ಕಟುಸತ್ಯ
ನಮ್ಮ ಸಮಾಜದ ಕೆಲವು ಕಟುಸತ್ಯಗಳೇ ಹೀಗೆ. ಸಿಟ್ಟು, ಬೇಸರ, ಅಸಹನೆ ಮೂಡಿಸತ್ತೆ. ನೋಡಿ ಈ ದಿನದ ಎರಡು ಸುದ್ಧಿ.
೧. ದೇವರ ಉತ್ಸವದ ಮೆರವಣಿಗೆಯಲ್ಲಿ ನರ್ತಿಸುವ ವಿವಾದ : ಅರಳಾಳಿಯಲ್ಲಿ ಗುಂಡು ಹಾರಿಸಿ ಒಬ್ಬರ ಕೊಲೆ - ಇಲ್ಲಿ ಒಬ್ಬ ದಲಿತನ ಕೊಲೆಯಾಗಿದೆ. ಮತ್ತೊಬ್ಬನ ತೊಡೆಗೆ ಗುಂಡು ತಗುಲಿದೆ.
೨. ಶ್ರೀರಂಗಪಟ್ಟಣ: ದಲಿತರಿಂದ ದೇವಾಲಯ ಪ್ರವೇಶ ವಿವಾದ, ಗುಂಪು ಘರ್ಷಣೆ : ಅಶ್ರುವಾಯು ಪ್ರಯೋಗ - ದಲಿತರು ದೇವಸ್ಥಾನ ಪ್ರವೇಶಿಸಿ ಪೂಜೆ ನಡೆಸಿದರು ಎಂಬ ಕಾರಣಕ್ಕೆ ಅವರ ಮೇಲೆ ಹಲ್ಲೆ ನಡೆದಿದೆ.
ಹೇಗಪ್ಪಾ, ಬೆಳೆಯೋದು/ಬೆಳೆಸೋದು ನಮ್ಮ ಸಮಾಜಾನಾ ? ಅಂತಸ್ತು, ಸ್ಟೇಟಸ್ಸು, ಜಾತಿ ಇವುಗಳನ್ನು ಪೂರ್ತಿಯಾಗಿ ಮೀರಿ ನಾವುಗಳು ನಿಂತಿಲ್ಲ ಎಂಬುದನ್ನು ಸಾರಿ ಸಾರಿ ಹೇಳುತ್ತವೆ ಈ ಎರಡು ಘಟನೆಗಳು.

- Sunil Jayaprakash ರವರ ಬ್ಲಾಗ್
- Login or register to post comments
- 273 hits
- Email this blog





RSS:
ಪ್ರತಿಕ್ರಿಯೆಗಳು
ಉ: ಕಟುಸತ್ಯ
ಈ ಕಟು ಸತ್ಯ ಕೇಳಿ
ಬ್ಯಾಂಕೊಂದರ ಹಿಂದುಳಿದ ವರ್ಗಕ್ಕೆ ಸೇರಿದ ಮ್ಯಾನೇಜರ್ ಒಬ್ಬ ತನ್ನ ಬ್ಯಾಂಕಿಗೆ ಸಾಲಕ್ಕೆಂದು ಬಂದ ಹುಡುಗಿಯೂಬ್ಬಳಿಗೆ ಸಾಲಕ್ಕೆ ಬದಲಾಗಿ ಅವಳ ಯವ್ವ್ವನ ವನ್ನು ಅಡಮಾನವಾಗಿ ಕೇಳುತ್ತಾನೆ.
ಆ ಹುಡುಗಿ ಮೇಲಿನವರಿಗೆ ಸುದ್ದಿ ಮುಟ್ಟಿಸಿದರೂ ಆತ ಹಿಂದುಳಿದ ವರ್ಗಕ್ಕೆ ಸೇರಿದವನು ಎಂಬ ಕಾರಣಕ್ಕೆ ಅವನನ್ನು ಏನು ಮಾಡಲು ಆಗದೆ ಕೈ ಕಟ್ಟಿ ಕೂರುತ್ತಾರೆ.
ಆ ಹುಡುಗಿಗೆ ಹೇಗೊ ಸಾಲ ದೊರಕಿತು ಮೇಲಿನವರ ಸಹಾಯದಿಂದ ಆದರೆ ಆತನ ಮೇಲೆ ಯಾವುದೇ ದೂರುಗಳಿಲ್ಲದೆ ಸದ್ದು ಗದ್ದಲವಿಲ್ಲದೆ ಅವನನ್ನು ವರ್ಗಾಯಿಸಿದರು
ಆಕೆ ಯಾರು . ಆತ ಯಾರು ಎಂಬುದಕ್ಕಿಂತ ಈ ತರಹದ ಘಟನೆಗಳು ಇಲ್ಲಿ ಸಾಮಾನ್ಯ ಆದರೆ ಆ ವರ್ಗದ ಮೇಲೆ ಕೊಂಚ ಧಾಳಿಯಾದರೂ ಅದು ಸುದ್ದಿಯಾಗುತ್ತದೆ . ಆದರೆ ಅದೇ ಈ ರೀತಿಯ ಘಟನೆಗಳು ಬೆಳಕಿಗೆ ಬರುವುದೇ ಇಲ್ಲ
ರೂಪ
ಉ: ಕಟುಸತ್ಯ
ನಿಜ, ಇದಕ್ಕೆಲ್ಲಾ ನಮ್ಮ ರೋಗಗ್ರಸ್ಥ ಮನಸ್ಥಿತಿಯ ಮಾಧ್ಯಮಗಳೇ ಕಾರಣ.