24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

"ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು

March 10, 2008 - 3:52pm
Sunil Jayaprakash
ಹೋದ ಶನಿವಾರ, ಸಿಕ್ಕಾಪಟ್ಟೆ ಕೆಲಸ ಇದ್ದಾಗ್ಯೂ, "ಇಂತಿ ನಿನ್ನ ಪ್ರೀತಿಯ" ಸಿನಿಮಾ ನೋಡಲು, ಪಿವಿಆರಿಗೆ ನಡೆದೆ. ಈ ಚಿತ್ರದ ಕೆಲವು ಕಡೆ ನಗು ತರಿಸುತ್ತದೆಯಾದರೂ ನನಗೆ ವೈಯಕ್ತಿಕವಾಗಿ ಬೇಸರ ಉಂಟು ಮಾಡಿದ್ದೇ ಹೆಚ್ಚು. ಈ ಚಿತ್ರದಲ್ಲಿ ನನಗೆ ಇಷ್ಟವಾದದ್ದು ಮತ್ತು ಇಷ್ಟವಾಗದೇ ಇದ್ದ ವಿಚಾರಗಳನ್ನು ಪಟ್ಟಿಮಾಡಲು ಪ್ರಯತ್ನಗೈದಿರುವೆ. ಒಳ್ಳೆಯ ಅಂಶಗಳು ೧. ಶ್ರೀನಗರ ಕಿಟ್ಟಿಯವರಿಗೆ ಪಾತ್ರದ ಮೇಲಿರುವ ಹಿಡಿತ. ಚಾಂಗ್ ಆಕ್ಟಿಂಗ್ ಕಿಟ್ಟು ಕಿಂಗ್. ಇನ್ನೂ ಸಖತ್ ಪಾತ್ರಗಳನ್ನ ಮಾಡಿ ಕನ್ನಡ ಸಿನಿಮಾದಲ್ಲಿ ನಿನ್ನದೇ ಛಾಪು ಮೂಡಿಸು ಗುರೂ. ೨. ರಂಗಾಯಣ ರಘುವಿನ ನಟನೆಯ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಸಣ್ಣ ಹೃದಯದವರು ಇವನು ಸಾಯುವ ದೃಶ್ಯವನ್ನು ನೋಡಬೇಡಿ ;-) ೩. ಚಿತ್ರದ ಮೊದಲರ್ಧ ಪ್ರಪಂಚದ ಇತರ ಭಾಷೆಯಗಳಿಗೂ ಅನುವಾದ ಮಾಡಿಸಿದರೆ ಚೆನ್ನಾಗಿರತ್ತೆ ಅಂತ ಅನಿಸಿತು. ೪. ಜಯಂತ ಕಾಯ್ಕಿಣಿ ಬರೆದಿರುವ, "ಮಧುವನ ಕರೆದರೆ, ತನುಮನ ಸೆಳೆದರೆ, ಶರಣಾಗ ನೀನು, ಆದರೆ!" ಹಾಡು ತುಂಬಾ ಅಂದ್ರೆ ತುಂಬಾ ಚೆನ್ನಾಗಿದೆ. ಶಾಸ್ತ್ರೀಯ ಅಥವಾ ಸುಗಮ ಹೀಗೆ, ಯಾವುದೇ ರೀತಿಯ ಸಂಗೀತವನ್ನು ನೀವು ಇಷ್ಟಪಡುತ್ತೀರಾದರೆ ಕನ್ನಡಆಡಿಯೋ.ಕಾಮಿನ ಕೊಂಡಿಗಳನ್ನು ಚಿಟುಕಿ ಹಾಡನ್ನು ಕೇಳಿ. ಎಚ್ಚರಿಕೆ, ಹಾಡಿನ ವೀಡಿಯೋ U/A. ೧. [http://www.kannadaau...(Filmy).rm|ಸಿನಿಮಾ ಹಾಡು], ವಾಣಿಯವರ ದನಿಯಲ್ಲಿ ೨. [http://www.kannadaau...(Classic).rm|ಶಾಸ್ತ್ರೀಯ ಟಚ್ಚಿನಲ್ಲಿ] ಚಿನ್ಮಯಿ ಅವರ ದನಿಯಲ್ಲಿ. ೩. ನನ್ನ ಅತ್ತಿಗೆಗೆ ಈ ಹಾಡು ಇಷ್ಟವಾಯಿತು. [http://www.kannadaau...|ಒಂದೊಂದೆ ಬಚ್ಚಿಟ್ಟ ಮಾತು] ಕಳೆದ ಹಲವಾರು ವರ್ಷಗಳಿಂದ ಬರುತ್ತಿರುವ ಕನ್ನಡ ಸಿನಿಮಾದ ಒಳ್ಳೆಯ ಹಾಡುಗಳ ಸರಮಾಲೆ ಈ ವರ್ಷವೂ ಮುಂದುವರಿಯುವ ಸಾಧ್ಯತೆ ದಟ್ಟವಾಗುತ್ತಿದೆ. ೫. ಕಿಟ್ಟಿ ಮೊದಲರ್ಧದ ಹೀರೋಯಿನ್, ನಮನಾಳನ್ನು "ನಮ್ಮಿ" ಅಂತ ಕರೀತಾ ಇರ್ತಾನೆ. ಇದನ್ನು ನನ್ನ ಫ್ರೆಂಡ್ ಸರಿಯಾಗಿ ಕೇಳಿಸಿಕೊಳ್ಳದೆ ನೋಡೋ, "ನನ್ನಿ" ಅಂತ ಹೇಳ್ತಾ ಇದ್ದಾನೆ. ಇವನಿಗೆ ಹೇಗೆ "ನನ್ನಿ" ಗೊತ್ತಾಯ್ತು. ಅಂದುಬಿಟ್ಟ :) ಕೆಲವು ಎಡವಿದ ಅಂಶಗಳು ೧. ನನಗೆ ಈ ಚಿತ್ರ ಅಟ್ಲೀಸ್ಟ್ ಹತ್ತು-ಹದಿನೈದು ವರ್ಷದ ಹಿಂದಿನ ಕಾನ್ಸೆಪ್ಟ್ ಅನಿಸಿತು. ೨. ನಾನು ಚಿತ್ರ ನೋಡಿದ ದಿನ, ಮಹಿಳಾ ದಿನಾಚರಣೆ. ಮಹಿಳೆಯರ ನೈತಿಕ ಮೌಲ್ಯ, ಸಾಂಸ್ಕೃತಿಕ ಸಾಧನೆ, ಸಮಾಜಿಕ ಸ್ಥೈರ್ಯಗಳನ್ನು ಈ ಸಿನಿಮಾದ ಮೂಲಕ ಎತ್ತಿಹಿಡಿಯಬಹುದಾಗಿತ್ತು. ಮಹಿಳೆ ತನ್ನ ಪರಿಮಿತಿಯಲ್ಲಿಯೂ ಕೂಡ ಸಾಮಾಜಿಕ ಬದವಾವಣೆ ತರಬಲ್ಲಳು ಎಂಬುದಾಗಿ ಚಿತ್ರಿಸಬಹುದಿತ್ತು. ಆದರೆ ಚಿತ್ರದ ನಿರ್ದೇಶಕರಾಗಲೀ, ಪಾತ್ರದವರೇ ಆಗಲಿ ಯಾರೂ ಕೂಡ ಈ ನಿಟ್ಟಿನಲ್ಲಿ ಯೋಚಿಸಿಲ್ಲ. ಗಂಡ ಏನು ಮಾಡಿದರೂ ಅದನ್ನು ಅಸಹಾಯಕವಾಗಿ ನೋಡಿಕೊಂಡು ಬಿದ್ದಿರೋ ಹೆಂಡತಿಯ ಹಾಗೆ ತುಂಬಾ ವೀಕಾಗಿ ಹೆಣ್ಣನ್ನು ತೋರಿಸಿದ್ದಾರೆ. ೩. ಈ ಚಿತ್ರದಲ್ಲಿ, ಹೆಣ್ಣು ತೀರಾ ಅಂದರೆ ತೀರಾ ಅಸಹಾಯಕಳು ಮತ್ತು ಸಮಯದ ಬೊಂಬೆ. ಕಿಟ್ಟಿಯ ಅತ್ತಿಗೆ, ಅವನ ಗರ್ಲ್-ಫ್ರೆಂಡ್, ಅವನ ಹೆಂಡತಿ, ಹೀಗೆ ಎಲ್ಲರೂ. ೪. ನನಗೆ ಬಹಳವೇ ಬೇಸರವಾಗಿದ್ದು. ಈ ಚಿತ್ರ, "ಒಬ್ಬ ಗಂಡಿನ ಭಾವನೆಗಳನ್ನು ವೈಭವೀಕರಿಸಿ, ಹೆಣ್ಣಿನ ಭಾವನೆಗಳಿಗೆ ಯಾವ ರೀತಿಯ ಬೆಲೆನೀಡದಿದ್ದರೂ ಪರವಾಗಿಲ್ಲ", ಎಂಬ ಮನಸ್ಥಿತಿಯನ್ನು ಅತಿಯಾಗಿ ಬಂಬಿಸುತ್ತದೆ ಎಂದೆನಿಸಿತು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by mahesha on
ಸುನಿಲಂಗೆ ಮುದಿತನ ಬತ್ತಿದೆ!! :) ಲೋ ಏನಿದು "ನನಗೆ ಬಹಳವೇ ಬೇಸರವಾಗಿದ್ದು. ಈ ಚಿತ್ರ, "ಒಬ್ಬ ಗಂಡಿನ ಭಾವನೆಗಳನ್ನು ವೈಭವೀಕರಿಸಿ, ಹೆಣ್ಣಿನ ಭಾವನೆಗಳಿಗೆ ಯಾವ ರೀತಿಯ ಬೆಲೆನೀಡದಿದ್ದರೂ ಪರವಾಗಿಲ್ಲ"!! ಹಾಸ್ಯಾಸ್ಪದ! :) ನಗೆಪಾಡು. ಗಂಡಿನ ಬಾವನೆಯ ವೈಬವೀಕರಣ!!! :) ಅದೇ ಹೊಸತಲ್ವ!! ಯಾ ಯಾ ಸಿನಿಮ ನೋಡಿದ್ರೂ ಬರೀ ಹೆಂಗಸರ ಗೋಳು.. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Sunil Jayaprakash on
ಅಲ್ವೋ ಮಹೇಶ, ನೀನೇ ಹೇಳು. "ಗಂಡ ಎಷ್ಟೇ ಕೆಟ್ಟವನಾಗಿದ್ದರೂ, ಒಂದಲ್ಲ ಒಂದು ದಿನ ಸರಿಹೋಗುತ್ತಾನೆ" ಎಂಬ ಕಲ್ಪನೆಯಲ್ಲಿ ಮುಳುಗಿ ನಮ್ಮ ನಾಡಿನ ಎಷ್ಟು ಜನ ಹೆಣ್ಣುಮಕ್ಕಳು ಕುಡುಕ ಗಂಡನಿಗೆ ದಾಸನಾಗಿ ಎದುರಾಡಲಾಗದೆ ಅಸಹಾಯಕರಾಗಿ ತಮ್ಮ ಜೀವನವನ್ನು ತಾವೇ ಚಿವುಟುಕೊಂಡಿಲ್ಲ / ಚಿವುಟುಕೊಳ್ಳುತ್ತಿಲ್ಲ. ಈ ವಿಚಾರವನ್ನು ಸೂರಿ ಚೆನ್ನಾಗಿ ತೋರಿಸಿದ್ದಾರೆ. ಆದರೆ ಅದಕ್ಕಿಂತ ಮುಂದೆಯೂ ಯೋಚಿಸಬಹುದಿತ್ತು. ಆ ನಿಟ್ಟಿನಲ್ಲಿ ನಿರ್ದೇಶಕ ಸೂರಿ ಎಡವಿದರು ಅಂತ ನನಗೆ ಅನಿಸುತ್ತಿದೆ. ಚಿತ್ರದಲ್ಲಿ ಕಿಟ್ಟಿಯ ಹೆಂಡತಿ ಭಾವನಾ ಸಾಯುವಂತೆ ಮಾಡುವುದು ತೀರಾ ಅಂದರೆ ತೀರಾ ಎಳಸು ಆಲೋಚನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಸಂಗನಗೌಡ on
ಹೆಣ್ಮಕ್ಕಳ ಬಗ್ಗೆ ಎಲ್ಲೆಲ್ಲೂ ಗುಲ್ಲು ಈಗ... ಅವರಿಗೆ ಸರಿಸಮ ಗಳಿಕೆ-ಹೆಗ್ಗಳಿಕೆ ಬೇಕು ಅಂತ.. ಅದರ ನೆರಳು ನಮ್ ಸುನೀಲಗೆ ತಾಗಿದೆ.. ಏನ್ ತಪ್ಪಪಾ? ... ಮುದುಕ ಅಂತ ಹೀಗಳೆಬೇಡಿ ಸಾರ್... ಪಾಪ ವಯಸ್ಸಾದವರೆಲ್ಲ ಬರ್ತಾ ಇರತಾರಿಲ್ಲಿ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vinayudupa on
ಟಿ. ಎನ್. ಸೀತಾರಾಮ್ ಅವರ ದಾರವಾಹಿಗಳನ್ನ ತುಂಬ ನೋಡ್ತೀರಾ ಅನ್ಸುತ್ತೆ... :) . ನನಗೇನೋ ಆ ವಿಚಾರಗಳ ಕಡೆಗೆ ಯೋಚಿಸೋ ಹಾಗೆ ಪರಿಣಾಮಕಾರಿಯಾಗಿ ಮಾಡಿದ್ರಲ್ಲ, ಅದರಲ್ಲೇ ತ್ರುಪ್ತಿ. ಒಂದು ದಾರಿ ಅಂತ ತೋರ್ಸಿದ್ರೆ ಜನ ಇದರ ಬಗ್ಗೆ ಏನ್ ಮಾಡಬಹುದು ಅಂತ ಯೋಚನೆ ಮಾಡೋಲ್ಲ. ಅವ್ರು ತೋರ್ಸಿದನ್ನೇ ಸರಿ/ತಪ್ಪು ಅಂತ ಸುಮ್ಮನಾಗ್ಬಿಡ್ತಾರೆ. "ಇಂತಿ ನಿಮ್ಮ ಪ್ರೀತಿಯ" ವಿನಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
:) ಇವನ್ ದಿಟವಾಗಲೂ ’ಮುಕ್ತಾ’ :) ’ಮೀರಾ ಮಾಧವ ರಾಘವ’ ಬೆಸ್ಟ್ ಸಿನಿಮ ಇರ್‍ಬೇಕು, ಇವನ್ಗೆ! :) ( ಗಮನಿಸಿ, ಆ ಸಿನಿಮದಾಗೆ ಒಂದ್ ದಪನೂ ರಾಗವ ಅನ್ನೊಲ್ಲ.. ಕಶ್ಟಪಟ್-ಪಟ್ ರಾಘ್ಹವನೇ ಅನ್ನೋದು :D )
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Sunil Jayaprakash on
ಲೋ, ಮಹೇಶ, ಸುಮ್ಮನೆ ಏನೇನೋ ಕಲ್ಪನೆ ಮಾಡಿಕೊಳ್ಳಬೇಡ. ನಾನು "ಮೀರಾ ಮಾಧವ ರಾಘವ" ಸಿನಿಮಾ ನೋಡಿಲ್ಲ. ಇನ್ನು ಮುಕ್ತಾ ಬಗ್ಗೆ ಹೇಳಬೇಕಿದ್ದರೆ, ಕವಿ ಹೆಚ್.ಎಸ್.ವೆಂಕಟೇಶಮೂರ್ತಿಯವರೇ ನುಡಿ ಸೇರಿಸಿರುವ [http://www.youtube.c...|"ಮುಕ್ತ ಹಾಡಿನ ಸ್ವಾರಸ್ಯ"] ವೀಡಿಯೋ ನೋಡು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಹಿ ಹಿ... ಸಂಗನನ ಮಾತ್ಗೆ ಮಾರುಲಿ..... ಮೀರಾ ಮಾಧ್ಹ್ಹವ ರಾಘ್ಹ್ಹವ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by thiligola on
ಅಲ್ಲಾರಿ ನನ್ನಿ ಸುನೀಲರೆ--- ಆ ವೆಂಕಟೇಶಮೂರ್ತಿ ತಮ್ಮನ್ನೇ ತಾವು ಹೊಗಳಕೋತಾರಲ್ಲರೀ... ತುಂಬಾ ಸೂಕ್ಷ್ಮವಾಗಿ ಬರದಿದ್ದೀನಿ ಅಂತ ಯಾರಾದರೂ ಕವಿ ತನ್ನ ಬಗ್ಗೆ ತಾನೇ ಹೇಳಿಕೊಳ್ಳೋದು ಬಡಾಯಿ ಅಲ್ವ? ಇನ್ನು ಒಬ್ಬರನ್ನೊಬ್ಬರು ಬೆನ್ನು ತಟ್ಟಿಕೊಳ್ಳೋದು ನೋಡೋಕೆ ಅಸಹ್ಯನಪ್ಪ. ನೀವು ಅದೆಲ್ಲಾ ಹ್ಯಾಗೆ ಸಹಿಸ್ಕೋತೀರೋ... ಅಪ್ಪಾ... ನನಗಂತೂ ವಾಕರಿಕೆ ಬಂತು. ಮುಕ್ತ ಹಾಡು - ಅಷ್ಟೊಂದು ಗ್ರೇಟ್ ಏನಲ್ಲ ಬಿಡ್ರಿ. ಅದನ್ನು ಹೊಗಳೋಕೆ ಬೇರೆ ಯಾರೂ ಸಿಗಲಿಲ್ಲ ಅಂತ ಕಾಣತ್ತೆ. ಅದಕ್ಕೆ ಅವರೇ ಇಬ್ಬರು ಕೂತ್ಕೊಂಡು ಹೊಗಳಕೋತಾ ಇದ್ದಾರೆ. ಕನ್ನಡದಲ್ಲಿ ಈ ತರದ್ದೆಲ್ಲಾ ತುಂಬಾ ಹೊಸದಪ್ಪ. -ತಿಳಿಗೊಳ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Sunil Jayaprakash on
ಹೋಗಲಿ ಬಿಡಿ, ತಿಳಿಗೊಳ. ಈ "ಇಂತಿ ನಿನ್ನ ಪ್ರೀತಿಯ" ಬ್ಲಾಗು "ಮುಕ್ತ", "ಮೀರಾ ಮಾಧವ ರಾಘವ"ಗಳೆಡೆಗೆ ಅದ್ಯಾಕೆ ಹೋಯ್ತೋ ಅಂತ ಯೋಚ್ನೆ ಮಾಡ್ತಾ ಇದ್ದೀನಿ, ಈಗ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಸಂಗನಗೌಡ on
ಸುನೀಲ್, "ವಿನಯ", ನೀನು ಟಿ.ಎನ್.ಸೀತಾರಾಮ್ ದಾರಾವಾಹಿ ಹೆಚ್ಚಿಗೆ ನೋಡ್ತಿರಾ ಅಂದಲ್ಲಿಂದ ಇದೆಲ್ಲ ಮೊದಲಾಗಿದ್ದು... ನೀನಗೇನಾದ್ರು ಬೇಸರ ಆಯ್ತಾ...?..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಸಂಗನಗೌಡ on
ಅದು ಬ್ರಾಹ್ಮನರಿಂದ, ಬ್ರಾಹ್ಮಣರಿಗೆ, ಬ್ರಾಹ್ಮಣರಿಗಾಗಿ ಮಾಡಿರೋ ಸಿನಿಮಾ ಅನಿಸ್ತು.. :) ನನಗೆ ಅವ್ವ ಇಸ್ಟ ಆಯ್ತು.. ಅಲ್ಲಿ ಜಾತಿಯತೆ ಇದ್ರು.. ಎಲ್ಲೂ ಜಾತಿ ಹೆಸರು ಬರೋದಿಲ್ಲ.. ಜಾತಿ ವಿಜಾತಿಯೆನಬೇಡ, ದೇವನೊಲಿದಾತನೇ ಜಾತ ಸರ್ವದ್ನ್ಯ.... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Sunil Jayaprakash on
ಏನು, "ಇಂತಿ ನಿನ್ನ ಪ್ರೀತಿಯ" ಬ್ರಾಹ್ಮಣರ ಸಿನಿಮಾನಾ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಸಂಗನಗೌಡ on
ಏ ಅಲ್ಲ ಮಾರಾಯ!!, ನಾನ್ ಹೇಳಿದ್ದು ಮೀರಾ ಮಾಧವ ಬಗ್ಗೆ... ಮಾರುಲಿ ಯಾವ ಎಳೆಗಿದೆ ನೋಡು ತುಸು....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಎಂತಹ ಅಯ್‌ಡಿಯ ಮಗ... ’ಇಂತಿ ನಿನ್ನ ಪ್ರೀತಿಯ’ ಏನಾರ ಬ್ರಾಮ್ಮಣರ ಸಿನಿಮಾ ಆಗಿದ್ರೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.