ಆ ದೇವ ಈ ದೇವ | ಮಾದೇವನೆನಬೇಡ |
ಆ ದೇವರ ದೇವ ಭುವನದ ಪ್ರಾಣಿಗಳಿ - |
ಗಾದವನೆ ದೇವ ಸರ್ವಜ್ಞ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಬ್ರಾಹ್ಮಣರಿಗೆ ಪದುಳ

ಏನಿದು ಅಂತ ಯೋಚಿಸಿದ್ರಾ ? :D

ಏನಿದು ಅಲ್ಲ, ಯಾರಿದು ಅಂತ ಕೇಳಿ. ಇವನು ನನ್ನ ಸಿಕ್ಕಪಾಟ್ಟೆ ಎಂಥೂಸಿಯಾಸ್ಟ್ ಗೆಳೆಯ. ಇವನ ಬಗ್ಗೆ ನಾನು ಮುಖ್ಯವಾಗಿ ಹೇಳಬೇಕಾದ್ದು ಏನೆಂದರೆ, ಇವನು ಅರ್ಧ ಗಂಟೆಯಲ್ಲಿ ಇನ್ಸ್ಕ್ರಿಪ್ಟ್ ಕಲಿತು, ಈಗ ನನ್ನೊಡನೆ ಟೈಪಿಂಗ್ ಪೈಪೋಟಿಯಲ್ಲಿದ್ದಾನೆ. ಇವನು ಬ್ಲಾಗೋದು ಚಾಟೋದು ಎಲ್ಲ ಇನ್ಸ್ಕ್ರಪ್ಟಿನಲ್ಲಿ. ಹಾಗಾಗಿ ಇವನನ್ನು ನಿಮಗೆಲ್ಲರಿಗೆ ಪರಿಚಯಿಸಲು ನನ್ನಲ್ಲಿ ಇನ್ನಿಲ್ಲದ ಉತ್ಸಾಹ ಮನೆಮಾಡಿತು. ಈ ದಿನ ಸಂಪದದ ಒಂದು ಕೊಂಡಿಯನ್ನು ನೀಡಿದ ತಕ್ಷಣ ಸಂಪದದ ಸದಸ್ಯನಾಗಿಬಿಟ್ಟ.

ಅವನಿಗೆ ಪದುಳ(ಸ್ವಾಗತ) ಕೋರಿರಿ.

ಹಾಂ! ಮರೆತಿದ್ದೆ, ನಿಮಗೆ ಫೈರ್ಫಾಕ್ಸ್ ಬಗ್ಗೆ ಏನೇ ಬಳಕೆದಾರ ಅಥವಾ ಡೆವೆಲಪರ್ ಡೌಟುಗಳಿದ್ದರೂ ಕೇಳಿ, ನೆರವು ನೀಡಲು ಇವನು ರೆಡಿ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಬ್ರಾಹ್ಮಣರಿಗೆ ಪದುಳ

ASHOKKUMAR's picture

ಶ್ರೀರಂಗರಿಗೆ ಸ್ವಾಗತ. ಫೈರ್‌ಫಾಕ್ಸಿನಲ್ಲಿ ಪ್ರಜಾವಾಣಿ ಸರಿಯಾಗಿ ಬರಲು ಏನು ಮಾಡಬೇಕು?
*ಅಶೋಕ್

ಉ: ಬ್ರಾಹ್ಮಣರಿಗೆ ಪದುಳ

Sunil Jayaprakash's picture

ಅಶೋಕ್, ಪ್ರಜಾವಾಣಿಯವರು ಡೈನಾಮಿಕ್ ಫಾಂಟು ಬಳಸುತ್ತಿರುವುದರಿಂದ ಸದ್ಯಕ್ಕೆ ನೋಡಲು ಬರುವುದಿಲ್ಲ. ಆದ್ದರಿಂದ, ಫೈರ್ಫಾಕ್ಸಿನಿಂದ ಪ್ರಜಾವಾಣಿ ಓದಬೇಕೆಂದರೆ, http://prajavaniepap... ಏ ಗತಿ. prajavani.net ಕೆಲಸ ಮಾಡಲ್ಲ.

ನೋಡೋಣ, ಶ್ರೀ ಏನು ಹೇಳ್ತಾರೆ ಅಂತ!!!

ಉ: ಬ್ರಾಹ್ಮಣರಿಗೆ ಪದುಳ

brahmana's picture

ಸ್ವಾಗತಕ್ಕೆ ಧನ್ಯವಾದಗಳು.

ನೀವು ಈ ವಿಷಯ ಹೇಳುವ ತನಕ ನನಗೆ ಇದು ಗೊತ್ತೇ ಇರಲಿಲ್ಲ. ಅದು ಅಲ್ಲದೆ ಸುನಿಲ್ ಇದು ಡೈನಮಿಕ್ ಫಾಂಟ್ ಇಂದ ಆಗತ್ತೆ ಅಂತ ಹೇಳಿದ ಮೇಲೆ ನಾನು ಇದರ ಬಗ್ಗೆ ಸ್ವಲ್ಪ ಸಂಶೋಧನೆ ಮಾಡಿದೆ. ಸುನಿಲ್ ಹೇಳಿದ್ದು ಪಾರ್ಶಿಯಲಿ ಸರಿ. ಪ್ರಜಾವಾಣಿ ಫೈರ್ಫಾಕ್ಸ್ ನಲ್ಲಿ ಕಾಣದೆ ಇರಲು ಕಾರಣ ಫೈರ್ಫಾಕ್ಸ್ ಡೈನಮಿಕ್ ಫಾಂಟ್ ಸಪ್ಪೋರ್ಟ ಮಾಡಗಿರುವುದು ಅಶ್ಟೇ ಅಲ್ಲ. ಇದಕ್ಕೆ ಕಾರಣ ಪ್ರಜಾವಾಣಿ ವೆಬ್ ಸೈಟ್ ನಲ್ಲಿ Microsoft Patented Format ಆಗಿದ್ದ EOT (Embedded Open Type) fonts ಉಪಯೋಗಿಸಿರೋದು. ಇದನ್ನ Microsoft ಅವರು ಒಂದು standard ಮಾಡಲು ಜೆನೆವರಿಯಲ್ಲಿ ಬೇರೆಯವರಿಗೆ ಕೂಡ format ವದಗಿಸಿ ಕೊಟ್ಟರು. ಇದು ಇನ್ನು standard ಆಗಿಲ್ಲ. ಅದಕ್ಕೆ ಫೈರ್ಫಾಕ್ಸ್ ನಲ್ಲಿ ಇದಕ್ಕೆ ಸಪ್ಪೋರ್ಟ ಇನ್ನು ಇಲ್ಲ.

ಆದರೆ ಈ ನಿಟ್ಟಿನಲ್ಲಿ ಆಗಲೇ ಕೆಲಸ ಶುರುವಾಗಿದೆ. ಇಲ್ಲಿ ನೋಡಿ -- https://bugzilla.moz... . ಇದು ಸಂಚಿಕೆ ೩.೧ ರಲ್ಲಿ ಬರಬಹುದು.

ಅಲ್ಲಿಯ ವರೆಗೆ ಎಡ್ಜೆಶ್ಟ ಮಾಡಿ..

-- ಹರಿ ಓಂ.

ಉ: ಬ್ರಾಹ್ಮಣರಿಗೆ ಪದುಳ

vikashegde's picture

ಹೊಸಬರಿಗೆ ಸ್ವಾಗತ. ಆದ್ರೆ ಹೀಗೆ ಬ್ರಾಹ್ಮಣ, ಶೂದ್ರ ಅಂತೆಲ್ಲಾ ಯೂಸರ್ ನೇಮು ಇಟ್ಕೊಂಡ್ರೆ ಚರ್ಚೆಗಳಲ್ಲಿ ಅನಗತ್ಯ ಕಿರಿಕಿರಿಗಳು ಶುರುವಾಗೋ ಛಾನ್ಸ್ ಇರ್ತವೆ.
ಭಯಂಕರ ಎಂತೂಸಿಯಾಸಿಸಮ್ಮು ಅತಿಭಯಂಕರ ಆಗುತ್ತದೆ.

ಉ: ಬ್ರಾಹ್ಮಣರಿಗೆ ಪದುಳ

brahmana's picture

ಬ್ರಾಹ್ಮಣ ಶಬ್ದ ಬಂದಾಗಲೆಲ್ಲ ಶೂದ್ರ ಶಬ್ದ ಕೂಡ ಬಂದೇ ಬಿಡತ್ತೆ. ಆದರೆ ನಾನು ಇಲ್ಲಿ ಬ್ರಾಹ್ಮಣ ಅಂತ ಹೆಸರು ಇಟ್ಗೊಂಡಿದ್ದಕ್ಕೆ ಕಾರಣ ಜಾತಿ ಅಥವಾ ಮತ ಅಲ್ಲಾ. ನನ್ನ ಪ್ರಕಾರ ಒಬ್ಬ ವ್ಯಕ್ತಿ ತನ್ನ ಜಾತಿಯಿಂದ ಮಾತ್ರ ಬ್ರಾಹ್ಮಣನಾಗಲು ಸಾಧ್ಯವಿಲ್ಲ. ಬ್ರಹ್ಮಣ್ಯ ಅನ್ನೋದು ಒಂದು ಬದುಕುವ ರೀತಿ. ನನಗೆ ಬ್ರಹ್ಮಣ್ಯದ ಮೂಲ ನೀತಿ ಮುಖ್ಯ. ಅದರ ಜೊತೆ ಸೇರಿದ ಅಪನಂಬಿಕೆ ಹಾಗು ಜಾತಿ ಅನ್ನುವ ಯೇಚನೆ ಮತ್ತು ಅದೊಂದು ಸ್ಟೇಟಸ್ ಅನ್ನುವ ತಪ್ಪು ಕಲ್ಪನೆ ಅಲ್ಲ.

ಯಾವ ಮನುಷ್ಯ ತನ್ನ ಮನಸ್ಸನ್ನ ಹಿಡಿತದಲ್ಲಿಟ್ಟುಕೊಂಡು, ತನ್ನ ಗುರಿ ಮುಟ್ಟಲು ಸತತವಾಗಿ ಏಕಾಗ್ರ ಚಿತ್ತದಿಂದ ಕೆಲಸ ಮಾಡಿ, ತನ್ನ ಧೇಯವನ್ನು ಸಾಧಿಸುತ್ತಾನೋ, ಅವನು ಬ್ರಾಹ್ಮಣ.

ನಾನು ಆ ರೀತಿಯ ವ್ಯಕ್ತಿ ಆಗಬೇಕು. ಅಂತಹ ವ್ಯಕ್ತಿಗಿಂತ ಹೆಚ್ಚು ಗೌರವ ನಾನು ಬೇರೆ ಯಾರಿಗು ಕೊಡುವುದಿಲ್ಲ. ನನ್ನ ಕಣ್ಣಿನಲ್ಲಿ ನಾನು ಒಬ್ಬ ಗೌರವಾನ್ವಿತ ವ್ಯಕ್ತಿ ಆಗಬೇಕೆಂದರೆ ನಾನು ಬ್ರಾಹ್ಮಣನಾಗಬೇಕು. ಒಂದಿಲ್ಲ ಒಂದು ದಿನ ಆ ಮನುಷ್ಯನಾಗ್ತೀನಿ ಅನ್ನುವ ಕನಸ್ಸಿನಿಂದ ಈ ನನ್ನ ಹೆಸರು ಹೊರತಾಗಿ ಬೇರೆ ಯಾವ ಕಾರಣವು ಇಲ್ಲ.

ಸಂಪದದಲ್ಲಿ ಈ ನನ್ನ ಹೆಸರಿನಿಂದಾಗಿ ಅತಿಭಯಂಕರ ಘಟನೆ ನಡೆಯದಿರಲಿ ಅಂತ ಆಶಿಸುತ್ತ,

ಇಂತಿ ನಿಮ್ಮ
ಬ್ರಾಹ್ಮಣ.

-- ಹರಿ ಓಂ.

ಉ: ಬ್ರಾಹ್ಮಣರಿಗೆ ಪದುಳ

vikashegde's picture

ಸಮರ್ಥನೆಗಳು ಏನೇ ಇರಬಹುದು . ಆದರೆ ಸಾಮಾನ್ಯವಾಗಿ ಸಾರ್ವಜನಿಕ ಫೋರಂಗಳಲ್ಲಿ ಇಂತಹ ಜಾತಿ ಸೂಚಕ ಹೆಸರುಗಳನ್ನಿಟ್ಟುಕೊಂಡು ಫೀಲ್ಡಿಗಿಳಿಯುವುದು ಅನೇಕ ಆಭಾಸಗಳಿಗೆ, ತೊಂದರೆಗಳಿಗೆ ಎಡೆಮಾಡಿಕೊಡುವ ಎಲ್ಲಾ ಅವಕಾಶವೂ ಇರುತ್ತದೆ. ಆರ್ಕುಟ್ ಮತ್ತು ಸಂಪದ ಎರಡರಲ್ಲೂ ಖುದ್ದಾಗಿ ಕಂಡುಕೊಂಡದ್ದು ಇದು.

ಹರಿಪ್ರಸಾದರು ಈ ಯೂಸರ್ ನೇಮನ್ನು ಮರುಪರಿಶೀಲಿಸಬೇಕಾಗಿ ವಿನಂತಿ.

ಇದು ’ಬ್ರಾಹ್ಣಣ’ರ ವಿರುದ್ಧ ಮನವಿಯಲ್ಲ. ಆ ಯೂಸರ್ ನೇಮ್ ವಿರುದ್ಧ ಮನವಿ ಅಷ್ಟೆ.

ಉ: ಬ್ರಾಹ್ಮಣರಿಗೆ ಪದುಳ

mahesha's picture

ವಿಕಾಸ ಹೆಗಡೆಯವರು ಮಾತಿಗೆ ನನ್ನ ದನಿ ಸೇರಿದೆ....

ನಾಳೆ ಗೌಡ, ಕುರುಬ, ಲಿಂಗಾಯತ ಅಂತ ಹೆಸರು ಮಡಗಿಕೊಂಡರೆ, ಚನ್ನಾಗಿರಲ್ಲ.!

ಉ: ಬ್ರಾಹ್ಮಣರಿಗೆ ಪದುಳ

ರವಿ's picture

ನಿಮ್ಮ ಹೆಸರಲ್ಲಿರುವ ಹೆಗ್ಡೆಯೂ ಊಳಿಗಮಾನ್ಯ ಪದ್ಧತಿಯ ಅವಶೇಷ ಆದರಿಂದ ನಿಮ್ಮ ಯೂಸರ್ ಐಡಿಯನ್ನೂ ತೆಗೆದು ಹಾಕಬೇಕೆಂದು ನಾನು ಹೇಳುತೀನಿ! ;-)

ಇದರ ಬಗ್ಗೆ ಗೊತ್ತಾ?

ಉ: ಬ್ರಾಹ್ಮಣರಿಗೆ ಪದುಳ

mahesha's picture

ಊಳಿಗಮಾನದ ಬಗ್ಗೆ ಹೇಳೀ!

ಉ: ಬ್ರಾಹ್ಮಣರಿಗೆ ಪದುಳ

Sunil Jayaprakash's picture

ಹೆಗ್ಡೆ, ಸಿಕ್ಕಿಹಾಕಿಕೊಂಡ್ಯಲ್ಲಪ್ಪಾ!!! ;)

ಉ: ಬ್ರಾಹ್ಮಣರಿಗೆ ಪದುಳ

vikashegde's picture

ಗುರುಗಳೇ ಇಲ್ಲಿ ನಾನು ಸಂವಿಧಾನದ ಬಗ್ಗೆ ಅಥವ ಯಾರ ಹಕ್ಕನ್ನಾಗಲೀ ಕಿತ್ತುಕೊಳ್ಳುವ ಬಗ್ಗೆ ಮಾತಾಡುತ್ತಿಲ್ಲ.
ಸಂಪದದಲ್ಲಿ ಅನಗತ್ಯ ಕಿರಿಕಿರಿಗಳು ಆಗಬಾರದು ಎನ್ನುವ ಉದ್ದೇಶದಿಂದ ಹೇಳಿದ್ದು. ಸುಮ್ನೆ ವಿತಂಡವಾದ ಬೇಡ.

ಉ: ಬ್ರಾಹ್ಮಣರಿಗೆ ಪದುಳ

mahesha's picture

ಹು ಬ್ರಾಹ್ಮಣ ಅನ್ನೋ ಅಯ್ಡಿಯಿಂದ ಬರೆದುದನ್ನು ಬ್ರಾಹ್ಮಣರು ಬರೆದುದು ಎಂದೇ ಅನ್ನಿಸೋದು...

ವಿಕಾಸ ಹೆಗಡೆ ಮತ್ತು ನನ್ನಂತ್ಹ ಬ್ರಾಹ್ಮಣರಿಗೆ ನಮ್ಮ ಜಾತಿಯ ಹೆಸರಿನ ಈ ರೀತಿಯ ಬಳಕೆಗೆ ಒಪ್ಪಿಗೆಯಿಲ್ಲ..

"ಹೆಗಡೆ" ಅನ್ನೋದು ಮನೆತನದ ಹೆಸರೂ ಕೂಡ.

ಉ: ಬ್ರಾಹ್ಮಣರಿಗೆ ಪದುಳ

Sunil Jayaprakash's picture

ಹು ಬ್ರಾಹ್ಮಣ ಅನ್ನೋ ಅಯ್ಡಿಯಿಂದ ಬರೆದುದನ್ನು ಬ್ರಾಹ್ಮಣರು ಬರೆದುದು ಎಂದೇ ಅನ್ನಿಸೋದು...

ಹೇಯ್, ಒಂದ್ನಿಮ್ಶ, ಅನ್ನಿಸಿದರೆ ಏನು ತಪ್ಪು ? "ಬಯಾಸಿಲ್ಲದ ಮನದವರಿಗೆ" ಪ್ರಿಜುಡೈಸ್ ಇರಲ್ಲ.

ಉ: ಬ್ರಾಹ್ಮಣರಿಗೆ ಪದುಳ

vikashegde's picture

--------"ಬಯಾಸಿಲ್ಲದ ಮನದವರಿಗೆ" ಪ್ರಿಜುಡೈಸ್ ಇರಲ್ಲ.---------

ಸನ್ನು ಮೂನು ಜೊತೆಗೆ ಈ ಬಯಾಸು ಪ್ರಿಜುಡೈಸನ್ನೂ ಕನ್ನಡದಲ್ಲಿ ಉಳಿಸ್ರೀ ಸುನಿಲ್.. ಆಚಾರ ಹೇಳೋದಕ್ಕೆ ಬದನೆಕಾಯಿ ತಿನ್ನೋದಕ್ಕೆ ಆಗ್ಬಾರ್ದು.

ಉ: ಬ್ರಾಹ್ಮಣರಿಗೆ ಪದುಳ

mahesha's picture

:)

ಇದೊಳ್ಳೆ "ಬದನೇಕಾಯಿ ಬ್ರಾಹ್ಮಣ"ರ ರಗಳೆ :)

ಉ: ಬ್ರಾಹ್ಮಣರಿಗೆ ಪದುಳ

Sunil Jayaprakash's picture

ಆ "ಬಯಾಸಿಲ್ಲದ ಮನ" ;) ನನ್ನ ಮಾತಲ್ಲ, ವಿಕಾಸ್. ನೆನ್ನೆಯಷ್ಟೇ ಒಬ್ಬರು ಬರೆದಿದ್ದಾರೆ, ಸಂಪದವನ್ನು ಯಾವಾಗಲೂ ಓದುವ ತಮಗೆ ಗೊತ್ತೇ ಇದೆ ;) ಅದು ಯಾರು ಅಂತ

ಉ: ಬ್ರಾಹ್ಮಣರಿಗೆ ಪದುಳ

Sunil Jayaprakash's picture

ಯಾರು ಆ ಮಾನುಭಾವರು ಅಂತ ತಿಳ್ಕೋಬೇಕಿದ್ರೆ, ಇಲ್ಲೇ ಚಿಟ್ಕಿ, ಬಯಾಸಿಲ್ಲದ ಮನದವರು. ಬದನೆಕಾಯಿ ರಗಳೆ ... ನಿಜ .... ನಿಜ :D

ಉ: ಬ್ರಾಹ್ಮಣರಿಗೆ ಪದುಳ

mahesha's picture

"ನಾನಂತೂ ಒಪ್ಪಲಾಱೆ"

:)

ಉ: ಬ್ರಾಹ್ಮಣರಿಗೆ ಪದುಳ

ಸಂಗನಗೌಡ's picture

’ಬಯಾಸಿಲ್ಲದ ಮನ’ = ’ಇಬ್ಬಗೆ ಇಲ್ಲದ ಮನ’
ಪ್ರಿಜುಡೈಸ್ = ಹಳೆಯ ನಂಬುಗೆ?

ಉ: ಬ್ರಾಹ್ಮಣರಿಗೆ ಪದುಳ

mahesha's picture

ನೀವು ಬದನೇಕಾಯಿ ಅಂದುದಕ್ಕೆ ಪಾಪಾ ಹೆ ಹೆ!!

ಬ್ರಾಹ್ಮಣರು ಕೊಡುವ ಸಬೂಬು ಸರಿಯಿಲ್ಲ.. ಬ್ರಾಹ್ಮಣ ಅನ್ನೋದಕ್ಕೇ ಏನ್ ಬೇಕಾದ್ರು ಅರ್ತ ತಾವು ಕೊಟ್ಟಿಕೊಂಡರೂ.. ಈಗಿನ ಸಮಾಜದಲ್ಲಿ ಆ ಪದ ಒಂದು ಸಮುದಾಯ ಹೆಸರು..!

ನಾಳೆ ಮುಸ್ಲಿಂ ಅಂತ ಅಯ್ಡಿ ಇಟ್ಕೊಂಡ್ರೆ ಚನ್ನಾಗಿರತ್ತಾ?

ಉ: ಬ್ರಾಹ್ಮಣರಿಗೆ ಪದುಳ

vikashegde's picture

ಬರೇ ಬ್ರಾಹ್ಮಣ ಆಗಿದ್ದಕ್ಕೆ ಇಷ್ಟ ಇಲ್ಲಾ ಅಂತ ಅಲ್ಲ. ಈ ರೀತಿ ಯಾವುದೇ ಜಾತಿಯನ್ನು ಪ್ರತಿನಿಧಿಸುವ ಹೆಸರಿಟ್ಟುಕೊಂಡು ಪಬ್ಲಿಕ್ಕಾಗಿ ಮಾತಾಡುವುದು ಸರಿಯಲ್ಲ.
ಇನ್ನೊಬ್ಬ ಇನ್ನೆನೋ ಐಡಿ ಇಟ್ಟುಕೊಂಡು ಬಂದು ಅವನೇನೋ ಹೇಳಿ, ಅದಕ್ಕೇ ಈ ಮಹಾಬ್ರಾಹ್ಮಣರೇನೋ ಉತ್ತರ ಹೇಳಿ ಅವನು ಇವರ ಹೆಸರನ್ನು ಉಲ್ಲೇಖಿಸುವಾಗ ಇಡೀ ಬ್ರಾಹ್ಮಣ ಸಮುದಾಯಕ್ಕೆ ನೋವಾಗುವಂತೆ ಅರ್ಥ ಬಂದು... ಅನಗತ್ಯ ಕಿರಿಕಿರಿಗಳು.

ಉ: ಬ್ರಾಹ್ಮಣರಿಗೆ ಪದುಳ

mahesha's picture

ಇದೇ.. ಇಡೀ ಬ್ರಾಹ್ಮಣ ಜಾತಿಗೆ ವಕ್ಕರಿಸುತ್ತೆ...

ಬೇಕಾದ್ರ ಬ್ರಹ್ಮ ಅಂತ ಇಟ್ಕೊಳ್ಳಿ.. ಬ್ರಾಹ್ಮಣ,ವಿಪ್ರ,ಗೌಡ,ಮುಂತಾದ ಜಾತಿ ಹೆಸರುಗಳು ಬೇಡ.!

ಉ: ಬ್ರಾಹ್ಮಣರಿಗೆ ಪದುಳ

ಮನಹ್ಪಠಲ's picture

ಶ್ರಿರ೦ಗರ ಯುಸರ್ ಐಡಿ ಬಗ್ಗೆ ತಪ್ಪೇನಿದೆ?
ನಾವಗಳೇನ್ ಮಿಲಿಟರಿ ಅತ್ವಾ ಕಮ್ಮ್ಯುನಿಸ್ತಿನ ಆಡಲಿತದದ್ದೇವಾ, ಬೇರೊಬ್ಬರ ಅನಿಸಿಕೆಗಳನ್ನ ಮೆಟ್ಟಿಡೋದಕ್ಕೆ(ತುಳಿದಿಡೊದು)? ಆ ತರಹ ಆಡಳಿತ ಇದ್ದರೆ ಆ ದೇಶಗಳ ಹಣೆ ಬರಹ. ಏನಿದು ಕಾನ್ಸ್ಟ್ಟ್ಯೂಶನ್ನ ಲಿ೦ಕ್ನ ತೋರಿಸಿ ಹೆದರ್ಸ್ತೀರಲ್ಲಾ? ಅ೦ತರಜಾಲಕ್ಕೆ ಯಾವ ಕಾನ್ಸ್ಟ್ಟ್ಯೂಶನ್ ಇದೆ? ಬೇಕೂ ಬೇಡಗಳಿ೦ದ ಹಿಡಿದು ಪೋರ್ನು, ಭಯೋತ್ಪಾದಕರ ಚಟುವಟಿಕೆಗಳಿಗೆ ಸ೦ಬ೦ದ ಪಟ್ಟ ಇನ್ಫೋಗಳು ಬಿಟ್ಟೀಯಾಗ್ ಓಡಾಡ್ತಾ ಇದೆಯಲ್ಲ. ಕಾನ್ಸ್ಟ್ಟ್ಯೂಶನ್ನ ಜೊತೆ ಸೇರಿ ಮೊದಲು ಇವನ್ನಾ ತೆಗೆಸಿ ನೋಡಮ. ಇನ್ನೂ ಇದಕ್ಕೂ ಮೀರಿ ಇವರ ಯುಸರ್ ಐಡಿ ತೆಗೆದರೆ ನನ್ನ ಹಾಗೂ ಸ೦ಪದದ ಕೊನೇ ದಿನ. ಮತ್ತೆ ಬರಲ್ಲಾ.

ಉ: ಬ್ರಾಹ್ಮಣರಿಗೆ ಪದುಳ

vikashegde's picture

ಆ ಲಿಂಕ್ ಕೊಟ್ಟವರೇ ಬೇರೆಯವ್ರು, ಯೂಸರ್ ನೇಮ್ ತೆಗೀರಿ ಅಂತ ಹೇಳಿದವ್ರೇ ಬೇರೆಯವ್ರು. ಪಾಪ, ಇವರು ಟೆನ್ಸನ್ ಆಗಿ ಎರಡನ್ನೂ ಮಿಕ್ಸ್ ಮಾಡಿ ಏನೇನೋ ಕನ್ ಫ್ಯೂಸ್ ಆಗಿಬಿಟ್ಟಿದ್ದಾರೆ. ಸಂಪದವನ್ನೇ ಕೊನೆ ಮಾಡುವ ಪ್ರಜಾತಾಂತ್ರಿಕ ಬೆದರಿಕೆ ಹಾಕಿದ್ದಾರೆ. :)

ಉ: ಬ್ರಾಹ್ಮಣರಿಗೆ ಪದುಳ

anil.ramesh's picture

ಶ್ರೀರಂಗರವರಿಗೆ ಸಂಪದಕ್ಕೆ ಸುಸ್ವಾಗತ...
ಫೈರ್ಫಾಕ್ಸ್ ನಲ್ಲಿ ಸಧ್ಯಕ್ಕೆ ಏನೂ ಡೌಟುಗಳಿಲ್ಲ, ಮುಂದೆ ಏನಾದ್ರೂ ಡೌಟ್ ಬಂದ್ರೆ ಖಂಡಿತ ನಿಮ್ಮ ನೆರವು ಪಡೆಯುತ್ತೇನೆ... :-)

ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.

ಉ: ಬ್ರಾಹ್ಮಣರಿಗೆ ಪದುಳ

brahmana's picture

ಸ್ವಾಗತಕ್ಕೆ ತುಂಬಾ ಧನ್ಯವಾದಗಳು. (ಎಲ್ಲರಿಗೂ). ಸುನಿಲ್ ನನ್ನ ಬಗ್ಗೆ ತುಂಬಾನೆ ಹೇಳಿಬಿಟ್ರು ಅಂತ ಅನಸತ್ತೆ. ಇರಲಿ ಬೇಜಾರಿಲ್ಲ.
ಮೊದಲನೇಯದಾಗಿ ಈ ಕನ್ನಡ ವೆಬ್ ಸೈಟ್ ನೋಡಿ ತುಂಬಾ ಸಂತೋಷವಾಯ್ತು. ಸುನಿಲ್ ಕನ್ನಡ ಟೈಪ್ ಮಾಡೋದಕ್ಕೆ ಕಲಸಿದ ಮೇಲೆ ನನಗೆ ಚ್ಯಾಟ್ ಬಿಟ್ಟು ಬೇರೆ ಏನಾದ್ರು official ಆಗಿ ಬರೀಬೇಕಿತ್ತು. ಅದು ರೆಗುಲರ್ ಆಗಿ. ಈಗ ಅದೂ ಸಿಕ್ತು ನನಗೆ. ಈ ಎರಡೂ ವಿಷಯಗಳ ಬಗ್ಗೆ ಅರಿವು ಮಾಡಿಸಿದ ಸುನಿಲ್ ಗೆ ತುಂಬಾ ತುಂಬಾ ನನ್ನಿ.

ಆಮೇಲೆ, ನಾನೇನು firefox ಪಂಡಿತ ಅಲ್ಲ. ಅಲ್ಪ ಸ್ವಲ್ಪ ಗೊತ್ತು. ನನಗೆ ಗೊತ್ತಿದ್ದ ಮಟ್ಟಿಗೆ ಸಹಾಯ ಮಾಡ್ತೀನಿ.

ನನ್ನಿ.

ನನ್ನ ಕನ್ನಡ ವ್ಯಾಕರ್ಣದಲ್ಲಿ ತಪ್ಪುಗಳಿದ್ದರೆ ಕ್ಷಮಿಸಿ.

-- ಹರಿ ಓಂ.

ಉ: ಬ್ರಾಹ್ಮಣರಿಗೆ ಪದುಳ

Sunil Jayaprakash's picture

ಶ್ರೀ, ಕನ್ನಡ ವ್ಯಾಕರಣದ ಬಗ್ಗೆ ನೀನೇನೂ ಚಿಂತೇನೇ ಮಾಡಬೇಕಿಲ್ಲ. ಪೂರ್ವಹೞೆಗನ್ನಡದಿಂದ ಹಿಡಿದು "ವೊಸಗನ್ನಡ" ( ಹಾಗೆಯೇ "ವೊಸವೊಸ" ಮುಂದಿನ ಪೀಳಿಗೆಯ ಕನ್ನಡದ) ತನಕ ಸಿಕ್ಕಾಪಟ್ಟೆ ತಲೆಗೆಡಿಸಿಕೊಳ್ಳುವ ಮಂದಿ, ಹಾಗೆಯೇ ವ್ಯಾಕರಣದ ಬಗ್ಗೆ ಕಿಂಚಿತ್ತೂ ಯೋಚಿಸದ ಮಂದಿ, ಹೀಗೆ ಎಲ್ಲ ರೀತಿಯ ಗೆಳೆಯರೂ ಸಂಪದದಲ್ಲಿ ಸಿಗುತ್ತಾರೆ :P

ಉ: ಬ್ರಾಹ್ಮಣರಿಗೆ ಪದುಳ

hamsanandi's picture

:) :) :)

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ಉ: ಬ್ರಾಹ್ಮಣರಿಗೆ ಪದುಳ

ಮನಹ್ಪಠಲ's picture

ಹೌದ್ರಿ ಸುನಿಲ್,

Quote:
ಹಾಗೆಯೇ ವ್ಯಾಕರಣದ ಬಗ್ಗೆ ಕಿಂಚಿತ್ತೂ ಯೋಚಿಸದ ಮಂದಿ
.
ನೀವು ಹೀಗೆ ಹೇಳಿದವರಲ್ಲಿ ನಾನು ಒಬ್ಬ.
ಕೆಲವೊ೦ದ್ಸಲ ತರಾತುರಿಯಲ್ಲಿ ವ್ಯಾಕರಣದಲ್ಲಿ ತಪ್ಪುಗಳನ್ನು ಮಾಡ್ತೇವೆ.
ಕಾಮೆ೦ಟ್ ಮುನ್ನೋಟದ ಗು೦ಡಿಯನ್ನು ಒತ್ತದೇ ಸೀದ ಪ್ರತಿಕ್ರಿಯೆ ಸೇರ್ಸಿರ್ತೇವೆ ಲೇಖನಗಳಿಗೆ.....
ನನಗ೦ತು ಆಡುಭಾಷಯಲ್ಲೆ ಬರೆಯೋದೆ ಇಷ್ಟ ಆಗುತ್ತೆ..... ಇದೇನ್ ಸರೀನಾ?

ನಿಮ್ಮವ
ಕ್ರಿಸ್ನ

ಉ: ಬ್ರಾಹ್ಮಣರಿಗೆ ಪದುಳ

Sunil Jayaprakash's picture

ಕನ್ನಡವೇನು ವೈಯಾಕರಣಿಗಳ ಸ್ವತ್ತೇ !!!! ನಮ್ಮ ಬರವಣಿಗೆ ನಮಗೆ ತುಂಬಾ ಸಂತೋಷ ನೀಡುತ್ತದೆ ಎಂಬುದೇ ನಿಜವಾದರೆ, ನಮಗೆ ಹೇಗೆ ಇಷ್ಟವೋ ಹಾಗೆಯೇ ಬರೆಯೋದಪ್ಪಾ, ಏನೀಗ :P

ಉ: ಬ್ರಾಹ್ಮಣರಿಗೆ ಪದುಳ

ಮನಹ್ಪಠಲ's picture

:)

ಉ: ಬ್ರಾಹ್ಮಣರಿಗೆ ಪದುಳ

mahesha's picture

ಬ್ರಾಹ್ಮಣ ಶೂದ್ರ ವಯಿಶ್ಯ ಅಂತ ಅಯ್ಡಿಗಳನ್ನು ಬಿಡುವುದು ಹಿಡಿಸಲಿಲ್ಲ.

ಉ: ಬ್ರಾಹ್ಮಣರಿಗೆ ಪದುಳ

brahmana's picture

ನನ್ನ ಈ ಐಡಿಯ ಕಾರಣ ನಿಮಗೆ ಗೊತ್ತಿಲ್ಲ ಅಂತ ಕಾಣತ್ತೆ. ನನ್ನ ಮುಂಚಿನ ಪ್ರತಿಕ್ರಿಯೆ ಓದಿ. ಎಲ್ಲಾ ಗೊತ್ತಾಗತ್ತೆ.

-- ಹರಿ ಓಂ.

ಉ: ಬ್ರಾಹ್ಮಣರಿಗೆ ಪದುಳ

ಮನಹ್ಪಠಲ's picture

ಕೈಗಳಲ್ಲಿ ಎಲ್ಲಾ ಬೆರಳುಗಳು ಒ೦ದೇ ತರ ಇರಲ್ವಲ್ಲಾ? ನಾನು ಹೀಗೆ ಹೇಳಿದ್ದು ಮಾತು ಬೆಳಸಿಕ್ಕಲ್ಲ ಮಾರಾರ್ಯ್ರೆ.

ಉ: ಬ್ರಾಹ್ಮಣರಿಗೆ ಪದುಳ

vikashegde's picture

ಸಿಕ್ಕಾಪಟ್ಟೆ ಎಂತೂಸಿಯಾಸ್ಟಿಕ್ಕು ಗೆಳೆಯರಿಗೆ ಎಂತೂಯಾಸಿಸಮ್ಮು ಇಸ್ಟು ಬೇಗ ಕಡಿಮೆ ಆಯಿತಾ.? ಪತ್ತೆನೇ ಇಲ್ಲ ದೇವ್ರು !

ಸುನಿಲ್, ಕರೆತನ್ನಿ ಅವರನ್ನ ಮತ್ತು ಎಂತೂಸಿಯಾಸಿಸಮ್ಮನ್ನ.

ಉ: ಬ್ರಾಹ್ಮಣರಿಗೆ ಪದುಳ

mahesha's picture

ಬ್ರಿಂಜಾಲ್!

ಉ: ಬ್ರಾಹ್ಮಣರಿಗೆ ಪದುಳ

mahesha's picture

:)

ಅಮೆರಿಕದೋರು ನೀವು

ಉ: ಬ್ರಾಹ್ಮಣರಿಗೆ ಪದುಳ

Sunil Jayaprakash's picture

ವಾಂಗಿ

ಉ: ಬ್ರಾಹ್ಮಣರಿಗೆ ಪದುಳ

brahmana's picture

ಕ್ಷಮಿಸಿ.. ಎಂಥುಸಿಯಾಸಂ ಎನ್ ಕಡಿಮೆಯಾಗಿಲ್ಲ. ಅದೇ.. ಇದ್ದಿದ್ದೇ, ಕೆಲಸ ಇತ್ತು. ಅದಾದ ಮ್ಯಾಲೆ ಊರಿಗೆ ಹೋಗಿದ್ದೆ. ಅಲ್ಲಿ ಇಂಟರ್ನೆಟ್ ಇಲ್ಲ. ನಿನ್ನೇ ವಾಪಸ್ ಬಂದೆ. ಸುನಿಲ್ ಇಲ್ಲಿ ನಡೆದ ಚರ್ಚೆ ಬಗ್ಗೇ ಹೇಳಿದ್ರು. ನಿಮ್ಮೆಲ್ಲರ ವಿಚಾರ ಮತ್ತ ಕಾಳಜಿಗೆ ಧನ್ಯವಾದ. ಆದ್ರ ನನಗೇನು ಈ ಹೆಸರಿನೊಳಗ ತೊಂದರೆ ಆಗಿಲ್ಲ. ಇದೇ ಹೆಸರಿಟ್ಕೊಂಡು ಮುಂದ ವರಸ್ತೀನಿ. ಏನರೇ ಆದ್ರ ನೋಡುಣಂತ. ಇಲ್ಲಿಗೆ ಈ ಹೆಸರಿನ ಚರ್ಚೆ ಮುಗಸೂಣು.

ನನ್ನಿ.

ಇದನ್ನ ನಿನ್ನೇ ಹಾಕಬೇಕಂದ್ರ ಏನೋ ಎರರ್ ಕೊಟ್ತು. ಅದಕ್ಕೇ ಇವತ್ತ ಹಾಕಿದೇ.

-- ಹರಿ ಓಂ.