ಕನ್ನಡ ಮಾರುಕಟ್ಟೆ
ಬೆಂಗಳೂರಿನ ಬಸವನಗುಡಿ ನ್ಯಾಶನಲ್ ಕಾಲೇಜಿನ ಬಯಲಿನಲ್ಲಿ "ಕಾವೇರಿ ಸರಸ್ - ಭಾರತದ ಗುಡಿಕೈಗಾರಿಕೆಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ" ನಡೀತಾ ಇದೆ. ನೆನ್ನೆ ಅಲ್ಲಿಗೆ ಹೋಗಿದ್ದೆ. ದೇಶದ ಬೇಬೇರೆ ಸೀಮೆಯಿಂದ ಜನ ಬಂದು ತಮ್ಮ ಗುಡಿ ವಸ್ತುಗಳನ್ನು ಇಟ್ಟಿದ್ದಾರೆ. ಹೀಗೆ ಸಾಗುತ್ತಿದ್ದಾಗ, ಒಂದು ಕಡೆ ಚೆನ್ನಪಟ್ಟಣದ ಗೊಂಬೆಗಳು ಕಣ್ಣಿಗೆ ರಾಚಿದವು. ಅಲ್ಲಿ ಬಗೆಬಗೆಯ ಗೊಂಬೆಗಳು ಇದ್ದವಾದರೂ ಹೆಚ್ಚು ಮಾರಾಟವಾಗುತ್ತಿದ್ದುದು, ಗಿರಗಿಟ್ಲೆ ಜಾತಿಯ ಒಂದು ಆಟದ ಸಾಮಾನು. ಇದರ ಹೆಸರು ವಿಸ್ಲರ್. ನಾನು ಎಲ್ಲ ಮಳಿಗೆಗಳ ಮೇಲೂ ಒಂದು ಕಣ್ಣು ಹಾಯಿಸಿ ಆಮೇಲೆ ಬಂದು ಕೊಂಡುಕೊಳ್ಳೋಣ ಅಂತ ಮುನ್ನಡೆದೆ. ಚ.ಪ ಬೊಂಬೆಗಳನ್ನು ಮಾರುತ್ತಿದ್ದ ನಾಲ್ಕು ಮಳಿಗೆಗಳು ಅಲ್ಲಿದ್ದವು. ಎರಡು ಅಂಗಡಿಯಲ್ಲಿ ವಿಸ್ಲರಿಗೆ ೧೫ರೂ, ಮತ್ತೆರೆಡು ಮಳಿಗೆಯಲ್ಲಿ ೨೫ರೂ. ಒಂದು ಸಲ ಪೂರ್ತಿ ಕಣ್ಣಾಡಿಸಿ ಮೊದಲ ಅಂಗಡಿಗೆ ಬಂದರೆ, ವಿಸ್ಲರ್ ಬುಟ್ಟಿ ಬರಿದಾಗಿತ್ತು. ಪಕ್ಕದ ಅಂಗಡಿಗೆ ನಡೆದೆ, ಪುಣ್ಯಕ್ಕೆ ನನಗೊಂದು ಸಿಕ್ಕಿತು. ನಾನು ಕೊಂಡುಕೊಳ್ಳುವಾಗಲೇ ಇನ್ನೂ ಒಬ್ಬರು ಇದನ್ನು ಕೊಂಡರು. ಮತ್ತೊಬ್ಬರು ಖರೀದಿಸಲೋ ಬೇಡವೋ ಎಂಬ ದ್ವಂದ್ವದಲ್ಲಿದ್ದರು. ತಕ್ಷಣವೇ ಮೊದಲ ಅಂಗಡಿಯವನೊಬ್ಬ, ರೀ ದಯವಿಟ್ಟು ೧೫ ವಿಸ್ಲರ್ ಕೊಡ್ರೀ, ಬೆಳಗ್ಗೆ ನಮ್ಮ ಮಳಿಗೆಯ ಮಾಲು ಬಂದು ತಕ್ಷಣ ಕೊಟ್ಟುಬಿಡ್ತೀನಿ ಅಂತ ಗೋಗರೆದು ಪಡೆದುಕೊಂಡು ಹೋದ. ಈ ವಿಸ್ಲರ್ ಮಾರಾಟಕ್ಕೂ ಕನ್ನಡಕ್ಕೂ ಏನೂ ಸಂಬಂಧ ಅಂತ ನೀವು ತಲೆಕೆರೆದುಕೊಂಡಿರಾದರೆ ಮುಂದೆ ನೋಡಿ.
ಈ ವಿಸ್ಲರ್ ಏಕೆ ಮುಖ್ಯವಾಗುತ್ತದೆ. ಗಾಳಿಪಟ ಸಿನಿಮಾದ "ಮಿಂಚಾಗಿ ನೀನು ಬರಲು" ಹಾಡಿನಲ್ಲಿ ಗಣೇಶ್ ಈ ವಿಸ್ಲರ್ ಇಟ್ಕೊಂಡು ಆಟ ಆಡ್ತಾ ಇರ್ತಾನೆ. ವೀಡಿಯೋ ನೋಡುವುದಿದ್ದರೆ, ಯೂಟ್ಯೂಬಿನ ಈ ಲಿಂಕನ್ನು ಬಳಸಿ. ಸರಿಸುಮಾರು ೩:೧೦-೩:೨೫ರ ತನಕ ಈ ವಿಸ್ಲರಿನ ಭರಾಟೆ ನೋಡಬಹುದು.
ಈಗ ನೀವು ಊಹಿಸಬಹುದಲ್ವೇ, ಏಕೆ ವಿಸ್ಲರ್ ಅಷ್ಟು ಮಾರಾಟವಾಗುತ್ತಿದೆ ಎಂಬುದನ್ನು. ಹೀಗೆ ನೋಡಿ, ನಾವು ಒಂದು ಒಳ್ಳೆಯ "ಕನ್ನಡ ಹಾಡಿನ" ಮೂಲಕ ಕನ್ನಡಿಗರ ಬೇಬೇರೆ ಉತ್ಪನ್ನಗಳ ಮಾರುಕಟ್ಟೆಯನ್ನೂ ಹೆಚ್ಚಿಸುತ್ತಿದ್ದೇವೆ. ಒಳ್ಳೆಯ ಬೆಳವಣಿಗೆ ಅಲ್ಲವೇ. ಹೀಗೆ ನಾವುಗಳು, "ಕನ್ನಡ" ಅಂದರೆ ಬರೀ ನುಡಿ, ಸಾಹಿತ್ಯ, ಜ್ಞಾನಪೀಠ ಪ್ರಶಸ್ತಿ ಅಂತ ಸೀಮಿತವಾಗಿ ತಿಳಿಯದೆ ಸಂಸ್ಕೃತಿ, ಜನಾಂಗ, ಮಾರುಕಟ್ಟೆ, ಕಸುಬು., ಮುಂತಾದವು ಎಂಬುದನ್ನು ಮನದಟ್ಟು ಮಾಡಿಕೊಂಡು ಮುನ್ನಡೆಯೋಣ.

- Sunil Jayaprakash ರವರ ಬ್ಲಾಗ್
- Login or register to post comments
- 331 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಕನ್ನಡ ಮಾರುಕಟ್ಟೆ
ಸುನೀಲ್,
ವಿಸ್ಲರ್ ಮಾರಾಟದಲ್ಲಿ ಕನ್ನಡದ ಪಾತ್ರ - ಒಳ್ಳೆಯ ವಿಚಾರ. ಸೂಕ್ಷ್ಮವನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.
"Applied Physics", "Applied Mathematics" ಇದ್ದಹಾಗೆ ಇದು "Applied ಕನ್ನಡ"!
ಉ: ಕನ್ನಡ ಮಾರುಕಟ್ಟೆ
ನನ್ನಿ. ನಾವು ಚಿಕ್ಕವರಿದ್ದಾಗ ಸೋಡಾ ಬಾಟಲಿಯ ಮುಚ್ಚಳಗಳಿಂದ ಇದನ್ನ ಮಾಡ್ತಾ ಇದ್ವಿ. "ಕಾವೇರಿ ಸರಸಿನಲ್ಲಿ" ಮರದ ಆಟ ಸಾಮಾನುಗಳು ತುಂಬಾ ಇವೆ. ಬಣ್ಣಬಣ್ಣದ ಕೀಚೈನು, ಅದೆಂತದೋ "ಯೋಯೋ", ಕಾರು, ಮಂಟಪ, ಇನ್ನೂ ಮುಂತಾದವು.
ಒಂದು ಕಡೆ ತಿರುಪತಿ ತಿಮ್ಮಪ್ಪನನ್ನು ಕಟೆದು ನಿಲ್ಲಿಸಿದ್ದಾರೆ. ಅದರ ಬೆಲೆ ೪ ಲಕ್ಷ ಮಾತ್ರ!!!
ಉ: ಕನ್ನಡ ಮಾರುಕಟ್ಟೆ
ಚನ್ನೀಲ,
ಸಕ್ಕತ್ ಕಣೊ ನೀನು.. ಏನೇನೊ ತಲೆ ಓಡಿಸ್ತಿಯಪ್ಪ. ಹಂಚಿಕೊಂಡಿದ್ದಕ್ಕೆ ನನ್ನಿ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡ ಮಾರುಕಟ್ಟೆ