ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › sumanajois ರವರ ಬ್ಲಾಗ್

ಸುಮ್ನೆ 1 ಮದ್ವೆ ಬ್ಲಾಗು :)

July 7, 2008 - 7:48pm — sumanajois

hi ಎಲ್ರಿಗೂ..
ಅಂತೂ ಇಂತೂ ಒಂದು ಬ್ಲಾಗ್ ಬರ್ಯೊ ಅಷ್ಟು ಧೈರ್ಯ ಮಾಡಿದೀನಿ... Smiling

ನನ್ ಹಳೆ PM ನಂಗೆ ತುಂಬಾ ಕ್ಲೋಸು... ಕರಿಯರ್, ಜೀವನ... ಎಲ್ಲದ್ರ ಬಗ್ಗೆನು ಫಂಡಾ ಕೊಡ್ತಾ ಇರ್ತಾಳೆ ಯಾವಾಗ್ಲೂ... ನಾನು ಅವ್ಳ್ ದೊಡ್ ಫ್ಯಾನು.. ಹೀಗೆ ನೆನ್ನೆ ನಂ ಆಫೀಸ್ ಫಿಶ್ ಪಾಂಡ್ ಮುಂದೆ ಕೂತ್ಕೊಂಡು ಮಾತಾಡ್ತಾ ಇದ್ವಿ... ಟಾಪಿಕ್ ಮದ್ವೆ... ನನ್ PM 30+, ಇನ್ನೂ ಮದ್ವೆ ಮಾಡ್ಕೊಂಡೆ ಇಲ್ಲ.. ನಾ ಏನಾದ್ರೂ ಮದ್ವೆ ಅಂತ ಶುರು ಮಾಡಿದ್ರೆ, ಇಷ್ಟ್ ಬೇಗ ಮದ್ವೆ ಮಾಡ್ಕೋಬಾರ್ದೂ, ಟ್ರಾವೆಲ್ ಮಾಡು, ಏನಾದ್ರೂ ಆಚೀವ್ ಮಾಡು, ಲೈಫ್ ಸ್ವಲ್ಪ ಎಂಜಾಯ್ ಮಾಡು, ಆಮೇಲೆ ಮದ್ವೆ ಮಾಡ್ಕೋತೀಯಂತೆ ಅಂತ ಹೇಳ್ತಿದ್ದವ್ಳು ಸಡನ್ ಆಗಿ ಮದ್ವೆ ಅಂತ ಹೇಳ್ದಾಗ ನಂಗಂತೂ ಫುಲ್ ಆಶ್ಚರ್ಯ...

ಸರಿ ಮಾತು ಮುಂದುವರೀತು... ಇವತ್ತು ನಂಗೆ ಸಿಕ್ಕ ಫಂಡಾ ಇದು...
ಮದ್ವೆ ಯಾವಾಗ ಮಾಡ್ಕೊಬೇಕು?

1. ನಂಗೆ ಯಾರೋ ತುಂಬಾ ಇಷ್ಟ ಆಗಿ ಆವ್ರನ್ನ ಬಿಟ್ಟು ಇರಕ್ಕೆ ಆಗಲ್ಲ ಅನ್ಸ್ದಾಗ...
2. ಸುತ್ತ ಮುತ್ತಾ ಇರೋರೆಲ್ಲ ಅದೇ ವಿಷ್ಯದ ಬಗ್ಗೆ ಮಾತಾಡ್ತಾ ಇದ್ರೆ ಕೊನೆಗೆ ತಡಿಲಾರ್ದೆ ಯಾರನ್ನಾದ್ರು ಮದ್ವೆ ಮಾಡ್ಕೊಂಡ್ರೆ ಸಾಕು ಅನ್ಸ್ದಾಗ..
3. ನಂಗೆ ಬೇಕಾದಷ್ಟ್ ವರ್ಷ ಬೇಕಾದ ಹಾಗೆ ಇದ್ದು ಇನ್ನು ಸಾಕು ಅರಾಮಾಗಿ ಸೆಟ್ಲ್ ಆಗೋಣ ಅನ್ಸ್ದಾಗ

ಸಕ್ಕತಾಗಿದೆ ಅಲ್ಲ...

ಈಗ ನಂದು ಒಂಥರ 2 ನೇ ಥರ... ಆಕ್ಟುಯಲಿ ನಂಗೆ 1 ಪ್ರಶ್ನೆಗೆ ಉತ್ರ ಬೇಕಿತ್ತು... ಮದ್ವೆ ಮಾಡ್ಕೊಬೇಕು ಅಂದ್ರೆ ಏನೇನೆಲ್ಲಾ ವಿಷ್ಯ ಯೋಚ್ನೆ ಮಾಡ್ಬೇಕು ಅಂತ..

ನಾನು ಒಂದಷ್ಟ್ ಜನ ಹುಡುಗ್ರನ್ನ ನೋಡಿದೀನಿ... ನಮ್ಮನೆ ಬೆಂಗಳೂರಲ್ಲಿ ಇಲ್ಲ, ಯಾರೋ ರಿಲೇಟಿವ್ ಮನೇಲಿ ಇಂಟರ್‌ವ್ಯೂ... ಕೆಲವು ಸಲ ನಂಗೆ ಕೊನೇಪಕ್ಷ ಹುಡ್ಗನ್ ಹೆಸ್ರು ಕೂಡ ಗೊತ್ತಿರಲ್ಲ... ಎಲ್ಲಿ ಕೆಲ್ಸಾ ಮಾಡ್ತಾನ ಅಂತ ಮಾತ್ರ ಗೊತ್ತು.. ಹುಡ್ಗನ್ ಅಪ್ಪ ಅಮ್ಮ ಒಳ್ಳೆವ್ರಂತೆ, ಫ್ಯಾಮಿಲಿ ಒಳ್ಳೇದಂತೆ... ಅರ್ಧ ಗಂಟೆ ಮಾತಾಡ್ಸಿ ಆಮೇಲೆ ನಿರ್ಧಾರ ಹೇಳು ಅಂದ್ರೆ ಹೇಗ್ ಸಾಧ್ಯ!! ಕರ್ಮ ಕಾಂಡ... ಯಾರಾದ್ರೂ ಮದ್ವೆ ಮಾಡ್ಕೊನ್ಡಿರೋರು ಒಂದಷ್ಟು ಐಡಿಯಾ ಕೊಡ್ತೀರಾ ಪ್ಲೀಸ್....

~.~
  • sumanajois ರವರ ಬ್ಲಾಗ್
  • Login or register to post comments
  • 827 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 8, 2008 - 12:37am — kalpana

ಉ: ಸುಮ್ನೆ 1 ಮದ್ವೆ ಬ್ಲಾಗು :)

kalpana's picture

ಸುಮನ ಅವರೆ,
ನೋಡಿ, ಈ ಮದ್ವೆ ವಿಷಯದಲ್ಲಿ ನಾನು ಬಹಳ ರಿಸರ್ಚ್ ಮಾಡ್ವಿಟ್ಟಿದ್ದೀನಿ Smiling ಯಾಕೆ ಕೆಲವು ಮದುವೆಗಳು ಉಳಿಯತ್ತೆ, ಕೆಲವು ಮುರಿದು ಬೀಳುತ್ತೆ? ಇದು ತಿಳಿದುಕೊಳ್ಳೋದಿಕ್ಕೆ ಮದುವೆಯ ಮೂಲಕ್ಕೆ ಹೋಗಬೇಕು, ಅಂದರೆ, ಮದುವೆ ಜೀವನಪರ್ಯಂತ ಉಳಿಯಲು ಎಂತಹ ವ್ಯಕ್ತಿಯನ್ನು ನೀವು ಮದುವೆಯಾಗಬೇಕು? ಈ ಪ್ರಶ್ನೆಗೆ ಉತ್ತರ ಹುಡುಕಬೇಕು.

೧. ನೋಡಿದ ತಕ್ಷಣ ನಿಮಗೆ, ಹುಡುಗ ಪರ್ವಾಗಿಲ್ಲ, ಚೆನ್ನಾಗಿದ್ದಾನೆ ಅನ್ನಿಸಬೇಕು, ಅಂದರೆ ಒಂದು ತರಹ instant attraction ಇರಬೇಕು. ಎದ್ದು ಕಾಣುವಂತಹ ಯಾವುದೇ negative characteristics ಇರಬಾರದು, ಅಂದರೆ, ನಿಮ್ಮ ಕಣ್ಣಿನಲ್ಲಿ negative ಯಾವುದೋ ಅದು.

೨. ಹುಡುಗ ಒಳ್ಳೆಯ ಉದ್ಯೋಗದಲ್ಲಿದ್ದು ಬದುಕಿನಲ್ಲಿ ಉತ್ಸಾಹ ಹೊಂದಿರಬೇಕು, ಅಂದರೆ, financially stable ಆಗಿರಬೇಕು.

೩. ನಿಮ್ಮ ಅಭಿರುಚಿಗಳು ಅವನ ಅಭಿರುಚಿಗಳ ಜೊತೆ ಹೊಂದಿಕೆಯಾಗಬೇಕು, ಅಂದರೆ ೫೦% ಆದರೂ ಒಂದೇ ಇರಬೇಕು. ಇಲ್ಲದಿದ್ದರೆ ಮುಂದೆ ಬಹಳ ಜಗಳ ಬರುತ್ತೆ. ಈ ಅಭಿರುಚಿಗಳು, ಚಿಕ್ಕ ವಿಷಯ(ಉದಾ:ಸಂಗೀತ, ಪುಸ್ತಕ ಪ್ರೇಮ)ಗಳಿಂದ ಹಿಡಿದು ದೊಡ್ಡ ವಿಷಯ(ಉದಾ:ಸಂಸಾರ, ಮಕ್ಕಳು, ಕೆಟ್ಟ ಚಟ)ಗಳ ತನಕ ನೋಡಬೇಕು. ಮುಖ್ಯ ನಿಮ್ಮ ಅಭಿರುಚಿಗಳ ಬಗ್ಗೆ ನಿಮಗೆ ಆಳವಾಗಿ ಗೊತ್ತಿರಬೇಕು, ಯಾವು ಅಭಿರುಚಿಯನ್ನು ನೀವು ಅವನಿಗಾಗಿ ಬಿಡಲು ಅಥವ ಬದಲಾಯಿಸಲು ತಯಾರಿದ್ದೀರ?

೪. ತಂದೆ, ತಾಯಿ, ಮನೆಯವರ ಜೊತೆ ಆತನ ಸಂಬಂಧ ಹೇಗಿದೆಯೆನ್ನುವುದೂ ನೋಡಬೇಕು. ತಾಯಿ, ಅಕ್ಕ, ತಂಗಿಯರನ್ನು ಆದರಿಸುವವನು ಹೆಂಡತಿಯನ್ನೂ ಮುಂದೆ ಗೌರವದಿಂದ ಕಾಣುತ್ತಾನೆ ಎನ್ನುವ ನಂಬಿಕೆ ಇದೆ. ಇದು ಸುಮಾರು ನಿಜ.

ಸಧ್ಯಕ್ಕೆ ಇಷ್ಟು ಉಪದೇಶ ಸಾಕು ಅನ್ನಿಸುತ್ತೆ Smiling ಇನ್ನೂ ಬೇಕಾದ್ರೆ ಕೇಳಿ, ಕೊಡಲು ನಾನು everready!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 9:51am — pachhu2002

ಉ: ಸುಮ್ನೆ 1 ಮದ್ವೆ ಬ್ಲಾಗು :)

pachhu2002's picture

ಸುಮನ ಅವರೇ, ನೀವು ಹೇಳೋದು ಸತ್ಯ, ಕೇವಲ ಅರ್ಧಾಘಂಟೆನಲ್ಲಿ ಯಾವುದೇ ವ್ಯಕ್ತಿನ ಅಥವಾ ಅವರ ವ್ಯಕ್ತಿತ್ವವನ್ನ ಪರಿಶೀಲಿಸೋದಕ್ಕೆ ಆಗೋದಿಲ್ಲ. ಇನ್ನು ಕಲ್ಪನ ಅವರು ಹೇಳಿದಂತೆ ಕೆಲವು ವಿಚಾರದಲ್ಲಿ ನೀವು ಗಮನ ನೀಡಬೇಕಾಗತ್ತೆ,

ಆದ್ರೆ ಅದೆಲ್ಲಾ ತಿಳ್ಕೊಂಡಿರ್ಬೇಕಾದ್ರೆ ನಮಗೆ ಹುಡುಗ ಅಥವಾ ಹುಡುಗಿಯನ್ನು ಚೆನ್ನಾಗಿ ತಿಳಿದಿರುವ ಯಾವುದಾದರೂ ವ್ಯಕ್ತಿಯ ಪರಿಚಯ ಮುಕ್ಯ. ಇಲ್ಲ ಅಂದ್ರೆ ಕೆಲವು ತಿಂಗಳು ಕಾಲಾವಕಾಶ ಬೇಕೇ ಬೇಕು.... ಏನು ಸರಿ ತಾನೆ ನಾನು ಹೇಳಿದ್ದು ???

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 6:52pm — sumanajois

ಉ: ಸುಮ್ನೆ 1 ಮದ್ವೆ ಬ್ಲಾಗು :)

sumanajois's picture

ಹೌದು... ಕಾಲಾವಕಾಶ ಬೇಕು... ಹಾಗಂತ 3 ತಿಂಗಳು ಮಾತಾಡಿ ಆಮೇಲೆ ಇಲ್ಲ ಅಂದ್ರೆ ಹೇಗಿರತ್ತೆ? ಎಲ್ಲಾ ಗೋಳೆ... ಕಲ್ಪನಾ ಆವ್ರು ಹೇಳಿದ್ ಥರಾ instant feelings work ಆದ್ರೆ ಚೆನ್ನಾಗಿರತ್ತೆ... Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 11:34pm — kalpana

ಉ: ಸುಮ್ನೆ 1 ಮದ್ವೆ ಬ್ಲಾಗು :)

kalpana's picture

ಸುಮನ ಅವರೆ,
ಮೂರು ತಿಂಗಳು ಮಾತಾಡಿ ಹುಡುಗ ಸರಿಯಿಲ್ಲ ಅನ್ನುವುದು, ಮದುವೆಯ ನಂತರ ಮೂರು ತಿಂಗಳು ಕಚ್ಚಾಡಿ ಆಮೇಲೆ ಡೈವೋರ್ಸು ಅನ್ನುವುದಕ್ಕಿಂತ ಮೇಲು ಅಲ್ಲವೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 10:12am — keerthi2kiran

ಉ: ಸುಮ್ನೆ 1 ಮದ್ವೆ ಬ್ಲಾಗು :)

keerthi2kiran's picture

ನನ್ನ ಪ್ರಕಾರ ಇವೆಲ್ಲಕಿಂತ ಮುಖ್ಯ ಹೊಂದಿಕೊಂಡು ಹೋಗೋ ಮನೋಭಾವ. ನಮ್ಮಮ್ಮ ಅಪ್ಪ ಇಬ್ಬರ ಅಭಿರುಚಿಗಳು, ನಂಬಿಕೆಗಳು ಪೂರ್ತಿ ಬೇರೆ ಬೇರೆ. ಆದರೂ ಒಬ್ಬರನ್ನೊಬ್ಬರು ಬಿಟ್ಟುಕೊಡೋದಿಲ್ಲ. ಜಗಳ ಆಡಿದರೂ ಅದನ್ನೇ ಮುಂದುವರಿಸೋದಿಲ್ಲ. ಮುಖ್ಯವಾಗಿ ಒಬ್ಬರಿಗೆ ಕೋಪ ಬಂದಾಗ ಇನ್ನೊಬ್ಬರು ಶಾಂತವಾಗಿರುತ್ತಾರೆ. ನನ್ನ ಪ್ರಕಾರ ಬೇರೆಯವರ ಜೊತೆ compare ಮಾಡುವ ಬದಲು ನಮಗೆ ಸಿಕ್ಕ ಸಂಗಾತಿಯನ್ನು ಅರ್ಥ ಮಾಡಿಕೊಂಡು ತಾಳ್ಮೆಯಿಂದ ಹೊಂದಿಕೊಂಡು ಹೋದರೆ ಇಬ್ಬರೂ ಸಂತೋಷವಾಗಿರಬಹುದು.
ಕೀರ್ತಿ ಕಿರಣ್ ಎಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 10:43am — keerthi2kiran

ಉ: ಸುಮ್ನೆ 1 ಮದ್ವೆ ಬ್ಲಾಗು :)

keerthi2kiran's picture

ಈಗ ಯಾರೋ ನೋಡಕ್ಕೆ ಚನ್ನಾಗಿರೋ ಒಳ್ಳೇ ಕೆಲಸದಲ್ಲಿರೋ ಹುಡುಗಾನೇ ಸಿಗಬಹುದು ಅಂದ್ಕೋ. ನೀನು ಆ ಕಾರಣಗಳಿಗೇ ಅವನನ್ನ ಮದುವೆ ಆದ್ರೆ, ನಾಳೆ ಹೇಗಿರತ್ತೆ ಯಾರಿಗೆ ಗೊತ್ತು? ಅವನು ಮುದುಕ ಆಗ್ತಾನೆ. ತಲೆ ಮೇಲಿರೋ ಕೂದಲ್ಲೆಲ್ಲ ಉದುರಿ ಹೋಗತ್ತೆ. ತಿಂದೂ ತಿಂದೂ ಊದ್ಕೋಬಹುದು. ಅಮೆರಿಕದಲ್ಲೆ ರಿಸೆಶನ್ ಅಗಿ ಹೈಕ್ ಕಡಿಮೆ ಆಗಬಹುದು. ಆಗ ಏನ್ ಮಾಡ್ತಿಯಾ? ಅದಿಕ್ಕೆ ನನಗನಿಸೋದು ಸಿಕ್ಕಿದ ಹುಡುಗ ಹೇಗೇ ಇರ್ಲಿ. adjust ಮಾಡ್ಕೊಳೋದು ಮುಖ್ಯ ಅಂತ. it is just my opinion.
ಕೀರ್ತಿ ಕಿರಣ್ ಎಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 6:48pm — sumanajois

ಉ: ಸುಮ್ನೆ 1 ಮದ್ವೆ ಬ್ಲಾಗು :)

sumanajois's picture

ಉಫ್ಫ್... ನಿನ್ ಹೆಂಡ್ತಿ ಆಗೋಳು ಲಕ್ಕಿ ಕಣೋ... Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 11:56pm — kalpana

ಉ: ಸುಮ್ನೆ 1 ಮದ್ವೆ ಬ್ಲಾಗು :)

kalpana's picture

ಕೀರ್ತಿ ಯವರೆ,
ಹಳೇ ಕಾಲದಲ್ಲಿ ವಿಧಿಯಿರಲಿಲ್ಲ, ಅದಕ್ಕೆ ಅಡ್ಜಸ್ಟ್ ಮಾಡ್ಕೊಂಡು ಇದ್ಬಿಡೋವ್ರು. ಹಾಗಂತ, ನಾವು ನಮ್ಮ ಜೀವನವೆಲ್ಲ ಇಷ್ಟವಿಲ್ಲದವರ ಜೊತೆ ಅಡ್ಜಸ್ಟ್ ಮಾಡ್ಕೋಬೇಕೂಂದ್ರೆ ಹೇಗೆ ಹೇಳಿ? ಇದು ನಮ್ಮ ಭಾವನೆಗಳಿಗೆ ನಾವೇ ಜೀವನಪರ್ಯಂತ ಮೋಸ ಮಾಡ್ಕೊಂಡ ಹಾಗೆ ಆಗೊಲ್ವ?

ನಾನು ಬರೀ ಕೆಲಸದ ಬಗ್ಗೆ ಅಥವ looks ಬಗ್ಗೆ ಹೇಳಿಲ್ಲ. Minimum requirements match ಆಗ್ಬೇಕು ಅಂತ ಹೇಳ್ದೆ ಅಷ್ಟೆ. ನಿಮ್ಮ minimum requirements zero ಇರಬಹುದು. ಹಾಗಿದ್ರೆ ಸರಿ, ಏನೂ ನೋಡ್ಬೇಕಾಗೊಲ್ಲ. (ಆದರೂ ನನ್ನದೊಂದು ಪ್ರಶ್ನೆ. ನಿಮಗೆ outdoors, trekking ಇಷ್ಟ ಇದ್ದ ಹಾಗಿದೆ. ಸಿಗುವ ಹುಡುಗಿ nature-hater ಆದ್ರೆ ಹಾಗೇ adjust ಮಾಡ್ಕೊಂಡು ಮನೇಲಿರ್ತೀರ? Smiling ಇದು ನಿಮ್ಮ ಕನಸುಗಳ ಬಲಿ ಕೊಟ್ಟ ಹಾಗಲ್ವ?)

ಜೀವನದಲ್ಲಿ ಮುಂದೇನು ಆಗುತ್ತೆ ಅಂತ ಯಾರಿಗೂ ಗೊತ್ತಿಲ್ಲ. ಆದರೆ, ಮದುವೆ ವಿಷಯದಲ್ಲಿ complete risk ತೊಗೊಳ್ಳೋದು ಒಳ್ಳೆದಲ್ಲ, calculated risk ತೊಗೋಬೇಕು.

