ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › Sunil Jayaprakash ರವರ ಬ್ಲಾಗ್

"ಮೇಧ" ನಾಮೋ ಯದ್ವಾ ತದ್ವಾ ಭವಿಷ್ಯತಿ

February 29, 2008 - 2:18pm — Sunil Jayaprakash

ಇತ್ತಿತ್ತಲಾಗಿ ತುಂಬಾ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು "ಮೇಧ". ನನಗೆ ಈ ಹೆಸರನ್ನು ಕೇಳಿದರೆ, ಯಾಕಪ್ಪಾ ಈ ತರಹ ಎಲ್ಲ ಹೆಸರು ಇಡ್ತಾರೆ ಅಂತ ಅನ್ನಿಸತ್ತೆ.

ಮೇಧ ಎಂದರೆ ತುಂಬಾ ಅರ್ಥಗಳಿವೆ. ಕೆಲವನ್ನ ಇಲ್ಲಿ ಹೇಳ್ತೀನಿ.

೧. ಬಲಿ - ಒಮ್ಮೆ ಏನಾಯಿತೆಂದರೆ ಗೊತ್ತಾ, ಒಬ್ಬರು "ಮೇಧ" ಅಂತ ಹೆಸರು ಇಟ್ಟುಕೊಂಡಿದ್ದರು. ನಾನು ಅವರಿಗೆ ಅದು, "ಮೇಧ"ವೋ "ಮೇದ"ವೋ ಅಂತ ಕೇಳಿದಾಗ ಅವರು ಹೆಮ್ಮೆಯಿಂದ "ಮೇಧ" ಎಂದರು. ಮೇಧ ಅಂದರೇನು ಅಂತ ಕೇಳಿದ್ದಕ್ಕೆ, "ನೀವು ಅಶ್ವಮೇಧಯಾಗ ಕೇಳಿಲ್ವಾ. ಇಡೀ ಪ್ರಪಂಚವನ್ನ ಗೆದ್ದು ಚಕ್ರವರ್ತಿಯಾಗಕ್ಕೆ ಬಳಸಲ್ವಾ ಬಿಳಿ ಕುದುರೆಯನ್ನ ಬಳಸಲ್ವಾ ಅದು" ಅಂತ ಹೇಳಿದರು. ನಾನು ಆಗ, "ಅಯ್ಯೋ ರೀ, ಅಶ್ವಮೇಧಯಾಗ ಅಂದರೆ, ಕುದುರೆಯನ್ನು ಬಲಿಕೊಡುವ ಯಜ್ಞ", ಅಂತ ಹೇಳಿದ್ದಕ್ಕೆ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡು ಹೊರಟುಹೋದರು Sticking out tongue ಅವರು "ಅಶ್ವಮೇಧ" ಅಂದರೆ ಹುಲುಮಾನವರು ಮಾತೇ ಆಡಬಾರದಂತಹುದ್ದು ಅಂತ ತಿಳಿದುಕೊಂಡು ಬಿಟ್ಟಿದ್ದರು. ಹಾಗೆಯೇ "ನರಮೇಧ" ಎಂದರೆ "ಮನುಷ್ಯರ ಕಗ್ಗೊಲೆ" ಎಂಬ ಅರ್ಥದಲ್ಲಿ ಕನ್ನಡ ಪೇಪರಿನವರು ಬಳಸುತ್ತಾರೆ. ಉದಾ : "ಬಾರಾಮುಲ್ಲಾ ಜಿಲ್ಲೆಯಲ್ಲಿ ಮತ್ತಷ್ಟು ನರಮೇಧ ನಡೆದಿದೆ"
೨. ಬುದ್ಧಿಮತ್ತೆ - ಸರಸ್ವತಿಗೆ ಮೇಧ ಎಂದು ಬಳಸುವುದುಂಟು. ಆದರೆ ಇದು ಅಷ್ಟಾಗಿ ಪ್ರಚಾರದಲ್ಲಿಲ್ಲ. ಮೇಧಾವಿ, ಮೇಧಸ್ಸು ಎಂಬ ಬಳಕೆಗಳನ್ನು ನೆನಪಿಸಿಕೊಳ್ಳಿ.

ಇಷ್ಟೆಲ್ಲ ಆಯ್ತಲ್ಲ, "ಮೇಧ" ಅಂತ ಹೆಸರಿಟ್ಟುಕೊಂಡವರು, ಅನೇಕ ವೇಳೆ, "ಮೇದ" ಅಂತಲೇ ಹೇಳುತ್ತಾರೆ. ಮೇದ ಎಂಬ ಪದಕ್ಕೂ ನಾನಾ ಅರ್ಥಗಳಿವೆ. ಮೇದಿನಿ ಅಂದರೆ ಭೂಮಿ.

ಸರಿ ಇಲ್ಲಿಯ ತನಕ ಸಂಸ್ಕೃತವಾಯ್ತು. ಇನ್ನು ಕನ್ನಡದತ್ತ ಕಣ್ಣು ಹರಿಸೋಣ. ಈ "ಮೇಧ" ಅಂತ ಹೆಸರಿಟ್ಟುಕೊಂಡಿರುವವರನ್ನ ನಲ್ಮೆಯಿಂದ ಜನರು, "ಮೇದು, ಮೇದು" ಅಂತ ಕರಿಯುವುದನ್ನ ಕಾಣುತ್ತೇವೆ. ಕನ್ನಡದಲ್ಲಿ "ಮೇದು" ಎನ್ನುವುದಕ್ಕೆ ಕೂಡ ತುಂಬಾ ರೂಢ್ಯರ್ಥಗಳಿವೆ. ಅದರಲ್ಲಿ ಒಂದನ್ನು ಇಲ್ಲಿ ಹೇಳುತ್ತೇನೆ.

"ಮೇಯು" ಪದ ಭೂತಕಾಲದಲ್ಲಿ ಮೇಯ್ದು -> ಮೇದು ಆಗುತ್ತದೆ. "ದನ ಮೇಯಿಸಿ ಬಾ" ಎಂಬುದನ್ನು "ದನ ಮೇದು ಬಾ" ಅಂತಲೂ ಹೇಳಬಹುದು Eye-wink

  • ಅಭಾಸ
  • ಹೆಸರು
~.~
  • Sunil Jayaprakash ರವರ ಬ್ಲಾಗ್
  • Login or register to post comments
  • 397 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 29, 2008 - 2:26pm — mahesha

ಉ: "ಮೇಧ" ನಾಮೋ ಯದ್ವಾ ತದ್ವಾ ಭವಿಷ್ಯತಿ

mahesha's picture

ಲೋ

ಮೇಧಾ ಅಂದ್ರೆ ಬುದ್ದಿಮತ್ತೆ.. ’ಮೇಧಾದೇವೀ ಜುಷಮಾಣಾ’

ಕನ್ನಡದಲ್ಲಿ ಅದು ’ಮೇಧೆ’ ಆಗಬೇಕು

ಮೇಧಸ್ = ಮೇಧ ಇದು ಯಜ್ಞ.

ಮೇಯ್ದು => ಮೇದು,
ಮೇಯ್ದ => ಮೇದ

ಹಾಯ್ದು / ಹಾದು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 29, 2008 - 2:34pm — mahesha

ಉ: "ಮೇಧ" ನಾಮೋ ಯದ್ವಾ ತದ್ವಾ ಭವಿಷ್ಯತಿ

mahesha's picture

ಇನ್ನು ಎದ್ವತದ್ವ ಹೆಸರಿಗೆ ಬಂದ್ರೆ ... ಅರಿತ ತಿಳಿಯದೇ ಇಟ್ಟುಕೊಂಡವು..

೧) ನವನೀತ = ಬೆಣ್ಣೆ
೨) ಸಂಕರ = ಎಳೆಯುವವನು
೩) ಮಿಥುನ್ = Smiling
೪) ವಿನೋದ = ತಮಾಶೆ Smiling ( ಯಾರಾದ್ರು ತಮಾಶೆ ಅಂತ ಹೆಸ್ರು ಇಟ್ಕೋತಾರ Smiling )

ಏನೋ ಹೆಸರು.. ಅದಕ್ಕೆಲ್ಲ ಅರಿತ ಹುಡಕ್ಬಾರದು..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 29, 2008 - 3:06pm — savithru

ಉ: "ಮೇಧ" ನಾಮೋ ಯದ್ವಾ ತದ್ವಾ ಭವಿಷ್ಯತಿ

savithru's picture

"ಅಶ್ವ ಮೇಧ ಯಾಗ" ದಲ್ಲಿ ಅಶ್ವ ಅಂದ್ರೆ ಏನು?
ಕುದುರೆ ಅನ್ನ್ವುದಕ್ಕಿಂತ ಬೇರೆ ಅರ್ಥ ವಿದೆಯಾ?

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 29, 2008 - 10:08pm — hamsanandi

ಉ: "ಮೇಧ" ನಾಮೋ ಯದ್ವಾ ತದ್ವಾ ಭವಿಷ್ಯತಿ

hamsanandi's picture

ಇಲ್ಲ - ಅಶ್ವಮೇಧ ಯಾಗದಲ್ಲಿ ಸುತ್ತಾಡಿಸಿ ಮರಳುವ ಕುದುರೆಗೆ ಸಾವೇ ಗತಿ!

-ಹಂಸಾನಂದಿ

ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 29, 2008 - 10:41pm — Sunil Jayaprakash

ಉ: "ಮೇಧ" ನಾಮೋ ಯದ್ವಾ ತದ್ವಾ ಭವಿಷ್ಯತಿ

Sunil Jayaprakash's picture

ಒಂದು ಸೌಜನ್ಯದ ಮಾತು ಮರೆತುಬಿಟ್ಟೆ. ಈ ಬರಹವನ್ನು, "ಮೇಧ" ಅಂತ ಹೆಸರಿಟ್ಟುಕೊಂಡವರ/ಹೆಸರಿಟ್ಟವರ/ಹೆಸರು ಸೂಚಿಸಿದವರ ಕ್ಷಮೆ ಬೇಡಿ ಬರೆದದ್ದು ಅಂತ ತಿಳಿಯಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 1, 2008 - 1:17pm — ವೈಭವ

ಉ: "ಮೇಧ" ನಾಮೋ ಯದ್ವಾ ತದ್ವಾ ಭವಿಷ್ಯತಿ

ವೈಭವ's picture

ಗುರುವೆ,

ಮೇಯಿಸು != ಮೇದು

ದನ ಮೇಯಿಸಿ ಬಾ != ದನ ಮೇದು ಬಾ
ದನ ಮೇಯಿಸಿ ಬಾ ( ಇಲ್ಲಿ ದನ ಮೇಯುತ್ತೆ ಅದನ್ನ ಸರಿಯಾಗಿ ಹೊಲಗದ್ದೆಯೊಳಗೆ ನುಗ್ಗದೆ ಅದನ ಮಾನೇಜ್ ಮಾಡಿಕೊಂಡು ಬಾ)
ದನ ಮೇದು ಬಾ ( ಇಲ್ಲಿ ದನವನ್ನೇ ತಿನ್ಕೊಂಡ್ ಬಾ ಅಂತ ಅರಿತ ಆಗುತ್ತೆ)

ಪಾಪ ಸುನಿಲ, ದನ ಮೇಯ್ಸಿಲ್ಲ ಅಂತ ಕಾಣ್ಸುತ್ತೆ Smiling Smiling

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 1, 2008 - 3:09pm — mahesha

ಉ: "ಮೇಧ" ನಾಮೋ ಯದ್ವಾ ತದ್ವಾ ಭವಿಷ್ಯತಿ

mahesha's picture

ಗುರು..

ಸುನಿಲ ಹೇಳಿದ್ದು ಸರಿ ಅಯ್ತೆ..

ಮೇಯಿಸು = ಮೇಯುವಂತೆ ಮಾಡು

ಆದ್ರೆ.. ’ದನ ಹುಲ್ಲು ಮೇಯಿತು’

’ದನ ಹುಲ್ಲು ಮೇಯ್ದು/ಮೇದು ನೀರು ಕುಡಿಯಿತು’. ಈ ಮೇದು ಬಗ್ಗೆ ಸುನಿಲ ಹೇಳಿದ್ದು..

ಮೇಯ್ದು => ಮೇದು ( ಬಹುಶಃ ಮೇಂದು )
ಹಾಯ್ದು => ಹಾದು ( ಬಹುಶಃ ಹಾಂದು, ಹಾಯ್ದು ಅಲ್ಲಿ ಮೂಗಿನ ಯ ಇರಬೇಕು.. ಅಲ್ವೇ ಸುನಿಲ? )
ಕಾಯ್ದು => ಕಾದು

ಮೇಯ್ದ => ಮೇದ = ತಿಂದ

ಮರಮೇದ = ಮರಮೇಯ್ದನು Smiling

--
ಕೊಸರು: ಮೂಗಿನ ಯ ಬಗ್ಗೆ.. ಕನ್ನಡದಾಗೆ ಮೂಗಿನ ಯ,ರ, ವ, ಲ ಗಳಿವೆ..

ಕೊಲ್ದು => ಕೊಂದು vs ಗೆಲ್ದು => ಗೆದ್ದು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 1, 2008 - 8:45pm — ವೈಭವ

ಉ: "ಮೇಧ" ನಾಮೋ ಯದ್ವಾ ತದ್ವಾ ಭವಿಷ್ಯತಿ

ವೈಭವ's picture

ಅಣ್ಣ,

ದನ ಮೇಯಿಸುವಂತೆ ಮಾಡುವುದಕ್ಕೂ ದನವನ್ನೇ ಮೇಯುವುದಕ್ಕೂ(ತಿನ್ನುವುದು) ಬೇರೆತನ ಇದೆ. Smiling
ಆದರೆ ಸುನಿಲ ಹೇಳಿರುವುದು
ದನ ಮೇಯಿಸಿಕೊಂಡು ಬಾ = ದನ ಮೇದು ಬಾ ...ಇದು ತಪ್ಪು.

ಎರಡಕ್ಕೆ ಬೇರೆ ಬೇರೆ ಅರಿತ ಇದೆ. ಒಂದೇ ಅಲ್ಲ. ವಸಿ ಉಂಕಿಸು.

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 1, 2008 - 10:10pm — Sunil Jayaprakash

ಉ: "ಮೇಧ" ನಾಮೋ ಯದ್ವಾ ತದ್ವಾ ಭವಿಷ್ಯತಿ

Sunil Jayaprakash's picture

ವೈಭವ ಮತ್ತು ಸವಿತೃ, ನಿಮ್ಮ ಅನುಮಾನದಲ್ಲಿ ಹುರುಳಿಲ್ಲದೇ ಇಲ್ಲ. ಸ್ವಲ್ಪ ಗಲಿಬಿಲಿ ಆಗಿದೆ. ತಿಳಿಯಾಗಿ ಹೇಳಲು ಸ್ವಲ್ಪ ಸಮಯ ಕೊಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 1, 2008 - 8:47pm — ವೈಭವ

ಉ: "ಮೇಧ" ನಾಮೋ ಯದ್ವಾ ತದ್ವಾ ಭವಿಷ್ಯತಿ

ವೈಭವ's picture

ಕೊಲ್ದು => ಕೊಂದು ಸರಿ ಆದರೆ ಕೊಲಿಸು => ಕೊಂದು ಸರಿನಾ?

ಗೆಲ್ದು => ಗೆದ್ದು ಸರಿ ಆದರೆ ಗೆಲಿಸು => ಗೆದ್ದು ಸರಿನಾ?

ಹೇಳಣ್ಣ.

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 1, 2008 - 6:39pm — savithru

ಉ: "ಮೇಧ" ನಾಮೋ ಯದ್ವಾ ತದ್ವಾ ಭವಿಷ್ಯತಿ

savithru's picture

>>"ಮೇಯು" ಪದ ಭೂತಕಾಲದಲ್ಲಿ ಮೇಯ್ದು -> ಮೇದು ಆಗುತ್ತದೆ. "ದನ ಮೇಯಿಸಿ ಬಾ" ಎಂಬುದನ್ನು "ದನ ಮೇದು ಬಾ" ಅಂತಲೂ ಹೇಳಬಹುದು

ನಾನು ತುಂಬ ಹಿಂದೆ ಊರಲ್ಲಿ ಇದ್ದಾಗ ದನ/ಎಮ್ಮೆ ಮೇಯ್ಸಿದ್ದೀನಿ. ಆದ್ರೆ ದನ/ಎಮ್ಮೆ ಮೇದಿಲ್ಲ. ಬಡಪಾಯಿ ಸಸ್ಯಾಹಾರಿ!
;(

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 3, 2008 - 9:41am — mahesha

ಉ: "ಮೇಧ" ನಾಮೋ ಯದ್ವಾ ತದ್ವಾ ಭವಿಷ್ಯತಿ

mahesha's picture

""ಮೇಯು" ಪದ ಭೂತಕಾಲದಲ್ಲಿ ಮೇಯ್ದು -> ಮೇದು ಆಗುತ್ತದೆ. "ದನ ಮೇಯಿಸಿ ಬಾ" ಎಂಬುದನ್ನು "ದನ ಮೇದು ಬಾ" ಅಂತಲೂ ಹೇಳಬಹುದ"

ಹೇ...

ಇದೇನೋ Smiling!!

ವೈಭವ.. ನಾನು ನೀವು ’ಮೇದು’ ಒರೆ ಸರಿಯಿಲ್ಲ ಅಂದ್ರೆ ಎಂದು ಎಣಿಸಿದೆ..

’ದನ ಮೇದು ಬಾ’ Smiling = ’ದನವನ್ನು ತಿಂದು ಬಾ’

ಬೋಶ, ಸುನಿಲ ಹೀಗೆ ಹೇಳಿದ್ದು " ಎಲೈ ದನ!! ಮೇದು ಬಾ" Smiling

ರಾಮರಾಮ.!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೆರಿಗೆಗಳು
  • ಸುಮ್ಮನೆ ಒಂದು ಬ್ಲಾಗು
  • firefox tab, keyboard tabಗಳಿಗೆ ಕನ್ನಡ ಪದಗಳು
  • ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ?
  • ಹೆಸರು ಬರೆಯುವುದು ಹೇಗೆ?
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಲಿನಕ್ಸಾಯಣ - ೧೬ - ಉಬುಂಟು ನನ್ನ ಭಾಷೆಯಲ್ಲಿ?
  • ಒದ್ದಾಡುವ ನೆನಪುಗಳು..
  • ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ..!
  • ನನ್ನ ಮುದ್ದು ಕೋತಿಗೆ !
  • ಅಮ್ಮ ನ ನೆನಪು ಮತ್ತು ಫಾರಿನ್ನು .:)
  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shashikannada
    ಉ: ಕನ್ನಡ ಭಾಷೆ ಎಷ್ಟು ಹಳೆಯದು?
    August 30, 2008 - 6:26pm
  • spruhi
    ಉ: ಅಮ್ಮ ನ ನೆನಪು ಮತ್ತು ಫಾರಿನ್ನು .:)
    August 30, 2008 - 6:21pm
  • spruhi
    ಉ: ಕನ್ನಡ ಮಾತಾಡಿ, ಮಜಾ ಮಾಡಿ
    August 30, 2008 - 6:16pm
  • cmariejoseph
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 5:56pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:48pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:39pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:35pm
  • csomsekraiah
    ಉ: ಬಿಡುಗಡೆಯ ನಂತರದ ಬೇಡಿಗಳು (೩)
    August 30, 2008 - 5:12pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 5:01pm
  • cmariejoseph
    ಉ: ಒಂದು ನಾಯಿ ಕತೆ
    August 30, 2008 - 5:00pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 51 ಅತಿಥಿಗಳು ಆನ್ಲೈನ್ ಇರುವರು.


ದುರ್ಬಲರಿಗೆ ಕ್ಷಮಿಸುವ ಹಕ್ಕಿಲ್ಲ, ಕ್ಷಮಿಸುವ ಶಕ್ತಿ ಮತ್ತು ಹಕ್ಕಿರುವುದು ಬಲಿಷ್ಠರಿಗೆ ಮಾತ್ರ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator