ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › Sunil Jayaprakash ರವರ ಬ್ಲಾಗ್

ಪಂಪಾ ವಿರೂಪಾಕ್ಷ ಯಾರು ?

April 1, 2008 - 5:06pm — Sunil Jayaprakash

ಕಳೆದ ಶನಿವಾರ ವಿದ್ವಾನ್ ಪಾವಗಡ ಪ್ರಕಾಶರಾವ್ ಅವರು "ರಾಘವಾಂಕನ ಹರೀಶ್ಚಂದ್ರ ಕಾವ್ಯ"ದ ಬಗ್ಗೆ ನಡೆಸಿಕೊಟ್ಟ ಒಂದು ಉಪನ್ಯಾಸಕ್ಕೆ ಹೋಗಿದ್ದೆ. ಹಾಗೆ ನೋಡಿದರೆ ಹರೀಶ್ಚಂದ್ರನ ಕತೆ ಭಾರತೀಯರಿಗೆ ಹೊಸತೇನೂ ಅಲ್ಲವೇ ಅಲ್ಲ. ಆದರೆ ನನ್ನ ತುಡಿತವಿದ್ದದ್ದು, "ಕನ್ನಡದ ರಾಘವಾಂಕ ಹರೀಶ್ಚಂದ್ರನನ್ನು ಕಂಡ ರೀತಿ ಹೇಗಿತ್ತು" ಎಂಬುದನ್ನು ತಿಳಿಯುವ ಹಂಬಲ. ಒಂದೂವರೆ ಗಂಟೆಯ ಆ ಉಪನ್ಯಾಸದಲ್ಲಿ ಹರೀಶ್ಚಂದ್ರ ಕಾವ್ಯಕ್ಕೆ ಕೇವಲ ಪೀಠಿಕೆಯು ಸಿಕ್ಕಿ ಮತ್ತು ಆನಂತರ ಕಾವ್ಯಕ್ಕೆ ಪ್ರವೇಶ ಸಿಕ್ಕಿತೇ ಹೊರತು, ಕಾವ್ಯದ ವಿಚಾರವಾಗಿ ಅಷ್ಟೇನು ವಿಚಾರ ವಿನಿಮಯವಾಗಲಿಲ್ಲ. ೧.೫ ಗಂಟೆಯಲ್ಲಿ ಅದು ಸಾಧ್ಯವೂ ಇರಲಿಲ್ಲ ಬಿಡಿ.

ಮನೆಗೆ ಬಂದು, ೧೨೨೨ರಲ್ಲಿ ರಾಘವಾಂಕನು ಬರೆದಿಟ್ಟಿರುವ ಈ ಪುಸ್ತಕಕ್ಕಾಗಿ ಅಲೆದಾಡಿದೆ. ಇಂಟರನೆಟ್ಟಿನಲ್ಲಿ ಇದರ ಒಂದು ಪ್ರತಿ ಸಿಕ್ಕಿತು. ಈ ಕಾವ್ಯದ ಮೊದಲ ಪದ್ಯವನ್ನೋದಿದೊಡನೆಯೇ ನನ್ನಲ್ಲಿ ಒಂದು ಕ್ಷಣ ನಾನು ಒಬ್ಬ ಕನ್ನಡಿಗನಾಗಿ ಹುಟ್ಟಿದ್ದಕ್ಕೆ ಎಂತಹ ಹೆಮ್ಮೆ, ಗರ್ವ ಉಂಟಾಯಿತು ಅಂತೀರಿ. ಆಹಾ! ನೀವೇ ನೋಡಿ ಬೇಕಿದ್ದರೆ ಆ ಮೊದಲ ಪದ್ಯವನ್ನು.

ಶ್ರೀಪತಿಗೆ ಸೊಬಗನುಡುಪತಿಗೆ ಶಾಂತಿಯನುವಾ
ಣೀಪತಿಗೆ ಚಾತುರ್ಯಮಂ ದಿವಸ್ಪತಿಗೆ ಪ್ರ
ತಾಪಮಂ ಸುರಪತಿಗೆ ಭೋಗಮಂ ರತಿಪತಿಗೆ ಮೂಲೋಕವಾವರಿಸುವ |
ರೂಪಂ ಸರಿತ್ಪತಿಗೆ ಗಂಭೀರತೆಯನು ಸ್ವಾ
ಹಾಪತಿಗೆ ತೇಜಮಂ ಕೊಟ್ಟ ಗುರುಮೂರ್ತಿ ಪಂ
ಪಾಪತಿ ವಿರೂಪಾಕ್ಷನೆಮಗಿಷ್ಟಸಿದ್ಧಿಯಂ ಮಾಳ್ಕೆ ಸಂತೋಷದಿಂದ || ೧ ||

ಇಲ್ಲಿ "ಹಂಪೆಯ ವಿರೂಪಾಕ್ಷ" ಎಂಬುವನನ್ನು ಕನ್ನಡದ ಒಬ್ಬ "ಗುರು" ಎಂಬುದಾಗಿ ಇಟ್ಟುಕೊಳ್ಳಿ. ಆಗ ಏನಾಗುತ್ತದೆ ನೋಡಿ. ಈ ಕನ್ನಡಿಗ "ಪಂಪಾ ವಿರೂಪಾಕ್ಷನೆಂಬ ಗುರುವೇ" ವಿಷ್ಣುವಿಗೆ ಸೊಬಗನ್ನು, ಬ್ರಹ್ಮನಿಗೆ ಚಾರ್ತುಯಮಂ, ಚಂದ್ರನಿಗೆ ಶಾಂತಿ, ಸೂರ್ಯನಿಗೆ ಪ್ರತಾಪ, ಇಂದ್ರನಿಗೆ ಭೋಗ, ಮನ್ಮಥನಿಗೆ ಸುರಸುಂದರ ರೂಪ, ಶಿವನಿಗೆ ಗಂಭೀರತೆ, ಅಗ್ನಿಗೆ ತೇಜಸ್ಸು ಇವುಗಳನ್ನು ನೀಡಿದ್ದು ಎಂದಾಗುತ್ತದೆ. ಎಂಥ ಕಲ್ಪನೆ ಅಲ್ಲವೇ ? ಕನ್ನಡದವರಿಂದಲೇ ಈ ಎಲ್ಲಾ ದೇವತೆಗಳಿಗೆ ಇಷ್ಟೆಲ್ಲ ಗುಣಗಳು ಬಂದಿರೋದು!!!

ಸಾಮಾಜಿಕವಾಗಿ, ೧೨-೧೩ನೇ ಶತಮಾನದ ಕರ್ನಾಟಕದಲ್ಲಿ ಏನೆಲ್ಲ ಬದಲಾವಣೆಗಳಾಗುತ್ತಿದ್ದವು ನೋಡಿ. ಜೈನರಿದ್ದರು, ವೈದಿಕರಿದ್ದರು, ವೀರಶೈವರು. ವೈಷ್ಣವರ ಮತ್ತು ಶೈವರ ಕಿತ್ತಾಟಗಳಂತೂ ಇದ್ದೇ ಇತ್ತು. ಆದರೆ ಇಲ್ಲಿ ಗಮನಿಸಬೇಕಾದ್ದು, ಇಷ್ಟೆಲ್ಲ ಸಾಂಸ್ಕೃತಿಕ ಪಬೆ (*) ಇದ್ದಾಗಿಯೂ ಕೂಡ, "ಪಂಪಾ ವಿರೂಪಾಕ್ಷ" ಒಂದು ಒಟ್ಟು "ಕನ್ನಡ-ಸಮಾಜದ" ಅಡಿಪಾಯದ ವೀರಗಲ್ಲಾಗಿ ನಿಲ್ಲುತ್ತದೆ.

--------------------------------------------------------------------------------
ಕೊಕೊ - (*) -> ಪಬೆ - ಪ - ಪಗೆತನ (ವೈರುಧ್ಯ) + ಬೆ - ಬೇರತನ(ವೈವಿಧ್ಯ). ಹಾಗಾಗಿ,
ಪಬೆ = Cultural Diversity and Social Polarity. (ಸಾಂಸ್ಕೃತಿಕ ವೈವಿಧ್ಯ ಮತ್ತು ಸಾಮಾಜಿಕ ವೈರುಧ್ಯ) Eye-wink
--------------------------------------------------------------------------------

  • ಪಬೆ
  • ಪಾವಗಡ ಪ್ರಕಾಶ ರಾವ
  • ರಾಘವಾಂಕ
  • ಹರೀಶ್ಚಂದ್ರ ಕಾವ್ಯ
~.~
  • Sunil Jayaprakash ರವರ ಬ್ಲಾಗ್
  • Login or register to post comments
  • 375 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 1, 2008 - 6:42pm — madhava_hs

ಉ: ಪಂಪಾ ವಿರೂಪಾಕ್ಷ ಯಾರು ?

madhava_hs's picture

ಪಾ.ಪ್ರ.ರಾವ್ ರವರ ಪ್ರವಚನಗಳು ಬಹಳ ವಿದ್ವತ್ಪೂರ್ಣವಾಗಿರ್ತವೆ. ಜೀ. ಟಿ.ವಿ ಯಲ್ಲಿ ವಾರಾಂತ್ಯದ ಬೆಳಗಿನಹೊತ್ತು ’ಶ್ರೀ ಕೃಷ್ಣ ದರ್ಶನ’ ಉಪನ್ಯಾಸ ಬರುತ್ತಿತ್ತು. ಈಗೇಕೋ ನಿಂತು ಹೋಗಿದೆ. ಅವರು ಕುಮಾರವ್ಯಾಸಭಾರತದ ಬಗ್ಗೆಯೂ ಬಹಳ ಪ್ರವಚನಗಳನ್ನು ನಡೆಸಿಕೊಟ್ಟಿದ್ದಾರೆ. ನನಗೆ ಕುಮಾರವ್ಯಾಸಭಾರತದ ಭಕ್ತಿ, ಭಾವಗಳ ಉತ್ಕಟತೆ ಬಹಳ ಇಷ್ಟವಾಯಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾಘವಾಂಕನ ಹರೀಶ್ಚಂದ್ರ ಕಾವ್ಯ
  • ಪಟ್ಟದಕಲ್ಲಿನ ವಿರೂಪಾಕ್ಷ ದೇವಾಲಯ
  • ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ
  • ಭರತೇಶ ವೈಭವದಲ್ಲಿ ಬೊಂಬೆಯಾಟ - ಕಲ್ಪು ೫
  • ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
  • ಕ್ರುಶ್ಣಾನೀ ಬ್ಯಾಗನೆ ಬಾರೋ
  • ಸ್ವಲ್ಪನಗಿ
  • ಡೈರಿಯ ಕೆಲವು ಹಾಳೆಗಳು - ಭಾಗ ೫
  • ಇಂಬಕ್ಕ
  • ಡೈರಿಯ ಕೆಲವು ಹಾಳೆಗಳು - ಭಾಗ ೪
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
  • ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
  • ಓದಿದ್ದು ಕೇಳಿದ್ದು ನೋಡಿದ್ದು 40 ಮತಾಂತರ:ಮಹಾತ್ಮಾ ಗಾಂಧೀಜಿ ಏನು ಹೇಳಿದ್ದರು?
  • ಸಾಗರಕ್ಕೆ ಒಮ್ಮೆ ಹೋಗಿ ಬನ್ನಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 6, 2008 - 11:34pm
  • ASHOKKUMAR
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 6, 2008 - 11:27pm
  • hpn
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 6, 2008 - 11:25pm
  • ASHOKKUMAR
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 6, 2008 - 11:21pm
  • hpn
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 6, 2008 - 11:16pm
  • hpn
    ಉ: ಇದು ಯಾವ ಹೂವು? ಹೇಳಿ ನೋಡೋಣ...
    October 6, 2008 - 11:03pm
  • ASHOKKUMAR
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 6, 2008 - 10:59pm
  • Rajeshwari
    ಉ: ಸಪ್ತಸ್ವರಗಳು
    October 6, 2008 - 10:32pm
  • gurubaliga
    ಉ: ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ
    October 6, 2008 - 10:09pm
  • Rajeshwari
    ಉ: ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
    October 6, 2008 - 10:03pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 158 ಅತಿಥಿಗಳು ಆನ್ಲೈನ್ ಇರುವರು.


"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "

— ಕುವೆಂಪು ('ಕನ್ನಡ ದೀಕ್ಷೆ' ಯಲ್ಲಿ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator