ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › srinivasc ರವರ ಬ್ಲಾಗ್

ನಿನ್ನ ಸ್ಪರ್ಶ...... (ಕನಸಿಗೊಂದು ಅರ್ಥ?)

June 27, 2007 - 1:51pm — srinivasc

ನಿನ್ನ ಸ್ಪರ್ಶ...... (ಕನಸಿಗೊಂದು ಅರ್ಥ?)

ಆಗ ತಾನೇ ಹುಟ್ಟಿದ ಸೂರ್ಯನ ಕಿರಣಗಳು ನಿನ್ನ ಮುಂಗುರುಳ ಮುಟ್ಟಿ ಎಚ್ಚರಿಸುತ್ತದೆ. ನೀನು ಮುಗುಳುನಕ್ಕು ಆ ಸೂರ್ಯನ ಕಿರಣ ಬಿದ್ದು ಪ್ರಜ್ವಲಿಸುವ ನೆಲವ ನೋಡಿ ಏಳುತ್ತೀಯ. ಎದ್ದು ಸ್ವಚ್ಛ ಸ್ನಾನ ಮಾಡಿ ಹಣೆಗೆ ಕುಂಕುಮದ ಬೊಟ್ಟಿಡುತ್ತೀಯ. ಹೂ ಹಾಸಿನ ಮೇಲೆ ನಿನ್ನ ಪಾದಗಳು ನಡೆದಾಡುತ್ತದೆ. ಹೂಗಳು ನಿನ್ನ ನೋಡಿ ನಾಚಿ ಘಮಿಸುತ್ತವೆ. ``ಎಲ್ಲಿಯ ಚೆಲುವು ನಿನ್ನದು?'' ಎಂದು ತಲೆತಗ್ಗಿಸುತ್ತದೆ. ಮತ್ತೆ ಮುನ್ನಡೆಯುತ್ತೀಯ. ``ನಿಲ್ಲು''. ತಿರುಗಿ ನೋಡುತ್ತೀಯ. ``ಮುಳ್ಳುಗಳು ಚುಚ್ಚಿ ನಿನ್ನ ಪಾದ ಸ್ಪರ್ಶ ನಿಂತುಹೋದೀತು. ನಿಧಾನ ನಡೆ'' ಎಚ್ಚರಿಸುತ್ತದೆ ಆಕಾಶವಾಣಿ.

ಎಲ್ಲಿಂದಲೋ ``ಸುಂಯ್'' ಎಂದು ಬೀಸುವ ಗಾಳಿ ನಿನ್ನ ಮೈ ಸ್ಪರ್ಶಿಸಿ ಹೋಗುತ್ತದೆ. ಮತ್ತೆ ಮುಗುಳುನಗುತ್ತೀಯ. ನಿನ್ನ ಮುಂಗುರುಳು ಮೇಲೆತ್ತುತ್ತೀಯ. ನಿನ್ನ ಅಂದದ ಮೊಗ ನಾಚಿ ನೀರಾಗುತ್ತದೆ. ನೀರಲ್ಲಿ ಮೀನಾಗಿ ಓಡಾಡುತ್ತದೆ. ಈಜಾಡುತ್ತದೆ. ದಡಕ್ಕೆದ್ದು ಬಂದು ಗಾಳಿಯಾಗಿ ನನ್ನನ್ನು ಸ್ಪರ್ಶಿಸುತ್ತೀಯ. ಘಮಿಸುತ್ತಾ ಮಲ್ಲಿಗೆ ಮೊಗ್ಗಾಗಿ ಗಿಡದಲ್ಲಿ ಸೇರುತ್ತೀಯ. ಮೊಗ್ಗನ್ನು ಚಿವುಟಲು ಹಸುಕಂದನಿಗೂ ಮನಸ್ಸಾಗದು. ಹೂವಾಗಿ ಅರಳಿ ನೆಲಕ್ಕುರುಳುತ್ತೀಯ. ನಿನ್ನನ್ನು ಎತ್ತಿಕೊಳ್ಳಲು ಬರುತ್ತೇನೆ. ಹಕ್ಕಿಯಾಗಿ ಆಗಸಕ್ಕೆ ಹಾರುತ್ತೀಯ. ರೆಕ್ಕೆ ಬಡಿಯುತ್ತೀಯ. ಚಿಲಿಪಿಲಿ ಹಾಡಿ ನನ್ನನ್ನು ನೋಡುತ್ತೀಯ.

ಹಾಡಿಹಾಡಿ ಹಾರಿಹಾರಿ ಮಾವಿನ ಮರದಿ ಕೂರುತ್ತೀಯ. ಮರ ನಿನಗೆ ಸಿಹಿ ಹಣ್ಣು ಕೊಡುತ್ತದೆ. ತಿಂದು ಮತ್ತಷ್ಟು ಸಿಹಿಯಾಗುತ್ತೀಯ. ಇರುವೆಗಳು ಮುತ್ತಲು ಬರುತ್ತವೆ. ಗಾಳಿ ``ಭರ್ರನೆ'' ಬೀಸಿ ಇರುವೆಗಳು ಬೀಳುತ್ತವೆ ಅಪ್ಪಳಿಸಿ ನೆಲಕೆ. ಮತ್ತೆ ಹಾರುತ್ತೀಯ. ಹಾರಿ ಹಾರಿ ಮೋಡದಲ್ಲಿ ಲೀನವಾಗುತ್ತೀಯ. ಮಳೆಯಾಗಿ ಹನಿಯುತ್ತೀಯ. ಪ್ರಪಂಚಕ್ಕೆ ತಂಪು ನೀಡುತ್ತೀಯ. ಹನಿದು ಭೂಮಿಯಲ್ಲಿ ಕರಗುತ್ತೀಯ.

ಸಂಜೆಗತ್ತಲು ಕವಿಯುವ ಹೊತ್ತು....

ತಣ್ಣನೆಯ ಗಾಳಿಯೊಳಗೆ ಮತೆ ಒಂದಾಗಿದ್ದೀಯ. ಪೂರಾ ಕತ್ತಲು ಕವಿದೇಬಿಟ್ಟಿದೆ. ಗಾಳಿಯು, ಹಾಗೇ ತೇಲಿ ತೇಲಿ ನಿನ್ನನ್ನು ಕರೆದೊಯ್ದಿದೆ ಮೇಲಕ್ಕೆ. ಅಲ್ಲಿಂದ ಪೂರ್ಣಚಂದಿರ ನಿನ್ನನ್ನು ಕರೆದೊಯ್ದಿದ್ದಾನೆ. ಅವನ ಜೊತೆ ಕಿಲಕಿಲನೆ ನಗುತ್ತೀಯ. ಅವನ ಜತೆಗಿರುವ ಕೋಟಿ ತಾರೆಗಲೊಂದಿಗೆ ನೀನೂ ಸಹ ಒಂದಾಗಿದ್ದೀಯ. ಎಲ್ಲರ ಕಣ್ಣಿಗೂ ಖುಷಿ ನೀಡುತ್ತೀಯ. ಪುಟ್ಟ ಮಕ್ಕಳ ಕೈಲಿ ``ಹೊಳೆಯುವ ಹೊಳೆಯುವ ನಕ್ಷತ್ರವೋ.....'' ಹಾಡಿಸುತ್ತೀಯ.

ನನ್ನೆರಡೂ ತೋಳುಗಳನ್ನು ಚಾಚಿ ನಿನ್ನ ಬಳಿ ಬರುತ್ತೇನೆ. ನೀನು ನನ್ನೆದೆಯ ಬಾಂದಳದಿ ಕರಗುತ್ತೀಯ. ಕರಗಿ ತುಟಿಗೊಂದು ಮುತ್ತು ನೀಡುತ್ತೀಯ. ಆಗ....

ನಾನೂ ಮುಗುಳುನಗುತ್ತೇನೆ. ನನ್ನ ಮೇಲೆ ಮಳೆಹನಿಯಾಗಿ ಬೀಳುತ್ತೀಯ. ಕಣ್ಗಳೆರದನ್ನೂ ಮೆಲ್ಲನೆ ತೆರೆಯುತ್ತೇನೆ. ಮುಖ ಮುಚ್ಚಿಕೊಂಡು ನಾಚುತ್ತೀಯ. ಹಾಗೇ ಕರಗಿ ಕನಸಾಗಿ ಬಿಡುತ್ತೀಯ. ಬೆಳಗಾಗುತ್ತದೆ, ಇರುಳಾಗುತ್ತದೆ. ಮತ್ತೆ ಅದೇ ಕನಸಲ್ಲೇ ಕಾಣುತ್ತೀಯ. ಮುಚ್ಚಿದ ಕಂಗಳ ತೆರೆಯಲು ಬಿಡದೆ ಕಾಡುತ್ತೀಯ. ಕನಸಾಗೇ ಬೀಳುತ್ತೀಯ.

ಶ್ರೀಚಂದ್ರ
೨೨-೦೨-೨೦೦೬

~.~
  • srinivasc ರವರ ಬ್ಲಾಗ್
  • Login or register to post comments
  • 297 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸ್ಪರ್ಶ.......ಸ್ಪರ್ಶ
  • ನೀನು ನಿನ್ನ.....
  • ** ಅರಳಿ ಬಿಡು ಮಲ್ಲೆ ಹೂವೆ **
  • ಸದಾ ನಿನ್ನ ಜೊತೆ
  • ನನ್ನ ಹಂಬಲ
Syndicate content

ಲೇಖಕರು

srinivasc's picture

ಪರಿಚಯ

ನಾನು ಶ್ರೀನಿವಾಸ ಚಂದ್ರಶೇಖರ. ನನ್ನನ್ನ ಜನ ಶ್ರೀಚಂದ್ರ ಅಂತಲೂ ಕರೀತಾರೆ. ಸಾಹಿತ್ಯ, ಚಲನಚಿತ್ರ ಮತ್ತು ರಂಗಭೂಮಿ, ಛಾಯಾಗ್ರಹಣ, ಚಾರಣ ಇವೆಲ್ಲಾ ನನ್ನ ಹುಚ್ಚು. ಇಂಡಿಯಾಇನ್ಫೋಲೈನ್‍ನಲ್ಲಿ ನಾನು ಅಕೌಂಟೆಂಟ್ ಆಗಿ ಕೆಲಸ ಮಾಡ್ತಿದ್ದೇನೆ. ಕಥೆ, ಕವನ ಹಾಗೂ ಕೆಲವು ನಾಟಕಗಳನ್ನು ಬರೆದಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒದ್ದಾಡುವ ನೆನಪುಗಳು..
  • ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ..!
  • ನನ್ನ ಮುದ್ದು ಕೋತಿಗೆ !
  • ಅಮ್ಮ ನ ನೆನಪು ಮತ್ತು ಫಾರಿನ್ನು .:)
  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shashikannada
    ಉ: ಕನ್ನಡ ಭಾಷೆ ಎಷ್ಟು ಹಳೆಯದು?
    August 30, 2008 - 6:26pm
  • spruhi
    ಉ: ಅಮ್ಮ ನ ನೆನಪು ಮತ್ತು ಫಾರಿನ್ನು .:)
    August 30, 2008 - 6:21pm
  • spruhi
    ಉ: ಕನ್ನಡ ಮಾತಾಡಿ, ಮಜಾ ಮಾಡಿ
    August 30, 2008 - 6:16pm
  • cmariejoseph
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 5:56pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:48pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:39pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:35pm
  • csomsekraiah
    ಉ: ಬಿಡುಗಡೆಯ ನಂತರದ ಬೇಡಿಗಳು (೩)
    August 30, 2008 - 5:12pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 5:01pm
  • cmariejoseph
    ಉ: ಒಂದು ನಾಯಿ ಕತೆ
    August 30, 2008 - 5:00pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 46 ಅತಿಥಿಗಳು ಆನ್ಲೈನ್ ಇರುವರು.


ನಮಗಾದ ಆಘಾತಗಳನ್ನು ಮತ್ತು ಗಾಯಗಳನ್ನು ತಿರಸ್ಕರಿಸಿದರೆ, ಅವು ತಾವಾಗಿಯೇ ಮಾಯವಾಗುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator