19
June
2013

srinivasps ರವರ ಬ್ಲಾಗ್

ಅಂಗಳಕಿಂದು ಬಾರೋ ಕೃಷ್ಣಯ್ಯ...

April 2, 2009 - 10:06am
srinivasps
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಿಮಾಚಲ ಪರ್ಯಟನೆ - ಯಾಕೂ (ಝಾಕೂ) ದೇಗುಲ, ಶಿಮ್ಲಾ

March 30, 2009 - 10:34pm
srinivasps

 



ಶಿಮ್ಲಾ ನಗರದಲ್ಲಿನ ಪೂರ್ವಕ್ಕಿರುವ ಎತ್ತರದ ಬೆಟ್ಟ  - ಝಾಕೂ(ಯಾಕೂ). ಸಮುದ್ರ ಮಟ್ಟದಿಂದ, ಸುಮಾರು ೮೫೦೦ ಅಡಿಗಳ ಮೇಲೆ ಇರುವ ಈ ಬೆಟ್ಟದ ಮೇಲೆ, ಹನುಮಂತನ ದೇಗುಲವೊಂದಿದೆ.
ಈ ದೇಗುಲವನ್ನು ತಲುಪಲು, ಬೆಟ್ಟದ ಬುಡದಿಂದ ೨ ಕಿ.ಮೀ. ಕಡಿದಾದ ದಾರಿ ಇದ್ದು, ಇದನ್ನು ಹತ್ತಿ ತಲುಪಬಹುದು ಇಲ್ಲವೇ ಬೆಟ್ಟಗಳನ್ನು ಸುಲುಭವಾಗಿ ಹತ್ತುವ(೪-wheel drive) ಕಾರಿನಲ್ಲಿ  ತಲುಪಬಹುದು.

ಈ ಝಾಕು ಬೆಟ್ಟಕ್ಕೆ ಹನುಮಂತನು ಭೇಟಿ ಕೊಟ್ಟಿದ್ದನೆಂಬ ಪ್ರತೀತಿ. ಈ ದೇಗುಲದಲ್ಲಿ ಕೆಳಕಂಡ ಇತಿಹಾಸ(ನಂಬಿಕೆ)ಯನ್ನು ದಾಖಲಿಸಿದ್ದಾರೆ:

ರಾಮಾಯಣದಲ್ಲಿ, ಲಕ್ಷ್ಮಣನು ಇಂದ್ರಜಿತುವಿನ ಬಾಣದಿಂದ ಪ್ರಜ್ಞಾಹೀನನಾದಾಗ, ಹನುಮಂತನು ವಾನರ ಸಹಚರರೊಂದಿಗೆ ಹಿಮಾಲಯಕ್ಕೆ ಧಾವಿಸುತ್ತಾನೆ.
ಸಂಜೀವಿನಿಯನ್ನು ಹುಡುಕುತ್ತಾ ಹಿಮಾಲಯದಲ್ಲಿ ಸಂಚರಿಸುತ್ತಿರುವಾಗ, ಝಾಕೂ ಎಂಬ ಋಷಿಯು ಈ ಸ್ಥಳದಲ್ಲಿ ತಪಸ್ಸು ಮಾಡುತ್ತಿರುವುದು ಹನುಮನ ಕಣ್ಣಿಗೆ ಬೀಳುತ್ತದೆ.
ಆಗ ಹನುಮನು ಸಂಜೀವಿನಿ ಗಿಡಮೂಲಿಕೆಯ ಬಗ್ಗೆ ಹೆಚ್ಚು ತಿಳಿಯಲು, ಝಾಕೂ ಋಷಿಯ ಸಹಾಯವನ್ನು ಕೋರುತ್ತಾನೆ.
ಝಾಕೂ ಋಷಿಯು ಸಂಜೀವಿನಿ ಗಿಡಮೂಲಿಕೆಯ ಬಗ್ಗೆ ತಿಳಿಸಿ, ಅದು ದ್ರೋಣ ಪರ್ವತದಲ್ಲಿ ಸಿಗುವುದಾಗಿ ವಿವರಿಸುತ್ತಾನೆ.
’ಸಂಜೀವಿನಿ ಮೂಲಿಕೆ ಸಿಕ್ಕ ಮೇಲೆ, ಈ ಬೆಟ್ಟಕ್ಕೆ ಬಂದು, ತನ್ನನ್ನು ಭೇಟಿ ನೀಡಿ ಲಂಕೆಗೆ ಹೋಗು’ ಎಂದು ಹನುಮನ ಬಳಿ ವಚನ ತೆಗೆದುಕೊಳ್ಳುತ್ತಾನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹೀಗೊಂದು ಅಳಲು...(ಹರಿ ಪ್ರಸಾದ್ ತೆಗೆದ ಕಾರ್ಕಳ ಚಿತ್ರಕ್ಕಾಗಿ ಬರೆದದ್ದು)

February 16, 2009 - 8:00pm
srinivasps

ಇಲ್ಲದಿದ್ದರೂ ಪಟದಲಿ ಎಲ್ಲರಾ ಕವನದಲಿ
ಬೆತ್ತಲ ಮೂರುತಿಗೇ ಮನ್ನಣೆ...
ಅನಂತಾನಂತ ದೂರ
ಬಾನಲಿ ಬತ್ತಿಯಂತುರಿವ
ಕತ್ತಲ ಮೂರುತಿಗೇ ಮನ್ನಣೆ...

ಸನಿಹದಲ್ಲೇ ಇರುವೆ ನಾನು,
ಅನತಿ ದೂರದಲ್ಲೇ...
ಎತ್ತರ ತೆಂಗಿನ ಮರದಷ್ಟಾದರೂ...
ಕವಿಗಳ ನೋಟಕೆ ಬಾರದೇನು ನನ್ನ ಇರವು?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರವಿಯ ನಿಜ ಬಣ್ಣವೇನು???

February 11, 2009 - 10:49am
srinivasps
ನಾನು ನನ್ನ ಗೆಳೆಯನಿಗೆ ಆಗಸ ತೋರಿ ಹೇಳಿದೆ... 'ಅದೋ ನೋಡು, ಸೂರ್ಯನೆಷ್ಟು ಹಳದಿಯಾಗಿ ಹೊಳೆಯುತ್ತಿದ್ದಾನೆ!' ಅವನು ತಲೆ ಎತ್ತದೆಯೇ ಗುಡುಗುತ್ತಾನೆ...'ಸೂರ್ಯ ಹಳದಿಯಲ್ಲ, ಕೇಸರಿ!!!' 'ಅಲ್ಲಿ ನೋಡೋ, ಒಮ್ಮೆ...! ಅದೆಷ್ಟು ಸೊಬಗು ಆ ಹೊಂಬಣ್ಣ...' ಆಗಸ ನೋಡಲು ಮತ್ತದೇ ಉದಾಸೀನ ಅವನಿಗೆ... 'ನಿನಗೆಲ್ಲೋ ತಲೆ ತಿರುಗಿದೆ, ಸೂರ್ಯನೆಂದಾದರು ಹಳದಿಯಾಗುವುದುಂಟೆ...ಅವನೆಂದು ಕೇಸರಿಯೇ...'
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕೇಸರೀಕರಣಕ್ಕೆ ಧಿಕ್ಕಾರ!! ಧಿಕ್ಕಾರ!!

February 10, 2009 - 11:31am
srinivasps
(ಎಳೆ) ರಾಜಕಾರಣಿ: ಕೇಸರೀಕರಣಕ್ಕೆ ಧಿಕ್ಕಾರ!! ಧಿಕ್ಕಾರ!! ಪತ್ರಕರ್ತ: ಯಾವ ವಿಚಾರಕ್ಕಾಗಿ ಧಿಕ್ಕಾರ ಕೂಗುತ್ತಿದ್ದೀರ? ನಿಮ್ಮ ಅನಿಸಿಕೆ ಹಂಚಿಕೊಳ್ಳುವಿರಾ? (ಎಳೆ) ರಾಜಕಾರಣಿ: ಭಾ.ಜ.ಪ ಅಧಿಕಾರಕ್ಕೆ ಬಂದಾಗಿಂದ, ಪ್ರತಿದಿನ ಬೆಳಗ್ಗೆ - ಸಂಜೆ ಸೂರ್ಯನ ಕೇಸರಿ ಬಣ್ಣ ಹೆಚ್ಚಾಗಿ ಕಾಣ್ತಾ ಇದೆ ಅದಕ್ಕೆ! :) --ಶ್ರೀ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - srinivasps ರವರ ಬ್ಲಾಗ್