22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಹರಿಯ ಭಜನೆ ಮಾಡೋ...

October 17, 2008 - 12:53am
srinivasps

ಪವಡಿಸಿಹನೂ ಹರಿಯು
ಪಾಲ್ಕಡಲ ಕೆನೆ ಮೇಲೆ,
ಪನ್ನಗಶಾಯಿಗೆ ನಮಿಸಬನ್ನಿ...

ಪವಡಿಸಹನೂ ಹರಿಯು
ಆದಿಶೇಷನ ಮೇಲೆ,
ಆದಿನಾರಾಯಣಗೆ ನಮಿಸಬನ್ನಿ...

ಪವಡಿಸಿಹನೂ ಹರಿಯು
ಶಂಕು-ಚಕ್ರವ ಹಿಡಿದು,
ಸಂಕಟಹರನಿಗೆ ನಮಿಸಬನ್ನಿ...

ಪವಡಿಸಿಹನೂ ಹರಿಯು
ಅಗಣಿತಗುಣನೂ
ಜಗವ ಸಲಹುವ ಇವಗೆ ನಮಿಸಬನ್ನಿ...

ಪವಡಿಸಿಹನೂ ಹರಿಯು
ತ್ರಿವಿಕ್ರಮನೂ
ತ್ರಿಜಗವಂದಿತಗೇ ನಮಿಸಬನ್ನಿ...

---------------

ಈ ಹಾಡು ಕಲ್ಯಾಣಿ ಧಾಟಿಯಲ್ಲಿದೆ.

ಮಹೇಶರ ಕೋರಿಕೆಯ ಮೇರೆಗೆ ಹಾಡನ್ನು ಹಾಕಿದ್ದೀನಿ...ಕೇಳಲು ಕೆಳಗಿನ ಕೊಂಡಿ ಚಿಟಕಿಸಿರಿ... Boomp3.com

--ಶ್ರೀ

AttachmentSize
pavadisihanoo hariyu.mp31.27 MB
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by anil.ramesh on
ಶ್ರೀ, ಚಿತ್ರಪುಟ, ಹರಿ ಭಜನೆ ಸಾಹಿತ್ಯ ಎರಡೂ ಚೆನ್ನಿವೆ... :-) ಇಷ್ಟ ಆಯ್ತು... ಇಂತಿ ನಿಮ್ಮ, ಅನಿಲ್ ರಮೇಶ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
ನನ್ನಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ರೀ ಹಾಡನ್ನು ಕೇಳಿಸಿ ನಮಗೂ ಹರ್ಯನುಗ್ರಹಪಾತ್ರರನ್ನಾಗಿಸಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
ನಾನು ಅಷ್ಟೊಂದು ಚೆನ್ನಾಗಿ ಹಾಡಲ್ಲ ರೀ :) ನೀವು ಕೇಳ್ತಿದಿರೀ ಅಂತ ಪ್ರಯತ್ನ ಮಾಡಬಹುದು... ಯಾವ ವೆಬ್ ಸೈಟ್ ನಲ್ಲಿ mp3 upload ಮಾಡಬಹುದು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಹರಿ ಹರಿ ಸೊಲ್ಪ ನೋಡು!! :) ಸಂಪದದಲ್ಲೇ ಹಾಕಲು ಅನುವು ಕೇಳಿ, ನಮ್ಮ ಸಂಪದದರಸ ಹರಿ ಪ್ರಸಾದ ರಾಯರಿಗೆ ಬಿನ್ನಹ ಕಳಿಸಿರಿ.. ಆ ಬಿನ್ನಹಕ್ಕೆ ನನ್ನ ದನಿಯೂ ಸೇರಿರುತ್ತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on
mp3 ಗಳನ್ನು boomp3.com ಗೆ ಎತ್ತೇರಿಸಿ, ಇಲ್ಲಿ ಕೊಂಡಿ ಹಾಕಿ. -ಹಂಸಾನಂದಿ ಹರಿದಾಸ ಸಂಪದ:- http://haridasa.in/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
ನನ್ನಿ! ಮಹೇಶರು ಹೇಳಿದ ಹಾಗೆ ಸಂಪದದಲ್ಲೇ ಏರಿಸುವ ಸಲಹೆ ಕೂಡ ಚೆನ್ನಿದೆ. ಇದಕ್ಕೆ ಹರಿಯ ಪ್ರಸಾದ ಬೇಕು ;) --ಶ್ರೀ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srivathsajoshi on
ಹರಿ ಸರ್ವೋತ್ತಮ, ಹರಿ server ಉತ್ತಮ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
ಹಹ್ಹ...! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
ಮಹೇಶರೇ, ಬ್ಲಾಗ್ ನಲ್ಲಿ ಕೊಂಡಿ ಹಾಕಿದೀನಿ ಕೇಳಿ... --ಶ್ರೀ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anil.ramesh on
ಶ್ರೀ, ನಿಮ್ಮ ಧ್ವನಿ ಚೆನ್ನಿದೆ... :-) ಸ್ವಲ್ಪ echo ಆಗ್ತಿದೆ... ಅಂದ ಹಾಗೆ, ಹಾಡು ಪೂರ್ತಿ ಹೇಳಿಲ್ಲ? ಇಂತಿ ನಿಮ್ಮ, ಅನಿಲ್ ರಮೇಶ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
ನನ್ನಿ! :) ಪೂರ್ತಿ ಹೇಳಿದೀನಲ್ಲಾ? ಏನು ಬಿಟ್ಟು ಹೋಗಿದೆ? ಹಾ ಮೈಕ್ ಇಲ್ಲ, ಸ್ಪೀಕರ್ ನಲ್ಲಿ ರೆಕಾರ್ಡ್ ಮಾಡಿದ್ದು. ಅದಕ್ಕೆ ರೆಕಾರ್ಡಿಂಗ್ ಗುಣಮಟ್ಟ ಸುಮಾರಾಗಿದೆ... ಸುತ್ತಾ noise ಕೂಡ ರೆಕಾರ್ಡ್ ಆಗಿದೆ :-s --ಶ್ರೀ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anil.ramesh on
ಹಾ!! ಈಗ ಪೂರ್ತಿ ಹಾಡು ಕೇಳ್ದೆ... ಸಕ್ಕತಾಗಿದೆ. ಸ್ವಲ್ಪ ಹೊತ್ತಿಗೆ ಮುಂಚೆ ಕೇಳ್ದಾಗ "ಪವಡಿಸಿಹನೂ ಹರಿಯು ಪಾಲ್ಕಡಲ ಕೆನೆ ಮೇಲೆ, ಪನ್ನಗಶಾಯಿಗೆ ನಮಿಸಬನ್ನಿ... ಪವಡಿಸಹನೂ ಹರಿಯು ಆದಿಶೇಷನ ಮೇಲೆ, ಆದಿನಾರಾಯಣಗೆ" ಅಂತ ಬಂದು ನಿಂತ್ ಹೋಯ್ತು... :-( ಯಾಕೆ ಆ ರೀತಿ ಆಯ್ತೋ ಗೊತ್ತಿಲ್ಲ? ಇಂತಿ ನಿಮ್ಮ, ಅನಿಲ್ ರಮೇಶ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
ಇಂಟರ್ ನೆಟ್ ನಿಂದ ನಿಮ್ಮ ಕಂಪ್ಯೂಟರ್ ಗೆ ಪೂರ್ತಿ ಡೌನ್ ಲೋಡ್ ಆಗಿಲ್ಲದೇ ಹೋದರೆ ಒಂದು ಒಂದು ಸರತಿ ಹಾಗಾಗುತ್ತೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by anil.ramesh on
ಸರ್ವರ್ ಡೌನ್ ಇತ್ತೇನೋ? ಏನೋ ಹೋಗ್ಲಿ ಬಿಡಿ, ಒಟ್ಟಿನಲ್ಲಿ, ನಿಮ್ಮ್ ಹಾಡು ಬೊಂಬಾಟ್ ರೀ... ಇಂತಿ ನಿಮ್ಮ, ಅನಿಲ್ ರಮೇಶ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on
ವಾಹ್ ಶ್ರೀನಿವಾಸ್ ವಾಹ್, ಚೆನ್ನಾಗಿ ಹಾಡಿದಿರಿ. ಹತ್ತರಲ್ಲಿ ಎಂಟು ಮಾರ್ಕ್. ಮುಂದಿನ ಬಾರಿ ಇನ್ನೂ ಉತ್ತಮವಾಗಿ ಹಾಡಲು ಪ್ರಯತ್ನಿಸಿ.. ಹಾಗೇ ಶ್ರೀನಿವಾಸ್‌ಹಾಡು ಮೆಚ್ಚಿಗೆಯಾದವರು' ...೦೨' ನಂಬರ್‌ಗೆ sms ಕಳುಹಿಸಿ.. ಮರೀಬೇಡಿ ಇವರ ಕೋಡ್ ನಂ. ೦೨.. :) ಪವಡಿಸಿಹನು, ಪವಡಿಸಿಹನು ಕೇಳಿ ಕೇಳಿ ಜೋರು ನಿದ್ರೆ ಬರುತ್ತಿದೆ. ಬಾಕಿ ಬ್ಲಾಗ್ ನಾಳೆ ಓದುವೆ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
:) ಧನ್ಯವಾದಗಳು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hpn on
ಲೇಟಾಗಿ ನೋಡಿದ್ದು ಇದನ್ನ. ಆಗಲೇ ಎಷ್ಟೊಂದು ಮಾತುಕತೆ ಆಗಿಹೋಗಿದೆ! ಶ್ರೀನಿವಾಸ್, ಪುಟ ಎಡಿಟ್ ಮಾಡಿ ನೋಡಿ: "Attached files" ಎಂಬ ಆಪ್ಶನ್ ಇರಬೇಕು. ಅದನ್ನು ಬಳಸಿ mp3 ಇಲ್ಲಿಯೇ ಹಾಕಬಹುದು. - HPN ನನ್ನ ಬ್ಲಾಗುಗಳು: [:http://sampada.net/b...|ಪರಿವೇಶಣ] | [:http://hpnadig.net/blog|PariveshaNa]
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
ಹರಿ ಸರ್ವೋತ್ತಮ!!! ಈಗ ಇಲ್ಲೇ ಹಾಕಿದ್ದೀನಿ....ನನ್ನಿ...:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.