~ಕಲ್ಪನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 10, 2008 - 10:40am — kusuma_a

ಉ: ಸುಮ್ನೆ 1 ಮದ್ವೆ ಬ್ಲಾಗು :)

kusuma_a's picture

ಮಗನೆ , ನಾನು ಇಲ್ಲೆ ಇದ್ಡೀನಿ, ಹುಶಾರ್ ಯಾರಾದರು ಹಾರಿಸಿಕೊಂಡು ಹೋದಾರು, ಏನೋ ಹೇಳಲು ಹೋಗಿ ನೀನೆ ಹಳ್ಳಕ್ಕೆ ಬೀಳಬೇಡ
-ಕೀರ್ತಿಯ ಅಮ್ಮ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 10, 2008 - 1:37pm — sumanajois

ಉ: ಸುಮ್ನೆ 1 ಮದ್ವೆ ಬ್ಲಾಗು :)

sumanajois's picture

ಹುಶಾರು ಕಣೋ ಕೀರ್ತಿ... Eye-wink ದಾರೀಲಿ ಕಣ್ ಬಿಟ್ಕೊoಡು ನಡಿ... Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 10, 2008 - 5:25pm — ಸಂಗನಗೌಡ

ಉ: ಸುಮ್ನೆ 1 ಮದ್ವೆ ಬ್ಲಾಗು :)

ಸಂಗನಗೌಡ's picture

ಇದು ಚೆನ್ನಾಗಿದೆ... ಸಂಪದ ಮದುಮಕ್ಕಳ ವೇದಿಕೆ ಆಗುವಂತೆ ತೋರುತ್ತಿದೆ..

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 6:54pm — sumanajois

ಉ: ಸುಮ್ನೆ 1 ಮದ್ವೆ ಬ್ಲಾಗು :)

sumanajois's picture

Smiling sure sure... next time ಹುಡ್ಗನ್ ನೋಡ್ದಾಗ ಖಂಡಿತ ನಿಮ್ಮನ್ನೇ ಕೇಳ್ತೀನಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 12:56pm — shashikannada

ಉ: ಸುಮ್ನೆ 1 ಮದ್ವೆ ಬ್ಲಾಗು :)

shashikannada's picture

ಪ್ರಿಯರೇ,

ನಮಸ್ಕಾರ. ಮೊದಲನೆಯದಾಗಿ ಸಂಪದ ಕುಟುಂಬಕ್ಕೆ ನಿಮಗೆ ಸ್ವಾಗತ. ನಿಮ್ಮ ಬ್ಲಾಗ್ ನಂಗೆ ಜನಾನೇ ಇಲ್ದೆ 25 ವಾರ ಓಡಿದ ಪಿಕ್ಚರ್ ಥರಾ ಕಾಣ್ಸುತ್ತೆ. ಈಗಲಾದ್ರೂ ಒಂದು ಒಳ್ಳೆ ವಿಚಾರದ ಬಗ್ಗೆ ಬರೆದಿದ್ದೀರಿ. ವೆರಿ ಗುಡ್.

ಇಲ್ಲಿ ನೀವು ಸೇರಿಸಿರೋ ಪಾಯಿಂಟುಗಳ ಜತೆ ಇನ್ನಷ್ಟು ಸೇರಿಸಬಹುದು. ಆದರೆ, ಅದು ಸುಮ್ಮನೆ ಇರೋ ಗೊಂದಲವನ್ನ ಮತ್ತಷ್ಟು ಹೆಚ್ಚಿಸುತ್ತೆ ಅಷ್ಟೆ. ನಂಗೂ ಮದ್ವೆ ವಯಸ್ಸಾಗಿದೆ. ನನ್ನನ್ನೂ ಎಲ್ರೂ ಇದೇ ಪ್ರಶ್ನೆ ಕೇಳ್ತಾ ಇರ್ತಾರೆ. ನನ್ನ ಪುಣ್ಯಕ್ಕೆ ನಂಗೆ ಮದ್ವೆಯಾಗಬೇಕಿರೋ ತಂಗಿ ಇದ್ದಾಳೆ. ಎಲ್ಲದಕ್ಕಿಂತ ಹೆಚ್ಚಾಗಿ ಹುಡುಗ. ಇಲ್ಲಾ ಅಂದಿದ್ರೆ...ನನ್ನ ಕತೆ! ಮದ್ವೆ ವಯಸ್ಸಿಗೆ ಬಂದಿರೋ ಎಲ್ಲಾ ಸೂಕ್ಷ್ಮ ಮನಸ್ಸುಗಳಿಗೂ ಇರೋ ಹಾಗೆ ಏನೋ ಒಂಥರಾ ಭಯ, ಗೊಂದಲ, ಡೈಲೆಮ್ಮ.

ಇರಲಿ, ನಾನು ಎಷ್ಟೋ ಜನ ಹುಡುಗಿಯರನ್ನ ನೋಡಿದ್ದೀನಿ. ಹೆಚ್ಚಿನವರು ಹತ್ತರಲ್ಲಿ ಒಬ್ಬರು ಅನ್ನೋ ಹಾಗೆ ತುಂಬಾ ಸುಲಭ ಅನ್ಸೋ ದಾರಿಗಳನ್ನ ಹುಡುಕ್ಕೋತ್ತಾರೆ. ಇನ್ನು ಕೆಲವರು ತುಂಬಾ ಸೆನ್ಸಿಬಲ್ ಅನ್ನಿಸ್ತಾರೆ.ಒಳ್ಳೇ ಆಯ್ಕೆ ಮಾಡೋರು ತುಂಬಾ ಅಪರೂಪ.

ಆದರೆ, ಎಲ್ಲಾ ಚಟಗಳನ್ನ ಮೈಗೆ ಅಂಟಿಸಿಕೊಂಡಿರೋ, ಬದುಕಿನಲ್ಲಿ ಗಂಭೀರವಾಗಿರದ, flirt ಹುಡುಗರ ಆಕರ್ಷಣೆಗೆ ಒಳಗಾಗಿ ಎಡವಟ್ಟು ಮಾಡ್ಕೋತಾರೆ. ಅದನ್ನ ನಾನು ಪ್ರತ್ಯಕ್ಷ ಕಂಡಿದ್ದೇನೆ. ಅದೆ ಯಾವುದೋ ಚಟಗಳಿರದ, ಹೆಣ್ಣಿನ ಅಪ್ಪನ ಬ್ಯಾಂಕ್ ಬ್ಯಾಲೆನ್ಸ್ ನೋಡದೆ, ಅವಳ ಕೆಲಸ, ಸಂಬಳ ನೋಡದೆ, ಸರಳವಾದ ಮದ್ವೆ ಬಯಸೋ, ವರದಕ್ಷಿಣೆ, ದುಂದು ಮುಂತಾದವುಗಳಿಂದ ದೂರವಿರೋ, ಜಾತಿ ಧರ್ಮಗಳಿಗೆ ಬೆಲೆ ಕೊಡದ, ಬದುಕಿನಲ್ಲಿ ಗಂಭೀರವಾಗಿರುವ, ಮಾನವೀಯ ಸಂಬಂಧಗಳಿಗೆ ಬೆಲೆ ಕೊಡುವ ಒಂದು ಮಿಡಿವ ನಿಷ್ಕಲ್ಮಶ ಹೃದಯಕ್ಕಾಗಿ ಹಾತೊರೆವ ಹುಡುಗರ ಹತ್ರ ಯಾವ ಹುಡ್ಗೀನೂ ಸುಳಿಯೋದಿಲ್ಲ. ಎಲ್ಲಾ(ಹುಡುಗರೂ, ಹುಡುಗಿಯರೂ) ಯಾಕೆ comfort zone ಬಯಸ್ತಾರೆ ಅಂಥ ಅರ್ಥಾನೆ ಆಗೊಲ್ಲ. ಯಾಕೆ ಹೆಚ್ಚಿನ ಜನ ನಡೆಯದ ಹಾದಿಯಲ್ಲಿ(The Road Not Taken) ನಡೆಯಲು ಯಾರೂ ಬಯಸೋಲ್ಲ! ಇಂಥ ಗೊಂದಲಗಳಿಂದಾಗಿಯೇ ನಂಗೂ ಮದ್ವೆ ಅಂದ್ರೆ ಭಯವಾಗುತ್ತೆ. ಅಷ್ಟು ಯೋಚ್ಸಿದ್ರೆ ಮದ್ವೇನೆ ಆಗೋಕಾಗೊಲ್ಲ ಅಂತಾನೆ ಏನೋ ಯಾರೂ ಹಾಗೆ ಯೋಚಿಸೋಕೆ ಹೋಗೊಲ್ಲ. ಅದಕ್ಕೇ ಏನೋ ಫಿಲಾಸಫರ್ ಗಳ್ಯಾರೂ ಮದ್ವೆ ಆಗೊಲ್ಲ.

ಒಂದೇ ಮಾತಲ್ಲಿ ಹೇಳೋದಾದ್ರೆ, ನಮ್ಮ ವಚನಕಾರರು ಹೇಳಿದ ಹಾಗೆ, "ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ" ಅಂತ ಮಾತ್ರ ಹೇಳ್ಬೋದು.

ಇರಲಿ, ನಿಮಗಾದ್ರೂ ನಿಮ್ಮಿಂದ ಭಾವನಾತ್ಮಕವಾದದ್ದು ಬಿಟ್ಟು, materialistic ಆಗಿ ಇರೋ ಅಂಥದ್ದನ್ನು ಏನೂ ಬಯಸದ, ಸೆನ್ಸಿಬಲ್ ಬಾಳಸಂಗಾತಿ ಸಿಗಲಿ ಅಂತ ಹಾರೈಸ್ತೇನೆ. ಹಾಗೇನಾದ್ರೂ ನನ್ನ ಹಾರೈಕೆ ನಿಜವಾದ್ರೆ ತಪ್ಪದೆ ಮದ್ವೆಗೆ ಕರೀತೀರಲ್ವ?

ನಿಮಗೆ ಎಲ್ಲವೂ ಒಳ್ಳೆಯದಾಗಲಿ. ಹೆಚ್ಚೆಚ್ಚು ಬರೆಯಿರಿ. ಪ್ರತಿಕ್ರಿಯೆ ತುಂಬಾ ದೊಡ್ಡದಿದೆ ದಯವಿಟ್ಟು ಕ್ಷಮಿಸಿ.

ಸಿರಿಗನ್ನಡಂ ಗೆಲ್ಗೆ

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ
ಜಾಲತಾಣ: http://vishwamanava.mywebdunia.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 6:44pm — sumanajois

ಉ: ಸುಮ್ನೆ 1 ಮದ್ವೆ ಬ್ಲಾಗು :)

sumanajois's picture

ಮೊದಲ್ನೆದಾಗಿ ಥ್ಯಾಂಕ್ಸ್.. ಆದ್ರೆ ನಾ ಸಂಪದಕ್ಕೆ ಹೊಸಬ್ಳೇನು ಅಲ್ಲ.. ಬರಿ ಕಾಮೆಂಟ್ಸ್ ಬರೀತಾ ಇದ್ದೆ, ನಾನೇ ಸ್ವಂತ ಬರಯೋ ಅಷ್ಟು ಧೈರ್ಯ ಮಾಡಿರ್ಲಿಲ್ಲ ಅಷ್ಟೇ..
ಜನಾನೇ ಇಲ್ದೇ 25 ವಾರನಾ... ಏನು ಹಂಗಂದ್ರೆ? ಅಷ್ಟೊಂದ್ ಕೆಟ್ದಾಗಿದೆ ಬ್ಲಾಗ್ ಅಂತನಾ? Eye-wink
ತುಂಬಾ ಯೋಚ್ನೆ ಮಾಡ್ತಾ ಕೂತ್ರೆ ಮದ್ವೆ ಆಗೋದು ಕಷ್ಟ.. ಒಪ್ಕೋತೀನಿ.. ನನ್ PMಬಗ್ಗೆ ಹೇಳ್ತಿದ್ನಲ್ಲ, ಇಷ್ಟು ವರ್ಷ
ತನ್ನದೇ ಆದ ವ್ಯಕ್ತಿತ್ವ ರೂಪಿಸ್‌ಕೊಂಡು ಈಗ ಬೇರೆ ಅವ್ರಿಗೋಸ್ಕರ ಅದನ್ನೆಲ್ಲ ಬಿಟ್ಟು ಅಡ್ಜಸ್ಟ್ ಮಾಡ್ಕೊಳೋದು ಕಷ್ಟ ಅಂತ ಅವ್ಳ್ ವಾದ.. ಏನೇ ಇರ್‍ಲಿ ರಿಪ್ಲೈ ಮಾಡಿದ್ದಕ್ಕೆ ಥ್ಯಾಂಕ್ಸ್..

ನಾ ಮದ್ವೆ ಆದ್ರೆ ಖಂಡಿತ ಕರೀತೀನಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 9, 2008 - 4:20pm — shashikannada

ಉ: ಸುಮ್ನೆ 1 ಮದ್ವೆ ಬ್ಲಾಗು :)

shashikannada's picture

ನಮಸ್ಕಾರ. 25 ವಾರ....ಹಾಗಂದ್ರೆ, ನೀವು ಸಂಪದ ಸದಸ್ಯರಾಗಿ 25 ವಾರದ ಮೇಲಾಗಿದೆ ಅಲ್ವ. ಇಷ್ಟು ವಾರವಾದ್ರೂ ನಿಮ್ಮ ಖಾತೇಲಿ ಏನೂ ಇಲ್ವಲ್ಲ, ಅದಕ್ಕೆ ಹಾಗೇಳಿದೆ ಅಷ್ಟೆ. ಅರ್ಥ ಆಯ್ತಾ?

ಇನ್ನು ನಿಮ್ಮ ಪಿಎಂ ಹೇಳೋದ್ರಲ್ಲಿ ಒಂಚೂರು ಅರ್ಥ ಇದೆ. ಹಾಗಂತ ಪ್ರಪಂಚದಲ್ಲಿ ಎಲ್ಲರೂ ಒಂದೇ ಥರದ ಗುಣದವ್ರೆ ಮದ್ವೆ ಆಗಿಲ್ಲ ಅಲ್ವ? ಆಸಕ್ತಿ, ಅಭಿರುಚಿ ವಿಚಾರಗಳಲ್ಲಿ ಪರಸ್ಪರ ವಿರುದ್ಧವಾಗಿರೋ ಎಷ್ಟೋ ಮಂದಿ ಒಳ್ಳೆಯ ಜೀವನ ಸಂಗಾತಿಗಳಾಗಿ ಬಾಳ್ವೆ ನಡೆಸ್ತಿದ್ದಾರೆ. ಎಲ್ಲರೂ ಹೇಳೋ ಹಾಗೆ ಈ compromise ಅನ್ನೋದ್ರಲ್ಲಿ ನನಗಂತೂ ನಂಬಿಕೆ ಇಲ್ಲ. ಎಲ್ಲರೂ ಎಲ್ಲವನ್ನೂ compromise ಮಾಡ್ಕೊಳ್ಳೋಕೆ ಆಗೊಲ್ಲ. ಅಂತಹ ಸಂದರ್ಭದಲ್ಲಿ ಸಂಬಂಧ ಕೆಡಬಹುದಲ್ವ?

ಜಿಎಸ್ ಶಿವರುದ್ರಪ್ಪನವರ "ಪ್ರೀತಿಯಿಲ್ಲದ ಮೇಲೆ" ಪದ್ಯದಲ್ಲಿ ಹೇಳಿರುವ ಹಾಗೆ, ಬರೀ ಪದಕ್ಕೆ ಪದ ಸೇರಿದ ಮಾತ್ರಕ್ಕೆ ಅರ್ಥವಾದೀತು ಹೇಗೆ? ಬೇಂದ್ರೆಯವರ "ಒಲವೇ ನಮ್ಮ ಬದುಕು" ಪದ್ಯದಲ್ಲಿ ಹೇಳಿರುವ ಹಾಗೆ, ಕುವೆಂಪುರವರ "ಯಾವ ಜನ್ಮದ ಮೈತ್ರಿ" , ಕೆಎಸ್ ನರಸಿಂಹಸ್ವಾಮಿಯವರ ಬಹುತೇಕ ಪದ್ಯಗಳಲ್ಲಿರುವ ಹಾಗೆ "ಪ್ರೀತಿ"ಯೊಂದಿದ್ದಲ್ಲಿ ಎಲ್ಲ ಲೋಪ ದೋಷಗಳು ಲೆಕ್ಕಕ್ಕೆ ಬರುವುದಿಲ್ಲ. ಯಾಕಂದ್ರೆ, ಪ್ರೀತಿ ಅನ್ನೋದು ಬುದ್ಧಿ ಭಾವದಾಚೆಯದ್ದು. ಉದಾ: ಶ್ರೀರಾಮಕೃಷ್ಣರು ಹಾಗೂ ಶ್ರೀಶಾರದಾದೇವಿಯವರ ಪ್ರೀತಿ. ಪ್ರೀತಿಯಿಲ್ಲದೆಯೂ ದಾಂಪತ್ಯ ನಡೆಸಬಹುದು ಅನ್ನೋದನ್ನ ಎಷ್ಟೋ ದಂಪತಿಗಳು ತೋರಿಸಿಕೊಟ್ಟಿದ್ದಾರೆ. ಆದ್ರೆ, ಅಂತಹ ಜೀವನ ಬದುಕಿದ್ದೂ ಸತ್ತ ಹಾಗೆ. ಅದರ ಬದಲು, ಒಂಟಿಯಿರೋದೆ ಎಷ್ಟೋ ವಾಸಿ. ಫ್ರಾನ್ಜ್ ಕಾಫ್ಕ ಅನ್ನೋ ಜರ್ಮನ್ ಲೇಖಕ್ ಹೇಳಿದ ಹಾಗೆ, . “If marriage has many pains, celibacy has few joys”.

ತುಂಬಾ ಉದ್ದವಾದ ಪ್ರತಿಕ್ರಿಯೆ ಬರೆದಿರೋದಕ್ಕೆ ಕ್ಷಮೆಯಿರಲಿ.

ಸಿರಿಗನ್ನಡಂ ಗೆಲ್ಗೆ

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ

ಜಾಲತಾಣ: http://vishwamanava.mywebdunia.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 2:54pm — abhilash.shastri

ಉ: ಸುಮ್ನೆ 1 ಮದ್ವೆ ಬ್ಲಾಗು :)

abhilash.shastri's picture

ನಿನ್ನಜ್ಜಿ ಸುಮನ

ನೀನು ನನ್ ಫ್ರೆಂಡ್ ಆಗಿದ್ದಕ್ಕೆ ಸಜೆಶನ್ ತಗೊಳೊ. ನಿನ್ನಜ್ಜಿ ಬ್ಲಾಗ್ ನಲ್ಲಿ ಬ್ಲೇಡ್ ಹಾಕಿದ್ದು ಸಾಕಾಯ್ತು. ನಿನ್ನ್ ಬ್ಲೇಡ್ ಮೇಲೆ ಅದು ಬೇರೆಯವರ ಬ್ಲೇಡ್ ಬೇರೆ ಕರ್ಮ...... ಸೋ ನೀನ್ ಅನಲೈಸ್ ಮಾಡು ಹುಡಗನ್ನ. ಯಾರ್ ಓಪಿನಿಯನ್ ಕೂಡ ವರ್ಕ್ ಆಗೋಲ್ಲ.. ಲೈಫ್ ನಲ್ಲಿ ಯೂಸ್ ಆಗೋಲ್ಲ.... ನಿನ್ನ್ ಲೈಫ್ ನಿಂದು.... ಕೊನೆ ನಲ್ಲಿ ನೀನ್ ಹೇಗ್ ಅನಲೈಸ್ ಮಾಡ್ತೀಯ ಅದು ಇಂಪೋರ್‌ಟೆಂಟ್ ಯಾಕನ್ದ್ರೆ ನೀನು ಜೀವನ ಪರ್ಯಂತ ಆ ಹುಡಗನ್ ಜೊತೆ ಇರೋದು. ಸೋ ಬೇರೆ ಅವರ ಒಪೀನಿಯನ್ ಅಂಡ್ ಬ್ಲೇಡ್ ನ ಬಿಡು ಅನ್ಡ್ ಸ್ವಂತ ಡಿಸಿಶನ್ ತಗೋ... ಲೈಫ್ ನಲ್ಲಿ ಸ್ವಂತ ಡಿಸಿಶನ್ ತಗೊಳೋದು ಇಂಪೋರ್‌ಟೆಂಟ್... ನಿನ್ ಕೈಲಿ ಆಗಲ್ಲ ಅಂದ್ರೆ ಮದ್ವೆ ಮಾಡ್ಕೋಬೇಡ..

ಎಂಜಾಯ್ ಮಾಡಿ......
ಎಂಜಾಯ್ ಹುಡುಗ ಸರ್ಚಿಂಗ್

ಬೇರೆ ಅವರಿಗೆ ಬೇಜಾರ್ ಆಯ್ತು ಅಂದ್ರೆ ನಾನು ಸಾರಿ... ಜಸ್ಟ್ ಮೈ ಓಪಿನಿಯನ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 6:28pm — sumanajois

ಉ: ಸುಮ್ನೆ 1 ಮದ್ವೆ ಬ್ಲಾಗು :)

sumanajois's picture

ಒಪೀನಿಯನ್ ಕೆಳೋದ್ರಲ್ಲಿ ಏನು ತಪ್ಪಿಲ್ಲ ಮಗಾ... ಕೊನೆಗೆ ನಿರ್ಧಾರ ನಂದಿದ್ರೆ ಸರಿ ಅಷ್ಟೇ ಅಲ್ವಾ.. Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 5:26pm — ಸಂಗನಗೌಡ

ಉ: ಸುಮ್ನೆ 1 ಮದ್ವೆ ಬ್ಲಾಗು :)

ಸಂಗನಗೌಡ's picture

Smiling
ಕಾಕತಾಳೀಯ ಅಂದ್ರೇ ಇವತ್ತು ಇದೇ ವಿಚಾರದ ಮೇಲೆ ನನ್ನ ಗೆಳೆಯರ ಗುಂಪಲ್ಲಿ full swingನಲ್ಲಿ ಡಿಸ್ಕಶನ್ ನಡೀತಿದೆ. ಒಬ್ಬೊಬ್ಬರಿಂದ ಒಂದೊಂದು ತರದ ಅನಿಸಿಕೆಗಳು. ಕೆಲ ಫನ್ನಿ ಮತ್ತು ಸೀರಿಯಸ್ ಅನಿಸಿಕೆಗಳು ಇಂತಿವೆ.
ಯಾವಾಗ ಮದುವೆ ಆಗಬೇಕು?

೧) ಜನ ನಿಮ್ಮನ್ನು, ’ಎಸ್ಟು ಮಕ್ಕಳು??’ ಅಂತ ಕೇಳತೊಡಗಿದಾಗ.
೨) ಬಿಟ್ಟಿ flat ಇಲ್ಲವೇ ಕಾರೊಂದನು ಗಿಟ್ಟಿಸಿಕೊಳ್ಳಬೇಕೆನಿಸಿದಾಗ.
೩) ಎನ್.ಆರ್.ಐ ಹುಡುಗಿಯೊಬ್ಬಳು ಧರೆಗಿಳಿದು ಬಂದು ನಿಮ್ಮನ್ನು ಪ್ರೋಪೋಸ್ ಮಾಡುವಳೆಂಬ ಕನಸು ಮುರಿದು ಬಿದ್ದಾಗ.
೪) ನಿಮ್ಮ ಗೆಳೆಯರ ಮಕ್ಕಳು ನಿಮ್ಮ ಸುತ್ತ ಸುಳಿಯತೊಡಗಿದಾಗ.
೫) ನಿಮ್ಮ ಕ್ರಷ್ ಬಂದು ನಿಮ್ಮ ಪಕ್ಕದ ಮನೆಯಲ್ಲಿ ಇರತೊಡಗಿ, ಆಕೆಯ ಮಕ್ಕಳು ನಿಮ್ಮನ್ನು ’ಮಾಮ’ ಎನ್ನತೊಡಗಿದಾಗ.
೬) ೨೩ ರಿಂದ ೨೮ನೇ ವಯಸ್ಸಿನ ಒಳಗೆ.
೬) ನಿಮ್ಮ ಉಳಿದ ಬದುಕನ್ನು ಕಳೆಯಲು ಸಂಗಾತಿಯೊಬ್ಬಳು ಬೇಕೆನಿಸತೊಡಗಿದಾಗ.
೬) ನಿಮ್ಮ ಸುತ್ತಲಿನವರು/ನೆಂಟರು ಒತ್ತಾಯ ಮಾಡತೊಡಗಿದಾಗ.
೭) ಒಂಟಿ ಒಂಟಿಯಾಗಿರುವದು ಬೋರ್ ಅನಿಸತೊಡಗಿದಾಗ.
Cool financially ನೀವು ಬಲ ಹೊಂದಿದವರಾಗಿದ್ದೀರಿ ಅನಿಸಿದಾಗ.

ಇನ್ನು, ಮದುವೆಗೆ ಸರಿಯಾದ ಜೋಡಿಯನ್ನು ಹೇಗೆ ಕಂಡುಕೊಳ್ಳುವದು?

೧) ಒಂದು ಜೋಡಿಯನ್ನು ಹುಡುಕಿಕೊಳ್ಳುವದು, ಅವಳ(ನ)ನ್ನೇ ಸರಿ ಜೋಡಿ ಮಾಡಿಕೊಳ್ಳುವದು.

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 6:24pm — sumanajois

ಉ: ಸುಮ್ನೆ 1 ಮದ್ವೆ ಬ್ಲಾಗು :)

sumanajois's picture

umm... ಇದು BB ಅಲ್ಲಿ ನಡೆದ ಡಿಸ್ಕಶನ್ ತಾನೇ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 8, 2008 - 6:55pm — ಸಂಗನಗೌಡ

ಉ: ಸುಮ್ನೆ 1 ಮದ್ವೆ ಬ್ಲಾಗು :)

ಸಂಗನಗೌಡ's picture

ಎಗ್ಜಾಕ್ಟಲಿ.... Smiling
ಅಲ್ಲಿ ನಿಮ್ಮ ಯಾವುದೇ ರಿಪ್ಲೈ ಕಾಣಲಿಲ್ಲ....

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 9, 2008 - 12:56am — Rajeshwari

ಉ: ಸುಮ್ನೆ 1 ಮದ್ವೆ ಬ್ಲಾಗು :)

Rajeshwari's picture

ಅರ್ಧ ಘಂಟೆ ಮಾತನಾಡಿದ್ರೆ ಅವರ ಬಗ್ಗೆ ಅಲ್ಲ ಯಾರ ಬಗ್ಗೆನು ತಿಳಿದುಕೊಳ್ಳೋಕೆ ಆಗೋಲ್ಲ. ಅವರ ಬಗ್ಗೆ ಅರಿಯಲು ಕನಿಷ್ಟ ೬ ತಿಂಗಳಾದ್ರು ಬೇಕು.

ಇದು ಜೀವನದ ಪ್ರಶ್ನೆ. ನಿಮ್ಮ ಅಭಿಪ್ರಾಯಕ್ಕೆ, ಆಸೆ, ಆಕಾಂಕ್ಷೆಗಳಿಗೆ ಸ್ವಲ್ಪನಾದ್ರು ಸ್ಪಂದಿಸುವಂತಿರಬೇಕು. ಅವುಗಳ ಬಗ್ಗೆ ವಿರೋಧ ಇದ್ರೆ ಅವರೊಡನೆ ಜೀವಿಸುವುದು ಕಷ್ಟವಾಗುತ್ತೆ. ಇಬ್ಬರಿಗು ಹೊಂದಿಕೊಂಡು ಇರುವ ಗುಣ ಇದ್ದರೆ ಮುಂದಿನ ಜೀವನ ಚೆನ್ನಾಗಿರುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 9, 2008 - 5:41pm — veena

ಉ: ಸುಮ್ನೆ 1 ಮದ್ವೆ ಬ್ಲಾಗು :)

veena's picture

veena.

ಮದುವೆ ಅನ್ನುವುದೊಂದು ಜೂಜು/ಲಾಟರಿ ಇದ್ದ ಹಾಗೆ. ಅದೃಷ್ಟ ಇದ್ದರೆ ನಮಗೆ ಒಳ್ಳೆಯ ಸಂಗಾತಿ ಸಿಗುತ್ತಾರೆ. ಎಷ್ಟೋ ಕಡೆ ೫-೬ ವರ್ಷ ಪ್ರೇಮಿಗಳಾಗಿದ್ದು ಮದುವೆಯಾದವರು, ಸೋದರಮಾವ/ಸೋದರತ್ತೆಯ ಮಕ್ಕಳನ್ನು ಮದುವೆಯಾದವರು (ಅವರ ಸ್ವಭಾವ ಮೊದಲಿನಿಂದ ತಿಳಿದಿರುತ್ತದೆ) ಮದುವೆಯ ನಂತರ ಡೈವೋರ್ಸ್ ನೀಡಿರುವುದನ್ನು ನಾವು ನೋಡುತ್ತೇವೆ. ಯಾವುದೇ ಒಬ್ಬ ವ್ಯಕ್ತಿಯ ಗುಣ ಸ್ಬಭಾವಗಳು ಹೊರಗಿನವರಿಗೆ ಹಿಡಿಸಿದರೂ, ಅವರು ಗಂಡ/ಹೆಂಡತಿಯಾಗಿ ಯಶಸ್ವಿಯಾಗದೆ ಇರಬಹುದು. ಸಂಗಾತಿಯ ಆಯ್ಕೆ ಮಾರುಕಟ್ಟೆಯಲ್ಲಿ ನಾವು ತೆಗೆದುಕೊಳ್ಳುವ ಸೀರೆ/ಬಟ್ಟೆಯಂತೆ ಅಳೆದು ಸುರಿದು ನಡೆಯುವುದಂತಲ್ಲ. ಅದಕ್ಕೇ ಹೇಳುವುದು ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ. ನಮ್ಮ ಹಣೆಯಲ್ಲಿ ಬರೆದಂತೆ ನಮಗೆ ಸಂಗಾತಿ ಸಿಗುವುದು. ಇದರಲ್ಲಿ ಮನುಷ್ಯ ಪ್ರಯತ್ನ ನಗಣ್ಯ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 10, 2008 - 7:38pm — Guruprasadkr

ಉ: ಸುಮ್ನೆ 1 ಮದ್ವೆ ಬ್ಲಾಗು :)

Guruprasadkr's picture

ವೀಣಾರವರೇ,
ಪ್ರಯತ್ನ ಪಟ್ಟಾರೆ ನಮಗೆ ಸರಿ ಹೊಂದುವ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಭಾಹುದು, , ನೀವು ಹೇಳಿದ ಹಾಗೆ, (ಯಾವುದೇ ಒಬ್ಬ ವ್ಯಕ್ತಿಯ ಗುಣ ಸ್ಬಭಾವಗಳು ಹೊರಗಿನವರಿಗೆ ಹಿಡಿಸಿದರೂ, ಅವರು ಗಂಡ/ಹೆಂಡತಿಯಾಗಿ ಯಶಸ್ವಿಯಾಗದೆ ಇರಬಹುದು) ಇದು ಎಲ್ಲರಿಗೂ ಅನ್ವಯಿಸುವುದಿಲ್ಲ ಮತ್ತೆ ಇದಕ್ಕೆ ಬೇರೆ ಕಾರಣಗಳು ಇರಬಹುದು. but ಇಗಿನ gneration ನಲ್ಲಿ, relationship, bonding,ಗೆ ವ್ಯಾಲ್ಯೂ ಇಲ್ಲ ಅಂತ ಕಾಣುತ್ತೆ, ಎಲ್ಲರೂ ಡಿಪ್ಲೊಮ್ಯಾಟಿಕ್ ಆಗಿ ಯೋಚನೆ ಮಾಡುವ ಹಾಗಿದೆ, ಅದೇ ಕಾರಣಕ್ಕೆ ತುಂಬಾ ಡೈವೋರ್ಸ್ ಪ್ರಕರಣಗಳು ನೆಡಿತ ಇರೋದು,
ಆದರೂ ಒಳ್ಳೇ understanding, trust, faithfullness ಇಬ್ಬರಲ್ಲೂ ಇದ್ದ್ರೆ, ಚೆನ್ನಾಗಿ ಜೀವನ ಮಾಡುವುದು ಕಸ್ಟ ಅಲ್ಲ ಅಂತ ನನ್ನ ಭಾವನೆ.

ಗುರುಪ್ರಸಾದ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುಟ್ಟಾ ಪುಟ್ಟಿ ಜೋಕು
  • ಗಣೇಶ್, ನಿಮಗೆ ಸಂಪದೀಯರೆಲ್ಲರ ಪರವಾಗಿ, "ಹಾರ್ದಿಕ ಅಭಿನಂದನೆಗಳು." ಸ್ವೀಕರಿಸಿ !
  • ಓ ದೊರೆಯೇ ಪತ್ರ ಓದಲು ನಾ ಒಲ್ಲೆ...
  • ನಿಜಜೀವನದಲ್ಲಿ ಹಾಸ್ಯ: ಮೊನ್ನೆ ತಾನೇ ....
  • ಚಿಂಟು: ನಂಗೆ ಇಷ್ಟ ಆಗದೇ ಇರೋದು!
Syndicate content

ಲೇಖಕರು

sumanajois's picture

ಪೂರ್ಣ ಹೆಸರು
ಸುಮನಾ

ಪರಿಚಯ

ನನ್ನೂರು ಶಿವಮೊಗ್ಗ. ಸಧ್ಯಕ್ಕೆ ಬೆಂಗಳೂರು. ಸಾಫ್ಟ್‌ವೇರ್ ಇಂಜಿನಿಯರ್. ಕನ್ನಡ ಕಥೆ ಪುಸ್ತಕ ಓದೋದು ಅಂದ್ರೆ ನಂಗೆ ಪಂಚಪ್ರಾಣ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 5:15pm
  • srivathsajoshi
    ಉ: ಬಾಲ್ಯದ ನೆನಪುಗಳು
    September 8, 2008 - 5:05pm
  • sandeepkn
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 4:59pm
  • omshivaprakash
    ಉ: ಬಿಗುಮಾನದ ಚಿತ್ರಗಳು
    September 8, 2008 - 4:45pm
  • Shashikanth. Birge
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:41pm
  • pramodc84
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 4:28pm
  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
  • girish.rajanal
    ಉ: ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
    September 8, 2008 - 3:32pm
  • kannadakanda
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 3:26pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 3:14pm
ಇನ್ನಷ್ಟು
ಈಗಿನಂತೆ 15 ಸದಸ್ಯರು ಮತ್ತು 141 ಅತಿಥಿಗಳು ಆನ್ಲೈನ್ ಇರುವರು.


ನಿನ್ನ ಮನಸ್ಸನ್ನಾಳು, ಇಲ್ಲದಿದ್ದರೆ ಅದು ನಿನ್ನನ್ನಾಳೀತು.

— ಹೋರೇಸ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator