೆಯ ಬಾಂದಳದಿ ಕರಗುತ್ತೀಯ. ಕರಗಿ ತುಟಿಗೊಂದು ಮುತ್ತು ನೀಡಿತ್ತೀಯ. ನನ್ನ ಮೇಲೆ ಮಳೆಹನಿಯಾಗಿ ಬೀಳುತ್ತೀಯ. ಕಣ್ಗಳೆರಡನ್ನೂ ಮೆಲ್ಲನೆ ತೆರೆಯುತ್ತೇನೆ. ಮುಖ ಮುಚ್ಚಿಕೊಂಡು ನಾಚುತ್ತೀಯ. ಹಾಗೇ ಕರಗಿ ಕನಸಾಗಿ ಬಿಡುತ್ತೀಯ. ಬೆಳಗಾಗುತ್ತದೆ. ಇರುಳಾಗುತ್ತದೆ. ಮತ್ತೆ ಅದೇ ಕನಸಲ್ಲಿ ಕಾಣುತ್ತೀಯ. ಮುಚ್ಚಿದ ಕಂಗಳ ತೆರೆಯಲು ಬಿಡದೆ ಕಾಡುತ್ತೀಯ. ಕನಸಾಗೇ ಬೀಳುತ್ತೀಯ........

೨ ಫೆಬ್ರುವರಿ ೨೦೦೬, ಜೆ.ಪಿ.ನಗರ, ಕೆಫೆ ಕಾಫಿಡೇ, ಸಂಜೆ ೬-೩೦

~.~
  • srichandra ರವರ ಬ್ಲಾಗ್
  • Login or register to post comments
  • 266 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿನ್ನ ಸ್ಪರ್ಶ...... (ಕನಸಿಗೊಂದು ಅರ್ಥ?)
  • ** ಅರಳಿ ಬಿಡು ಮಲ್ಲೆ ಹೂವೆ **
  • ನೀನು ನಿನ್ನ.....
  • ಸದಾ ನಿನ್ನ ಜೊತೆ
  • ನಿನ್ನ ನೋಡದೆ.....(ಪ್ರೇಮಗೀತೆ)
Syndicate content

ಲೇಖಕರು

srichandra's picture

ಪರಿಚಯ

namaste,

nanna hesaru shreenivaasa. naanu iMDiyaa inpholain nalli akauMTeMTaagi kaarya nirvahisuttiddEne. nanna havyaasagaLu, saahitya, sinimaa mattu raMgabhoomi

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬರಾಕ್ ಒಬಾಮ ಮತ್ತು ಜಾನ್ ಮೆಕೈನ್: ಯಾರು ಸರಿ?
  • ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
  • ಪುರಂದರದಾಸರ ಎರಡು ಪದಗಳು
  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
  • raghud
    ಉ: ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!
    September 5, 2008 - 9:58pm
  • kalpana
    ಉ: ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
    September 5, 2008 - 9:58pm
  • hamsanandi
    ಉ: ಚಂದಿರನ ನೋಡಿದವ
    September 5, 2008 - 9:55pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 111 ಅತಿಥಿಗಳು ಆನ್ಲೈನ್ ಇರುವರು.


ಅನುಭವದ ಪಾಲೊಳು ವಿಚಾರ ಮಂಥನವಾಗೆ |
ಜನಯಿಕುಂ ಜ್ಞಾನನವನೀತವೆ ಸುಖದಂ ||
ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ |
ನಿನಗೆ ಧರುಮದ ದೀಪ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator