ಎರಡರ ಮಹತ್ವ
ನನಗೆ ಈ ಸಂಖ್ಯೆ ೨ ಇದೆಯಲ್ಲ, ಅದರ ಮೇಲೆ ತುಂಬಾ ತುಂಬಾ ಅಕ್ಕರೆ. ಏಕೆಂದರೆ ಇದು,
೧. ತುಂಬಾ ಕೋಮಲ - ಸಂಖ್ಯೆ ಎರಡು ಚಂದಿರನದಂತೆ. ಸೂರ್ಯನ ಆಸರೆ ಇವನಿಗೆ ಬೇಕಿದೆಯಾದರೂ, ನಮ್ಮ ನಿಮ್ಮಂತಹ ಮುದ್ದುಮಕ್ಕಳಿಗೆ ಆಟ ಆಡಲು ಚಂದಿರನೇ ಬೇಕು. ತುಂಬಾ ತಂಪುವನ್ನೀಯುವವ, ಮುದ್ದುಮಾಡುವವ.
೨. ಅನುರಾಗದ ಸೆಲೆ - ಇಡೀ ವಿಶ್ವದ ಜೀವರಾಶಿ ನಿಂತಿರೋದೇ ಈ ಸಂಖ್ಯೆ ಎರಡರ ಮೇಲೆ ಅನ್ನುವುದು ಉತ್ಪ್ರೇಕ್ಷೆಯೇನಲ್ಲ. ಜೀವರಾಶಿಯ ಹಕ್ಕಿಗಳು ಒಂದಕ್ಕೊಂದು ಅನುರಾಗ ಸೂಸದೇ ಹೋಗಿದ್ದರೆ ಈ ಜೀವಸಂಕುಲವು ಇರುತ್ತಿತ್ತೇ.
೩. ಯಶಸ್ಸಿನ ಹಾದಿಯ ಸಂಕೇತ - ಈಗಂತೂ ಯಾರಾದರೂ ಏನಾದರೂ ಗೆದ್ದರೆ, ಖುಷಿಯಿಂದ V ಚಿಹ್ನೆ ತೋರುತ್ತಾರೆ. ಇದು ಕೂಡ ಎರಡನ್ನೇ ಹೋಲುತ್ತದೆ.
ನನ್ನ ಬಾಳಪಯಣದಲ್ಲಿ ಇಪ್ಪತ್ತೈದರ ಏಳು-ಬೀಳುಗಳನ್ನೊಳಗೊಂಡ ಹರೆಯ ತುಂಬಿ ಹರಿಯುತ್ತಿರುವ ಈ ಅತ್ಯಂತ ಸಂತೋಷದ ಹೊತ್ತಿನಲ್ಲಿ "ಅಮ್ಮ-ಅಪ್ಪ" ತಾರೆಗಳಿಗೆ ನನ್ನ ತುಂಬು ಹೃದಯದ ನನ್ನಿ.

- Sunil Jayaprakash ರವರ ಬ್ಲಾಗ್
- Login or register to post comments
- 326 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS: