ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...

ಕ.ರ.ವೇ. ಜನರನ್ನು ಈ ನೇಮಕಾತಿ ಬಗ್ಗೆ ಎಚ್ಚರಿಸುವುದರಲ್ಲಿ ಅದ್ಭುತ ಕೆಲಸ ಮಾಡಿದೆ ಆದರೂ ಇದು ಹಲವಾರು ನಿಟ್ಟಿನಲ್ಲಿ ಸೋತಿದೆ.
ಕ.ರ.ವೇ, ಒಂದೇ ಅಲ್ಲ, ಎಲ್ಲ ಕನ್ನಡ ಸಂಘಗಳೂ, ನಮ್ಮ ಸರ್ಕಾರ, ಎಂ.ಪಿ. ಗಳೂ, ಒಟ್ಟಾಗಿ ಎಲ್ಲ ಕನ್ನಡಿಗರೂ ಎಂದರೂ ತಪ್ಪೇನಿಲ್ಲ...

೧. ನಮ್ಮ ಎಂ.ಪಿ.ಗಳು ಕನ್ನಡಿಗರಿಗಾಗಿ ಆಗುತ್ತಿರುವ ಅನ್ಯಾಯದ ಬಗ್ಗೆ ಲೋಕ ಸಭೆಯಲ್ಲಿ, ಬಿಸಿ ತಟ್ಟುವಂತೆ ಇದುವರೆಗೂ ಗಲಾಟೆ ಮಾಡಿಲ್ಲ.

೨. ಕರ್ನಾಟಕದ ಎಂ.ಪಿ.ಗಳಿಗೆ, ಇಡೀ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಕ್ಕೆ ಒಟ್ಟಾಗಿ ದನಿ ಏರಿಸುವ ಒಗ್ಗಟ್ಟಿಲ್ಲ.
ಓ, ಬಿ.ಜೆ.ಪಿ, ಸರ್ಕಾರನಾ? ಹಾಗಾದ್ರೆ, ಬಿಹಾರಿಗಳಿಗೇ ಕೆಲಸ ಸಿಗಲಿ, ನಮಗೆ ಮುಂದಿನ ಚುನಾವಣೆಗೆ ಚೆನ್ನಾಗಿ ಬಳಸ ಬಹುದು ಅನ್ನೋ ಧೋರಣೆ.
ಹಾಗೇ, ಕಾಂಗ್ರೆಸ್’ಆ? ಹಾಳಾಗಲಿ ಅನ್ನೋ ಧೊರಣೆ ಮತ್ತೊಂದು ಪಕ್ಷದ್ದು!
ಕಾವೇರಿ ಆಗಲಿ ರೈಲ್ವೇ ನೇಮಕಾತಿ ಆಗಲಿ ಯಾವುದೇ ವಿಷಯ ಆಗಲಿ, ನಮ್ಮ ಎಂ.ಪಿ.ಗಳಲ್ಲಿ ಒಗ್ಗಟ್ಟು ಇಲ್ಲ.

೩. ಕರ್ನಾಟಕದಲ್ಲಿ ವಕೀಲರಿಗೆ ಬರವಾ? ಅಥವಾ ನಿರ್ಲಕ್ಷ್ಯವಾ?
ಈ ರೈಲ್ವೆ ವಲಯಕ್ಕೆ ನೇಮಕಾತಿ ಮಾಡುವಾಗ, ಕನ್ನಡದಲ್ಲಿ ಅರ್ಜಿ ಇಲ್ಲ ಎಂದರೆ,
ನೇಮಕಾತಿ ಪರೀಕ್ಷೆಗೆ stay order ಪಡೆಯೋಕಾಗಲ್ವಾ?
ಈ ನೇಮಕಾತಿ ವಿಷಯದಲ್ಲಿ, ಸರ್ಕಾರದ ನಿಯಮವನ್ನು ಸರ್ಕಾರವೇ ಉಲ್ಲಂಘಿಸಿದೆ.
ಹೈ ಕೋರ್ಟ್, ಸುಪ್ರೀಂ ಕೋರ್ಟ್ ಇರೋದು ಯಾಕೆ?
ಈ stay order ಪಡೆಯೋ ಕೆಲಸ ಕರ್ನಾಟಕ ಸರ್ಕಾರನೇ ಮಾಡಬೇಕು ಅನ್ನೊ ಧೋರಣೆ ಯಾಕೆ?
ಬೇರೆ ಪಕ್ಷದವರು ಮಾಡಿದರೇ, ಅವರ ಪಕ್ಷಕ್ಕೇ ಒಳ್ಳೆ ಹೆಸರಲ್ವಾ?
ಅನ್ಯಾಯ ಆಗುತ್ತಿದೆ ಅಂತ ಅನಿಸಿದ ಯಾವುದೇ ವಕೀಲನಿಂದ stay order ತರಕ್ಕೆ ಆಗಲ್ವಾ?
ಈ ರೀತಿ ದನಿ ಎತ್ತಿದರೆ, ಆ ವಕೀಲನಿಗೆ, ಎಲ್ಲ ಪಕ್ಷಗಳು ತಾ ಮುಂದು ನಾ ಮುಂದು ಅಂತಾ ಮೊದಲು ಸಪೋರ್ಟ್ ಮಾಡಕ್ಕೆ ಬರಲ್ವಾ?

೪. ಕರ್ನಾಟಕದಲ್ಲಿ ಕ.ರ.ವೇ ಅವರು ರೈಲುಗಳನ್ನು ತಡೆಯುವುದರಿಂದ, ಯಾರಿಗೆ ಬಿಸಿ ತಟ್ಟತ್ತೆ?
ಸಾಮಾನ್ಯ ಜನತೆಗೆ (ಅದೂ ಹೆಚ್ಚಾಗಿ ಕನ್ನಡಿಗರಿಗೆ!).
ಕನ್ನಡಿಗರ ವ್ಯಾಪಾರ, ವಹಿವಾಟೇ ನಿಲ್ಲೋದು!
ಇದರಿಂದ ಕೇಂದ್ರದಲ್ಲಿರೋವರಿಗೆ, ರೈಲ್ವೇ ಮಂತ್ರಿಗಳಿಗೆ ಬಿಸಿ ತಟ್ಟತ್ತಾ? ಇಲ್ಲ.

೫. ಇನ್ನು ರೈಲ್ವೇ ಸ್ಟೇಷನ್ ಗೆ ಕಲ್ಲು ತೂರುವುದು! ಈ ರೈಲ್ವೇ ನಿಲ್ದಾಣಗಳು ಯಾವ ರಾಜ್ಯದಲ್ಲಿದೆ? ಹಾಗೂ ಇದು ಜನರ ಆಸ್ತಿಯೇ...
ಇದಕ್ಕೆ ಕಲ್ಲು ತೂರುವುದು, ಹಾಳು ಮಾಡುವುದು ಮಾಡಿದರೆ ನಮ್ಮ ಕನ್ನಡ ಜನತೆಗೇ ಈ ಸೌಲಭ್ಯಗಳು ಇರೋದಿಲ್ಲ...ಹೀಗೆ ಮಾಡುವುದರಿಂದ ಉಪಯೋಗವೇನು?
ನಂಗಂತೂ ಗೊತ್ತಿಲ್ಲ...

೬. ಈಗ ಆಂಧ್ರದಲ್ಲಿ ಪರೀಕ್ಷೆ ನಡೆಸ್ತಾರಂತೆ ಅಂತ ಸುದ್ದಿ.
ಇದಕ್ಕೆ ಪ್ರತಿಯಾಗಿ ಬತ್ತಳಿಕೆಯಲ್ಲಿರುವ ಬಾಣವೇನು?
ಇದನ್ನು ಕನ್ನಡ ನಾಡಿನಲ್ಲಿ, ಕನ್ನಡಿಗರ ಮುಂದೆ ಗಲಾಟೆ ಮಾಡೋದು ಬಿಟ್ಟು, ಏನು ಮಾಡಿದಾರೆ?

೭. ಈ ನೇಮಕಾತಿ ಆಂಧ್ರದಲ್ಲಿ ನಡೆದರೆ, ಇದು ಇನ್ನೊಂದು ಕಾನೂನು ಉಲ್ಲಂಘನೆ ಅಲ್ಲವಾ?
ಇದನ್ನು ವಕೀಲರು ಪರಿಶೀಲಿಸಿದ್ದಾರ? ಮಾಧ್ಯಮಗಳು ಈ ಹುಳುಕನ್ನು ಹೊರಗೆಡವಿಲ್ಲವಾ? ಯಾಕೆ?

೭. ಗ್ರೂಪ್ ಡಿ ಹುದ್ದೆಗಳು ಸಿಕ್ಕಮೇಲೆ, ಕೆಲಸಕ್ಕಾಗಿ ಹಿಂದಿ ಕಲಿಯಬೇಕಾಗಬಹುದು. ಇದಕ್ಕೆ ನಮ್ಮ ಕನ್ನಡಿಗರು ತಯಾರಿದಾರ?

೮. ಕೊನೆಯದಾಗಿ, ಗ್ರೂಪ್ ಡಿ ಹುದ್ದೆಗಳು ಇರೋದು ಬರೀ ೪೭೦೦ ಮಾತ್ರ, ಕರ್ನಾಟಕದಲ್ಲಿ ಕೆಲಸದ ಅವಕಾಶಗಳಿಗೆ ಬರವಿಲ್ಲ.
ಇರುವ ಅವಕಾಶಗಳನ್ನು ನಾವು ಸರಿಯಾಗಿ ಬಳಸಿಕೊಳ್ಳುತ್ತಾ ಇಲ್ಲ...

--ಶ್ರೀ
(ತಪ್ಪು ಅರಿಮೆಗಳಿದ್ದರೆ ತಿದ್ದಿ...ನನ್ನಿ!)

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...

kishoreyc's picture

ಪರರಾಜ್ಯದಲ್ಲಿ ನೇಮಕಾತಿ ಪರೀಕ್ಷೆ ನಡೆಸುವು ಕಾನೂನು ಬಾಹಿರವಾದ್ದರಿ೦ದ ರೈಲ್ವೇ ಹಾಗೆ ಮಾಡಲಾರದು. ಏಕೆ೦ದರೆ ರೈಲ್ವೇ ಕಾನೂನನ್ನು ರೂಪಿಸುವಾಗ ಯಾವ ಪ್ರದೇಶದಲ್ಲಿ ನೇಮಕಾತಿ ನಡೆಯುತ್ತದೆಯೋ ಅಲ್ಲಿನ ಜನಕ್ಕೆ ಕೆಲಸ ನೀಡುವ ಪ್ರಕ್ರಿಯೆ ಇತ್ತು. ಇ೦ದು ರೈಲ್ವೇ ಅಧಿಕಾರಿಗಳು ಕಾನೂನನ್ನು ಉಲ್ಲ೦ಘಿಸಿ ಬಿಹಾರಿಗಳನ್ನು ಕರೆತ೦ದು ತು೦ಬುತ್ತಿದ್ದಾರೆ.

ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...

srinivasps's picture

> ಪರರಾಜ್ಯದಲ್ಲಿ ನೇಮಕಾತಿ ಪರೀಕ್ಷೆ ನಡೆಸುವು ಕಾನೂನು ಬಾಹಿರವಾದ್ದರಿ೦ದ ರೈಲ್ವೇ ಹಾಗೆ ಮಾಡಲಾರದು.

ಕಾಲವೇ ಹೇಳುತ್ತೆ ಏನಾಗತ್ತೆ ಅಂತಾ...ಏನು ಆಗಲ್ಲ ಅಂತಾ ನಾವು ಕೈ ಕಟ್ಟಿ ಕುಳಿತರೆ, ಕೈ ಸುಟ್ಟುಕೊಳ್ತೀವಿ :)

> ಇ೦ದು ರೈಲ್ವೇ ಅಧಿಕಾರಿಗಳು ಕಾನೂನನ್ನು ಉಲ್ಲ೦ಘಿಸಿ ಬಿಹಾರಿಗಳನ್ನು ಕರೆತ೦ದು ತು೦ಬುತ್ತಿದ್ದಾರೆ.

ಇದು ಯಾವ ಕಾನೂನಿನ ಉಲ್ಲಂಘನೆ? ಸ್ವಲ್ಪ ವಿವರವಾಗಿ ಹೇಳ್ತೀರ...

--ಶ್ರೀ

ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...

Chetan.Jeeral's picture

ಶ್ರೀನಿವಾಸ್ ಅವರಿಗೆ ನಮಸ್ಕಾರಗಳು,
ನಿಮ್ಮ ಕನ್ನಡ ಕಾಳಜಿ ಮೆಚ್ಚುವಂತಹುದೇ. ಆದ್ರೆ ಕೆಲವು ಪ್ರಶ್ನೆಗಳು ಅಸಂಭದ್ಧ ಅನ್ನಿಸುತ್ತವೆ
೧) ಕರ್ನಾಟಕದಲ್ಲಿ ವಕೀಲರಿಗೆ ಬರವಾ? ಅಥವಾ ನಿರ್ಲಕ್ಷ್ಯವಾ?
ಕರ್ನಾಟಕದಲ್ಲಿ ವಕೀಲರಿಗೆನು ಬರವಿಲ್ಲ ಸರ್, ಆದ್ರೆ ಅವರಿಗೆ ಹೋರಾಡೋಕೆ funds ಕೊಡೋರು ಯಾರು?
ನಮ್ಮ ನ್ಯಾಯಾಂಗದಲ್ಲಿ ನಡೆಯುವ ಕೇಸುಗಳು ವರ್ಷಗಳನ್ನು ತಗೆದುಕೊಲ್ಲುತ್ತವೆ, ಆಷ್ಟು ವರ್ಷ ಅವರಿಗೆ ದುಡ್ಡು ಬೇಕು ಹಾಗು ನೈತಿಕ ಬೆಂಬಲ. ನಿಮ್ಮ ಖಾಸಗಿ ಕೆಲಸ ಅಲ್ಲದೆ ನೀವು ಬಹಳ ವರ್ಷ ಹೊರಡಬೇಕು ಅಂದ್ರೆ ಅದಕ್ಕೆ ಸರಕಾರಗಳು ಬೆಂಬಲ ನೀಡಬೇಕು.

೨) ಅನ್ಯಾಯ ಆಗುತ್ತಿದೆ ಅಂತ ಅನಿಸಿದ ಯಾವುದೇ ವಕೀಲನಿಂದ stay order ತರಕ್ಕೆ ಆಗಲ್ವಾ? ಈ ರೀತಿ ದನಿ ಎತ್ತಿದರೆ, ಆ ವಕೀಲನಿಗೆ, ಎಲ್ಲ ಪಕ್ಷಗಳು ತಾ ಮುಂದು ನಾ ಮುಂದು ಅಂತಾ ಮೊದಲು ಸಪೋರ್ಟ್ ಮಾಡಕ್ಕೆ ಬರಲ್ವಾ?

ಈ ರೀತಿ ಇದ್ದಿದರೆ ಇಷ್ಟುಹೊತ್ತಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕುವ ಎಲ್ಲ ವಕೀಲರು ಪ್ರಸಿಧ್ಧರಾಗಬೇಕಿತ್ತು.

೩) ಈಗ ಆಂಧ್ರದಲ್ಲಿ ಪರೀಕ್ಷೆ ನಡೆಸ್ತಾರಂತೆ ಅಂತ ಸುದ್ದಿ.
ಇದಕ್ಕೆ ಪ್ರತಿಯಾಗಿ ಬತ್ತಳಿಕೆಯಲ್ಲಿರುವ ಬಾಣವೇನು?
ಇದನ್ನು ಕನ್ನಡ ನಾಡಿನಲ್ಲಿ, ಕನ್ನಡಿಗರ ಮುಂದೆ ಗಲಾಟೆ ಮಾಡೋದು ಬಿಟ್ಟು, ಏನು ಮಾಡಿದಾರೆ?

ಕರ್ಣಾಟಕದ ನೇಮಕಾತಿಗಳನ್ನು ಅಲ್ಲಿಯೇ ಮಾಡಲು ಬರುತ್ತದೆಯೇ ಹೊರತು ಬೇರೆ ರಾಜ್ಯದಲ್ಲಿ ತುಂಬಿಸಿ ಇಲ್ಲಿಗೆ ಕಲಿಸಲು ಬರುವುದಿಲ್ಲ. ವಸಂತ್ ಹೇಳಿದ ಹಾಗೆ ಕರವೇ ಹೋರಾಟದ ಫಲವಾಗಿ ಕೇಂದ್ರಕ್ಕೆ ರೈಲ್ವೆ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಇದು ಹೋರಾಟಕ್ಕೆ ಸಂದ ಜಯವಲ್ಲವೇ?

೪)ಗ್ರೂಪ್ ಡಿ ಹುದ್ದೆಗಳು ಸಿಕ್ಕಮೇಲೆ, ಕೆಲಸಕ್ಕಾಗಿ ಹಿಂದಿ ಕಲಿಯಬೇಕಾಗಬಹುದು. ಇದಕ್ಕೆ ನಮ್ಮ ಕನ್ನಡಿಗರು ತಯಾರಿದಾರ?

ಈ ಪ್ರಶ್ನೆ ನಿಮಗೆ ಯಾಕೆ ಬಂತೋ ಗೊತ್ತಿಲ್ಲ. ಅವ್ರು ನೇಮಕ ಮಾಡ್ತಿರೋದು ಗುಂಪು ಡಿ ನೌಕರರನ್ನು, ಇವರಿಗೆ ಅಲ್ಲಿಯೇ ಖಾಯಮ್ ಕೆಲಸ ಬೇರೆಕಡೆ ವರ್ಗ ಆಗೋಲ್ಲ. ಇನ್ನು ಕರ್ನಾಟಕದಲ್ಲಿ ಕೆಲಸ ಮಾಡೋಕೆ ಹಿಂದಿ ಯಾಕೆ ಕಲಿಯಬೇಕು? ಕಲಿಯೋಕೆ ತಯಾರಾಗಬೇಕು?

ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...

srinivasps's picture

> ಕರ್ನಾಟಕದಲ್ಲಿ ವಕೀಲರಿಗೆನು ಬರವಿಲ್ಲ ಸರ್, ಆದ್ರೆ ಅವರಿಗೆ ಹೋರಾಡೋಕೆ funds ಕೊಡೋರು ಯಾರು?

ಫಂಡ್ಸ್ ಕೊಡೋರು ಇಲ್ಲ!!!!!
ಇದನ್ನು ನಾನು ಒಪ್ಪಲ್ಲ...ಕ.ರ.ವೇ ಸಂಘದ ಪ್ರತಿ ಸದಸ್ಯನಿಂದ ರೂ.೧ ಕಲೆಕ್ಟ್ ಮಾಡಿ...ಎಷ್ಟಾಯ್ತು?

> ನಮ್ಮ ನ್ಯಾಯಾಂಗದಲ್ಲಿ ನಡೆಯುವ ಕೇಸುಗಳು ವರ್ಷಗಳನ್ನು ತಗೆದುಕೊಲ್ಲುತ್ತವೆ, ಆಷ್ಟು ವರ್ಷ ಅವರಿಗೆ ದುಡ್ಡು ಬೇಕು ಹಾಗು ನೈತಿಕ ಬೆಂಬಲ.
ತಪ್ಪು ಕಲ್ಪನೆ. ಮುಖ್ಯವಾದ ಕೇಸ್ ಗಳನ್ನು ಕೋರ್ಟ್ ಬೇಗ ಪರಿಶೀಲಿಸತ್ತೆ...ಉದಾ. ನಮ್ ಸೇತು ಸಮುದ್ರಂ!

> ಈ ರೀತಿ ಇದ್ದಿದರೆ ಇಷ್ಟುಹೊತ್ತಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕುವ ಎಲ್ಲ ವಕೀಲರು ಪ್ರಸಿಧ್ಧರಾಗಬೇಕಿತ್ತು.

ಸಾರ್, ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್ ಗೂ ಸ್ಟೇ ಆರ್ಡರ್ ಗೂ ವ್ಯತ್ಯಾಸ ಇದೆ!

> ...ಇದು ಹೋರಾಟಕ್ಕೆ ಸಂದ ಜಯವಲ್ಲವೇ?
ಅಲ್ಲಾ...ಕನ್ನಡಿಗರಿಗೆ ಇನ್ನೂ ಕೆಲಸ ಸಿಕ್ಕಿಲ್ಲ

> ೪)ಗ್ರೂಪ್ ಡಿ ಹುದ್ದೆಗಳು ಸಿಕ್ಕಮೇಲೆ, ಕೆಲಸಕ್ಕಾಗಿ ಹಿಂದಿ ಕಲಿಯಬೇಕಾಗಬಹುದು. ಇದಕ್ಕೆ ನಮ್ಮ ಕನ್ನಡಿಗರು ತಯಾರಿದಾರ?

ನನ್ನ ಮೂಲ ಲೇಖನದಲ್ಲೇ ನಾನು ತಪ್ಪರಿಕೆಗಳಿದ್ದರೆ ತಿದ್ದೆ ಅಂತಾ ಬರೆದಿದ್ದೀನಿ. ತಿದ್ದಿದ್ದಕ್ಕೆ ನನ್ನಿ!

ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...

vasant.shetty's picture

ಶ್ರೀನಿವಾಸ ಅವರೇ,,
ಸಕತ್ ಬೇಜಾರ್ ಆಯ್ತು ಸರ್,, ಇಷ್ಟು ಸಮಯ ತಗೊಂಡಿದ್ದನ್ನು ನೋಡಿ, ನೀವು ಏನೋ ಮಹಾನ್ ಕಾವ್ಯಾನೇ ಬರಿತಿರಾ ಅಂದಕೊಂಡಿದ್ದೆ. ಇಲ್ಲಿ ನೋಡಿದ್ರೆ ಬರಿ ಪುಸ್ ಪುಸ್ ಗಾಳಿ..

Quote:
೧. ನಮ್ಮ ಎಂ.ಪಿ.ಗಳು ಕನ್ನಡಿಗರಿಗಾಗಿ ಆಗುತ್ತಿರುವ ಅನ್ಯಾಯದ ಬಗ್ಗೆ ಲೋಕ ಸಭೆಯಲ್ಲಿ, ಬಿಸಿ ತಟ್ಟುವಂತೆ ಇದುವರೆಗೂ ಗಲಾಟೆ ಮಾಡಿಲ್ಲ.
೨. ಕರ್ನಾಟಕದ ಎಂ.ಪಿ.ಗಳಿಗೆ, ಇಡೀ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯಕ್ಕೆ ಒಟ್ಟಾಗಿ ದನಿ ಏರಿಸುವ ಒಗ್ಗಟ್ಟಿಲ್ಲ.

ಅವರೆಲ್ಲ ಸರಿಯಾಗಿ ಕೆಲ್ಸ ಮಾಡಿದ್ರೆ ನಮಗೆ ಕ.ರ.ವೇ ಯ ಅಗತ್ಯವೇ ಇರತಿರಲಿಲ್ಲ ಸರ್. ಆದ್ರೆ ನೆನಪಿರಲಿ, ಕರ್ನಾಟಕದ ಕಳೆದ ೫ ವರ್ಷದ ಇತಿಹಾಸ ತೆಗೆದು ಒಮ್ಮೆ ನೋಡಿ, ಅಲ್ಲಿ ಕನ್ನಡಿಗರ ಪರವಾಗಿ ನಡೆದ ಹೋರಾಟಗಳು ಯಾವುವು, ಅಲ್ಲೆಲ್ಲ ಯಾರು ಹೋರಾಡಿದ್ದು, ಹೋರಾಡಿ ನ್ಯಾಯ ತಂದುಕೊಂಡಿದ್ದು ಎಂದು. ಅದು ಕಾವೇರಿ ನ್ಯಾಯ ಮಂಡಳಿ ತೀರ್ಪು ಕಾನೂನು ಆಗದಂತೆ ತಡೆದದ್ದೆ ಇರಬಹುದು, ಬೆಳಗಾವಿಯ ಪಾಲಿಕೆಯಲ್ಲಿ ಕನ್ನಡತಿಯೊಬ್ಬಳನ್ನು ಗೆಲ್ಲಿಸಿದ್ದೆ ಇರಬಹುದು, ಬೆಂಗಳೂರಿನ ಎಫ್.ಎಮ್ ವಾಹಿನಿಗಳಲ್ಲಿ ಕನ್ನಡದ ಧ್ವನಿ ಕೇಳಿಸುವಂತೆ ಮಾಡಿದ್ದೆ ಇರಬಹುದು, ಕಳಸಾ ಬಂಡುರಿ ಯೋಜನೆಗಾಗಿ ಹುಬ್ಬಳ್ಳಿಯಲ್ಲಿ ಅತಿ ದೊಡ್ಡ ಪ್ರತಿಭಟನೆ ಹಮ್ಮಿಕೊಂಡದ್ದೆ ಇರಬಹುದು, ಎಲ್ಲ ಹೋರಾಟದಲ್ಲೂ ಕನ್ನಡಿಗರ ಧ್ವನಿಯಾಗಿ ಈ ಮಣ್ಣಿನ ಮಕ್ಕಳ ಪರವಾಗಿ ಹೋರಾಡುತ್ತಿರುವವರು ಕ.ರ.ವೇ ಒಂದೇ. ತಿಮ್ಮಯ್ಯ ಅನ್ನೋರು ಈ ಹಿಂದೆ ಸಂಪದದ ಬರಹವೊಂದರಲ್ಲಿ ಬರೆದಿದ್ದ ಕಮೆಂಟ್ ಒಂದನ್ನು ಇಲ್ಲಿ ಹಾಕ್ತಾ ಇದಿನಿ. ಚಳುವಳಿಗಳ ಬಗ್ಗೆ, ಕ.ರ.ವೇ ಹೋರಾಟದ ಬಗ್ಗೆ ತಮಗಿರುವ ಅಜ್ಞಾನ ಹೋದರೂ ಹೋದಿತೂ..

" ಚಳವಳಿ ಅನ್ನೋದು ನಡೆಯೋದೇ ಆಡಳಿತ ವ್ಯವಸ್ಥೆ ತನ್ನ ಕೆಲಸ ತಾನು ಮಾಡಲು ಸೋತಾಗ. ಹಾಗಾಗಿ ಹೆಚ್ಚು ಸಲ ಅದು ವ್ಯವಸ್ಥೆಗೆ ವಿರುದ್ಧವಾಗಿರುತ್ತದೆ ಮತ್ತು ಪೂರ್ಣಫಲ ಸಿಗುವುದಿಲ್ಲ. ಅದಕ್ಕೆ ಏಕೀಕರಣ ಚಳವಳಿಯೂ ಹೊರತಲ್ಲ. ಹಾಗೇ ನಾಡಿನ ತುಂಬಾ ದೊಡ್ಡ ಕ್ರಾಂತಿಯುಂಟುಮಾಡಿದ್ದ ಗೋಕಾಕ್ ಚಳವಳಿಯೂ ಆ ದೃಷ್ಟೀಲಿ ನೋಡೂದ್ರೆ ವೈಫಲ್ಯವೇ. ಹಾಗಾದ್ರೆ ಚಳವಳಿಗಳಿಂದ ಏನು ಪ್ರಯೋಜನ? ಚಳವಳಿಗಳು ಉಂಟು ಮಾಡೋ ಅಗಾಧವಾದ ಜನಜಾಗೃತಿಯೇ, ಜನರ ಒಗ್ಗಟ್ಟೇ ನಿಜವಾದ ಚಳವಳಿಯ ಯಶಸ್ಸಿನ ಮಾನದಂಡ.
ಇವತ್ತಿನ ದಿವಸ ಕರ್ನಾಟಕ ರಕ್ಷಣಾ ವೇದಿಕೆ ಇಂತಹ ಜನ ಪರ ಚಳವಳಿಯ ರೂವಾರಿಯಾಗಿ ಕಳೆದ ಹತ್ತು ವರ್ಷದಿಂದ ದಾಪುಗಾಲಿಟ್ಟು ಸಾಗುತ್ತಿದೆ. ನೀವೇ ನೆನಪಿಸಿಕೊಂಡು ನೋಡಿ. ಹತ್ತು ವರ್ಷದ ಹಿಂದೆ ಕನ್ನಡ ಕನ್ನಡಿಗ ಕರ್ನಾಟಕ ಅಂತ ಯಾವ ಚರ್ಚೆಗಳು ನಡೆದಿದ್ದವು ಅಂತ. ವಾಟಾಳ್ ನಾಗರಾಜ್ ಥರದೋರು ಕನ್ನಡ ಚಳವಳಿಯನ್ನು ಕತ್ತೆ ಎಮ್ಮೆ ತಮಟೆಗಳಿಗೆ ವಿಸ್ತರಿಸಿ ಇಡೀ ಕನ್ನಡ ಹೋರಾಟ ಅನ್ನೋದೆ ವಸೂಲಿ, ಜೋಕ್ ಅನ್ನುವಂತೆ ಮಾಡಿದ್ದು ನಾಡ ಜನರು ಅವುಗಳ ಬಗ್ಗೆ ಹಗುರ ಭಾವನೆ ಹೊಂದಲು ಕಾರಣವಾಗಿದ್ದರು. ಇಂಥ ಸನ್ನಿವೇಶದಲ್ಲಿ ಚಾಮರಾಜ ನಗರದಿಂದ ಬೀದರ್ ತನಕ, ಬಳ್ಳಾರಿಯಿಂದ ಉಡುಪಿಯ ತನಕ ಕನ್ನಡ ಬಾವುಟದ ಅಡಿಯಲ್ಲಿ ಕನ್ನಡಿಗರನ್ನು ಸಂಘಟಿಸುತ್ತಾ ಇರೋದು ಕರವೇ. ಇವತ್ತು ನಲವತ್ತು ಲಕ್ಷ ಸದಸ್ಯತ್ವ ಹೊಂದಿರೋದೇ ಸಂಘಟನೆಯ ಯಶಸ್ಸಿಗೆ ಸಾಕ್ಷಿಯಾಗಿದೆ. "

Quote:
ಕರ್ನಾಟಕದಲ್ಲಿ ವಕೀಲರಿಗೆ ಬರವಾ? ಅಥವಾ ನಿರ್ಲಕ್ಷ್ಯವಾ? ಈ ರೈಲ್ವೆ ವಲಯಕ್ಕೆ ನೇಮಕಾತಿ ಮಾಡುವಾಗ, ಕನ್ನಡದಲ್ಲಿ ಅರ್ಜಿ ಇಲ್ಲ ಎಂದರೆ, ನೇಮಕಾತಿ ಪರೀಕ್ಷೆಗೆ stay order ಪಡೆಯೋಕಾಗಲ್ವಾ?

ವಕೀಲರಿಗೇನು ಬರವಿಲ್ಲ, ಆದ್ರೆ ನಾಡು-ನುಡಿ ಬಗ್ಗೆ ಕಳಕಳಿ ಇರೋ ವಕೀಲರೆಲ್ಲಿ?? ನಿಮ್ಮ ಮಾತಿನ ಧಾಟಿ ಹೇಗಿದೆ ಅಂದ್ರೆ ವಕೀಲರಿದ್ದ ಕೂಡಲೇ ನ್ಯಾಯ ಸಿಕ್ಕಿ ಬಿಡುತ್ತೆ ಅನ್ನೊ ಹಾಗೆ. ದೆಹಲಿ ಮಟ್ಟದಲ್ಲಿ lobby ಮಾಡೋಕಾಗೋರಿಗೆ ಮಾತ್ರ ಈ ದೇಶದಲ್ಲಿ ಎಲ್ಲ ಅವಕಾಶ ಇರೋದು. ಲಾಲೂ ಬಿಹಾರದಿಂದ ೪೦ ಜನ ಎಮ್.ಪಿ ಗಳನ್ನ ಗೆದ್ದು, ಕೇಂದ್ರದಲ್ಲಿ ಸರ್ಕಾರ ಮಾಡ್ತಾನೆ, ಮಂತ್ರಿ ಆಗ್ತಾನೆ, ತನ್ನ ರಾಜ್ಯದವರನ್ನೆ ಇಡೀ ದೇಶದ ಎಲ್ಲ ರೈಲ್ವೆ ಕೆಲ್ಸದಲ್ಲೂ ತಂದು ತುಂಬ್ತಾನೆ. ಯಾರಿಗೆ ದಿಲ್ಲಿಯಲ್ಲಿ ಸರ್ಕಾರದ ಜುಟ್ಟು ಹಿಡಿಯೋ ತಾಕತ್ತಿದೆಯೊ ಅವನ ಮಾತೇ ನಡೆಯೋದು, ಹಾಗಿದ್ದಾಗ ಕೆಲಸ ಆಗಬೇಕಾಗಿರೋದು ಕನ್ನಡಿಗರಲ್ಲಿ ಕನ್ನಡತನದ ಜಾಗೃತಿ. ಅದು ಆದಾಗಲೇ ತಾನೇ irrespective of political parties, ಎಲ್ಲ ಕನ್ನಡಿಗರೂ ಸೇರಿ ಕನ್ನಡದ ಕೆಲ್ಸಕ್ಕೆ, ಕನ್ನಡಿಗನ ಕೆಲ್ಸಕ್ಕೆ ಧ್ವನಿ ಎತ್ತೋದು? ಆ ಜಾಗೃತಿನ ತರೋ ಕೆಲ್ಸ ಕ.ರ.ವೇ ಮಾಡ್ತಾ ಇದೆ. ಕರ್ನಾಟಕದಲ್ಲಿ ಕನ್ನಡಿಗ, ಕನ್ನಡ ಒಂದು ವೋಟ್ ಗೆಲ್ಲೊ ಶಕ್ತಿ ಆಗದ ಹೊರತು ನಮ್ಮ ಮೇಲೆ ನಡಿತಿರೋ ಅನ್ಯಾಯ ನಿಲ್ಲಲ್ಲ.

Quote:
ಕರ್ನಾಟಕದಲ್ಲಿ ಕ.ರ.ವೇ ಅವರು ರೈಲುಗಳನ್ನು ತಡೆಯುವುದರಿಂದ, ಯಾರಿಗೆ ಬಿಸಿ ತಟ್ಟತ್ತೆ? ಸಾಮಾನ್ಯ ಜನತೆಗೆ (ಅದೂ ಹೆಚ್ಚಾಗಿ ಕನ್ನಡಿಗರಿಗೆ!).
ಕನ್ನಡಿಗರ ವ್ಯಾಪಾರ, ವಹಿವಾಟೇ ನಿಲ್ಲೋದು! ಇದರಿಂದ ಕೇಂದ್ರದಲ್ಲಿರೋವರಿಗೆ, ರೈಲ್ವೇ ಮಂತ್ರಿಗಳಿಗೆ ಬಿಸಿ ತಟ್ಟತ್ತಾ? ಇಲ್ಲ.

ಮಂತ್ರಕ್ಕೆ ಮಾವಿನಕಾಯಿ ಉದುರೋ ಕಾಲ ಹೋಯ್ತು ಸರ್. ದೊಡ್ಡದೊಂದು ಜಯ ಕನ್ನಡಿಗರಿಗೆ ಸಿಗಬೇಕು ಅಂದಾಗ, ಪ್ರತಿಭಟನೆಯಲ್ಲಿ ಆಗೋ ಚಿಕ್ಕ ಪುಟ್ಟ ತೊಂದರೆಗಳ ಬಗ್ಗೆ ಹೆಚ್ಚೆನು ಮಾಡೋಕಾಗಲ್ಲ.

Quote:
ಈಗ ಆಂಧ್ರದಲ್ಲಿ ಪರೀಕ್ಷೆ ನಡೆಸ್ತಾರಂತೆ ಅಂತ ಸುದ್ದಿ. ಇದಕ್ಕೆ ಪ್ರತಿಯಾಗಿ ಬತ್ತಳಿಕೆಯಲ್ಲಿರುವ ಬಾಣವೇನು? ಇದನ್ನು ಕನ್ನಡ ನಾಡಿನಲ್ಲಿ, ಕನ್ನಡಿಗರ ಮುಂದೆ ಗಲಾಟೆ ಮಾಡೋದು ಬಿಟ್ಟು, ಏನು ಮಾಡಿದಾರೆ?

ನೀವಿನ್ನು ಅಪಡೇಟ್ ಆಗಿಲ್ಲ ಅನ್ಸುತ್ತೆ. ನಾರಾಯಣ ಗೌಡರ ಕ.ರ.ವೇ ಹೋರಾಟದ ಫಲವಾಗಿ ಈ ಪರೀಕ್ಷೆ ಪೂರ್ತಿ ರದ್ದಾಗಿದೆ. ಮೈಸೂರು, ಹುಬ್ಬಳ್ಳಿ ಕೇಂದ್ರದ ರೈಲ್ವೆ ಅಧಿಕಾರಿಗಳೇ ಈ ಬಗ್ಗೆ ಲಾಲೂ ಪ್ರಸಾದ ಅವರಿಗೆ ಪತ್ರ ಕಳಿಸಿ, ರೈಲ್ವೆ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ಕೊಡುವಂತೆ ಕೇಳಿಕೊಂಡ ಸುದ್ದಿ ನಿನ್ನೆಯ ಕನ್ನಡಪ್ರಭದಲ್ಲಿ ಬಂದಿದೆ. ಇದೆಲ್ಲ ಸಾಧ್ಯವಾದದ್ದು ನೇಮಕಾತಿಗೆ ೨ ದಿನ ಮುನ್ನವೇ ಕರವೇ ರಾಜ್ಯಾದ್ಯಾಂತ ಜಾಗೃತಿ ಸಭೆ ಹಮ್ಮಿಕೊಂಡು, ಕನ್ನಡಿಗರಿಗೆ ಅನ್ಯಾಯ ಆಗಲು ಬಿಡಲ್ಲಿ ಅನ್ನುವ ಸಂದೇಶ ಕೊಟ್ಟಿದ್ದರಿಂದಲೇ.

Quote:
ಗ್ರೂಪ್ ಡಿ ಹುದ್ದೆಗಳು ಸಿಕ್ಕಮೇಲೆ, ಕೆಲಸಕ್ಕಾಗಿ ಹಿಂದಿ ಕಲಿಯಬೇಕಾಗಬಹುದು. ಇದಕ್ಕೆ ನಮ್ಮ ಕನ್ನಡಿಗರು ತಯಾರಿದಾರ?

ಈ ಎಲ್ಲ ಹುದ್ದೆಗಳು ನಮ್ಮ ಹುಬ್ಬಳ್ಳಿ, ಮೈಸೂರು, ಬೆಂಗಳೂರು ಕೇಂದ್ರಗಳಿಗಾಗಿ ಇರೋದು. ಇಲ್ಲೆ ನೇಮಕ ಆಗೋನು ಇಲ್ಲೆ ಜೀವಮಾನ ಕಳಿತಾನೆ. ಇದು transferable job ಅಲ್ಲ.

Quote:
ಕೊನೆಯದಾಗಿ, ಗ್ರೂಪ್ ಡಿ ಹುದ್ದೆಗಳು ಇರೋದು ಬರೀ ೪೭೦೦ ಮಾತ್ರ, ಕರ್ನಾಟಕದಲ್ಲಿ ಕೆಲಸದ ಅವಕಾಶಗಳಿಗೆ ಬರವಿಲ್ಲ. ಇರುವ ಅವಕಾಶಗಳನ್ನು ನಾವು ಸರಿಯಾಗಿ ಬಳಸಿಕೊಳ್ಳುತ್ತಾ ಇಲ್ಲ...

ಕೆಲಸಗಳಿಗೆ ಬರವಿಲ್ಲದಿದ್ದಲ್ಲಿ ಗ್ರೂಪ್ ಡಿ ಹುದ್ದೆಗಳಿಗೆ ಜನವರಿಯಲ್ಲಿ ೧ ಲಕ್ಷ ಕನ್ನಡಿಗರ ಅರ್ಜಿಗಳು ಬಂದಿದ್ಯಾಕೊ?

ನೀವು ಕನ್ನಡಿಗರೇ, ಕನ್ನಡದ ಬಗ್ಗೆ ಒಲವುಳ್ಳವರೇ. ಅದಕ್ಕೆ ನಿಮ್ಮ ಹೆಸರಿನಲ್ಲಿರುವ ದೊಡ್ಡ ಸಂಖ್ಯೆಯ ಬರಹಗಳು. ನನ್ನ ಒಂದೇ ಕೋರಿಕೆ ಅಂದ್ರೆ ಕನ್ನಡಕ್ಕಾಗಿ ನಿಜವಾಗಿಯೂ ಹೋರಾಡುತ್ತಿರುವವರನ್ನು ಕನ್ನಡ-ಕರ್ನಾಟಕದ ಬಗ್ಗೆ ಕನಸಿಟ್ಟುಕೊಂಡಿರೋ ನಾವುಗಳೇ ಹಿಂದೆ, ಮುಂದೆ ಪರಾಮರ್ಶಿಸದೇ ಬೈಯ್ಯೋದಾಗಲಿ, ಅನುಮಾನಿಸೋದಾಗಲಿ ಸರಿಯಲ್ಲ್ ಅನ್ನೊದು ನನ್ನ ಅಭಿಪ್ರಾಯ.

-
ವಸಂತ

ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...

srinivasps's picture

ವಸಂತ್,
personal attack ಎಲ್ಲ ಪಕ್ಕಕ್ಕಿಟ್ಟು ಸ್ವಲ್ಪ ಯೋಚನೇ ಮಾಡಿ...
ಕ.ರ.ವೇ ಕೆಳಗಿನ ಕೆಲಸಗಳನ್ನು ಮಾಡಕ್ಕೆ ಆಗುತ್ತಾ ಇಲ್ಲವಾ ಹೇಳಿ:

೧. ಎಂ.ಪಿ.ಗಳನ್ನ ಒಟ್ಟುಗೂಡಿಸೋದು, ಒಗ್ಗಟ್ಟಾಗಿ ದನಿ ಏರಿಸಿದರೆ, ಕನ್ನಡಿಗರಿಗೆ ನ್ಯಾಯ ಸಿಗತ್ತೆ ಅಂತ.

೨. ಕ.ರ.ವೇ ಒಂದು ಒಳ್ಳೇ ವಕೀಲರನ್ನ ನೇಮಕ ಮಾಡೋದು ಇದಕ್ಕಾಗಿ ಅಂತಾ, ಸುಪ್ರೀಂ ಕೋರ್ಟ್ ಇದೆ ಮುಂದಿನದನ್ನ ನೋಡಕ್ಕೆ.

ಸುಮ್ಮನೆ ಗಲಾಟೆ ಮಾಡೋದು, ನೇಮಕಾತಿ ಮುಂದಕ್ಕೆ ಹೋಗೋದು ಎಷ್ಟು ತಿಂಗಳಿಂದ ಆಗ್ತಿದೆ ಸಾರ್?
ಯಾರಿಗೆ ಉಪಯೋಗ ಆಯ್ತು ಇದರಿಂದ? ಇದರಿಂದ ನಮ್ಮ ರೈಲ್ವೇ ನಿಲ್ದಾಣಗಳಲ್ಲಿ ಆಗುತ್ತಿಲ್ಲವಾ ಅನಾನುಕೂಲ?

ಇಲ್ಲಿ ಯಾರು ಎಷ್ಟು ಗಲಾಟೆ ಮಾಡಿದರು, ಹೆಸರು ಮಾಡಿದರು ಮುಖ್ಯ ಅಲ್ಲ, ಕನ್ನಡಿಗರಿಗೆ ಕೆಲ್ಸ ರೈಲ್ವೆ ನಲ್ಲಿ ಸಿಕ್ಕಿದೆಯಾ ಇಲ್ಲವಾ?
ಇದನ್ನ ಕಾನೂನಿನ ಮೂಲಕ ಸರಿಯಾಗಿ ನಡೆಸಿದ್ದರೆ, ಇಷ್ಟು ಹೊತ್ತಿಗೆ ಕನ್ನಡಿಗರು ರೈಲ್ವೆ ನಲ್ಲಿ ಕೆಲಸ ಮಾಡುತ್ತಿದ್ದರು.

ಈಗ ಸದ್ಯಕ್ಕೆ ಮುಂದಕ್ಕೆ ಹೋಗಿದೆ, ಮತ್ತೆ ಇದೇ ರೀತಿ ಮಾಡ್ತಾರೆ, ಕೊನೆ ಎಲ್ಲಿ?!

Aim: ಕನ್ನಡಿಗರಿಗೆ ರೈಲ್ವೇನಲ್ಲಿ ಕೆಲಸ ಸಿಗಬೇಕು
obstacles:
೧. ಹಿಂದಿನಲ್ಲಿ ಅರ್ಜಿಗಳಿವೆ, ಕನ್ನಡಿಗರಿಗೆ ತುಂಬಕ್ಕೆ ಆಗಲ್ಲ
೨. ಬಿಹಾರಿಗಳು ಈ ಅರ್ಜಿ ತುಂಬುತ್ತಾರೆ

solution(?):

- ಪ್ರತಿ ಬಾರಿ ನೇಮಕಾತಿ ಪ್ರಕ್ರಿಯೆ ನಡೆಸುವಾಗ ಸಿಕ್ಕಾಪಟ್ಟೆ ಗಲಾಟೆ ಮಾಡಿ, ಪ್ರಕ್ರಿಯೆ ನಿಲ್ಲಿಸಿ?
- ಬಿಹಾರಿಗಳನ್ನು ಹೊಡೆದು ಓಡಿಸಿ?

ಇದಂತೂ ನನಗೆ ಅರ್ಥ ಆಗಿಲ್ಲ!

> ಕೆಲಸಗಳಿಗೆ ಬರವಿಲ್ಲದಿದ್ದಲ್ಲಿ ಗ್ರೂಪ್ ಡಿ ಹುದ್ದೆಗಳಿಗೆ ಜನವರಿಯಲ್ಲಿ ೧ ಲಕ್ಷ ಕನ್ನಡಿಗರ ಅರ್ಜಿಗಳು ಬಂದಿದ್ಯಾಕೊ?

ಕರ್ನಾಟಕದಲ್ಲಿ ಕೆಲಸದ ಅವಕಾಶಗಳಿಗೆ ಬರವಿಲ್ಲ. ಇರುವ ಅವಕಾಶಗಳನ್ನು ನಾವು ಸರಿಯಾಗಿ ಬಳಸಿಕೊಳ್ಳುತ್ತಾ ಇಲ್ಲ...ಇದೇ ಉತ್ತರ! ಸರಿಯಾಗಿ ಓದಿ ಕೊಳ್ಳಿ...
ಹಾಗೆ, ಕಿಶೋರ್ ಬರೆದ ಬೇರೆ ಎಳೇನಲ್ಲಿ ಮಹೇಶರು ಹಲವು ಉದಾಹರಣೆ ನೀಡಿದ್ದಾರೆ...

-ಶ್ರೀ

ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...

srinivasps's picture

ಹಾಗೇ...
ಸುಮ್ಮನೇ ನೇಮಕಾತಿ ಮುಂದೆ ಹಾಕುವುದರಲ್ಲಿ ಯಾರ ಗೆಲವೂ ಇಲ್ಲ...
ಇದಕ್ಕೆ ನಾವು ಸಂಭ್ರಮಿಸುವ ಅವಶ್ಯಕತೆಯೂ ಇಲ್ಲ, ಯಾಕೆಂದರೆ, ನಮ್ಮ ಮೂಲ ಉದ್ದೇಶ ಫಲಿಸೇ ಇಲ್ಲ!
ಮೂಲ ಉದ್ದೇಶ ಫಲಿಸುವದಕ್ಕೆ ಇದು ಮೊದಲ ಮೆಟ್ಟಿಲೂ ಅಲ್ಲ, ಯಾಕೆಂದರೆ, ಮೊದಲ ಮೆಟ್ಟಿಲನ್ನೂ ಫೆಬ್ರವರಿಯಲ್ಲೇ ಹತ್ತಿದ್ದೆವು, ನಾವು ಇನ್ನೂ ಅಲ್ಲೇ ಇದ್ದೇವೆ!

ಈಗ ಮತ್ತೊಮ್ಮೆ ನಮ್ಮ ತಾಕತ್ತು ಏನಂದು ನೋಡಿಕೊಳ್ಳೋಣ...ಫಲಿತಾಂಶದ ಕಡೆಗೆ ಕೆಲಸ ಮಾಡೋಣ...
ನಿಮ್ಮಲ್ಲಿ ಇನ್ನೂ ಉತ್ತಮ ಸಲಹೆಗಳಿದ್ದರೆ ಹೊರಬರಲಿ...

Immediate AIM: ಕೇಂದ್ರಕ್ಕೆ ಬಿಸಿ ತಟ್ಟ ಬೇಕು
ಯಾರಿಂದ ಸಾಧ್ಯ? :
- ಎಂ.ಪಿ.ಗಳಿಂದ, (ಹಾಗೂ ಕಾಂಗ್ರೆಸಿಗರಿಂದ, ಯಾಕೆಂದರೆ ಅವರೇ ಈಗ ಕೇಂದ್ರದಲ್ಲಿರೋದು, ರೈಲ್ವೇ ಕೇಂದ್ರ ಸರ್ಕಾರದ ನಿಯಂತಣದಲ್ಲಿದೆ)

Possible solution?: ನೀವೇ ಹೇಳಿದ ಹಾಗೆ ೪೦ ಲಕ್ಷ ಕ.ರ.ವೇ ಜನರಿದ್ದಾರೆ...ಎಂ.ಪಿ.ಗಳು ಎಷ್ಟು? ಬರೀ ೨೮!
೪೦ ಲಕ್ಷ ಒಗ್ಗೂಡಿಸಿದ ಇವರಿಗೆ, ಕೇವ ೨೮ ಕನ್ನಡದ ನೆಲದವರಿಗೆ, ಅದೂ ಕನ್ನಡಿಗರಿಗೆ ಕೆಲಸ ಮಾಡಲೆಂದೇ ಎಲೆಕ್ಟ್ ಮಾಡಿದ ಇವರನ್ನು ಒಗ್ಗೂಡಿಸಲು ಆಗದೇ?

ಏನು ಮಾಡಬಹುದಿತ್ತು:
ಫೆಬ್ರವರಿಯಲ್ಲಿ ಈ ಪ್ರಕ್ರಿಯೆ ಮುಂದೆ ಹೋದಾಗ, ತಕ್ಷಣವೇ ಕಾನೂನಿನ ಮಾರ್ಗ ಹಿಡಿಯಬೇಕಿತ್ತು.
ಕಳೆದ ೧೦ ತಿಂಗಳಲ್ಲಿ, ಇದಕ್ಕೆ permanent solution ಸಿಗಬಹುದಿತ್ತು...ಆದರೆ ನಾವು ಆ ಮಾರ್ಗ ಹಿಡಿಯಲಿಲ್ಲ.
ಕೇಂದ್ರ ತಂತಾನೆ ಸರಿ ಪಡೆಸಿಕೊಳ್ಳುವುದೆಂದು ಕಾದೆವು...ಅದಾಗಲೇ ಇಲ್ಲ...ಮತ್ತೆ ಅಕ್ಟೊಬರ್ ನಲ್ಲಿ ಪ್ರಕ್ರಿಯೆ ಶುರು...
ಮತ್ತೆ ಗಲಾಟೆ-ಗದ್ದಲ! ಕೆಲಸ ಯಾರಿಗಾದರೂ ಸಿಕ್ಕಿದೆಯೇ? ಇಲ್ಲ...!
ಈಗ ಪ್ರಕ್ರಿಯೆ ಮುಂದಕ್ಕೆ ಹಾಕಿದ್ದೇವೆ, ಆದರೆ ಇದು ಮತ್ತೆ ಮರುಕಳಿಸಬಹುದು!

ಈಗ?:
- ಈಗ ಎಂ.ಪಿ.ಗಳ ಜುಟ್ಟು ಹಿಡಿಯಿರಿ...೪೦ ಲಕ್ಷ ಸಂಖ್ಯೆ ನೋಡಿದರೆ ಬೆದರಬೇಕು ಕೆಲಸ ಮಾಡದೇ ಐಶಾರಾಮಿ ಕಾರಿನಲ್ಲಿ ಓಡಾಡುವವರು.
- ಕಾನೂನಿನ ಮಾರ್ಗಗಳನ್ನು ಅರಿಯಿರಿ, ಬಳಸಿರಿ...
- ಮುಖ್ಯವಾಗಿ permanent solution ಬಗ್ಗೆ ಯೋಚಿಸಿ, ಕಾರ್ಯ ಪ್ರವೃತ್ತರಾಗಿ.

ಕೈಗೆತ್ತಿಕೊಂಡ ಕೆಲಸ ಇನ್ನೂ ಅರ್ಧವೂ ಮುಗಿದಿಲ್ಲ, ಆಗಲೇ ಸಂಭ್ರಮವೇಕೆ?

--ಶ್ರೀ

ಕೊ: ಕ.ರ.ವೇ. ಹಮ್ಮಿಕೊಂಡ ಎಲ್ಲ ಕಾರ್ಯಗಳಲ್ಲೂ ಸೋತಿದೆ ಎಂದು ನಾನು ಹೇಳಿಲ್ಲ...ಆದರೂ ನೀವು ಅವರ ಕಾರ್ಯಗಳ ಬಗ್ಗೆ ಸವಿವರವಾಗಿ ನೀಡಿದ್ದಕ್ಕೆ ನನ್ನಿ!

ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...

vasant.shetty's picture

ಸರ್ ನಾನೇನು ಕರವೇಯ ಸಕ್ರೀಯ ಸದಸ್ಯನಲ್ಲ.
ನಾಡಿಗಾಗಿ, ನಾಡಿಗರಿಗಾಗಿ ಕೆಲಸ ಮಾಡ್ತಿರೋರನ್ನ ಗುರುತಿಸಿ ಬೆಂಬಲಿಸೋದು ಪ್ರತಿ ಸ್ವಾಭಿಮಾನಿ ಕನ್ನಡಿಗನ ಕೆಲ್ಸ. ಅದನ್ನೇ ನಾನು ಮಾಡ್ತಿರೋದು.
ಅವರ ವೆಬ್ ತಾಣಕ್ಕೆ ಹೋಗಿ ನಿಮ್ಮ ಸಲಹೆಯನ್ನು ಕೊಡಿ. ಹಿಂದೆ ನಾನು ಕೊಟ್ಟ ಸಲಹೆಗಳ ಬಗ್ಗೆ ಸಮರ್ಪಕ ಉತ್ತರವೂ ಕರವೇ ಯಿಂದ ಬಂದಿತ್ತು. They are open for communication. They are not a closed entity.

-
ವಸಂತ

ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...

vasant.shetty's picture

ಶ್ರೀನಿವಾಸ ಅವರೇ,
ನಿಮ್ಮ ಕಾಳಜಿ ಅರ್ಥ ಆಗುತ್ತೆ. ಆದ್ರೆ ನಿಮ್ಮ ಮಾತುಗಳಿಗೆ ನನ್ನ ಉತ್ತರ ಇಂತಿದೆ.

Quote:
ಎಂ.ಪಿ.ಗಳನ್ನ ಒಟ್ಟುಗೂಡಿಸೋದು, ಒಗ್ಗಟ್ಟಾಗಿ ದನಿ ಏರಿಸಿದರೆ, ಕನ್ನಡಿಗರಿಗೆ ನ್ಯಾಯ ಸಿಗತ್ತೆ ಅಂತ. ೨. ಕ.ರ.ವೇ ಒಂದು ಒಳ್ಳೇ ವಕೀಲರನ್ನ ನೇಮಕ ಮಾಡೋದು ಇದಕ್ಕಾಗಿ ಅಂತಾ, ಸುಪ್ರೀಂ ಕೋರ್ಟ್ ಇದೆ ಮುಂದಿನದನ್ನ ನೋಡಕ್ಕೆ. ಸುಮ್ಮನೆ ಗಲಾಟೆ ಮಾಡೋದು, ನೇಮಕಾತಿ ಮುಂದಕ್ಕೆ ಹೋಗೋದು ಎಷ್ಟು ತಿಂಗಳಿಂದ ಆಗ್ತಿದೆ ಸಾರ್?
ಯಾರಿಗೆ ಉಪಯೋಗ ಆಯ್ತು ಇದರಿಂದ? ಇದರಿಂದ ನಮ್ಮ ರೈಲ್ವೇ ನಿಲ್ದಾಣಗಳಲ್ಲಿ ಆಗುತ್ತಿಲ್ಲವಾ ಅನಾನುಕೂಲ?

ಎಮ್.ಪಿ.ಗಳನ್ನು ಒಗ್ಗುಡಿಸುವುದಕ್ಕೆ ಕರವೇ ಮಾಡಿರೋ ಪ್ರಯತ್ನಗಳ ಬಗ್ಗೆ ಪತ್ರಿಕೆಗಳಲ್ಲಿ ಬಂದಿರೋದನ್ನ ತಾವು ನೋಡಿದ ಹಾಗಿಲ್ಲ. ಜನವರಿಯಲ್ಲಿ ರೈಲ್ವೆ ಗ್ರೂಪ್ ಡಿ ಹುದ್ದೆಗಳ ಬಗ್ಗೆ ಸಂಸತ್ತಿನಲ್ಲಿ ಕನ್ನಡಿಗರ ಪರವಾಗಿ ಧ್ವನಿ ಎತ್ತಲು, ಕನ್ನಡದ ಮಕ್ಕಳಿಗೆ ಉದ್ಯೋಗದ ಬಗ್ಗೆ ದ್ವನಿ ಎತ್ತಲು ಕರವೇ ಎಲ್ಲ ಪಕ್ಷದ ಎಮ್.ಪಿ ಗಳನ್ನು ಹುಬ್ಬಳ್ಳಿಯಲ್ಲಿ ಸಭೆಗೆ ಕರೆದಿತ್ತು. ಅದರ ಅಧ್ಯಕ್ಷತೆ ವಹಿಸಿದ್ದು ಹುಬ್ಬಳ್ಳಿ ಭಾಗದ ಪ್ರಭಾವಿಗಳಾದ ಪಾಟೀಲ್ ಪುಟ್ಟಪ್ಪನವರು. ಆದ್ರೆ ಬಂದವರೆಷ್ಟು ಜನ ಹೇಳಿ ?? ಬರಿ ೪ ಜನ ! ಅದು ಬರಲಿಲ್ಲ ಅಂದರೆ ಎಲ್ಲಿ ಪತ್ರಿಕೆಗಳಲ್ಲಿ ಅಪಹಾಸ್ಯ ಮಾಡ್ತಾರೋ ಅನ್ನೊ ಹಾಗೆ, ಕಾಟಾಚಾರಕ್ಕೆ ಅನ್ನೊ ಹಾಗೆ ಬಂದಿದ್ದು. ಇವರೆಲ್ಲ ಹೀಗ್ಯಾಕೆ? ಇವರಿಗೆಲ್ಲ ಒಂದು ಅರ್ಥ ಆಗಿದೆ. ಕನ್ನಡಿಗನಿಗೆ ಕೆಲಸ ಕೊಡಿಸಿ, ಇಲ್ಲ ಬಿಡಿ, ಅವನು ವೋಟ್ ಮಾತ್ರ ಹಾಕೇ ಹಾಕುತ್ತಾನೆ ಅನ್ನೋ ನಂಬಿಕೆಯಿಂದ ತಾನೆ? ಆದ್ರೆ ಕರವೇ ಜನ ಜಾಗೃತಿಯ ಪರಿಣಾಮದಿಂದ ಗ್ರೂಪ್ ಡಿ ಹುದ್ದೆಗಳಲ್ಲಿ ಆಗ್ತಿರೋ ಮೋಸದ ಬಗ್ಗೆ ಜನರಲ್ಲಿ ಅರಿವು ಮೂಡಲು ಶುರುವಾದಾಗಷ್ಟೇ ಇವರೆಲ್ಲ ಬಂದು ಲಾಲೂ ವಿರುದ್ಧ ಅಬ್ಬರಿಸಿದ್ದು. ವಕೀಲರನ್ನು ನೇಮಿಸಿ ಅನ್ಯಾಯಾನ ಪ್ರಶ್ನೆ ಮಾಡಬೇಕಿರುವುದು ಕರವೇ ಅಲ್ಲ ಸರ್, ನಮ್ಮನ್ನು ಆಳುತ್ತಿರೋ ರಾಜ್ಯ ಸರ್ಕಾರ. ಅವರು ಇದೆಲ್ಲ ಮಾಡೋದು ಜನರಲ್ಲಿ ಇದರ ಬಗ್ಗೆ ಅರಿವು, ಜಾಗೃತಿ ಮೂಡಿ ಅವರ ಆಕ್ರೋಶದಿಂದ ಪರಿಸ್ಥಿತಿ ಬಿಗಡಾಯಿಸುತ್ತೆ ಅಂದಾಗಲೇ. ಹೀಗಾಗಿ ಕರವೇ ಜಾಗೃತಿಯಿಂದಾನೇ ಇವತ್ತು ಅದೆಷ್ಟೋ ಅನ್ಯಾಯಗಳಿಗೆ ಬ್ರೇಕ್ ಬಿದ್ದಿರೋದು.

Quote:
ಇದನ್ನ ಕಾನೂನಿನ ಮೂಲಕ ಸರಿಯಾಗಿ ನಡೆಸಿದ್ದರೆ, ಇಷ್ಟು ಹೊತ್ತಿಗೆ ಕನ್ನಡಿಗರು ರೈಲ್ವೆ ನಲ್ಲಿ ಕೆಲಸ ಮಾಡುತ್ತಿದ್ದರು.

ಇದನ್ನ ಮಾಡಬೇಕಿರುವುದು ಸರ್ಕಾರ. ಕರವೇ ಅಲ್ಲ. ಕರವೇ ಕೈಯಲ್ಲಿ ಅಧಿಕಾರವೂ ಇಲ್ಲ. ಅವರು ಮಾಡಬಹುದಾದ ಕೆಲಸ ಜನರಲ್ಲಿ ಅನ್ಯಾಯದ ಬಗ್ಗೆ ಜಾಗೃತಿ ತರೋದು, ಅನ್ಯಾಯ ಆಗಲೂ ನಿಲ್ಲದು ಅನ್ನುವಾಗ ಬೀದಿಗಿಳಿದು ಪ್ರತಿಭಟಿಸಿಯಾದರೂ ಅನ್ಯಾಯ ತಡೆಯೋದು.

ಇನ್ನೂ ಈ ಸಮಸ್ಯೆಗೆ ಪರಿಹಾರದ ಬಗ್ಗೆ ಕೇಳಿದ್ರಿ. ಇದು ಒಂದು ರಾಜ್ಯದ ಸಮಸ್ಯೆಯಲ್ಲ. ಲಾಲೂವಿನ ಬಿಹಾರಿಗಳ ಪ್ರೇಮದ ಬಗ್ಗೆ ದೇಶದ ಎಲ್ಲೆಡೆ ಸಿಟ್ಟು, ಅಸಹನೆ ವ್ಯಕ್ತವಾಗ್ತಿದೆ. ಅಸ್ಸಾಂ ಆಯ್ತು, ಕರ್ನಾಟಕ ಆಯ್ತು, ಈಗ ಮಹಾರಾಷ್ಟ್ರದಲ್ಲೂ ಬಿಹಾರಿಗಳ ಬಗ್ಗೆ ಆಕ್ರೋಶ ಎದ್ದಿದೆ. How can Kannadigas, Marathis, Assamese, Tamilians can be wrong at the same time ?? ಯಾರೂ ನಿಜವಾದ ಸಮಸ್ಯೆ ಬಗ್ಗೆ ಮಾತಾಡದೇ ಬರಿ ಹಿಂಸೆ, ಅಹಿಂಸೆ ಬಗ್ಗೆ ಮಾತಾಡೋದು ನೋಡಿದ್ರೆ ನಗು ಬರುತ್ತೆ.

ನಿಜವಾದ ಸಮಸ್ಯೆ ಏನು?

೧> ಯು.ಪಿ/ಬಿಹಾರ ಅಂತ ರಾಜ್ಯಗಳಲ್ಲಿ ಸರಿಯಾದ ಆಡಳಿತ ಅನ್ನೋದು ಮರಿಚಿಕೆ ಆಗಿರೋದು. ಅಲ್ಲಿನ ಸರ್ಕಾರ ಸರಿಯಾದ ಯೋಜನೆಗಳ ಮೂಲಕ ಅಲ್ಲಿನ ಮಣ್ಣಿನ ಮಕ್ಕಳಿಗೆ ಉದ್ಯೋಗ ಸೃಷ್ಟಿ ಮಾಡೋದು ಬಿಟ್ಟು, ಟ್ರೈನ್ ಮೇಲೆ ಟ್ರೈನ್ ಬಿಟ್ಟು ಕರ್ನಾಟಕ, ಮಹಾರಾಷ್ಟ್ರ ಅನ್ನೋ ತೋಟದಪ್ಪನ ಛತ್ರಗಳಿಗೆ ಕಳಿಸ್ತಾರೆ. ಅದು ನಿಜವಾದ ಸಮಸ್ಯೆ.
೨> ಅನಿಯಂತ್ರಿತ ಅಂತರಾಜ್ಯ ವಲಸೆ ನಾವು ಕಟ್ಟಿಕೊಂಡಿರೋ ನಗರಗಳ infrastructure ಕುಸಿದು ಹೋಗ್ತಾ ಇದೆ. ನಮ್ಮ ನಮ್ಮ ನಗರಗಳ identity ನ ಮರೆ ಮಾಚಿ, cosmopolitin ಅನ್ನೋ ಹೆಸರು ಕೊಡೊಕೆ ಶುರು ಮಾಡ್ತಾರೆ. ಅದು ನಿಜವಾದ ಸಮಸ್ಯೆ.
೩> ಭಾಷಾವಾರು ಪ್ರಾಂತ್ಯಗಳೆಲ್ಲ ಒಂದಾಗಿ ದೇಶ ಕಟ್ಟಿಕೊಂಡಿದ್ದು ಯಾಕೆ? ಎಲ್ಲರಿಗೂ ಸಮನಾದ ಅವಕಾಶ, ಸೌಲಭ್ಯ ಸಿಗಲಿ, ನೆಮ್ಮದಿಯ ಜೀವನ ಸಿಗಲಿ ಅಂತಾ ತಾನೇ? ಆದ್ರೆ ಇಲ್ಲಿ ದಿಲ್ಲಿಯಲ್ಲಿ ಸರ್ಕಾರದ ಜುಟ್ಟು ಹಿಡಿಯೋನು ಹೇಗೆ ಬೇಕೊ ಹಾಗೆ ಆಡ್ತಾನೆ. ನಮ್ಮ ನೆಲದ ಕೆಲ್ಸ ಕಿತ್ತಕೊಂಡರೂ ನಾವು ಪ್ರಶ್ನೆ ಮಾಡಬಾರದು ಯಾಕೆಂದರೆ ಇದು ಇಂಡಿಯಾ, ಇಲ್ಲಿನ ಸಂವಿಧಾನದಲ್ಲಿ ಹಾಗೆ ಬರೆದಿದೆ ಅಂತಾರೆ. ಅದು ನಿಜವಾದ ಸಮಸ್ಯೆ.

ಎಲ್ಲಿವರೆಗೂ ಭಾರತ ಮಾತೆಯ ಎಲ್ಲ ಮಕ್ಕಳನ್ನೂ ಒಂದೇ ತರಹ treat ಮಾಡೋದಿಲ್ಲವೋ ಅಲ್ಲಿವರಗೂ ಭವ್ಯ ಭಾರತದ ಕನಸು ಕನಸೇ ...

-
ವಸಂತ

ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...

srinivasps's picture

> ಎಮ್.ಪಿ.ಗಳನ್ನು ಒಗ್ಗುಡಿಸುವುದಕ್ಕೆ ಕರವೇ ಮಾಡಿರೋ ಪ್ರಯತ್ನಗಳ ಬಗ್ಗೆ ಪತ್ರಿಕೆಗಳಲ್ಲಿ ಬಂದಿರೋದನ್ನ ತಾವು ನೋಡಿದ ಹಾಗಿಲ್ಲ....
> ....ಹುಬ್ಬಳ್ಳಿ ಭಾಗದ ಪ್ರಭಾವಿಗಳಾದ ಪಾಟೀಲ್ ಪುಟ್ಟಪ್ಪನವರು. ಆದ್ರೆ ಬಂದವರೆಷ್ಟು ಜನ ಹೇಳಿ ?? ಬರಿ ೪ ಜನ !

ತಿಳಿದಿದೆ...ಪತ್ರಿಕೆಗಳಲ್ಲಿ ಓದಿದ್ದೇನೆ...ದಂಡಂ ದಶಗುಣಂ...
ರೈಲ್ವೇ ಅಧಿಕಾರಿಗಳ ಮುಂದೆ, ರೈಲ್ವೇ ನಿಲ್ದಾಣದಲ್ಲಿ ಗದ್ದಲ ಮಾಡುವ ಬದಲು, ೨೮ ಜನರ ಮುಂದೆ ಮಾಡಿ.
ಇವರುಗಳ ನೆಮ್ಮದಿ ಹಾಳು ಮಾಡಿ...ಕನ್ನಡಿಗರಿಗೆ ನೆಮ್ಮದಿ ಸಿಗತ್ತೆ :)

> ಇದನ್ನ ಮಾಡಬೇಕಿರುವುದು ಸರ್ಕಾರ. ಕರವೇ ಅಲ್ಲ. ಕರವೇ ಕೈಯಲ್ಲಿ ಅಧಿಕಾರವೂ ಇಲ್ಲ.
ಅರೆರೆ! ಇದಂತೂ ಆಶ್ಚರ್ಯವೇ...ಕಾನೂನಿನ ಕಟಕಟೆ ಯಾರು ಬೇಕಾದರೂ ಏರ ಬಹುದು ಅಲ್ಲವೇ? :)

--ಶ್ರೀ

ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...

ಹಿರಣ್ಯಾಕ್ಷ's picture

Quote:
೧. ಎಂ.ಪಿ.ಗಳನ್ನ ಒಟ್ಟುಗೂಡಿಸೋದು, ಒಗ್ಗಟ್ಟಾಗಿ ದನಿ ಏರಿಸಿದರೆ, ಕನ್ನಡಿಗರಿಗೆ ನ್ಯಾಯ ಸಿಗತ್ತೆ ಅಂತ.

ಸ್ವಾಮಿ, ಕಾವೇರಿ ನದಿ ತೀರ್ಪು ಹೊರ ಬಿದ್ದ ಮೇಲೆ, ದೆಹೆಲಿಯಲ್ಲಿ ೨೫೦೦೦ ಜನರನ್ನೊಳಗೊಂಡು ಕ.ರ.ವೇ. ಹೋರಾಟ ನಡೆಸಿತು. ಆ ಹೋರಾಟದಲ್ಲಿ ಭಾಗಿಯಾಗಲು ಎಲ್ಲ ೨೮ ಲೋಕಸಭಾ ಶಾಸಕರಿಗೆ ಕರೆಯಿತ್ತಿತು. ಬಂದವರು ಬರಿ ೪ ಜನ ಎಂ.ಪಿ. ಗಳು ಮಾತ್ರ. ಇವರಿಗೆ ಇನ್ಯಾವ ಥರಹ ಕರೆ ಕೊಡಬೇಕಿತ್ತೋ? ಏನು ತಾಂಬೂಲ ಕೊಟ್ಟು ಆಮಂತ್ರಣ ಪತ್ರ ಕೊಡಬೇಕಿತ್ತೆ?

ಕಾವೇರಿ ಹೋರಾಟದ ಬಗ್ಗೆ ಇಲ್ಲಿ ನೋಡಿ

http://karave.blogsp...

ನೀವು ಎತ್ತಿದ ಪ್ರಶ್ನೆಯ ಬದಲು ಕ.ರ.ವೇ. ಏಕೆ ಒಂದು ಪ್ರಾಂತೀಯ ಪಕ್ಷ ಕಟ್ಟಬಾರದು, ಮತ್ತು ಅವರು ಲೋಕಸಭೆಯಲ್ಲಿ ಏಕೆ ಕನ್ನಡದ ಪರ ದ್ವನಿ ಎತ್ತಬಾರದು ಎಂದು ಕೇಳಿದ್ದರೆ ಸಮಂಜಸವಾಗಿರುತ್ತಿತ್ತೇನೊ!

Quote:
೨. ಕ.ರ.ವೇ ಒಂದು ಒಳ್ಳೇ ವಕೀಲರನ್ನ ನೇಮಕ ಮಾಡೋದು ಇದಕ್ಕಾಗಿ ಅಂತಾ, ಸುಪ್ರೀಂ ಕೋರ್ಟ್ ಇದೆ ಮುಂದಿನದನ್ನ ನೋಡಕ್ಕೆ.

ನಿಮಗೆ ಮುಂಚೆಯೇ ವಸಂತ್ ಹೇಳಿದ್ದಾರೆ, ಪುನಹ ನಾನು ಸಹ ಹೇಳುತ್ತೇನೆ - ಕೇಂದ್ರದಲ್ಲಿ ಲಾಬಿ ಮಾಡೊಕ್ಕೆ ೪೦ ಜನ ಶಾಸಕರು ಲಾಲು ಗುಂಪಿನವರು ಇದ್ದಾರೆ. ಕೇಂದ್ರ ಸರ್ಕಾರದ ಕೂದಲಿನ ಕೆಲವು ಎಳೆಗಳು ಲಾಲು ಕೈನಲ್ಲಿ ಇದೆ.

Quote:
ಸುಮ್ಮನೆ ಗಲಾಟೆ ಮಾಡೋದು, ನೇಮಕಾತಿ ಮುಂದಕ್ಕೆ ಹೋಗೋದು ಎಷ್ಟು ತಿಂಗಳಿಂದ ಆಗ್ತಿದೆ ಸಾರ್?

ಈಗ ಮುಂದಕ್ಕೆ ಹೋಗಿಲ್ಲ ಸ್ವಾಮಿ, ಇಲ್ಲಿ ನೋಡಿ.

http://karave.blogsp...

Quote:
ಯಾರಿಗೆ ಉಪಯೋಗ ಆಯ್ತು ಇದರಿಂದ? ಇದರಿಂದ ನಮ್ಮ ರೈಲ್ವೇ ನಿಲ್ದಾಣಗಳಲ್ಲಿ ಆಗುತ್ತಿಲ್ಲವಾ ಅನಾನುಕೂಲ?

ರಾಜ್ಯ ಸರ್ಕಾರದಲ್ಲಿ ಆಗಿರುವ ಬದಲಾವಣೆಗಳನ್ನು ಮುಂದಿನ ದಿನಗಳಲ್ಲಿ ನೋಡಿ, ಆಗ ಯಾರಿಗೆ ಉಪಯೋಗವಾಯಿತು ಎಂದು ತಾನೇತಾನಾಗಿ ತಿಳಿಯುತ್ತದೆ.

Quote:
ಇಲ್ಲಿ ಯಾರು ಎಷ್ಟು ಗಲಾಟೆ ಮಾಡಿದರು, ಹೆಸರು ಮಾಡಿದರು ಮುಖ್ಯ ಅಲ್ಲ, ಕನ್ನಡಿಗರಿಗೆ ಕೆಲ್ಸ ರೈಲ್ವೆ ನಲ್ಲಿ ಸಿಕ್ಕಿದೆಯಾ ಇಲ್ಲವಾ?
ಇದನ್ನ ಕಾನೂನಿನ ಮೂಲಕ ಸರಿಯಾಗಿ ನಡೆಸಿದ್ದರೆ, ಇಷ್ಟು ಹೊತ್ತಿಗೆ ಕನ್ನಡಿಗರು ರೈಲ್ವೆ ನಲ್ಲಿ ಕೆಲಸ ಮಾಡುತ್ತಿದ್ದರು.

ಇದಕ್ಕೆ ಉತ್ತರ

Quote:
ನಿಮಗೆ ಮುಂಚೆಯೇ ವಸಂತ್ ಹೇಳಿದ್ದಾರೆ, ಪುನಹ ನಾನು ಸಹ ಹೇಳುತ್ತೇನೆ - ಕೇಂದ್ರದಲ್ಲಿ ಲಾಬಿ ಮಾಡೊಕ್ಕೆ ೪೦ ಜನ ಶಾಸಕರು ಲಾಲು ಗುಂಪಿನವರು ಇದ್ದಾರೆ. ಕೇಂದ್ರ ಸರ್ಕಾರದ ಕೂದಲಿನ ಕೆಲವು ಎಳೆಗಳು ಲಾಲು ಕೈನಲ್ಲಿ ಇದೆ.

Quote:
ಇದಂತೂ ನನಗೆ ಅರ್ಥ ಆಗಿಲ್ಲ!

ಅಸ್ಸಮಿನಲ್ಲಾಯಿತು, ಕರ್ನಾಟಕದಲ್ಲಾಯಿತು ಈಗ ಮಹರಾಷ್ಟ್ರದಲ್ಲಿ. ಕೇಂದ್ರಕ್ಕೆ ಅರ್ಥ ಆಗಿಲ್ಲ, ಇನ್ನು ನಿಮಗೆ ಅರ್ಥವಾಗ್ದೆ ಇರೋದು ದೊಡ್ಡ ವಿಷಯವಲ್ಲ ಬಿಡಿ.

Quote:
ಕರ್ನಾಟಕದಲ್ಲಿ ಕೆಲಸದ ಅವಕಾಶಗಳಿಗೆ ಬರವಿಲ್ಲ. ಇರುವ ಅವಕಾಶಗಳನ್ನು ನಾವು ಸರಿಯಾಗಿ ಬಳಸಿಕೊಳ್ಳುತ್ತಾ ಇಲ್ಲ...ಇದೇ ಉತ್ತರ!

ರೈಲ್ವೆ ಡಿ ಗೃಪಿನ ಹುದ್ದೆಗಳು ಸಹ, ನೀವು ಹೇಳಿರುವ "ಕರ್ನಾಟಕದಲ್ಲಿ ಕೆಲಸದ ಅವಕಾಶಗಳಿಗೆ ಬರವಿಲ್ಲ" ಎಂಬ ನಂಬಿಕೆಯಲ್ಲಿ ಸೇರಿರುವ ಕಾರಣ, ಇವು ಕನ್ನಡಿಗರಿಗೇ ಸಿಗಬೇಕು ಎಂಬುದು ನಮ್ಮ ಆಂಬೋಣ, ಏನ್ ಅಂತೀರ?

ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...

srinivasps's picture

ಅಲ್ರೀ ನೇಮಕಾತಿ ರದ್ದಾಗಿದೇ ಅಂದ್ರೆ ನಿಮಗೆ ಹೆಮ್ಮೆಯೆ!??

ಸಾರ್ ...ಕರ್ನಾಟಕದಲ್ಲಿ ೪೭೦೦ ಕೆಲಸಗಳ ಬರವೇ...
ಎಲ್ಲಿ ಒಮ್ಮೆ ನಮ್ಮ ಸಾಫ್ಟ್ ವೇರ್ ಕಂಪನಿಗಳನ್ನ ನೋಡೋಣ...
ಸುಮಾರು ೨೦೦೦ ಇರಬಹುದಾ? ಪ್ರತಿ ಕಂಪನಿನಲ್ಲಿ ಸರಾಸರಿ ೪-೫ ಜನ ಸೆಕ್ಯುರಿಟಿ ಗಾರ್ಡ್ ಇದ್ದಾರೆ ಅಂತ ಇಟ್ಟುಕೊಳ್ಳಿ...
ಎಷ್ಟಾಯ್ತು ಲೆಕ್ಕ ಹಾಕಿ.!

ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...

mahesha's picture

ತುಸು ನಿದಾನ..

ಸರಕಾರಿ ಕೆಲಸ ಕಾಸಗಿಯವರಿಗೆ ಕಾವಲುಗಾರನ ಕೆಲಸಕ್ಕೆ ಸಮವಲ್ಲ.

ಅದೂ ಅಲ್ಲದೇ ಸರಕಾರದ ಕೆಲಸ ಪರ್ಮನೆಂಟು. :)

ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...

srinivasps's picture

ತಿಳಿದಿದೆ...ಅವಕಾಶಗಳನ್ನು ಉಪಯೋಗಿಸಿಕೊಳ್ಳುತ್ತಿಲ್ಲ ಎನ್ನುವುದಕ್ಕೆ ಉದಾಹರಣೆ ಇದು..
ಈ ಪರ್ಮನೆಂಟು ಅನ್ನೋದನ್ನ ವಿಚಾರ ಮಾಡ್ತಾ ಇದೇ ಸರ್ಕಾರ...ಗಮನಿಸಿ ನೋಡಿ...

--ಶ್ರೀ

ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...

mahesha's picture

ಭಲಾ! ವಸಂತ ಶೆಟ್ರೇ

ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...

vasant.shetty's picture

ನನ್ನಿ ಮಹೇಶ ಅವರೇ,,

ಇಲ್ಲಿ ಶ್ರೀನಿವಾಸ ಅವರನ್ನು ತಪ್ಪು ಎಂದು ತೋರಿಸುವುದು ನನ್ನ ಉದ್ದೇಶ ಅಲ್ಲ. ನಾಡು-ನುಡಿ ಬಗ್ಗೆ ತುಡಿಯೋ ಮನಸ್ಸುಗಳೇ ಸಂಪದಕ್ಕೆ ಬರೋದು. ಅಲ್ಲಿ ನಾಡಿಗರಿಗಾಗಿ, ನಾಡಿನ ನಾಳೆಗಳಿಗಾಗಿ ನಿಜವಾಗಿಯೂ ಕೆಲಸ ಮಾಡ್ತಿರೋರ ಬಗ್ಗೆ ಕೈಲಾದ ಮಟ್ಟಿಗೆ ಅರಿವು ಮೂಡಿಸಬೇಕು ಅನ್ನೋದು ನನ್ನ ಉದ್ದೇಶ.

ಶ್ರೀ,
no hard feelings sir :)
-
ವಸಂತ

ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...

srinivasps's picture

hard feelings ಇಲ್ಲಾರೀ...
ಈಗಲಾದರೂ ಸರಿಯಾದ ನಿಟ್ಟಿನಲ್ಲಿ ನಮ್ಮ ಆವೇಶ-ಉದ್ವೇಗಗಳನ್ನು ಬಳಸುತ್ತೀವೆಯೇ ಎಂಬುದು ಈಗ ಮುಖ್ಯ.
ಇದರ ಕಾವು ತಣ್ಣಗಾದ ಮೇಲೆ, ಎಂದಿನಂತೆ ಜನ-ಜೀವನ ನಡೆಯುತ್ತಿರತ್ತದೆ.
ಎಲ್ಲರೂ (ಕ.ರ.ವೇ ಒಳಗೊಂಡು) ಮುಂದಿನ ಪ್ರಕ್ರಿಯೆಯವರೆಗೂ ಸುಮ್ಮನೆ ಕೂತರೆ ನಮಗೆ ಮತ್ತೆ ಇದೇ ಗತಿ ಬರಲಿದೆ.
ಪಬ್ಮಿಕ್ ಮೆಮೊರಿ ಇಸ್ ವೆರಿ ಶಾರ್ಟ್ ಅಂತಾರೆ...ಇನ್ನೊಂದು ವಾರ ಹೋಗಲಿ, ಗ್ರೂಪ್ ಡಿ ನು ಇಲ್ಲ ಯಾವುದು ಇಲ್ಲ...ಟೆಸ್ಟ್ ಮ್ಯಾಚ್ ನೋಡ್ತಾ ಕೂರ್ತಾರೆ :(

ಕ.ರ.ವೇ. ಗೆ ಇರುವ ತಾಕತ್ತು-ಬಲದಲ್ಲಿ, ಏನೆಲ್ಲಾ ಮಾಡಬಹುದು!

--ಶ್ರೀ

ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...

vasant.shetty's picture

ನಮ್ಮ ಆವೇಶ-ಉದ್ವೇಗಗಳನ್ನು ಕನ್ನಡಿಗರಲ್ಲಿ ಕನ್ನಡತನದ ಪ್ರಜ್ಞೆ ತರಲು ಬಳಸೋಣ.
ಸ್ವಾಭಿಮಾನಿ ಕನ್ನಡಿಗನ ಮನದಲ್ಲಿ ಕಾವು ಏರೋದು-ಇಳಿಯೋದು ಎಲ್ಲ ಇರಲ್ಲ. ಯಾವತ್ತು ನಾಡಿಗಾಗಿ ಅವನ ಮನದಲ್ಲಿ ತುಡಿತ ಇದ್ದೆ ಇರುತ್ತೆ.

Quote:
ಎಲ್ಲರೂ (ಕ.ರ.ವೇ ಒಳಗೊಂಡು) ಮುಂದಿನ ಪ್ರಕ್ರಿಯೆಯವರೆಗೂ ಸುಮ್ಮನೆ ಕೂತರೆ ನಮಗೆ ಮತ್ತೆ ಇದೇ ಗತಿ ಬರಲಿದೆ.
ಪಬ್ಮಿಕ್ ಮೆಮೊರಿ ಇಸ್ ವೆರಿ ಶಾರ್ಟ್ ಅಂತಾರೆ...ಇನ್ನೊಂದು ವಾರ ಹೋಗಲಿ, ಗ್ರೂಪ್ ಡಿ ನು ಇಲ್ಲ ಯಾವುದು ಇಲ್ಲ...ಟೆಸ್ಟ್ ಮ್ಯಾಚ್ ನೋಡ್ತಾ ಕೂರ್ತಾರೆ

ಬೇರೆಯವರ ಬಗ್ಗೆ ಗೊತ್ತಿಲ್ಲ. ಕರವೇ ಸುಮ್ಮನೆ ಕೂತಿದ್ದು ನಾನಂತೂ ನೋಡಿಲ್ಲ. ರೈಲ್ವೆ ವಿಷಯದಲ್ಲಿ ನೇಮಕಾತಿ ರದ್ದಾಗಿ ಹೊಸ ನೇಮಕಾತಿಯ ಆದೇಶ ಹೊರ ಬಿಳಲಿದೆ. ಅಲ್ಲಿ ಕನ್ನಡಿಗರಿಗೆ ಆದ್ಯತೆ ಕೊಡುವಂತೆ ಒತ್ತಾಯಿಸಿ ಇಲ್ಲಿಯ ರೈಲ್ವೆ ಅಧಿಕಾರಿಗಳೇ ಪತ್ರ ಹಾಕಿರುವುದು ಸಣ್ಣ ವಿಷಯವೆನಲ್ಲ. ಈಗ ಹೊಸ ಆದೇಶ ಹೊರ ಬಂದಾಗ ಏನಾಗುತ್ತೆ ಅಂತಾ ನೋಡಿ ತಾನೆ ಮುಂದಿನ ಹೆಜ್ಜೆ ಇಡೋದು?

Quote:
ಕ.ರ.ವೇ. ಗೆ ಇರುವ ತಾಕತ್ತು-ಬಲದಲ್ಲಿ, ಏನೆಲ್ಲಾ ಮಾಡಬಹುದು!

ಕರವೇ ಅದೆಲ್ಲವನ್ನೂ ಮಾಡುತ್ತಿದೆ. ಆಡಳಿತ ಪಕ್ಷದಲ್ಲಿರುವವರು ಮಾಡಬೇಕಾಗಿರುವ ಕೆಲಸವನ್ನು ಅಧಿಕಾರವಿಲ್ಲದೇ ಮಾಡ್ತಿರೋದ ಏನ್ ಕಮ್ಮಿ ಸಾಧನೆ ಅಲ್ಲ. ಬೆಳಗಾವಿ, ಕಾವೇರಿ, ಕಳಸಾ ಬಂಡೂರಿ, ರೈಲ್ವೆ, ಎಫ್.ಎಮ್, ಹೀಗೆ ಎಲ್ಲ ಹೋರಾಟದಲ್ಲೂ ಜಯ ದೊರಕಿಸಿಕೊಂಡಿರುವುದನ್ನ ತಾವು ಯಾಕೆ ಮರೆತು ಬಿಡ್ತಾ ಇದಿರಾ ಅಂತ. ಪಬ್ಮಿಕ್ ಮೆಮೊರಿ ಇಸ್ ವೆರಿ ಶಾರ್ಟ್ ಹೌದೊ ಅಲ್ವೊ,, ತಮ್ಮ ಮೆಮೊರಿ ಅಂತೂ ಶಾನೆ ಶಾರ್ಟ್ :D

-
ವಸಂತ

ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...

srinivasps's picture

:) ಆಗಲಿ ಶೆಟ್ರೆ, ನಿಮಗೆ ಸಮಾಧಾನವಾಗುವುದಾದಲ್ಲಿ , ನನಗೇ ಅರಳು-ಮರುಳೇ ಇರಲಿ ಬಿಡಿ... :)

ಬೇಗನೆ ಕೆಲಸಗಳು ಕನ್ನಡಿಗನ ಕೈ ಸೇರಿದಲ್ಲಿ ಒಳ್ಳೆಯದು...
ರದ್ದತಿಗಳು, ನೇಮಕಾತಿ ಮುಂದಕ್ಕೆ ಹೋಗುವುದರಿಂದ ಏನು ಉಪಯೊಗವಿಲ್ಲ...
ನೋಡುವ ಏನಾಗುವುದೆಂದು...

--ಶ್ರೀ

ಉ: ರೈಲ್ವೆ ಗ್ರೂಪ್ ಡಿ ನೇಮಕಾತಿ ಬಗ್ಗೆ ನನಗನಿಸಿದ್ದು...

mahesha's picture

ವಸಂತ ಶೆಟ್ರೇ

ತಪ್ಪುಹಾದಿ ತುಳಿಯಹತ್ತಿದ ಗೆಳೆಯನನ್ನು ಸರಿದಾರಿಗೆ ಸಳೆಯುವವನು ಒಳ್ಳೆಯ ಗೆಳೆಯನೇ. ಅದು ಕೆಟ್ಟಕೆಲಸವಲ್ಲ, ಬದಲಿಗೆ ಒಳ್ಳೆಯ ಕೆಲಸವೇ.