SUmUಕತೆ : ಭಾಗ - ೬

SUmUಕತೆ : ಭಾಗ - ೬

SUmUಕತೆ: ಭಾಗ - ೫ ಲಿಂಕ್ :- http://sampada.net/blog/sumu%E0%B2%95%E0%B2%A4%E0%B3%86-%E0%B2%AD%E0%B2%BE%E0%B2%97-%E0%B3%AB/27-5-2013/40986

SUmUಕತೆ: ಭಾಗ - ಲಿಂಕ್ :- http://sampada.net/b...

SUmUಕತೆ: ಭಾಗ - ಲಿಂಕ್ :- http://sampada.net/b...

SUmUಕತೆ: ಭಾಗ - ೨ ಲಿಂಕ್ :- http://sampada.net/blog/sumu%E0%B2%95%E0%B2%A4%E0%B3%86-%E0%B2%AD%E0%B2%...

SUmUಕತೆ: ಭಾಗ - ೧ ಲಿಂಕ್ :- http://sampada.net/blog/sumu%E0%B2%95%E0%B2%A4%E0%B3%86-%E0%B2%AD%E0%B2%...

 

ಕಾರು ಮನೆ ಮುಂದೆ ಬಂದು ನಿಂತಿತು. ಮನೆ ಬೇಗ ಹಾಕಿರುವುದನ್ನು ನೋಡಿದ ಅತ್ತೆ ನನ್ನ ಕಡೆ ತಿರುಗಿ ಏನೋ ಹೇಳುವುದರೊಳಗಾಗಿ ನಾನೇ, ಅಂಕಲ್ ಇವತ್ತು ಸ್ವಲ್ಪ ಲೇಟ್ ಆಗತ್ತಂತೆ ಬರದು, ಆಗ್ಲೇ ರಮೇಶ ಅವರು ಫೋನ್ ಮಾಡಿದಾಗ ಹೇಳಿದ್ದರು ಎಂದೆ. ಆಮೇಲೆ ನಾನೇ ಹೋಗಿ ಸೌಮ್ಯ ಆಂಟಿ ಮನೆಯಿಂದ ಬೀಗದ ಕೀ ಇಸ್ಕೊಂಡುಬಂದೆ. ಅವರ ಮನೆಗೆ ಹೋದಾಗ ಸೌಮ್ಯ ಆಂಟಿಗೆ ಸರಸು ಅತ್ತೆಗೆ ಏನೂ ಹೇಳಬೇಡಿ ಎಂದು ಸೂಕ್ಷ್ಮವಾಗಿ ತಿಳಿಸಿಬಂದೆ. ಬೀಗ ತೆಗೆದು ಮನೆ ಒಳಗೆ ಹೋದವನೇ ಅತ್ತೆಗೆ ಬಿಸಿ ಬಿಸಿ ಕಾಫಿ ಮಾಡಲು ಹೇಳಿ, ಸಂಯುಕ್ತಾಳಿಗೆ ಫ್ರೆಶ್ ಆಗು, ಎಲ್ಲೋ ಹೋಗೋದಿದೆ ಎಂದು ತಿಳಿಸಿ ನಾನು ಮುಖ ತೊಳೆದು ಸೋಫಾ ಮೇಲೆ ನಿಟ್ಟುಸಿರು ಬಿಡುತ್ತಾ ಕೂತೆ. ಹಾಗೆ ಕೂತ ಕ್ಷಣವೇ ಏನೋ ಹೊಳೆದಂತಾಗಿ ಎದ್ದೆ. ಅತ್ತೆ ಅಡುಗೆಮನೆಯಲ್ಲಿ ಕಾಫಿ ಮಾಡುತ್ತಿದ್ದರು. ಸಂಯುಕ್ತಾ ಬಚ್ಚಲು ಮನೆಯಲ್ಲಿದ್ದಳು. ಯಾರು ನನ್ನನ್ನು ನೋಡುತ್ತಿಲ್ಲವೆಂಬುದನ್ನು ಖಾತ್ರಿ ಮಾಡಿಕೊಂಡು TV ಹತ್ತಿರ ಹೋಗಿ, ಸೆಟ್ ಟಾಪ್ ಬಾಕ್ಸ್ ಯಿಂದ TVಗೆ ಕನೆಕ್ಟ್ ಆಗಿದ್ದ ೩ ಕೇಬಲ್ ಗಳಲ್ಲಿ ಎರಡನ್ನು ಲೂಸ್ ಕನೆಕ್ಟ್ ಮಾಡಿದೆ. TV ON ಮಾಡಿ No Signal ಬರುವುದನ್ನು ನೋಡಿದೆ.

ನಾನು ಸೋಫಾ ಮೇಲೆ ಕೂತೆ. ಅತ್ತೆ ಬಿಸಿ ಬಿಸಿ ಕಾಫಿ ತಂದರು. ಸಂಯುಕ್ತಾಳು ಬಂದಳು. ಮೂರು ಜನ ಕಾಫಿ ಕುಡಿತಾ ಕೂತಿದ್ದೆವು, ಅಷ್ಟರಲ್ಲಿ ಸೌಮ್ಯ ಆಂಟಿ ಬಂದರು. ಅತ್ತೆ ಅವರಿಗೆ ಚಿನ್ನದ ಪದಕ, ಸರ್ಟಿಫಿಕೇಟು ತೋರಿಸೋದಕ್ಕೆ ಬ್ಯಾಗ್ ತೊಗೊಂಡು ರೂಮಿಗೆ ಹೋದರು. ನಾನು ಕಾಫಿ ಕುಡಿದು, ಅತ್ತೆ ರಾತ್ರಿ ಇಲ್ಲಿಗೆ ಊಟಕ್ಕೆ ಬರ್ತೀನಿ, ತಿಳಿ ಸಾರು ಅನ್ನ ಸಾಕು, ಬೇರೇನೂ ಮಾಡಬೇಡಿ, ಈಗ ನಾನು ಸಂಯು ಸ್ವಲ್ಪ ಹೊರಹೋಗಿ ಬರ್ತೀವಿ ಎಂದು ಹೇಳಿ, ಗಾಡಿ ತೆಗೆದು ಅವಳನ್ನು ಹತ್ತಿಸಿಕೊಂಡು ಬನ್ನೇರುಘಟ್ಟ  ರಸ್ತೆಯ ಕಡೆ ಹೊರಟೆ. ದಾರಿಯಲ್ಲಿ ಸಂಯುಕ್ತಾ ಎಲ್ಲಿಗೆ ಎಲ್ಲಿಗೆ ಎಂದು ಎಷ್ಟು ಬಾರಿ ಕೇಳಿದರೂ, ಈಗ ಅಲ್ಲಿಗೆ ಹೋಗ್ತಿದೀವಲ ಗೊತ್ತಾಗತ್ತೆ ಬಾ ಅಂದು, ಸೀದಾ ಹೋಗಿ ಫೋರ್ಟಿಸ್ ಆಸ್ಪತ್ರೆಯ ಬಳಿ ಗಾಡಿ ನಿಲ್ಲಿಸಿದೆ. ಯಾಕೋ ಇಲ್ಲಿಗ್ ಕರ್ಕೊಂಡು ಬಂದೆ ಅಂತ ಸಂಯುಕ್ತಾ ಒಂದೇ ಸಮನೆ ಪೀಡುಸುತ್ತಿದ್ದಳು, ನಾನು ರಮೇಶ ಅವರಿಗೆ ಕರೆ ಮಾಡಿದೆ. ಅವರು 3rd ಫ್ಲೋರ್ ICU ಹತ್ತಿರ ಬರೋದಕ್ಕೆ ತಿಳಿಸಿದರು.

ನನ್ನನ್ನು ನೋಡುತ್ತಿದ್ದಂತೆ ರಮೇಶ, ಹತ್ರ ಬಂದು, ನೋಡಪ್ಪ ನಾನು ಈಗಲೇ ಹೊರಡಬೇಕು. ಸಾಹೇಬರು ಕಾಲ್ ಮಾಡಿದ್ದರು. ಅಗೋ ಅಲ್ಲಿ ನಿಂತಿದ್ದಾರಲ್ಲ ಅವರೇ ಅಂಕಲ್ ನ ನೋಡುತ್ತಿರೋ ಡಾಕ್ಟರ್. ಡಾಕ್ಟರ್. ರಾಘವೇಂದ್ರ, ಅಲ್ಲಿ ಅವರ ಪಕ್ಕ ನಿಂತಿರೋರು ನರ್ಸ್, ಈಗ ಕಂಡಿಶನ್ ಪರವಾಗಿಲ್ಲ, ಚೇತರಿಕೆ ಕಾಣ್ತಿದೆ, ಪ್ರಾಣಕ್ಕೇನೂ ಅಪಾಯವಿಲ್ಲ ಅಂತ ಹೇಳಿದಾರೆ. ಏನಾದ್ರೂ ಹೆಲ್ಪ್ ಬೇಕಾದ್ರೆ ಕಾಲ್ ಮಾಡು, ನಾನು ಹೊರಡುತ್ತೀನಿ, ಜೋಪಾನ ಕಣಮ್ಮ ಅಂತ ಹೇಳಿ ಹೊರಟರು. ಏನ್ ನಡೀತಿದೆ ಅಂತ ಗೊತ್ತಾಗದೆ  ಕಂಗಾಲಾಗಿದ್ದ ಸಂಯುಕ್ತಾಳಿಗೆ ಬೆಳಗ್ಗೆ ರಮೇಶ ಕಾಲ್ ಮಾಡಿದಾಗಿನಿಂದ ನಡೆದಿದ್ದನ್ನು ವಿವರಿಸಿದೆ.

ಬೆಳಗ್ಗೆ ನೀನು ಮೆಡಲ್ ಸ್ವೀಕರಿಸಿದನ್ನು ಕ್ಲಿಕ್ಕಿಸಿದ ಮರುಕ್ಷಣವೇ ನನಗೊಂದು ಕರೆ ಬಂತು, ರಮೇಶ ಅಂಕಲ್ ಮಾಡಿದ್ದರು. ಇವತ್ತು ಬೆಳಗ್ಗೆ ಮಲ್ಲೇಶ್ವರದಲ್ಲಿ ಭಯೋದ್ಪಾದಕರು ಬಾಂಬ್ ಸ್ಪೋಟ ಮಾಡಿದ್ದಾರೆ. ಸುಮಾರು ೮-೧೦ ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಫ್ಯಾಕ್ಟರಿ ಹೊರಗಡೆ ಕಾಫಿ ಕುಡಿಯಲು ಪೆಟ್ಟಿ ಅಂಗಡಿಗೆ ಬಂದಿದ್ದರಂತೆ ಅಂಕಲ್. ಅವರಿಗೂ ತೀವ್ರ ಪೆಟ್ಟಾಗಿದೆ. ಪೆಟ್ಟಿ ಅಂಗಡಿಯ ಎದುರಿಗಿದ್ದ ಮರದ ಕೆಳಗೆ ನಿಲ್ಲಿಸಿದ್ದ ಬೈಕನ್ನೇ ಭಯೋದ್ಪಾದಕರು ಸ್ಪೋಟ ಮಾಡಿದ್ದಾರೆ. ಅದೃಷ್ಟ ಚೆನ್ನಾಗಿತ್ತು, ಯಾವಾಗಲೂ ಕಾಫಿ ಕುಡಿಯಲು ಮರದ ಕೆಳಗೆ ಹೋಗುತ್ತಿದ್ದ ಅಂಕಲ್ ಇವತ್ತು ಮಾತನಾಡಲು ಯಾರೋ ಸಿಕ್ಕಿದರೆಂದು ಅಲ್ಲೇ ನಿಂತರಂತೆ.

ಅಪ್ಪ... ಅಪ್ಪನಿಗೆನೂ ಆಗಿಲ್ಲ ತಾನೇ? ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದು ಕೂತಳು ಸಂಯುಕ್ತಾ.

