ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › Sunil Jayaprakash ರವರ ಬ್ಲಾಗ್

ಸಿಂಪಲ್ ಕನ್ನಡ :)

July 22, 2008 - 6:52pm — Sunil Jayaprakash

ಮೊನ್ನೆ, ಬನವಾಸಿಯಲ್ಲಿ ಒಬ್ಬರು ಮಾತನಾಡುತ್ತಿದ್ದ ಬಗೆ ಕೇಳಿ, "ಕನ್ನಡ ಎಷ್ಟು ಸಿಂಪಲ್" ಅಂತ ಅನ್ನಿಸಿತು. ನೋಡಿ ಆ ಮಾತು.

ಬನವಾಸಿಯ ಬಸ್ಸಿನಲ್ಲಿ ಕೇಳಿಬಂದ ಮಾತು - ರಾತ್ರೆಲ್ಲ ಕರೆ ಮಾಡೀನಿ, ನಿನ್ ಮೊಬೈಲ್ ಅದೇನಾಗೇತೋ, ತಾಕ್ಲೇ ಇಲ್ಲ.
ಬೆಂಗಳೂರಿನಲ್ಲಿ ಹೀಗೆ ಹೇಳ್ತಿದ್ನೋ ಏನೋ - ರಾತ್ರಿಯೆಲ್ಲ ಫುಲ್ Smiling ಕಾಲ್ ಮಾಡಿದ್ದೀನಿ. ನಿನ್ ಮೊಬೈಲ್ಗೆ ಅದೇನಾಗಿತ್ತೋ, ಕನೆಕ್ಟೇ ಆಗ್ಲಿಲ್ಲ.

ಬನವಾಸಿಯುವನ ಮಾತು ಕೇಳಿದಾಗಲೇ ನನಗೆ ಹೊಳೆದದ್ದು, "connect"ಗೆ ಕನ್ನಡದಲ್ಲಿ ಈಗಾಗಲೇ ಜನರು ಸರಳವಾಗಿ "ತಾಕು" ಬಳಸ್ತಾ ಇದ್ದಾರೆ ಅಂತ!!!!!!!!!!!!!!!!!

*****

ಕನ್ನಡದಲ್ಲಿ ಸದ್ಯಕ್ಕೆ, "ತಾಕು" ಎಂದರೆ touch ಆಗುವ ಕ್ರಿಯೆ ಅರ್ಥದಲ್ಲಿ ಮಾತ್ರವೇ ಇದೆ. ನಾವು ನೀವು ಏನೇ ಕನ್ನಡ-ಸಂಸ್ಕೃತ ಅಂತ ಹೊಡೆದಾಡಲಿ, ದೇಸಿಗರು ಮಾತ್ರ, ಅದನ್ನು ಆಗಲೇ ಮುಂದೆ ತೊಗೊಂಡು ಹೊರಟೇ ಹೋಗಿದ್ದಾರೆ.

ಕನೆಕ್ಟ್ ಆಗು - ತಾಕು
ಕನೆಕ್ಟ್ ಆಗ್ತಾ ಇದೆ - ತಾಕ್ತಾ ಇದೆ
ಕನೆಕ್ಟ್ ಆಗಿದ್ದೀಯಾ - ತಾಕಿದ್ದೀಯಾ
ಕನೆಕ್ಟ್ ಆಗಿದೆ - ತಾಕಿದೆ
ಕನೆಕ್ಟ್ ಆಗಿಲ್ಲ - ತಾಕಿಲ್ಲ
ಕನೆಕ್ಟ್ ಆಗ್ಲಿಲ್ಲ - ತಾಕ್ಲಿಲ್ಲ

"ದೇಸಿಯೊಳ್ ಪುಗುವುದು , ಪೊಕ್ಕು ಮಾರ್ಗದೊಳೆ ತಳ್ವುದು" - ಎಂಬ ಮಾತನ್ನು ನಾವು ನಿಜ ಮಾಡೋಣ.

*****

ಮರೆತಿದ್ದೆ, ಆದಿಕವಿ ಪಂಪನ ಈ ಪ್ರಸಿದ್ಧವಾದ

"ತೆಂಕಣ ಗಾಳಿ ಸೋಂಕಿದೊಡಂ, ಒಳ್ನುಡಿ ಕೇಳ್ದೊಡಮ್, ಇಂಪನಾಳ್ದ ಗೇಯಂಗೆ ಕಿವಿಗೊಟ್ಟಡಮ್, ಬಿರಿದ ಮಲ್ಲಿಗೆ ಕಂಡೊಡಮ್, ಆದ ಕೆಂದಲಂಪಂಗೆ ಎಡೆಗೊಂಡಡಂ, ಮಧುಮಹೋತ್ಸವಮಾದೊಡಮ್, ಏನನೆಂಬನ್, "ಆರಂಕುಶವಿಟ್ಟೊಡಂ ನೆನೆವುದೆನ್ನ ಮನಮ್ ಬನವಾಸಿ ದೇಶಮಂ"

ಹಾಡಿನಲ್ಲಿರುವ, "ಒಳ್ನುಡಿ ಕೇಳ್ದೊಡಮ್, ನೆನವುದೆನ್ನ ಮನಮ್ ಬನವಾಸಿ ದೇಶಮಂ" ನನ್ನ ಅನುಭವಕ್ಕೆ ಬಂತು. ಇನ್ನುಮುಂದೆ connect ಪದ ಕೇಳಿದಾಗಲೆಲ್ಲ "ಬನವಾಸಿ" ನೆನಪಾಗುತ್ತದೆ Laughing out loud ಹೆನ್ನನ್ನಿ ಕಣಯ್ಯಾ, ನಿನಗೆ, ಪಂಪ.

  • ಕನ್ನಡ
  • ಚುಟುಕು ಬರಹ
~.~
  • Sunil Jayaprakash ರವರ ಬ್ಲಾಗ್
  • Login or register to post comments
  • 218 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಾಗದ ಭೋಗದ....
  • ಬನವಾಸಿ ಆಸುಪಾಸಿನ ಕನ್ನಡ
  • ನೆಟ್ಗೆ ಕನೆಕ್ಟ್ ಆಗಿರೋ ಸಿಸ್ಟಮ್‌ನ ಐ .ಪ್ ಅಡ್ಡ್ರೆಸ್ ನಿಂದ ಆಕ್ಸೆಸ್ ಮಾಡಕಾಗುತ್ತಾ?
  • ೨೬-೩-೨೦೨೦ -ಗಣೇಶ
  • ಇಂಟರ್ನೆಟ್ ಗಾಗಿ ಏನೆಲ್ಲ (೧)
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
  • ಗುರುದತ್ ಎಂಬ ದುರಂತ ನಾಯಕ
  • ಸ್ವಲ್ಪನಗಿ
  • ಮೈಸೂರು ದಸರಾ ೨೦೦೮ ವೆಬ್ಕಾಸ್ಟ
  • ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
  • ಡೈರಿಯ ಕೆಲವು ಹಾಳೆಗಳು - ಭಾಗ ೯
  • ಅವಮಾನ್ ಅಂದರೆ ಯಾರು ? He man :-)
  • ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
  • ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:25am
  • anil.ramesh
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 11, 2008 - 9:13am
  • anil.ramesh
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:06am
  • ASHOKKUMAR
    ಉ: ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?
    October 11, 2008 - 9:00am
  • venkatesh
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 7:29am
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:36am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:29am
  • Chamaraj
    ಉ: ಒಂದು ಕಲಿತವನಿಗೆ ಇನ್ನೊಂದು ಸುಲಭ
    October 11, 2008 - 6:26am
  • Chamaraj
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:18am
  • Chamaraj
    ಉ: ಪತನದ ಕತೆ
    October 11, 2008 - 6:16am
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 600 ಅತಿಥಿಗಳು ಆನ್ಲೈನ್ ಇರುವರು.


ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator