ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಸಂಪದ ಆರ್ಕೈವಿನಿಂದ

ಲೇಖಕರು

sudhanva's picture

ಪೂರ್ಣ ಹೆಸರು
ಸುಧನ್ವ ದೇಶಪಾಂಡೆ

ಪರಿಚಯ

ಕಂಡು ಅರಿಯದ ಕಲಾವಿದ....

ಮನದೊಳ ಮಾತು...

ಮನಸ್ಸೊಂದು ಹೇಳಿದೆ ಮನದೋಳ ಮಾತನ್ನ
ಮುಗಿಲೆತ್ತರಕೇ ಕೂಗುತಿದೆ ಸಾಕೆಂದು ಜೀವನ
ಸೋರಿ ಹೊಗುತಲಿದೆ ಮನಸಿನ ತಾಣ
ಇನ್ನೇತಕೆ ಈ ಜೀವನ ಸೇರಬೆಕು ಸ್ಮಶಾನ.....

ಕಣ್ಣಿದ್ದು ಕುರುಡುತನ ಮಾಡಬೇಕೆ ಗುಣಗಾನ
ಮನಸ್ಸಿದ್ದು ಮೂಕತನ ಕಾಡತಲಿದೆ ಮೌನ
ಅರ್ಥವಿಲ್ಲದ ಬದುಕಿನಲ್ಲಿ ನಡೆದಿದೆ ನನ್ನ ಪಯಣ
ಇನ್ನೇತಕೆ ಈ ಜೀವನ ಸೇರಬೆಕು ಸ್ಮಶಾನ.....

ಕಲವಿದನು ಎಂಬವ ನಾ, ಕವಿಯಾಗಬಲ್ಲೇನಾ??
ಕವಿತೆಗಳನು ಬಲ್ಲೇನಾ, ಕನಸುಗಳನು ಕಾಣೇನಾ??
ಗಡಿಯಾರದ ಜೀವನಾ ಮುಳ್ಳೇ ಮುಳ್ಳು ಈ ದಿನ
ಇನ್ನೇತಕೆ ಈ ಜೀವನ ಸೇರಬೆಕು ಸ್ಮಶಾನ.....

ಹಾಡನ್ನು ಹಾಡುತ್ತ ನಾ, ಲೋಕ ನಗಿಸಬಲ್ಲೇ ನಾ,
ಕಡೆ ಹಾಕಲಾಗದಿರುವ ಮನದೋಳದ ಬಡತನ
ಕೊನೆ ಆಗಲಿ ಈ ದಿನ, ಮಿತಿಯಿಲ್ಲದೆ ಬದುಕೆನಾ
ಇನ್ನೇತಕೆ ಈ ಜೀವನ ಸೇರಬೆಕು ಸ್ಮಶಾನ.....

ಸೇರಬೆಕು ಸ್ಮಶಾನ..... ಸೇರಬೆಕು ಸ್ಮಶಾನ...

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಮನದೊಳ ಮಾತು...

Harish Athreya's picture

ಆತ್ಮೀಯ
ಒಳ್ಳೆಯ ಕವನ ಮತ್ತು ಪ್ರಯತ್ನ. ಬರಹವನ್ನು ಶುದ್ದಿ ಮಾಡಿ ಚ೦ದ ಕಾಣುತ್ತೆ.
ಸೇರಬೇಕು ಸ್ಮಶಾನ ಎ೦ಬುವ ಋಣಾತ್ಮಕ ಯೋಚನೆ ಒಳ್ಳೆಯದಲ್ಲ
ಹರಿ

ಉ: ಮನದೊಳ ಮಾತು...

asuhegde's picture

ಕಡೆಯಾಗುವುದು ಈ ದಿನ
ನಾಳೆ ಮತ್ತೆ ಹೊಸ ಜೀವನ

ಸೇರಬೇಕು, ಸೇರಲೇ ಬೇಕು ಸ್ಮಶಾನ
ಇಂದಲ್ಲ, ಸಹೃದಯಿ, ಮುಂದೊಂದು ದಿನ

- ಆಸು ಹೆಗ್ಡೆ

ಕಾಗುಣಿತಗಳನ್ನು ದಯವಿಟ್ಟು ಸರಿಪಡಿಸಿ.
ಅರ್ಥ ಅಪಾರ್ಥವಾಗುತ್ತಿವೆ ಕೆಲವೆಡೆ.

ಉ: ಮನದೊಳ ಮಾತು...

kavinagaraj's picture

:-) ದುಗುಡ ಬಿಡು ಗೆಳೆಯ, ಧೃಢವಾಗಿರಿಸು ಹೆಜ್ಜೆಯ!
ವ್ಯಾಕರಣ ದೋಷಗಳನ್ನು ಹೊರತುಪಡಿಸಿದರೆ ಉತ್ತಮ ಕವನ.