ಕಿವಿಯ೦ ದನಿಯೊಳು ಮನವನರ್ಥಧಿ೦
ಭವದರ್ಶನದೊಳು ಬುದ್ದಿಯನು
ನವರಸದಿ೦ ಹ್ಹೃದಯವ ತಣಿಸದ ಕೃತಿ
ಬುವಿಗೆ ತರದು ರಸಬುದ್ದಿಯನು

— - ಪು ತಿ ನ

ನಾನೆಲ್ಲ ಕಲಿತೆಯೆನ್ನಲು ಏನಿದೆ ಲೆಕ್ಕ?
ಕಲಿತದ್ದು ಸಾಸಿವೆಯಷ್ಟು, ಕಲಿಯಬೇಕಾದದ್ದು ಬೆಟ್ಟದಷ್ಟು
ಹೀಗಿರುವಾಗ ಕಲಿಕೆಗೆಲ್ಲಿದೆ ಕೊನೆ?

ದಿನ ದಿನವೂ ಕ್ಷಣ ಕ್ಷಣವೂ ಹೊಸತನ್ನು
ಕಲಿಯಬೇಕೆಂಬ ಹಂಬಲ ಕಾಡುತಿರಲು
ಕಲಿಕೆಗೆಲ್ಲಿದೆ ಕೊನೆ?

ನಿನ್ನೆ ಕಲಿತಿದು ಇಂದಿಗೆ ಹಳಸಲು
ಹೊಸತಿಗೆ ತಲೆಬಾಗು ಇಂದು
ಹೀಗೆ ದಿನ ದಿನವೂ ಹೊಸತಿರಲು ಕಲಿಕೆಗೆಲ್ಲಿದೆ ಕೊನೆ?

ಹೊಸನೀರು ಬರಲು, ಹಳೆನೀರು ತಳ ಸೇರಲು
ಹಳೇ ನೆನಪೇ ಹೊಸ ಹುರುಪಿಗೆ ಕಾರಣ
ಪುರಾತನವ ಮರೆಯದೆ, ಹೊಸತನವ ಕಲಿತು
ನಡೆಯೋಣ ಜಗದೊಳಿತಿನೆಡೆಗೆ.

0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಕಲಿಕೆಗೆಲ್ಲಿದೆ ಕೊನೆ...

savithasr's picture

ಕವನ ಚೆನ್ನಾಗಿದೆ ಸುಧೀಂದ್ರರೆ,
ನಡೆಯೋಣ ನಾವು...ಕೊನೆಯಿಲ್ಲದ ಕಲಿಕೆಯೆಡೆಗೆ..ಕುತೂಹಲದ ಕಿಡಿಯೊಡನೆ..
-ಸವಿತ

ಉ: ಕಲಿಕೆಗೆಲ್ಲಿದೆ ಕೊನೆ...

kannadakanda's picture

ಆದರೆ ನಮ್ಮ ಜೀವನ ಸಣ್ಣದು. ಹಾಗೆಯೇ ಮುದಿತನದಲ್ಲಿ ಕಸುವು ಕಳೆದು ಹೋಗುತ್ತದೆ. ಬುದ್ಧಿ ಮಂಕಾಗುತ್ತದೆ. ದೇಹಕ್ಕೆ ರೋಗ ಅಡರುತ್ತದೆ. ಇಂದ್ರಿಯಗಳು ಕ್ಷೀಣಿಸುತ್ತವೆ. ಅಜ್ಞಾನ ಕತ್ತಲಂತೆ ಅಡ್ಡವಿದೆ. ಇನ್ನೆಲ್ಲಿದೆ ಕಲಿಕೆ? ಮಸಣದ ಕಡೆಗಷ್ಟೇ ದಾರಿ. ಏನಂತೀರಿ? ಆದುದಱಿಂದ ಹಿರಿಯರೆಂದರು,

ಅಜರಾಮರವತ್ ಪ್ರಾಜ್ಞಃ ವಿದ್ಯಾಮರ್ಥಂ ಚ ಸಾಧಯೇತ್
ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್||

ಕಾಯಿಲೆ, ಸಾವು ನಮಗಿಲ್ಲವೇನೋ ಎಂಬಂತೆ ಬುದ್ಧಿವಂತನಾದವನು ವಿದ್ಯೆ ಮತ್ತು ಹಣ ಸಂಪಾದಿಸಬೇಕು. ಮೃತ್ಯು ಆಗಲೆ ನಮ್ಮನ್ನು ತನ್ನ ಪಾಶದಿಂದ ಹಿಡಿದಿದೆಯೆಂದು ಒಳ್ಳೆ ಕೆಲಸ (ಧರ್ಮ) ಮಾಡಬೇಕು.

ಉ: ಕಲಿಕೆಗೆಲ್ಲಿದೆ ಕೊನೆ...

sudhimail's picture

ಪ್ರತಿಕ್ರಿಯೆಗೆ ಧನ್ಯವಾದಗಳು ಅನಂತ್ ಅವರೆ.

Quote:
ಕಾಯಿಲೆ, ಸಾವು ನಮಗಿಲ್ಲವೇನೋ ಎಂಬಂತೆ ಬುದ್ಧಿವಂತನಾದವನು ವಿದ್ಯೆ ಮತ್ತು ಹಣ ಸಂಪಾದಿಸಬೇಕು.

ವಿದ್ಯೆಯನ್ನು ಸಂಪಾದಿಸಬೇಕು ಎನ್ನುವುದು ಕಲಿಕೆಯಲ್ಲವೇ?

ದೇಹಕ್ಕೆ ಮುಪ್ಪುಂಟು, ಆದರೆ ಮನಸ್ಸಿಗೆ ಮುಪ್ಪುಂಟೆ? ಮನಸ್ಸಿದ್ದರೆ ಮಾರ್ಗ ಅಲ್ಲವೇ?

ವಂದನೆಗಳೊಂದಿಗೆ,
ಸುಧೀಂದ್ರ

ಉ: ಕಲಿಕೆಗೆಲ್ಲಿದೆ ಕೊನೆ...

savithasr's picture

ಗೊತ್ತು ಈ ದಿನಕ್ಕೆ,ಜಗಕ್ಕೆ,ಭುವಿಗೆ, ಆಸರೆಗೆ,ಕೊನೆಗೆ ಪ್ರತಿಯೊಂದರ/ಪ್ರತಿಯೊಬ್ಬರ ಅಸ್ತಿತ್ವಕ್ಕೂ ಒಂದು ಕೊನೆಯಿದೆ...ನಿರಾಶೆ ಬೇಡ...ಕಡೆವರೆಗೂ ಚೈತನ್ಯವಿರಲಿ Smiling
-ಸವಿತ

ಉ: ಕಲಿಕೆಗೆಲ್ಲಿದೆ ಕೊನೆ...

sudhimail's picture

ಪ್ರತಿಕ್ರಿಯೆಗೆ ಧನ್ಯವಾದಗಳು.
ಕುತೂಹಲವಿದ್ದರೆ ತಾನೇ ನಾವು ಹೊಸತನ್ನು ಕಲಿಯಲು ಸಾದ್ಯ.

ವಂದನೆಗಳೊಂದಿಗೆ,
ಸುಧೀಂದ್ರ

ಉ: ಕಲಿಕೆಗೆಲ್ಲಿದೆ ಕೊನೆ...

devaru.rbhat's picture

ಜ್ಞಾನ ವಾರಿಧಿ, ಇದನ್ನುತ್ತರಿಸಲು ಸಾಧ್ಯವೇ? ಪ್ರಯತ್ನ ನಮ್ಮದು ಗುರಿಯಡೆಗೆ ದೃಷ್ಟಿ ಇರಲಿ. ಆದರೂ ಸಾಯೋ ವರೆಗೂ ಸಾಮು ಕಲಿತರೆ ಯುದ್ಧ ಮಾಡೋದ್ಯಾವಾಗ? ಅದಕ್ಕೆ earn while learn ಸರಿನಾ?

Syndicate content