ಈ ಸಂಜೆ ಹಾಯಾಗಿದೆ
ಅದು ಏನಪ್ಪಾ ಅಂದ್ರೆ, ನಮ್ಮ ಕಂಪನಿಯವರು ನನ್ನ ಹುಟ್ಟುಹಬ್ಬದ ದಿನ ಒಂದು ಗಿಫ್ಟವೌಚರ್ ಕೊಟ್ಟಿತ್ತು. ಅದನ್ನು ಬಳಸಲು ನೆನ್ನೆಯೇ ಕಡೆಯ ದಿನ. ಸರಿ ಫೋರಮ್ಮಿನೆಡೆಗೆ ನಡೆದೆ. ಇನ್ನೇನು ಫೋರಂ ಸಿಕ್ಕಿತು ಎನ್ನುವಾಗಲೇ, ದೊಡ್ಡದಾಗಿ ಕಾಣಿಸಿತು. ಉಪೇಂದ್ರ, ಪೂಜಾಗಾಂಧಿ ಇರುವ 'ಸಿಕ್ಕಾಪಟ್ಟೆ ಕನ್ನಡ, ಸ್ವಲ್ಪ ಹಿಂದಿ, ಟೋಟಲ್ ಬೆಂಗಳೂರು' ಆಡ್. ಸರಿ ಫೋರಂ ಒಳಹೊಕ್ಕೆ. ಮೊದಲು ಪುಸ್ತಕದಂಗಡಿಗೆ ನಡೆದೆ. ಅರರೆ!!! ದೊಡ್ಡದಾಗಿ ಕಣ್ಣಿಗೆ ಬಿತ್ತು. ಪ್ರೋ.ಜಿ.ವಿ ಅವರ ಪ್ರಿಸಂ ಇಂಗ್ಲೀಷ್-ಕನ್ನಡ ನಿಘಂಟು. ಏನೇನೇನೇನೋ ನೋಡಿ, ಸೀಡಿ ಅಂಗಡಿಗೆ ನಡೆದೆ. ಅಲ್ಲಿ ನೋಡಿದರೆ, ಕನ್ನಡ ಹಾಡುಗಳ ಜಾಗ ಬದಲಾಗಿಹೋಗಿದೆ. "ಸೈಕೋ", "ಅರಮನೆ", "ಸತ್ಯ ಇನ್ ಲವ್" ಸೀಡಿಗಳನ್ನು ಹುಡುಕಿದೆ. ಸಿಗಲಿಲ್ಲ. ಅದೇನು ತರಿಸಿಯೇ ಇರಲಿಲ್ವೋ, ಅತ್ವಾ, ಮುಗಿದಿತ್ತೋ, ಗೊತ್ತಿಲ್ಲ. ಅಂದ್ಹಾಗೆ, ಒಂದು ವಿಶ್ಯ ಗೊತ್ತಾ, ಫೋರಮ್ಮಿಗೆ ಹೋದಾಗ್ಲೆಲ್ಲ ಗಮನಿಸ್ತೀನಿ. ಈ ಡಿವೋಶನಲ್ ಪಟ್ಟಿಯಲ್ಲಿ ಕನ್ನಡ ಸೀಡಿಗಳು "ಸಿಕ್ಕಾಪಟ್ಟೆ ಅಂದ್ರೆ ಸಿಕ್ಕಾಪಟ್ಟೆ" ಕಡ್ಮೆ ಇರತ್ತೆ. ಅತ್ವಾ ಇರೋದೇ ಇಲ್ಲ. ಕನ್ನಡಿಗರು ಪೂಜೇನೇ ಮಾಡಲ್ವಾ ? ಅಂತ ಎಂದಿನಂತೆ ಇವತ್ತೂ ಅನಿಸಿತು !!!! ಮೇಣ್ "ಕನ್ನಡಿಗರಿಗೆ ಪೂಜೆಗಳು ಗೊಡ್ಡು ಅಂತನ್ನಿಸಿರಬೇಕು" ಅಂತ ಅಂದುಕೊಂಡೆ. ಸರಿ ಈ ಪುಸ್ತಕಗಳ, ಸೀಡಿಗಳ ಗೊಡವೆಯೇ ಬೇಡ ಅಂತ ಬಟ್ಟೆ ಅಂಗಡಿಗಳಿಗೆ ನಡೆದೆ.
ಮೊದಲನೆಯದಕ್ಕೆ ಹೋದೆ. ಬರೀ ಜೀನ್ಸು ಇಟ್ಟಿದ್ರು. ಇಂಗ್ಲೀಶಲ್ಲಿ ಮಾತಾಡ್ಸುದ್ರು. ಸುಮ್ನೆ ನೋಡಿದ ಹಾಗೆ ಮಾಡಿ, ರೇಟುಗಳನ್ನು ತಿಳಿದುಕೊಂಡು ಮುನ್ನಡೆದೆ. ಪಕ್ಕದ ಮಳಿಗೆಗೆ ಹೋದೆ. ಅಷ್ಟೇ, ನೋಡುದ್ರೆ "ಈ ಸಂಜೆ ಯಾಕಾಗಿದೆ, ನೀನಿಲ್ಲದೆ, ಈ ಸಂಜೆ ಯಾಕಾಗಿದೆ"!!!!! ಹಾಡು.... ಏಹೇ ಆಹಾ!!!!! ಸುನೀಲ ನಿಂದೆ ಕಣೋ ಚಾನ್ಸು ಅಂತ ಸಿಕ್ಕಾಪಟ್ಟೆ ಖುಷಿಯಾಗಿ, ಬಟ್ಟೆಗಳನ್ನು ನೋಡಲು ಶುರುಮಾಡಿದೆ. ಬಟ್ಟೆಗಳು ಅಷ್ಟೇನು ಹೊಗಳಿಕೊಳ್ಳುವಂತಿರಲಿಲ್ಲ. ಕಾಲು ಕೀಳಬೇಕು ಅಂತನ್ನಿಸಿತು. ಆದ್ರೆ "ಈ ಸಂಜೆ ಯಾಕಾಗಿದೆ" ಹಾಡು ಬರ್ತಾ ಇದ್ಯಲ್ಲ. ಅದನ್ನು ಬಿಟ್ಟು ಹೇಗೆ ಹೋಗೋದು. ಸರಿ ಹಾಡು ಮುಗಿದ ಮೇಲೆ ಹೋಗೋದು ಅಂತ ತೀರ್ಪಾಟಾಯಿತು. ಆದರೆ ಏನು ಗೊತ್ತಾ!!!!! "ಈ ಸಂಜೆ..." ಹಾಡು ಮುಗಿದ ತಕ್ಷಣವೇ ತಮಿಳು ಹಾಡು ಶುರುವಾಗಿಬಿಡೋದೇ!!!!!
ಸರಿ, ಇನ್ನೂ ಒಂದ್ಮೂರ್ನಾಲ್ಕು ಬಟ್ಟೆ ಮಳಿಗೆಗಳನ್ನು ಸುತ್ತು ಹಾಕಿದ ಮೇಲೆ ವ್ಯಾನ್-ಹ್ಯುಸನ್ನಿಗೆ ಎಡತಾಕಿದೆ. ಮಜ್ಜಾ ಗೊತ್ತಾ, ನಂಗೂ ಗೊತ್ತಿಲ್ಲ, ಅವನೇ ಬಂದು ಕನ್ನಡದಲ್ಲಿ ಮಾತಾಡಿಸೋಕ್ಕೆ ಶುರುಮಾಡಿದ. ಆದರೆ, ಏನು ಮಾಡೋದು, ಮಳಿಗೆಯಲ್ಲಿ ಪ್ಯಾಂಟುಗಳು ಚೆನ್ನಾಗಿವೆ. ಆದರೆ ನನ್ನ ಅಳತೆಯದ್ದು ಇಲ್ಲವೇ ಇಲ್ಲ. ಎಲ್ಲ ದೊಗಲ್ದೊಗಲೆ. ಸರಿ ಪ್ಯಾಂಟಿನ ಗೊಡವೆಯೇ ಬೇಡ ಅಂತ ಶರ್ಟುಗಳನ್ನು ಟ್ರೈ ಮಾಡಲು ಶುರುಮಾಡಿದೆ. ಕೊನೆಗೆ ಸಿಲ್ಕ್ ಶರ್ಟೊಂದು ಇಷ್ಟವಾಯಿತು. ಕೊಂಡು ಮನೆಗೆ ತೆರಳಲು ಆಫೀಸ್ ಕ್ಯಾಬ್ ಹತ್ತಿದೆ. ಕ್ಯಾಬಿನ ರೇಡಿಯೋ ಆನ್ ಮಾಡಿದ. ರಾಜಣ್ಣನ ಹಾಡು ಬರ್ತಾ ಇತ್ತು. ಮತ್ತೆ, "ಜಿಂಕೆ ಮರೀನಾ", "ಲವ್ಲಿ, ಲವ್ಲಿ, ಲವ್ಲಿ ಸಖತ್ತು ಫೇರ್ ಅಂಡ್ ಲವ್ಲಿ" ಹಾಡುಗಳನ್ನೂ ಕೇಳಿರಲೇಬೇಕು.
ಮನೆಗೆ ಬಂದು ಅಪ್ಪನಿಗೆ ಹೊಸಶರ್ಟ್ ತೋರಿಸಿದರೆ "ತಕತ್ತಾಗಿದೆ ಕಣೋ ಶರ್ಟು, ಎಲ್ ತೊಗೊಂಡ್ಯೋ, ಸೂಪರ್ರಾಗಿದೆ" ಅಂತ ಸರ್ಟಿಫಿಕೇಟ್ ಕೊಟ್ಟೇ ಬಿಟ್ರು ಅಂತೀನಿ. ಹೊಗಳಿದರೆ ಯಾರಿಗೆ ತಾನೇ ಖುಷಿ ಆಗಲ್ಲ. ನನಗೋ ಸ್ವರ್ಗಕ್ಕೆ ಮೂರೇ ಗೇಣು. ಸರಿ ಇಷ್ಟೆಲ್ಲ ಆಯ್ತಲ್ಲ, ಆಮೇಲೆ ನೋಡಿದ್ರೆ, ಅಮ್ಮ ಫಸ್ಟ್ ಕ್ಲಾಸ್ ಗೆಡ್ಡೆಕೋಸು ಹುಳಿ, ಕೋಡುಬಳೆ ಮಾಡಿದ್ದಾರೆ, ಗಡದ್ದಾಗಿ ತಿಂದೆ. ಆಮೇಲೆ ನೋಡ್ತೀನಿ. ಅತ್ತಿಗೆ ಕ್ಯಾರೆಟ್ ಹಲ್ವ ಮಾಡಿದ್ದಾರೆ, ಅಣ್ಣ ಬಾಳೆಹಣ್ಣು ತಂದಿದ್ದಾನೆ. ಅಯ್ಯೋ ದೈವವೇ!!!!!!! ಬಿಡೋಕ್ಕೆ ಆಗುತ್ಯೇ ? ಎರಡನ್ನೂ ಒಟ್ಟಿಗೆ ಸೇರಿಸಿ ಬಾಯಿ ಜಡಾಯಿಸಿದೆ ನೋಡಿ. ಆಹಾ!!!!! ಆಮೇಲೆ ನೋಡ್ತೀನಿ, ತಮ್ಮ ಆಗಲೇ ಹಾಸಿಗೆಯನ್ನೂ ಹಾಸಿಬಿಟ್ಟಿದ್ದಾನೆ, ನನಗೋಸ್ಕರ. ಅರೇ ವಾಹ್!!!!!!!
ಕನ್ನಡತನ, ಸುಖ, ಕಾಳಜಿ, ಮಮತೆ ಎಲ್ಲವೂ ಮೇಳೈಸಿದ ಆ ಹೊತ್ತು, ನನಲ್ಲಿ ಮತ್ತೆ ಮತ್ತೆ ಅದೇ ಗುನುಗ್ತಾ ಇತ್ತು, "ಈ ಸಂಜೆ ಹಾಯಾಗಿದೆ"!!!!!

- Sunil Jayaprakash ರವರ ಬ್ಲಾಗ್
- Login or register to post comments
- 445 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಈ ಸಂಜೆ ಹಾಯಾಗಿದೆ
ಉಪೇಂದ್ರ ಜತೆ ಇರ್‍ಓದು ಪ್ರೀತಿ ಜಿಂಟಾ ಅನ್ಸುತ್ತೆ... (ಪೋಸ್ಟ್ರಲ್ಲಿ).
ಉ: ಈ ಸಂಜೆ ಹಾಯಾಗಿದೆ
ಜಿಂಟಾ ಅಲ್ಲ ಅವಳು ಆಂಟಿ
ಉ: ಈ ಸಂಜೆ ಹಾಯಾಗಿದೆ
ಲೋ, ಏನೋ ಅದು ದೊಗಲ್ದೊಗಲೆ ?? ದೊಗಳ್ದೊಗಳೆ ಅನ್ಸುತ್ತೆ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಈ ಸಂಜೆ ಹಾಯಾಗಿದೆ
ಅದು, ಅದು, ಅದೂ. ದೊಗಲೆ ಕನ್ನಡದವನಲ್ಲವಾದ್ದರಿಂದ, ರಳಕುಳಗಳನ್ನು ಕರ್ಕೊಂಡು ಬರ್ತಾನೆ
ಉ: ಈ ಸಂಜೆ ಹಾಯಾಗಿದೆ
ಪಡಕೊಂಡ್ ಬಂದಿದೀಯ,.. ಸುನೀಲ್... ಸೂಪರ್....
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಈ ಸಂಜೆ ಹಾಯಾಗಿದೆ
ಕಣ್ ಹಾಕ್ಬೇಡ್ವೋ. ಮನೆಗೆ ಹೋಗಿ, ದೃಷ್ಟಿ ತೆಗುಸ್ಕೋಬೇಕು. ಅಥವಾ.....
ಉ: ಈ ಸಂಜೆ ಹಾಯಾಗಿದೆ
ಅವ್..ಲಕಡಿ ಪಕಡಿ ಜುಮ್ಮ..ಅವ್.. ಸಕತ್ತಾಗಿ ಬರೆದಿದ್ದೀಯ
ಉ: ಈ ಸಂಜೆ ಹಾಯಾಗಿದೆ
ಸುನಿಲ್
ನಿಜವಾಗಲೂ ಹೊಟ್ಟ್ಕಿ ಕಿಚ್ಚಾಗುತ್ತಿದೆ. ಪುಣ್ಯವಂತರಪ್ಪ ನೀವು
ಕ್ಯಾರೆಟ್ ಹಲ್ವಾ ಗೆಡ್ಡೆಕೋಸು ಹುಳಿ ಕೋಡುಬಳೆ, ಅಬ್ಬಾಬ್ಬ
ಹಾಸಿಗೆ ಹಾಸಿದ ತಮ್ಮ ಬಾಳೆಹಣ್ಣು ತಂದ ಅಣ್ಣ. ತುಂಬಾ ಖುಷಿಯಾಗುತೆ ಈರೀತಿಯ ಕುಟುಂಬ ನೋಡಿದರೆ , ಕೇಳಿದರೆ ..
http://thereda-mana.blogspot.com/
ರೂಪ
ಉ: ಈ ಸಂಜೆ ಹಾಯಾಗಿದೆ
ಸುನಿಲ, ಏನು ಮಜಾನೋ ನಿಂದು!!? ನೀನು ಇಲ್ಲಿ ಹಾಕಿರೋ ಫೋಟೋ ನೋಡಿ ಕರೆಕ್ಟ್ ಆಗಿ ನಿಮ್ಮಣ್ಣ ಬಾಳೆಹಣ್ಣು ತಂದಿದಾರೆ ಬಿಡು!!
(ತಮಾಶೆಗಂದೆ!!)
ಏನೆ ಆಗಲಿ ಹುಟ್ಟಿದ ಹಬ್ಬದ ಶುಭಾಶಯಗಳು...ತಡವಾಗಿ!!
ಶಂಕರ್
ಉ: ಈ ಸಂಜೆ ಹಾಯಾಗಿದೆ
ನಂಗೇನೂ ಗೊತ್ತಿಲ್ಲಪ್ಪಾ!!!! ಸವಿ ಸವಿ ಹುಟ್ಟು ಹಬ್ಬದ ಹಾರೈಕೆಗಾಗಿ ನಿನಗೊನ್ನನ್ನಿ.
ಉ: ಈ ಸಂಜೆ ಹಾಯಾಗಿದೆ
ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿ
ಬೇಜಾರ್ಮಾಡ್ಕೋಬೇಡ್ರಿ. ಹೆನ್ನನ್ನಿ(thanks a ton)
ಉ: ಈ ಸಂಜೆ ಹಾಯಾಗಿದೆ
ಸುನಿಲ್,
ಹುಟ್ಟು ಹಬ್ಬದ ಶುಭಾಶಯಗಳು - ತಡವಾಗಿ...
ಅನಿಲ್ ರಮೇಶ್.