ಸರಿ, ಮತ್ತೆ ನಿಂಗೇನ್ ಇಷ್ಟ
ಹೇಯ್. ನಿಂಗೆ ಆ ಮೂಲಂಗಿ ಇಷ್ಟಾನಾ ?
ಥೂ. ಗಬ್ಬು.
ಹೂಕೋಸು
ವಾಸನೆ.
ಈರುಳ್ಳಿ
ಗಬ್ಬುನಾತ.
ಬೆಳ್ಳುಳ್ಳಿ
ಯಪ್ಪಾ....ಕೆಟ್ಟ ವಾಸನೆ, ...ಛೀ ಛೀ ಛೀ.
ಹೋಗ್ಲಿ, ದೊಡ್ಮೆಣ್ಸಿನ್ಕಾಯ್ ಸೇರತ್ತಾ
ದೊಡ್ಮೆಣ್ಸಿಕಾಯ್ ತಿಂದ್ರೆ ದೊಡ್ಡೋರಾಗ್ತಾರಂತೆ, ಬೇಡಪ್ಪಾ.
ಬದ್ನೇಕಾಯ್
ಬದ್ನೇಕಾಯ್ ತಿಂದ್ರೆ, ಸ್ವಿಮ್ಮಿಂಗ್ ಕಲೀಬೇಕು. ಬೇಡ.
ನುಗ್ಗೇಕಾಯ್
ಚಿಕ್ಕೋರು ತಿನ್ಬಾರ್ದಂತೆ.
ಸೋರೇಕಾಯ್
ಏನು ಹಾಗಂದ್ರೆ...
ಪಡವಲ್ಕಾಯ್
ಅದೇನಂತಾನೇ ಗೊತ್ತಿಲ್ಲಾ.
ಹೀರೇಕಾಯ್
ಥೂ, ಸಗಣಿ.
ಸುವರ್ಣಗೆಡ್ಡೆ
ನೋಡು, ಇದೇ ಬೇಡಾ ಅನ್ನೋದು. ನಮ್ಮನೇಲೇನು ತಿಥೀನಾ.
ನವಲಿಕೋಸು
ಬೇಡಾsssssssಪ್ಪಾ. ದೊಡ್ಡ ನಮ್ಸ್ಕಾರ.
ಗೆಡ್ಡೆಕೋಸು
ಮಯ್ಯಲ್ಲೆಲ್ಲ ಗೆಡ್ಡೆ ಬೆಳೆಯತ್ತೆ, ಬೇಡ.
ಆಲೂಗಡ್ಡೆ
ಡುಮ್ಮುಗ್ ಊದ್ಕೊಂತೀವಿ.
ತೊಂಡೆಕಾಯ್
ತಿಂದ್ರೆ, ತುಂಬಾ ಚಿಕ್ಕೋರಾಗ್ಬಿಡ್ತಾರಂತೆ. ಬೇಡಪ್ಪಾ.
ಅಮ್ಟೇಕಾಯ್
ಏ. ಅದೆಲ್ಲು ಸಿಗದೇ ಇಲ್ಲ.
ಮಾವಿನಕಾಯ್
ಹಲ್ಲೆಲ್ಲ ಚುಳ್ಳ್ ಅನ್ನತ್ತೆ. ಬೇಡಪ್ಪಾ.
ಟೊಮ್ಯಾಟೋ
ನಂಗೆ ರೆಡ್ ಕಲರ್ ಇಷ್ಟ ಇಲ್ಲ.
ಕ್ಯಾರೆಟ್
ಏಏಏ. ಅದೇನ್ ಒಳ್ಳೆ ನಾನೇನು ಮೊಲಾನಾ.
ಹುರುಳಿಕಾಯ್
ಕುದುರೆಗಳಿಗೆ ಹಾಕ್ತಾರಲ್ವಾ
ಏಯ್. ಅದು ಹುರುಳಿ
ಬೇಡಪ್ಪಾ.
ಗೋರೀಕಾಯ್
ಹುರುಳೀಕಾಯೇ ಬೇಡಾ ಅಂದ್ರೆ, ನಿಂದೊಳ್ಳೆ ಗೋರೀಕಾಯಂತೆ.
ಹಾಗಲಕಾಯ್
ನಂಗೇನ್ ರೋಗ ಬಂದಿದ್ಯಾ.
ಬೀಟ್ರೂಟ್
ಯಾಕೆ, ನನ ಮಯ್ಯಲ್ಲೇನು ರಕ್ತ ಇಲ್ವಾ.
ಗೆಣಸು
ನಾನೇನ್ ದನಾನಾ.
ಸರಿ, ಮತ್ತೆ ನಿಂಗೇನ್ ಇಷ್ಟ.
ನಂಗೆ...ನಂಗೆ....ನಮ್ಮಮ್ಮ ಅಂದ್ರೆ ತುಂಬಾ ಇಷ್ಟ.

- Sunil Jayaprakash ರವರ ಬ್ಲಾಗ್
- Login or register to post comments
- 474 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಸರಿ, ಮತ್ತೆ ನಿಂಗೇನ್ ಇಷ್ಟ
ಹ ಹ ಹ! ಸುನಿಲರೇ, ತುಂಬಾ ಚೆನ್ನಾಗಿದೆ. ನಮ್ಮ ಮನೆಯಲ್ಲಿ ನಿತ್ಯ ನಡೆಯುವ ಸಂವಾದ ಇದು. ಆದರೆ, ತಮಾಷಿಯೆಂದರೆ ಇದು ನಡೆಯುವುದು ನನ್ನ ಮಕ್ಕಳೊಂದಿಗಲ್ಲ, ನನ್ನ ಗಂಡನೊಂದಿಗೆ. ನಾನು ಮದುವೆಗೆ ಮುಂಚೆ ತರಕಾರಿ, ಹಣ್ಣು ತಿನ್ನುತ್ತಿರಲಿಲ್ಲವೆಂದು ಬಯ್ಯುತ್ತಿದ್ದ ನಮ್ಮಮ್ಮ, ಮುಯ್ಯಿ ತೀರಿಸುಕೊಳ್ಳುವಂತೆ ನನಗೆ ತರಕಾರಿ, ಹಣ್ಣು ಒಲ್ಲದ ಗಂಡನನ್ನು ಹುಡುಕಿ ಕಟ್ಟಿಹಾಕಿದ್ದಾರೆ
ಮಕ್ಕಳು ಪಾಪ ನನ್ನ ಮಾತು ಕೇಳುತ್ವೆ, ಆದರೆ, ಗಂಡ ಕೇಳ್ಬೇಕಲ್ಲ ?!
ಉ: ಸರಿ, ಮತ್ತೆ ನಿಂಗೇನ್ ಇಷ್ಟ
ಚೆನ್ನಾಗಿದೆ ತರಕಾರಿ ಮಾತುಕತೆ
-ಹಂಸಾನಂದಿ
ಪುರಂದರ ದಾಸರ ರಚನೆಗಳಿಗಾಗಿ ಇಲ್ಲಿ ಚಿಟಕಿಸಿ :- http://purandara.wordpress.com/
ಉ: ಸರಿ, ಮತ್ತೆ ನಿಂಗೇನ್ ಇಷ್ಟ
ಸೂಪರ್ರಾಗಿದೆ ಸಾರ್... ನಕ್ಕು ನಕ್ಕು ಹೊಟ್ಟೆ ನೋವು ಬಂತು.
ಕೀರ್ತಿ ಕಿರಣ್ ಎಂ
ಉ: ಸರಿ, ಮತ್ತೆ ನಿಂಗೇನ್ ಇಷ್ಟ
ಉ: ಸರಿ, ಮತ್ತೆ ನಿಂಗೇನ್ ಇಷ್ಟ
ಸುನಿಲ್ ಅವರೇ,
ನಿಮ್ಮ ತರಕಾರಿ ಕಥೆ ಅದ್ಭುತವಾಗಿದೆ... ಹೊಟ್ಟೆ ಹುಣ್ಣಾಗುವಷ್ಟು ನಗು ಬ೦ತು...
ಅನಿಲ್ ರಮೇಶ್.
ಉ: ಸರಿ, ಮತ್ತೆ ನಿಂಗೇನ್ ಇಷ್ಟ
ನನಗೆ ತರಕಾರಿ ಅಂದ್ರೆ ತುಂಬ ಇಷ್ಟ. ಅದರಲ್ಲೂ ಹಸಿ ತರಕಾರೀನ ಪಚಡಿ ಮಾಡಿಕೊಂಡು, ರೊಟ್ಟಿ ಖಾರಬ್ಯಾಳಿ ಜೊತೆ ಕೆಂಪು ಖಾರದ ಚಟ್ನಿ....ಬಾಯಲ್ಲಿ ನೀರೂರಿಸುತ್ತೆ.;)--;)
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ಉ: ಸರಿ, ಮತ್ತೆ ನಿಂಗೇನ್ ಇಷ್ಟ
ನಾನು ದಿನ ಆಡೊ ಮಾತಿದು....ನಮ್ಮಮ್ಮ ನನಗೆ " ನಂಗೆ ಇರೊ ಮಗಳಂತೆ ನಿನಗೂ ಹಣ್ಣ್ಣು ತರಕಾರಿ ತಿನ್ನದಿರೊ ಮಗು ಹುಟ್ಟಲ್ಲಿ....ಆಗ ನನ್ ಕಶ್ಟ ತಿಳಿಯುತ್ತೆ " ಅಂಥ ಯಾವ್ಗಲು ಹೆಳ್ತ ಇರ್ತರೆ...ನಿಮ್ ಕತೆ ತುಂಬ ಚೆನಗಿದೆ
ಸ್ಪ್ರಹಿ
ಉ: ಸರಿ, ಮತ್ತೆ ನಿಂಗೇನ್ ಇಷ್ಟ
ಅನಿಲ.ರಮೇಶ್, ನಕ್ಕೂ ನಕ್ಕೂ ಹೊಟ್ಟೆ ಹುಣ್ಣಾದರೆ, ಸೊಗದೆ ಬೇರಿನ ಜೂಸ್ ಕೊಡ್ತಾರಂತೆ. ಸ್ವಲ್ಪ ಎಚ್ಚರಿಕೆ ಒಳ್ಳೆಯದು
ಕಲ್ಪನ ಅವರೆ, ಹಂಸಾನಂದಿಯವರು ಬರೆದ ಗಂಡಹೆಂಡಿರು ಮತ್ತು ಪುರಂದರದಾಸರು, ಓದಿರುತ್ತೀರಷ್ಟೇ. ನೀವೂ ಕೂಡ, ಹಾಗೆಯೇ, ಸ್ವಲ್ಪ ಸ್ವಲ್ಪವೇ ಪುಸಲಾಯಿಸಿ ತರಕಾರಿಗಳನ್ನು ನಿಮ್ಮ ಯಜಮಾನರಿಗೆ ತಿನ್ನಿಸಿ. ನಮ್ಮ ತಾತ-ಅಜ್ಜಿ ಈ ವಿಷಯವಾಗಿ ಈಗಲೂ ಜಗಳ ಆಡ್ತಾರೆ ಅಂದ್ರೆ, ಇನ್ನು ನಿಮ್ಮ ಕಷ್ಟ ದೇವರಿಗೇ ಪ್ರೀತಿ. ನೋಡಿ, ಟ್ರೈಮಾಡ್ತಾ ಇರಿ. ಆಮೇಲೆ ಯಾರು ಗೆದ್ರಿ ಅಂತ ತಿಳಿಸಿ.
ಹಂಸನಾಂದಿ,
, ನಿಮ್ಮ ಗಂಡಹೆಂಡತಿ ಮತ್ತು ಪುರಂದರದಾಸರು ಬರಹವೇ ನೆನಪಿಗೆ ಬರತ್ತೆ 
ಗಿರೀಶ್ ರಾಜನಾಳ - ನೀವೂ ತಿಂಡಿಪೋತರು ಅಂತ ಗೊತ್ತಾಯ್ತು ಬಿಡಿ. ಯಾವಾಗ ಕೊಡುಸ್ತೀರಾ, ಕೆಂಪು ಖಾರದ ಚಟ್ನಿ.
ಸ್ಪ್ರಹಿ(ಇದು ನಿಮ್ಮ ಹೆಸರೇನಾ ? ಡಿಫರೆಂಟಾಗಿ ಚೆನ್ನಾಗಿದೆ), ನಮ್ಮಜ್ಜಿ ಹೇಳ್ತಾರೆ, ಅವರೂ ಚಿಕ್ಕವರಿದ್ದಾಗ ತಿನ್ತಾ ಇರಲಿಲ್ಲವಂತೆ, ಆಮೇಲೆ ಮದುವೆಯಾಗಿ ತಾತನಿಗೆ ತಿನ್ನಿಸೋಕ್ಕೆ ರೂಢಿಮಾಡಿಸಲಿಕ್ಕೆ ಹೋದಾಗ ಇವರಿಗೆ ರುಚಿಹತ್ತಿಬಿಟ್ಟಿತಂತೆ!!!!! ಸುಮ್ನೇರೀ ಚೋಕು. ಸೀರಿಯಸ್ ಅಂದ್ಕೋಬೇಡಿ.
ನನಗೆ ಒಂದು ವಿಷಯ ಗೊತ್ತಾಗ್ತಾ ಇದೆ. ಹುಡುಗಿಯರಿಗೆ ಮದುವೆಯ ಮುಂಚೆ ತರಕಾರಿ ಅಸಡ್ಡೆ, ಮದವೆಯಾದಮೇಲೆ ಓಕೆ ? ಯಾಕೆ ?
ಯಾsssssಕೆ ?
ಉ: ಸರಿ, ಮತ್ತೆ ನಿಂಗೇನ್ ಇಷ್ಟ
ನಿಮ್ಮ ಸಲಹೆಗೆ ಧನ್ಯವಾದಗಳು ಸುನಿಲ್...
ಸೊಗದೆ ಬೇರಿನ ಜ್ಯೂಸ್ ವಿಷಯ ಕೇಳಿ ಹೊಟ್ಟೆ ಹುಣ್ಣು ಮಾಯವಾಯ್ತು...
ಅನಿಲ್ ರಮೇಶ್.
ಉ: ಸರಿ, ಮತ್ತೆ ನಿಂಗೇನ್ ಇಷ್ಟ
ಮದುವೆ ಆಗಿರುವ ಹೆಂಗಸರೇ ಇದಕ್ಕೆ ಉತ್ತರ ನೀಡಬೇಕು...