ಅಂಕಲ್ ಬೈಕಿಗೆ ವಿರುದ್ದವಾಗಿ ನಿಂತಿದ್ದರಿಂದ ಬೆನ್ನಿಗೆ, ಕುತ್ತಿಗೆಗೆ, ಕಾಲಿಗೆ ಪೆಟ್ಟಾಗಿದೆಯಂತೆ. ಸ್ಪೋಟಗೊಂಡ ಮರುಕ್ಷಣ ಜನ ಚೆಲ್ಲಾಪಿಲ್ಲಿಯಾಗಿ ಓಡಿಹೋಗಿದ್ದಾರೆ. ಗಾಯಗೊಂಡವರು ಏಳೊದಿಕ್ಕೆ ಆಗದೆ ಅಲ್ಲೇ ಬಿದ್ದು ಒದ್ದಾಡಿದ್ದಾರೆ, ಅದರಲ್ಲಿ ಅಂಕಲ್ ಕೂಡ ಒಬ್ಬರು. ಸುಮಾರು ೧೫-೨೦ ನಿಮಿಷ ಕಳೆದ ಮೇಲೆ ಅಂಬುಲೆನ್ಸ್ ಬಂದಿದೆ. ಅಷ್ಟರಲ್ಲಿ ವಿಪರೀತವಾದ ನೋವಿನಿಂದ ಬಳಲಿದ್ದರು ಜೊತೆಗೆ ರಕ್ತ ಕೂಡ ಹೋಗಿತ್ತು , ಅಂಕಲ್ ಪ್ರಜ್ಞೆ ತಪ್ಪಿ ಬಿದ್ದಿದ್ದರಂತೆ. ಅವರನ್ನು ತಕ್ಷಣವೇ ಮಲ್ಲೇಶ್ವರಂನ KC ಆಸ್ಪತ್ರೆಗೆ ದಾಖಲಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕೆತ್ಸೆ ಹೇಗಿರತ್ತೆ ಗೊತ್ತಲ? ಯಾರು ಕೇಳೋರೆ ಇರಲ್ಲಿಲ್ಲವಂತೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನಡೆಯದೆ ಇರೋದನ್ನ ಸುದ್ದಿ ವಾಹಿನಿಗಳಲ್ಲಿ ಬಿತ್ತರಿಸಿದ್ದಾರೆ. ಮನೆಯಲ್ಲಿ TV ನೋಡುತ್ತಿದ್ದ ಸೌಮ್ಯ ಆಂಟಿ, ಆಸ್ಪತ್ರೆಯಲ್ಲಿ ಮಲಗಿದ್ದ ಅಂಕಲ್ ಅವರನ್ನು ಗುರುತಿಸಿ ತಕ್ಷಣವೇ ರಮೇಶ ಅಂಕಲ್ ಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಆಗಲೇ ರಮೇಶ ಅವ್ರು ನನಗೆ ಕರೆ ಮಾಡಿದ್ದರು.

ರಮೇಶ ಅಂಕಲ್ : - ಭಯೋದ್ಪಾದನೆ... ಬಾಂಬು ... ಅಂಕಲ್ ... ಹೀಗಾಗಿಬಿಟ್ಟಿದೆ.

ನಾನು : - ಸಾರ್, ಅಂಕಲ್ ನ ಫಸ್ಟ್ ಖಾಸಗಿ ಆಸ್ಪತ್ರೆಗೆ ದಾಖಲಿಸಿ. ಫೋರ್ಟಿಸ್ ಗೆ ಸೇರಿಸಿ ಅಥವಾ ಅಪೋಲೊ ಗೆ ಸೇರಿಸಿ. ಎಷ್ಟ್ ಖರ್ಚಾದ್ರು ಚಿಂತೆ ಇಲ್ಲ.

ರಮೇಶ ಅಂಕಲ್ : - ಖರ್ಚಿನ ಪ್ರಶ್ನೆ ಅಲ್ಲಪ್ಪ, ಭಯೋದ್ಪಾದನೆ ಕೇಸು, ಅಲ್ಲಿ ಅಡ್ಮಿಟ್ ಮಾಡ್ಕೊಬೇಕಲ?

ನಾನು : -  ಏನ್ ಅಂಕಲ್ ನೀವೇ ಹೀಗಂದ್ರೆ? ಅಕಸ್ಮಾತ್ ಸೇರುಸ್ಕೊಳಲ್ಲ ಅಂದ್ರೆ ನಿಮ್ಮ ಸಾಹೇಬರ ಕಡೆಯಿಂದ ಒಂದು ಮಾತು ಹೇಳಿಸಿ ನೋಡಿ.

ರಮೇಶ ಅಂಕಲ್ : -  ನಾನು ಪ್ರಯತ್ನ ಮಾಡ್ತೀನಿ, ನೀವು ಈ ಕ್ಷಣ ಹೊರಟು ಬನ್ನಿ.

ನಾನು : -  ನಾವು ಬರ್ತೀವಿ, ಅಂಕಲ್ ಪ್ರಾಣಕ್ಕೆನೂ ಅಪಾಯ ಇಲ್ಲ ತಾನೇ?

ರಮೇಶ ಅಂಕಲ್ : -  ಸದ್ಯಕ್ಕೆ ಏನು ಹೇಳೋಕು ಆಗಲ್ಲ, ಇಲ್ಲಿಯ ಡಾಕ್ಟರ್ ೫೦:೫೦ ಅಂತಿದಾರೆ.

ನಾನು : - ಅಯ್ಯೋ ದೇವರೇ, ನಿಮ್ನೆ ನಂಬಿದೀನಿ ಅಂಕಲ್, ನಾನು ತಕ್ಷಣ ಹೊರಟು ಬರ್ತೀನಿ , ಅಲ್ಲಿವರ್ಗು ನೀವು ಮ್ಯಾನೇಜ್ ಮಾಡಿ

ರಮೇಶ ಅಂಕಲ್ : -  ಆಯ್ತಪ್ಪ. ದೇವರನ್ನ ನಂಬಿದೀರ, ಅವನೇ ಕಾಪಾಡಬೇಕು.

ನಾನು : - ಸರಿ ಅಂಕಲ್ . ನಾನು ಹೊರಡೋ ಏರ್ಪಾಟು ಮಾಡ್ಕೊತೀನಿ. bye

ರಮೇಶ ಅಂಕಲ್ : -  bye

ಶಾಸಕರ PA ಆದ ರಮೇಶ ಅಂಕಲ್ ತಮ್ಮ ಪ್ರಭಾವ ಬಳಸಿ ನಿಮ್ಮ ಅಪ್ಪನ್ನ ಇಲ್ಲಿಗೆ ಸೇರಿಸಿದ್ದಾರೆ.

ನೀನು ಅಳು ನಿಲ್ಸು, ನಡೆದಿರೋ ಯಾವ ವಿಚಾರನೂ ನಿಮ್ಮಮ್ಮನಿಗೆ ಗೊತ್ತಾಗೋದು ಬೇಡ. ಸೌಮ್ಯ ಆಂಟಿಗೂ ಹೇಳಬೇಡಿ ಅಂತ ಹೇಳಿದೀನಿ. ಫ್ಯಾಕ್ಟರಿಯಲ್ಲಿ ಕೆಲಸ ಮಾಡೋವಾಗ ಮಷೀನ್ ಬಡಿದು ಸ್ವಲ್ಪ ಪೆಟ್ಟಾಗಿದೆ ಎಂದಷ್ಟೇ ಅತ್ತೆಗೆ ಹೇಳ್ತೀನಿ. ನೀನು ಹಾಗೆ ಹೇಳಬೇಕು, ಮನೆಯಲ್ಲಿ ಅಮ್ಮನ ಜೊತೆ ಸೇರಿ ಅಳುತ್ತಾ ಕೂತರೆ ನಿಮ್ಮನ್ನು ಸಮಾಧಾನ ಮಾಡೋಕೆ ನನ್ನಿಂದ ಸಾದ್ಯವಿಲ್ಲ. ಈಗಲೇ ಹೇಳಿದೀನಿ.

ಡಾಕ್ಟರ್ ಬಿಡುವಾಗಿರೋದನ್ನ ಕಂಡು ಸಂಯುಕ್ತಾಳನ್ನು ಕರೆದುಕೊಂಡು ಅವರ ಕ್ಯಾಬಿನ್ ಒಳಗೆ ಹೋಗಿ ಕೂತೆ.

                                                        **************************

Rating
No votes yet