ನಿನ್ನ ಪೂಜೆಗೆ ಬಂದ ಮಹದೇಸ್ವರಾ
ಈ ರಘುದೀಕ್ಷಿತ್ ಇದ್ದಾನಲ್ಲ, ಸಖತ್ತು ಅವನ ವಾಯ್ಸು. ಗತ್ತು, ಭಾವ, ಸೆಳೆಯುವ ತಾಕತ್ತು, ಹೀಗೆ "ಏನೋ ಇದೆ". ಏನೋ ಇದೆ, ಏನೋ ಇದೆ, ಅವ್ನ್ ವಾಯ್ಸಲ್ಲಿ ಏನೋ ಇದೆ.
ನಾನು ಕಳೆದ ವಾರ ಸೈಕೋ ಚಿತ್ರದ ಆಡಿಯೋ ಸೀಡಿ ಕೊಂಡು ತಂದೆ. ಒಂದಕ್ಕಿಂತ ಮತ್ತೊಂದು ಹಾಡು ಚೆನ್ನಾಗಿದೆ. ಅವೆಲ್ಲದರಲ್ಲಿ ಈಗ ಸದ್ಯಕ್ಕೆ ತುಂಬಾ ಕೇಳಿಬರ್ತಾ ಇರುವ, ಕೇಳಿದ ತಕ್ಷಣ ತುಂಬಾ ನಗು ತರಿಸುವ, ಹಾಡೆಂದರೆ "ನಿನ್ನ ಪೂಜೆಗೆ ಬಂದೆ ಮಹದೇಸ್ವರಾ, ಎನ್ನ ಕರುಣದಿ ಕಾಯೋ ಮಹದೇಸ್ವರಾ"
ಈ ಹಾಡುನ್ನು ಖಾಸಗಿ ಚಾನೆಲ್ ಒಂದರಲ್ಲಿ, ರಘು ಹಾಡಿದ್ದ. ಅವನು ಗಿಟಾರ್ ಇಟ್ಟುಕೊಂಡು ಎದುರಿಗೇ ಹಾಡಿದ್ದನ್ನು ನೋಡಬೇಕಿದ್ದರೆ, ಇಲ್ಲಿ ಚಿಟುಕಿ. ಕೇಳ್ತಾ ಕೇಳ್ತಾನೆ ಸಿಕ್ಕಾಪಟ್ಟೆ ನಗು ಬಂದ್ಬಿಡತ್ತೆ. ನಡುನಡುವೆ ಬರುವ ಆ ಇಂಗ್ಲೀಷ್ ಸಾಲುಗಳಂತೂ
- ![]()
ಹಾಗೆಯೇ, ಅವನ ಮತ್ತೊಂದು ಹಾಡು ಸೋರುತಿಹುದು ಮನೆಯ ಮಾಳಿಗಿ ಕೂಡ ಯೂಟ್ಯೂಬಿನಲ್ಲಿದೆ. ಕೇಳಿ ಮಜ್ಜಾ ಮಾಡಲು ಇಲ್ಲಿ ಚಿಟುಕಿ.
ಇದೆಲ್ಲದಕ್ಕಿಂತ ಅವನ "ಮೈಸೂರ್ ಸೆ ಆಯೀ" ಹಾಡು ಕೇಳಬೇಕು. ಸಖತ್ತಾಗಿದೆ. ಆ ಆಟಸಾಮಾನ್ ಪಿಟೀಲ್ ಬರುತ್ತಲ್ಲ, ಅದರ ದನಿ ಇದೆ ಅದರಲ್ಲಿ ![]()

- Sunil Jayaprakash ರವರ ಬ್ಲಾಗ್
- Login or register to post comments
- 489 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
ಮಸ್ತ್ ಹಾಡುಕಣೋ ಸುನಿಲ.
ಎಷ್ಟು ಸಾರಿ ಕೇಳಿದರೂ ಬೇಜಾರಾಗೋದಿಲ್ಲ ಮಹದೇಸ್ವರಾ.
ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
ಹಾಡು ತುಂಬ ಚೆನ್ನಾಗಿದೆ
ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
ಹೌದು ಸುನಿಲರೇ, ರಘು ಅವರ ಕಂಠದಲ್ಲಿ ಒಂಥರ ಮೋಡಿ ಇದೆ. ಅವರ ವಾಯ್ಸ್ ಕ್ವಾಲಿಟಿ ಈಗಿನ ಹಾಡುಗಾರರಿಗಿಂತ ಬಹಳ ವಿಭಿನ್ನ. ಮತ್ತೆ ಈಗ ಜನ are more openminded towards fusion experiments like his songs. ಆದ್ದರಿಂದ ಹಿಟ್ ಆಗ್ತಿದೆ ಅನ್ಸತ್ತೆ. ಸೂಕ್ಷ್ಮವಾಗಿ ಗಮನಿಸಿದರೆ, ಒಂದೇ ಸಾಲನ್ನು ಎಳೆದೆಳೆದು ಹಾಡುತ್ತ ಗುಂಗನ್ನು ಬರೆಸುತ್ತಿದ್ದಾರೆ ಅನ್ಸತ್ತೆ ಅಲ್ವ ?
ಅವರ ಜೊತೆ ಹಾಡಿರುವ ಹುಡುಗಿ(tv anchor) ಯಾರು ಗೊತ್ತ?
~ಕಲ್ಪನ
ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
ಅರೆ, ಇದು ಚೈತ್ರ ವಾಯ್ಸ್ ತರಹ ಇದೆ, ಅವಳೇನಾ ಇದು?
~ಕಲ್ಪನ
ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
ಹೌದ್ರಿ. ಅದು ಚೈತ್ರಾ ಅವರೇನೇ.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
ಧನ್ಯವಾದಗಳು ಹಂಸಾನಂದಿಗಳೆ.
ಪುರಂದರರಿಂದ ಹಿಡಿದು ಪಾಪ್ ತನಕ, ವಾವ್! ನಿಮ್ಮ versatile knowledge ನಿಜಕ್ಕೂ ಶ್ಲಾಘನೀಯ
~ಕಲ್ಪನ
ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
ಬಹಳ ಜನಕ್ಕೆ ಗೊತ್ತಿಲ್ಲದಿರಬಹುದು.. ಆದ್ರೆ, ’ಪಾಪ್’ ಗಾಯಕಿ ಚೈತ್ರಾ ಅವರು ಒಬ್ಬ ಒಳ್ಳೇ ಹಿಂದೂಸ್ತಾನಿ ಶೈಲಿಯ ಗಾಯಕಿ ಕೂಡಾ!
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
ಹೌದಾ? ನಂಗಂತೂ ಗೊತ್ತೇ ಇರಲಿಲ್ಲ! ಇದರ ಬಗ್ಗೆ ನಿಮಗೆ ಹ್ಯಾಗೆ ಗೊತ್ತಾಯ್ತು? ಅವರ ಹಿಂದುಸ್ತಾನಿ ಆಲ್ಬಮ್ ಅಥವ ಹಾಡು ಎಲ್ಲಾದ್ರೂ ಕೇಳಲಿಕ್ಕೆ ಲಭ್ಯವಿದೆಯೆ?
~ಕಲ್ಪನ
ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
ಎಷ್ಟೋ ಬಾರಿ ಉದಯ ಟೀವಿಯ ಕಾರ್ಯಕ್ರಮಗಳಲ್ಲಿ ಚೈತ್ರ ಬಂದಿದ್ದಾರೆ - ಹಾಗಾಗಿ ಗೊತ್ತು. ಆಲ್ಬಮ್ ಗಳಿವೆಯೋ ಗೊತ್ತಿಲ್ಲ, ನಾನು ನೋಡಿಲ್ಲ.
ಚೈತ್ರ ಹಾಗೂ ಆಕೆಯ ಅವಳಿ ಸಹೋದರ ಚೇತನ್ ಇಬ್ಬರೂ ಸೇರಿ ಹಿಂದೂಸ್ತಾನಿ ಕಚೇರಿಗಳನ್ನು ಮಾಡುವ ವಿಷಯ ಎಲ್ಲೋ ಪೇಪರ್ ನಲ್ಲಿ ಓದಿದ್ದೆ.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
ಚೈತ್ರಗೆ ಅವಳಿ ಸೋದರನಿರುವುದೂ ಗೊತ್ತಿರಲಿಲ್ಲ
ನಾನು ಆಕೆಯ ಚಲನಚಿತ್ರದ ಹಾಡುಗಳನ್ನಷ್ಟೆ ಕೇಳಿರುವುದು. ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ಒಂದು ರೀತಿಯ ಹಾಡು ಹಿಟ್ ಆದ್ರೆ, ಅವರ ಕೈಯಲ್ಲಿ(ಕಂಠದಲ್ಲಿ!) ಅದೇ ರೀತಿಯ ಹಾಡನ್ನೆ ಹಾಡಿಸುತ್ತಾರೆ. ರಿಸ್ಕ್ ತೊಗೊಳ್ಳೋದು ಕಷ್ಟ ತಾನೆ? 
~ಕಲ್ಪನ
ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
ಕಲ್ಪನ ಅವ್ರೆ, ಚೈತ್ರ ಅವರ ಹಾಡುಗಳನ್ನು ಸಿಕ್ಕಾಪಟ್ಟೆ ಕೇಳ್ತೀರಾ ಅನ್ಸತ್ತೆ, ನೀವು. ಅಮೃತಧಾರೆ ಸಿನಿಮಾ ನೋಡಿದ್ದೀರಾ ತಾನೇ.
ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
ಸುನಿಲರೆ,
ನನಗೆ ಅವರು ಹಾಡುವ ಶೈಲಿ ಇಷ್ಟ. ಆದ್ರೆ, ಸಧ್ಯಕ್ಕೆ ರಘು ದೀಕ್ಷಿತ್ ಅವರ ಎಲ್ಲ ಹಾಡುಗಳನ್ನೂ ಕೇಳಿಸಿಕೊಳ್ಳುತ್ತ, ಗುನುಗುತ್ತಾ, ಮನೆಯವರಿಗೆಲ್ಲ ತಲೆ ಚಿಟ್ಟು ಹಿಡಿಸುತ್ತಿದ್ದೇನೆ. ಎಲ್ಲಾ ನಿಮ್ಮ ಕೃಪೆ 
ಚೈತ್ರ ಹಾಡುಗಳಲ್ಲಿ ಕೆಲವು ಕೇಳಿದ್ದೇನೆ. ಅಮೃತಧಾರೆಯ ಹಾಡು ಸಹ ಕೇಳಿದ್ದೇನೆ
~ಕಲ್ಪನ
ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
ಹಂಸಾನಂದಿ ನೀವು ಹೇಳಿದ್ದು ನಿಜ. ಆದರೆ ಚೈತ್ರಳ ಅವಳಿಯ ಹೆಸರು ಚೈತನ್ಯ!!!!
ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
ಮೈಸೂರ್ ಸೇ ಆಯಿ...
http://www.youtube.com/watch?v=5OiILgq3ZT0
*ಅಶೋಕ್
ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
ಅಶೋಕ್, ನನ್ನಿ. ಆಟ ಸಾಮಾನ್ ಪಿಟೀಲಲ್ಲ ನಮ್ಮ ನಿಜವಾದ ಪಿಟೀಲೇ ಇದೆ ಈ ಹಾಡಿನಲ್ಲಿ
ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
ಕನ್ನಡ ಆಡಿಯೋದಲ್ಲಿ ಚೈತ್ರಾ
http://www.kannadaaudio.com/forum/showthread.php?t=16515
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು
ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
ದಿ ರಘು ದೀಕ್ಷಿತ ಪ್ರಾಜೆಕ್ಟ್ ರವರ "ಗುಡುಗುಡಿಯಾ ಸೇದಿ ನೋಡೋ" ಹಾಡಿನ ಒಂದು ಕಲ್ಪನೆ.
ಕಾಕನಕೋಟೆ ಚಿತ್ರದ ದ್ರುಶ್ಯಗಳನ್ನು ಹೆಣೆದು ಮಾಡಿದ ಒಂದು ಮೊನ್ಟಾಜು.
http://www.youtube.com/watch?v=QEMcQOGhTTE