Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › srinivasc ರವರ ಬ್ಲಾಗ್

ತಪ್ಪು ಯಾರದ್ದು?

April 7, 2008 - 11:52am — srinivasc

ಹೊಗೇನಕಲ್ ನೀರಾವರಿ ಕಾಮಗಾರಿಯ ಕುರಿತಾಗಿ ನಟ ಶ್ರೀ ರಜನಿಕಾಂತ್ ಅವರು ಐದು ಕೋಟಿ ಜನ ಕನ್ನಡಿಗರಿಗೆ ಒದೆಯಬೇಕು ಎಂದು ಹೇಳಿದ್ದಾರೆ ಎಂದು ನಮ್ಮ ಸೋ ಕಾಲ್ಡ್ ರಾಜಕಾರಣಿಗಳು ಮತ್ತು ಹಿರಿಯರೆನಿಸಿಕೊಂಡ ಮೇಧಾವಿ ಚಲನಚಿತ್ರ ನಟರು ರಜನಿಕಾಂತ್ ಅವರನ್ನು ಕನ್ನಡಿಗರ ಕ್ಷಮೆ ಕೇಳಬೇಕೆಂದು ಕೇಳುತ್ತಿರುವುದು ಹೇಸಿಗೆಯ ಸಂಗತಿಯಾಗಿದೆ. ರಜನಿಕಾಂತ್ ಅವರು ಹಾಗೆ ಹೇಳಿರುವುದು ಸಾಧವೇ ಇಲ್ಲ ಆದರೂ ಕ್ಷಮೆ ಕೇಳಬೇಕೆಂಬ ಹೀನಾಯ ರಾಜಕೀಯ ಪ್ರಚಾರ ನಮ್ಮ ಕಳಪೆ ರಾಜಕಾರಣಿಗಳಿಗೆ ಯಾಕೆ ಬೇಕು?

ಕರ್ನಾಟಕದಲ್ಲಿ ಜನಪರ ಕಾಮಗಾರಿ ಕಾರ್ಯಗಳನ್ನು ಮಾಡುವ ಯೋಗ್ಯತೆ ಇಲ್ಲದವರು ಈ ರೀತಿಯ ಹೇಯ ಮಾತುಗಳನ್ನು ಹೇಳಬಾರದು. ಹೊಟ್ಟೆಗೆ ಅನ್ನವಿಲ್ಲದಾಗ ರಜನಿಕಾಂತ್ ಅವರಿಗೆ ಅನ್ನ ಹಾಕದ ಕನ್ನಡ ಚಿತ್ರರಂಗಕ್ಕೆ ಅಗ ರಜನಿಕಾಂತ್ ಅವರು ಕನ್ನಡಿಗರು ಎನ್ನುವುದು ಮರೆತಿಹೋಗಿತ್ತೇನೋ ಪಾಪ? ಆದರೆ ಈಗ `ರಜನಿಕಾಂತ್ ಅವರು ಕನ್ನಡಿಗರು, ಅವರು ಕನ್ನಡಿಗರಲ್ಲಿ ಕ್ಷಮೆ ಕೇಳುವುದರಲ್ಲಿ ತಪ್ಪೇ ಇಲ್ಲ' ಎಂದು ಸ್ಟೇಟ್‍ಮೆಂಟ್‍ಗಳನ್ನು ಕೊಡುವ ಯಾವ ಹಕ್ಕೂ ಅಥವಾ ಯೋಗ್ಯತೆಯೂ ಅವರಿಗೆ ಇಲ್ಲ.

ಇದು ಸೂಪರ್ ಸ್ಟಾರ್ ರಜನಿ ಅವರ ಮಾತೇ ಅಲ್ಲ, ಪ್ರಕಾಶ್ ರಾಜ್, ಅರ್ಜುನ್ ಸರ್ಜಾ, ಮುರಳಿ ಅವರಿಗೂ ಅನ್ವಯಿಸುತ್ತದೆ. ತಮಿಳು ಚಿತ್ರರಂಗದವರು ಇವರ ಕಲೆಯನ್ನು ಗುರುತಿಸಿ ಕರೆದು ಅನ್ನ ಹಾಕಿದ್ದಾರೆ. ಅಂಥದ್ದರಲ್ಲಿ ತಮಿಳುನಾಡಿಗೆ ಅವರು ಸಪೋರ್ಟ್ ಮಾಡುವುದರಲ್ಲಿ ತಪ್ಪೇ ಇಲ್ಲ. ಈ ಮುನ್ನ ಕಾವೇರಿ ವಿರುದ್ಧವಾಗಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ರಜನಿಕಾಂತ್ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ ಎಂದೂ ಪತ್ರಕರ್ತರ ಬಗ್ಗೆ ಸಿಟ್ಟಾಗದ ರಜನಿಕಾಂತ್ ಅವರು ಅಂದು ``ನಾನು ಕರ್ನಾಟಕದ ಪರವಾಗಿ ಹೋದರೆ ತಮಿಳಿನವರು ನಾವು ನಿನಗೆ ಅನ್ನ ಹಾಕಿರುವುದು ನೀನು ನಮ್ಮ ಪರವಾಗೇ ಇರಬೇಕು ಎನ್ನುತ್ತಾರೆ, ತಮಿಳರ ಪರವಾಗಿ ಹೋದರೆ ನೀನು ಕನ್ನಡದವನು ಕರ್ನಾಟಕ ಪರವಾಗೇ ನೀನು ಇರಬೇಕು ಎನ್ನುತ್ತಾರೆ, ಇಬ್ಬರ ಪರವಾಗಿಯೂ ಹೋದರೆ, ನೀನು ಮರಾಠಿಯವನು ಬಾಯಿ ಮುಚ್ಚಿಕೊಂಡು ನೀನು ಸುಮ್ಮನೆ ಕೂಡು ಎನ್ನುತ್ತಾರೆ, ನಾನು ಇವರ ಮಧ್ಯೆ ಸಾಯಬೇಕೆ?'' ಎಂದಿದ್ದರು.

ಇಂಥ ತ್ರಿಶಂಕು ಪರಿಸ್ಥಿತಿಯಲ್ಲಿ ಇರುವ ಇಂಥವರನ್ನು ಯಾಕೆ ಗೋಳಾಡಿಸುತ್ತಾರೆ? ಆಗ ಕಾಣಿಸದ ಕನ್ನಡಿಗ ಈಗ ಮಾತ್ರ ನಮ್ಮ ರಾಜಕಾರಣಿಯ ಕಣ್ಣಿಗೆ ಕಾಣಿಸಿದನೆ? ಹೋಗಲಿ ರಜನಿಕಾಂತ್ ಅವರು ಬಡವರಿಗೆ ಮಾಡಿರುವ ಸಹಾಯ ನಮ್ಮ ರಾಜಕಾರಣಿಕಾರಣಿಗಳು ಯಾರು ಮಾಡಿದ್ದಾರೆ? ಯಾವ ಒಳ್ಳೆಯ ಕೆಲಸ ಮಾಡದಿದ್ದರೂ ಕುರ್ಚಿಯ ಆಸೆಗೆ ಮಾತ್ರ ಆ ಪಕ್ಷದವರು ಇಷ್ಟು ಆಸ್ತಿ ಮಾಡಿದ್ದಾರೆ ಈ ಪಕ್ಷದವರು ಇಷ್ಟು ಆಸ್ತಿ ,ಮಾಡಿದ್ದಾರೆ ಎಂದು ಕಿತ್ತಾಡುತ್ತಿದ್ದರೆ ಇಲ್ಲಿ ಸಾಯುತ್ತಿರುವವರು ನಮ್ಮಂಠ ಜನರೇ ಹೊರತು ಯಾರೂ ಅಲ್ಲ.

ಕನ್ನಡದ ಜನಪ್ರಿಯ ನಟಿಯೊಬ್ಬರು ಅತ್ತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಗೆದ್ದ ಮಾತ್ರಕ್ಕೆ ಅವರು ರಜನಿಕಾಂತ್ ಅವರು ಕ್ಷಮೆ ಕೇಳಲಿ, ನಾವು ಕ್ಷಮಿಸಿ ದೊಡ್ಡವರಾಗೋಣ ಏಂಬ ಆಸೆ ನನ್ನದು ಎಂದು ಟಿ ವಿ ೯ ಚಾನೆಲ್‍ನಲ್ಲಿ ಬಹಿರಂಗವಾಗಿ ಹೇಳಿದ್ದರು. ಅಂದರೆ ಅವರೆಂದಿಗೂ ದೊಡ್ಡವರೇ ಅಲ್ಲ ಎಂದೇ ಅರ್ಥ. ಇಂಥ ದುರಾಸೆಗಳಿಗೆ ಬಿದ್ದಿರುವ ನಟರಿಗೆ ಅದ್ಯಾರು ರಾಷ್ಟ್ರ ಪ್ರಶಸ್ತಿ ಕೊಟ್ಟರೋ ಏನೋ?

ಹಾಗೂ ರಜನಿಕಾಂತ್ ಅವರು ಹೇಳಿರುವುದು ಐದು ಕೋಟಿ ಕನ್ನಡಿಗರಿಗೆ ಒದೆಯಿರಿ ಎಂದಲ್ಲ. ಸಾಮಾನ್ಯ ಜನರ ಜೀವನ ಅಸ್ತವ್ಯಸ್ತ ಮಾಡುತ್ತಿರುವ ಪುಂಡರಿಗೆ ಒದೆಯಿರಿ ಎಂದು. ಎಷ್ಟೋ ಕನ್ನಡ ಪರ ಸಂಘಗಳು ಕನ್ನಡ ಕನ್ನಡ ಎಂದು ಹೋರ್‍ಆಡುತ್ತಿವೆ ಯಾಕೆ? ಕೇವಲ ಪ್ರಚಾರಕ್ಕಾಗಿ ಮಾತ್ರ ಅಷ್ಟೇ ಅವರ ಸೀಮಿತ ಪ್ರದೇಶ. ಬೇರೆ ಯಾವುದಕ್ಕೂ ಅಲ್ಲ. ರಾಜ್ಯೋತ್ರವದ ಸಮಯದಲ್ಲಿ ಇಡೀ ನವೆಂಬರ್ ತಿಂಗಲು ಮೈಕುಗಳನ್ನು ಹಾಕಿಕೊಂಡು ಆರ್ಕೇಸ್ಟ್ರಾ ಹಾಡುವುದೇ ಕನ್ನಡ ಭಾಷೆಗೆ ತಾವು ಮಾಡುತ್ತಿರುವ ಒಳ್ಳೆಯ ಕೆಲಸ ನೀಡುತ್ತಿರುವ ಗೌರವ ಎಂದು ತಿಳಿದ ಮುಠ್ಠಾಳರಿಗೆ ಕನ್ನಡ ಎಂ಼ದರೆ ಏನು ಎಂದು ಕೇಳಿದರೆ ಯಾವ ರೀತಿ ತಾನೆ ಉತ್ತರ ಕೊಟ್ಟಾರು?

ಆದ್ದರಿಂದ ಸ್ನೇಹಿತರೇ ನೀವೂ ಸಹ ಈ ಬಗ್ಗೆ ಒಮ್ಮೆ ಯೋಚಿಸಿ. ಯಾರು ಸತ್ಯ ನುಡಿಯುತ್ತಿದ್ದಾರೆ ಎಂದು.

Ornamental seperator
  • srinivasc ರವರ ಬ್ಲಾಗ್
  • Login or register to post comments
  • 424 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 7, 2008 - 1:34pm — Sunil Jayaprakash

ಉ: ತಪ್ಪು ಯಾರದ್ದು?

Sunil Jayaprakash's picture

ರಜನಿಕಾಂತ್ ಅವರು ಹಾಗೆ ಹೇಳಿರುವುದು ಸಾಧವೇ ಇಲ್ಲ ಆದರೂ ಕ್ಷಮೆ ಕೇಳಬೇಕೆಂಬ ಹೀನಾಯ ರಾಜಕೀಯ ಪ್ರಚಾರ ನಮ್ಮ ಕಳಪೆ ರಾಜಕಾರಣಿಗಳಿಗೆ ಯಾಕೆ ಬೇಕು?

ಮೊಟ್ಟಮೊದಲು ಯುಗಾದಿಯ ಶುಭಾಶಯಗಳು. ಹಾಗೆಯೇ ಶ್ರೀನಿವಾಸ್, ರಜನೀಕಾಂತ ಹಾಗೆ ಹೇಳಿರುವುದು ಸಾಧ್ಯವೇ ಇಲ್ಲ ಅದು ಹೇಗೆ ಹೇಳುವಿರಿ. ನಾವು ಟೀವಿಯಲ್ಲಿ ಪ್ರಸಾರವಾಗಿದ್ದನ್ನು ನೋಡದೆ ಏನಿಲ್ಲ.

ಅಂದಹಾಗೆ, ತಪ್ಪಿರುವುದು ಎಲ್ಲಿ ಗೊತ್ತಾ,
೧. ಸ್ವಲ್ಪ ಸಾಧನೆ ಮಾಡಿದಾಕ್ಷಣ, ತಲೆಮೇಲೆ ಹೊತ್ತು ಮೆರೆಸುವ ಕನ್ನಡಿಗರ "ವಿಶಾಲಹೃದಯದಲ್ಲಿ".
೨. ರಜನೀಕಾಂತ ಕನ್ನಡದವನು ಅಂತ ನಾವೇನು ಅವರನ್ನು ತಲೆಮೇಲೆ ಹೊತ್ತು ಮೆರೆಸಬೇಕಾಗಿಲ್ಲ. ಬೇಕಿದ್ದರೆ ಅವನು ಹೇಳಿಕೊಳ್ಳಬೇಕು, "ನಾನು ಕನ್ನಡದವನು" ಅಂತ. ಅದನ್ನು ಬಿಟ್ಟು, ಅವನು ತಪ್ಪುಮಾಡಿದಾಗಲೂ ಅದನ್ನು ಸಮರ್ಥಿಸಿಕೊಳ್ಳುವ ಯಾವ ಕಾರಣವೂ ಸಿಗುತ್ತಿಲ್ಲ.
೩. ಅಷ್ಟಕ್ಕೂ ನಮಗೆ ಇವರುಗಳ ಮೇಲೆ ಗೌರವ ಇಲ್ಲದೇ ಏನಿಲ್ಲ. ಆದರೆ ನೀವು ತಾರಾ ಅವರ ಮೇಲೆ ಯಾಕೆ ಹೀಗೆ ಕೆಟ್ಟ ಅಭಿಪ್ರಾಯ ಬರುವ ಬರೆದಿರುವಿರೋ ನನಗೆ ತಿಳಿಯುತ್ತಿಲ್ಲ. ಒಬ್ಬರನ್ನು ಹೊತ್ತು ಮೆರೆಸಲು ಮತ್ತೊಬ್ಬ ಕನ್ನಡಿತಿಯ ಮೇಲೆ ಹೀಗೆ ಗೂಬೆ ಕೂರಿಸುವ ಮನಸ್ಥಿತಿ ನನಗೆ ಒಂಚೂರೂ ಸರಿಕಾಣುತ್ತಿಲ್ಲ.

ಸಂಪದದ ಮಹಿಳೆಯರೇ, ಸ್ವಲ್ಪ ಇತ್ತ ಗಮನ ಹರಿಸಿ. ಯಾರೋ ಏನೋ ಅಂದ್ರು ಅಂತ, "ನಾವೇಕೆ ಬೇರೆ ನೆಲೆಯನ್ನು ಅರಸಿ ಹೋಗದೆ, ನಮ್ಮ ಮಧ್ಯೆಯೇ ಬಾಳಿ ಬದುಕುತ್ತಿರುವ ಕನ್ನಡಿತಿಯನ್ನು ಕೀಳೆಣಿಸಬೇಕು", ಶ್ರೀನಿವಾಸ್.

  • Login or register to post comments
  • link
  • Email this ಪ್ರತಿಕ್ರಿಯೆ
April 8, 2008 - 8:51am — roopablrao

ಉ: ತಪ್ಪು ಯಾರದ್ದು?

roopablrao's picture

ರಜನಿ ಕಾಂತ್ ರವರ ನಂತರದ ಹೇಳಿಕೆಯನ್ನು ಗಮನಿಸಿದರೆ
ನಾನು ಐದು ಕೋಟಿ ಕನ್ನಡಿಗರನ್ನು ವದೆಯಿರಿ ಎನ್ನುವಷ್ಟು ಅವಿವೇಕಿಯಲ್ಲ(ಇದು ಅಹಂಕಾರಿಯಲ್ಲ ಎಂಬುದಾಗಿದ್ದರೆ ಒಪ್ಪಬೇಕಾದ ಮಾತಾಗಿತ್ತು)
ನನ್ನ ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಯಾಗದಿದ್ದಲ್ಲಿ ನನಗೇನು ಹಾನಿಯಿಲ್ಲ(ನಷ್ಟ್ವವಿಲ್ಲ)
ಇಂತಹ ಮಾತನ್ನು ಬಹಳ ತೂಕವಾಗಿ ಆಡಿ ಇನ್ನೂ ಅದೇ ಅಹಂಕಾರದಲ್ಲಿ ಮೆರೆಯುತ್ತಿರುವ ಇಂತಹವರು ಕ್ಷಮೆ ಕೇಳಿದರೂ ಕ್ಶಮೆ ನೀಡಬಾರದು.
ಅವರು ಎಲ್ಲಿಯಾದರೂ ಬೆಳೆಯಲಿ ಯಾಕೆ ನಮ್ಮಲ್ಲಿ ಬೇರೆ ಭಾಷೆಯವರೇ ರಾಜ್ಯಪಾಲರಾದಾಗ ನಾವು ಅನುವು ಮಾಡಲಿಲ್ಲವೇ.
ಆದರೆ ಕನ್ನಡದ ಬಗ್ಗೆ ಕನ್ನಡಿಗರ ಬಗ್ಗೆ ಲಗುವಾಗಿ ಅಲ್ಲಲ್ಲ ಹೀನಾಯವಾಗಿ ಮಾತಾಡುವಾಗ ಅವರನ್ನು ಸಮರ್ಥಿಸುವುದು ಎಷ್ಟು ಸರಿ?
ಅದಿರಲಿ ಈ ವಿಷಯಕ್ಕ್ಲೆ ನಮ್ಮ ಅತ್ತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿಗೆ ಪಾತ್ರರಾದ ನಟಿಯನ್ನು ಎಳೆಯುವುದೇತಕೆ.

ರಜನಿಕಾಂತ್ ರವರು ತಮಿಳುನಾಡಿಗೇ ಬೆಂಬಲ ನೀಡಲಿ ಅವರೊಬ್ಬರ ಬೆಂಬಲವಿಲ್ಲ ಎಂಬ ಮಾತ್ರಕ್ಕೆ ಕನ್ನಡಿಗರೇನು ಸೊರಗುವುದಿಲ್ಲ.
ಆದರೆ ಈ ರೀತಿಯ ಹೇಳಿಕೆ ನೀಡಿದರೆ ರಜನಿಕಾಂತ್ ರವರು ಕನ್ನಡಿಗರು ಎಂಬುದನ್ನ ಮರೆಯಬೇಕಾಗುತ್ತದೆ ಅಷ್ಟೆ

ನಮ್ಮ ನೆಲ ಜಲ ಸಂರಕ್ಷಣೆ ದುಡಿಯುತ್ತಿರುವ ಸಂಘ್ಹಟನೆಗಳು ಅವರ ಕಣ್ಣಿಗೆ ಪುಂಡು ಪೋಕರಿಗಳಾಗಿ ಕಂಡರೆ ಮತ್ತೊಬ್ಬರ ನೆಲ ಜಲಕ್ಕಾಗಿ ಹಾತೂರೆಯುತ್ತಿರುವ ತಮಿಳರನ್ನು ಬೆಂಬಲಿಸುವ ಇವರು ಮಹಾನ್ ನೀಚರೇ ಸರಿ.
ರಜನಿ ಕಾಂತ್ ರವರೇ ಕನ್ನಡ ಚಿತ್ರರಂಗದ ಕೆಲವು ಗಣ್ಯರನ್ನು ಮಾತ್ರ ಕನ್ನಡದ ಪ್ರತಿನಿಧಿಗಳೆಂದು ಹೇಳಿ ಅವರು ಹೇಳಿದರೆ ಮತ್ರ ಕ್ಹಮೆ ಕೇಳುವುದಾಗಿ ಹೇಳಿದ್ದಾರೆ. ಇದು ಸರಿಯಾ ಶ್ರೀನಿವಾಸ್ ರವರೇ?

ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
April 8, 2008 - 10:00am — mahesha

ಉ: ತಪ್ಪು ಯಾರದ್ದು?

mahesha's picture

ರೂಪ ಅಕ್ಕ

ನಿಮ್ಮೀ ದಿಟ್ಟ ನೇರ ಮಾತಿಂದ ನನಗೆ ಬಲು ನಲಿವಾಯ್ತು..

ನನ್ಅ ನಲುಮೆ ನನ್ನಿ............ [ ನನ್ನಿ ಒರೆಗಿರುವ ಅರ್ತಗಳನ್ನು ನೋಡಿ ]

  • Login or register to post comments
  • link
  • Email this ಪ್ರತಿಕ್ರಿಯೆ
April 8, 2008 - 10:02am — roopablrao

ಉ: ತಪ್ಪು ಯಾರದ್ದು?

roopablrao's picture

ತಮ್ಮ ಮಹೇಶ್

ನನ್ನಿ ಅಂದರೆ ಥ್ಯಾಂಕ್ಸ್ ಎಂದರ್ಥವೇ?

ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
April 8, 2008 - 10:08am — mahesha

ಉ: ತಪ್ಪು ಯಾರದ್ದು?

mahesha's picture

http://baraha.com/kannada/index.php

೨. ನನ್ನಿ (ದೇ) (ನಾ) ೧ ನಿಜ, ದಿಟ ೨ ಸತ್ಯವಂತಿಕೆ ೩ ಪ್ರೀತಿ, ಅಕ್ಕರೆ ೪ ಭಾಷೆ, ವಚನ ೫ ಸರಿಯಾದುದು, ಸಮಂಜಸವಾದುದು ೬ ಅಂದ, ಚೆಲುವು

ಇದು ಅಪ್ಪಟ ಕನ್ನಡದ ಒರೆ

ತಪ್ಪು ತಪ್ಪೆಂದೇಕೆ ಕೀಳುಗಳೆವರೋ
ಕಣ್ಣಗಾಣದ ಗಾವಿಳರೋ Smiling

  • Login or register to post comments
  • link
  • Email this ಪ್ರತಿಕ್ರಿಯೆ
April 8, 2008 - 10:22am — Sunil Jayaprakash

ಉ: ತಪ್ಪು ಯಾರದ್ದು?

Sunil Jayaprakash's picture

ರೂಪಾ ಮೇಡಮ್, ಮಹಿಳೆಯರು ಬರೀ ಗುಬ್ಬಚ್ಚಿ ಗೂಡಿನಲ್ಲಿ ಬಚ್ಚಿಟ್ಟುಕೊಳ್ಳುವ ಭಾವನಾವಿಹಾರಿಗಳು ಎಂಬುದನ್ನು ನೀವು ಸುಳ್ಳು ಮಾಡ್ತಾ ಇದ್ದೀರಾ. ನಿಮ್ಮ ಕಾಮೆಂಟು ಓದಿ ನಲಿವಾಯಿತು. ಹೆನ್ನನ್ನಿ(thanks a ton).

  • Login or register to post comments
  • link
  • Email this ಪ್ರತಿಕ್ರಿಯೆ
April 8, 2008 - 10:45am — roopablrao

ಉ: ತಪ್ಪು ಯಾರದ್ದು?

roopablrao's picture

ಅದು ಯಾರ ಹೇಳಿಕೆ
"ಮಹಿಳೆಯರು ಬರೀ ಗುಬ್ಬಚ್ಚಿ ಗೂಡಿನಲ್ಲಿ ಬಚ್ಚಿಟ್ಟುಕೊಳ್ಳುವ ಭಾವನಾವಿಹಾರಿಗಳು "
ಅನ್ನುವುದು
ಮಹಿಳೆ ಮೊದಲಿನಿಂದಲ್ಲೊ ಎಕ್ಸ್ತ್ರೊವರ್ಟ್ ಆಗಿರಲು ಪ್ರಯತ್ನಿಸುತ್ತಿದ್ದಾಳೆ .ಆದರೆ ಅದು ಸಾಧ್ಯವಾಗಿರಲಿಲ್ಲ. ಈಗ ಆಗುತ್ತಿದೆ ಅಷ್ಟೆ
ಇಂತಹದೊಂದು ವೇದಿಕೆಯನ್ನ ಕಲ್ಪಿಸಿಕೊಟ್ಟ ಸಂಪದದಂತಹ ಜಾಲ ತಾಣಕ್ಕೂ ಹಾಗೂ ಅದರ ರೂವಾರಿಗಳಾದ ಎಚ್.ಪಿ. ಎನ್ ರಂತಹವರಿಗೂ ನೂರಾರು ವಂದನೆಗಳು
ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
April 8, 2008 - 12:07pm — maakem

ಉ: ತಪ್ಪು ಯಾರದ್ದು?

maakem's picture

"ಇಂಥ ದುರಾಸೆಗಳಿಗೆ ಬಿದ್ದಿರುವ ನಟರಿಗೆ ಅದ್ಯಾರು ರಾಷ್ಟ್ರ ಪ್ರಶಸ್ತಿ ಕೊಟ್ಟರೋ ಏನೋ? "

ನಟ / ನಟಿಯರಿಗೆ ರಾಷ್ಟ್ರ ಪ್ರಶಸ್ತಿ ಕೊಡೋದು ಚಲನಚಿತ್ರಗಳಲ್ಲಿ ಅವರ ಅಭಿನಯ ನೋಡಿ ಎಂದು ತಿಳಿದುಕೊಂಡಿದ್ದೆ, ಇದನ್ನೆಲ್ಲಾ ಪರಿಗಣಿಸುತ್ತಾರೆ ಎಂದು ನನಗೆ ತಿಳಿದಿರಲಿಲ್ಲ.

-ಮಾಕೆಂ

  • Login or register to post comments
  • link
  • Email this ಪ್ರತಿಕ್ರಿಯೆ
April 8, 2008 - 12:26pm — gururajkodkani

ಉ: ತಪ್ಪು ಯಾರದ್ದು?

gururajkodkani's picture

ಗುಱುಱಾಜ
www.kannadaguru.blogspot.com

ಇಂಥ ದುರಾಸೆಗಳಿಗೆ ಬಿದ್ದಿರುವ ನಟರಿಗೆ ಅದ್ಯಾರು ರಾಷ್ಟ್ರ ಪ್ರಶಸ್ತಿ ಕೊಟ್ಟರೋ ಏನೋ?

ಏನ್ರೀ ಈ ಮಾತಿನ ಆರ್ಥ ..? ತಾರಾ ಅವರಿಗೆ ಪ್ರಶಸ್ತಿ ಕೊಟ್ಟಿರುವುದು ಅವರ ಅಭಿನಯಕ್ಕೆ.

ಅಲ್ಲದೇ ತಾರಾ ಬಗ್ಗೆ ಒ೦ದು ಮಾತು.ಪ್ರಶಸ್ತಿ ಸಮಾರ೦ಭದಲ್ಲಿ ಅವರು ಅಪ್ಪಟ ಕನ್ನಡತಿಯ೦ತೆ ಉಡುಗೆ ತೊಟ್ಟು,ಕನ್ನಡದಲ್ಲೇ’ತಾರಾ’ ಎ೦ದು ಹಸ್ತಾಕ್ಷರ ನೀಡಿದ್ದರು.

ಇನ್ನೂ ರಜನಿಕಾ೦ತ್ ಅವರು ತಮ್ಮ ಮಾತಿಗೆ ಸ್ಪಷ್ಟೀಕರಣ ನೀಡುತ್ತಾ ’ಕರ್ನಾಟಕದಲ್ಲಿ ನನ್ನ ಚಿತ್ರಗಳನ್ನು ಬಿಡುಗಡೆ ಮಾಡುದಿರುವುದರಿ೦ದ,ನನಗೇನೂ ನಷ್ಟವಿಲ್ಲ .ಬದಲಿಗೆ ಕನ್ನಡಿಗರಿಗೇ ನಷ್ಟ ’ಎ೦ದಿದ್ದಾರೆ.ಇದು ಅಹ೦ಕಾರವಲ್ಲದೇ ಇನ್ನೇನು..?

’ತಾನು ವಿಷ್ಣುವರ್ಧನ್,ಅ೦ಬಿ,ಗಿರೀಶ ಕಾರ್ನಾಡ ಹೇಳಿದರೆ ಕ್ಷಮೆ ಕೇಳುತ್ತೇನೆ’ ಎ೦ಬುದರ ಅರ್ಥವೇನು..? ತಾನು ತಪ್ಪ್ಪು ಮಾತನಾಡಿದ್ದೇನೆ ಎ೦ಬುದು ಅವರಿಗೆ ಅರಿವಾಗಿದೆ ಎ೦ದರ್ಥವಲ್ಲವೇ..? ಇಲ್ಲವಾದರೇ ಈ ಕ್ಷಮೆಯ ಮಾತಾದರೂ ಅವರು ಏಕಾಡುತ್ತಿದ್ದರು

  • Login or register to post comments
  • link
  • Email this ಪ್ರತಿಕ್ರಿಯೆ
April 8, 2008 - 2:51pm — srinivasc

ಉ: ತಪ್ಪು ಯಾರದ್ದು?

srinivasc's picture

ನಿಮ್ಮೆಲ್ಲರ ಅಭಿಪ್ರಾಯಕ್ಕೆ ತುಂಬಾ ಥ್ಯಾಂಕ್ಸ್. ನನ್ನ ಚಿತ್ರ ಬಿಡುಗಡೆಯಾಗದಿದ್ದರೆ ಕನ್ನಡವರಿಗೇ ನಷ್ಟ ಎಂದಿದ್ದಾರೆ. ಹೌದು. ಎರಡು: ತಾರ ಅವರ ಬಗ್ಗೆ: ಅವರ ಆ ಮಾತುಗಳ ಅರ್ಥ ಏನು? ಯಾರಾದರೂ ಹೇಳಿ ಪರವಾಗಿಲ್ಲ. ಮೂರು: ಸುಮಾರು ಎಲ್ಲ ಸದಸ್ಯರು ಪ್ರಶ್ನಿಸಿರುವ ಹಾಗೆ: ಒಂದರ್ಥದಲ್ಲಿ. ರಜನಿಕಾಂತ್ ಅವರು ಕನ್ನಡಿಗರೇ? ಎಂದು.

ಯಾವ ನಟ, ರಾಜಕಾರಣಿ, ಅಥವಾ ಯಾವುದೇ ಭಾಷೆಯ ಪರ ಸಂಘಟನೆಯವರು, ತಮ್ಮಿಂದ ನಷ್ಟವಾದುದ್ದಕ್ಕೆ, ಮನ ನೊಂದು ತನ್ನಿಂದ ಮತ್ತ್ಯಾರಿಗೂ ನಷ್ಟ ಆಗಬಾರದು ಎಂದು ನಷ್ಟವನ್ನು ತುಂಬಿಕೊಟ್ಟಿದ್ದಾರೆ? ಅಷ್ಟಕ್ಕೂ ನನ್ನ ಲೇಖನದಲ್ಲಿ ಸ್ಪಷ್ಟವಾಗಿ ಹೇಳಿದ್ದೇನೆ. ರಜನಿಕಾಂತ್ ಐದು ಕೋಟಿ ಜನ ಕನ್ನಡಿಗರಿಗಲ್ಲ ಒದೆಯಬೇಕು ಎಂದು ಹೇಳಿರುವುದು. ಹಾಗೆ ಅವರು ಹೇಳಿದ್ದರೆ ನಾನೂ ಅದನ್ನು ಖಂಡಿಸುತ್ತೇನೆ. ಅವರು ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿಯುತ್ತೇನೆ. ಆದರೆ ಅವರು ಹೇಳಿರುವುದು ಕನ್ನಡದ ಹೆಸರಲ್ಲಿ ಜನರ ಜೀವನವನ್ನ, ಜನರ ನೆಮ್ಮದಿಯನ್ನ ಹಾಳು ಮಾಡುತ್ತಿರುವ ಪುಂಡರಿಗೆ ಒದೆಯಬೇಕೆಂದು.....

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಯಾರು ಸರಿ?
  • ಎಲ್ಲರೂ ಇತ್ತ ನೋಡಿ... ಈ poll ನಲ್ಲಿ yes ಅಂತ ಕೊಡಿ-ರಜನಿಕಾಂತ್ ಹೇಳಿಕೆ ಬಗ್ಗೆ
  • ಹೌದು ನಮ್ದು ಬೆಂಗಳೂರು, ನಿಮಗ್ಯಾಕ್ರೀ ಉರಿ?
  • ರಜನೀಕಾಂತ್ ಇವರಿಗೆ ಏನನ್ನುತ್ತಾರೆ
  • ನನ್ನವರಿಗೆ ಕನ್ನಡ ಕಲಿಸಿದ್ದು
Syndicate content

ಲೇಖಕರು

srinivasc's picture

ಪರಿಚಯ

ನಾನು ಶ್ರೀನಿವಾಸ ಚಂದ್ರಶೇಖರ. ನನ್ನನ್ನ ಜನ ಶ್ರೀಚಂದ್ರ ಅಂತಲೂ ಕರೀತಾರೆ. ಸಾಹಿತ್ಯ, ಚಲನಚಿತ್ರ ಮತ್ತು ರಂಗಭೂಮಿ, ಛಾಯಾಗ್ರಹಣ, ಚಾರಣ ಇವೆಲ್ಲಾ ನನ್ನ ಹುಚ್ಚು. ಇಂಡಿಯಾಇನ್ಫೋಲೈನ್‍ನಲ್ಲಿ ನಾನು ಅಕೌಂಟೆಂಟ್ ಆಗಿ ಕೆಲಸ ಮಾಡ್ತಿದ್ದೇನೆ. ಕಥೆ, ಕವನ ಹಾಗೂ ಕೆಲವು ನಾಟಕಗಳನ್ನು ಬರೆದಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಘೃತಮುಮಂ ತೈಲಮುಮಂ
  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 17, 2008 - 2:00pm
  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 8 ಅತಿಥಿಗಳು ಆನ್ಲೈನ್ ಇರುವರು.

ನನ್ನ ಜನಕ ಆಮ್ಲಜನಕ

— ಟಿ.ಪಿ.ಕೈಲಾಸಂ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator