೨ ಕಿ(ಕೊ)ಲ್ಲರ್ ಹಾಡುಗಳು
ಎರಡು ಕಿಲ್ಲರ್ ಹಾಡುಗಳು. ಈಗೀಗ ಎಲ್ಲೆಂದರಲ್ಲಿ ಕೇಳಿ ಬರ್ತಾ ಇದೆ.
೧. ಜಿಂಕೆ ಮರೀನಾ, ನೀ ಜಿಂಕೆ ಮರೀನಾ, ನೀ ಜಿಂಕೆ ಜಿಂಕೆ ಮರೀನಾ - ವೀಡಿಯೋ, ಆಡಿಯೋ. ಯುಗಾದಿಯ ದಿನ ನಮ್ಮನೆ ಎದುರುಗಡೆ ಮನೆ ಹುಡುಗ ಇದನ್ನ ಬೆಳ್ಳಂಬೆಳಗ್ಗೆಯೇ ಜೋರಾಗಿ ಹಾಡಲು ಶುರುಮಾಡಿಬಿಟ್ಟಿದ್ದ
ಬೀದೀಲಿ ಹೋಗ್ತಾ ಇದ್ದವರೆಲ್ಲ ಬಿದ್ದು ಬಿದ್ದು ನಕ್ಕಿದ್ದೇ ನಕ್ಕಿದ್ದು.
೨. ಕೊಲ್ಲೆ ನನ್ನನ್ನೇ - ಈ ಹಾಡು ಈಗಷ್ಟೇ ಶುರುವಾಗ್ತಾ ಇದೆ. ಗುರುಕಿರಣ್ ಹಾಡಿರೋದು, ವೀಡಿಯೋ(ಪೂರ್ತಿ ಇನ್ನೂ ಎಲ್ಲಿಯೂ ಅಪ್ಲೋಡ್ ಆಗಿಲ್ಲ), ಆಡಿಯೋ
ಇದರ ಸಾಹಿತ್ಯ ನೋಡಿ,
ಕಡು ಕಪ್ಪು ಕಣ್ಣಲ್ಲೆ ಕೊಲ್ಲು, ಬಿಗಿದಪ್ಪಿ ತೋಳಲ್ಲೆ ಕೊಲ್ಲು, ಮುದ್ದಾದ ಮಾತಲ್ಲೆ ಕೊಲ್ಲು, ಬಾ ನನ್ನ ಪ್ರೀತೀಲೆ ಕೊಲ್ಲು, ಕ್ಷಣಕೊಮ್ಮೆ ಕೊಲ್ಲು, ಕಣಕೊಮ್ಮೆ ಕೊಲ್ಲು, ಕಾಡಿಸಿ ಪೀಡಿಸಿ ಮುತ್ತಿಸಿ ಚುಂಬಿಸಿ, ಕೊಲ್ಲೆ ನನ್ನನ್ನೇ.
ಕೊಲ್ಲೆ ನನ್ನನ್ನೇ - ವೈರಾಗ್ಯ ಮತ್ತು ಪ್ರೀತಿ ಎರಡನ್ನೂ ಒಳಗೊಂಡ ಒಂದು ಅತ್ಯದ್ಭುತ ಹಾಡು ಅಂತ ನನಗನ್ನಿಸಿದೆ.

- Sunil Jayaprakash ರವರ ಬ್ಲಾಗ್
- Login or register to post comments
- 611 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ೨ ಕಿಲ್ಲರ್ ಹಾಡುಗಳು
ಚೆನ್ನಾಗಿವೆ!
’ಆನೆ ಮರೀನಾ..ನೀ ಆನೆ ಮರೀನಾ’..ನೋಡ್ತಾಳವಳು ನನ್ನೈ ನೋಡ್ತಾಳವಳು..ಅಂತ ಹಾಡ್ತಿದ್ರೆ ಹೇಗಿರ್ತಿತ್ತು?
ಇನ್ನೊಂದು ಅದ್ಭುತ ಹಾಡಿದೆ..’ನಿನ್ನಾ ಪೂಜೆಗೆ ಬಂದೇ ಮಾದೇಶ್ವರಾ...’
ಉ: ೨ ಕಿಲ್ಲರ್ ಹಾಡುಗಳು
ಮಾಧವ, ಸೂಪರ್ ಐಡಿಯಾ. ’ಆನೆ ಮರೀನಾ..ನೀ ಆನೆ ಮರೀನಾ’ - ಗಜಲಕ್ಷ್ಮಿ ಅಂತ ಹಾಡಬಹುದು
ಹಾಗೆಯೇ, "ಕತ್ತೆ ಮರೀನಾ, ನೀ ಕೋತಿ ಮರೀನಾ, ಆನೆ, ಕುದುರು, ಕತ್ತೆ, ನಾಯಿ, ಹಂದಿ, ಗೂಬೆ ಮರೀನಾ" ಅಂತಲೂ ಹಾಡಬಹುದು. ಆದರೂ "ಜಿಂಕೆ ಮರೀನಾ" ಹಾಡು ಸಖತ್ ಕಿಕ್ ಕೊಡತ್ತೆ.
ಮತ್ತೊಂದು ಮಾತು, "ನಿನ್ನಾ ಪೂಜೆಗೆ ಬಂದೆ ಮಹದೇಸ್ವರಾ" ಇದೆಯಲ್ಲಾ, ಅದಂತೂ ಸೂಪರ್ರೋ ಸೂಪರ್ರು, "ಸಂಸ್ಕೃತ-ಕನ್ನಡ" ತತ್ಸಮ ತದ್ಭವಗಳನ್ನೆಲ್ಲ ನೀವಾಳಿಸಿ ಬಿಸಾಕಬೇಕು. ಅಲ್ಲಿ ಮಜ್ಜಾ ಗೊತ್ತಾ, ಮಹದೇಶ್ವರಾ ಅನ್ನೋದನ್ನ "ಮಾದೇಸ್ವರಾ" ಅಲ್ಲ, "ಮಹದೇಶ್ವರಾ" ಅಲ್ಲ, ಎರಡರ ನಡುವಿನ "ಮಹದೇಸ್ವರಾ"
ಅಂತ ಹಾಡಿಸಿಬಿಟ್ಟಿದ್ದಾರೆ.
ಮತ್ತೊಂದು ಹಾಡಿದೆ, "ಬಂದ ಬಂದ ಬಂದ ಬಂದ ಕೋಲೇ ಬಸವಾ" - ಸತ್ಯ ಈಸ್ ಇನ್ ಲವ್
ಉ: ೨ ಕಿ(ಕೊ)ಲ್ಲರ್ ಹಾಡುಗಳು
ಕೊಲ್ಲೆ ನನ್ನನ್ನೆ ಹಾಡು ಪ್ರೀತ್ಸೆ ಚಿತ್ರದ "ಪ್ರೀತ್ಸೆ ಪ್ರೀತ್ಸೆ.. ಮನಸು ಬಿಚ್ಚಿ ನನ್ನ ಪ್ರೀತ್ಸೆ" ಹಾಡಿನ ಸಾಹಿತ್ಯ ನೆನಪಿಸುತ್ತೆ.
ಉ: ೨ ಕಿ(ಕೊ)ಲ್ಲರ್ ಹಾಡುಗಳು
"ಕೊಲ್ಲೆ ನನ್ನನ್ನೇ" ವೀಡಿಯೋ ಚೆನ್ನಾಗಿ ಮೂಡಿಬಂದಿಲ್ಲ. ಒಳ್ಳೆ ಆರ್ಕೇಸ್ಟ್ರಾ ಇದ್ದ ಹಾಗೆ ಇದೆ. ಆಡಿಯೋ ಕೇಳಿಯೇ ಮಜ್ಜಾ ತೊಗೋಬೇಕು. ಅಥವಾ ಯಾರಾದರೂ 'ವೀಡಿಯೋ ಮಿಕ್ಸ್' ಮಾಡ್ತಾರಾ ನೋಡ್ಬೇಕು. ಮುಂದಿನ ಅಪಡೇಟಿಗೆ ಕಾಯ್ತಾ ಇರಿ. ಅಥವಾ "ಜಿಂಕೆ ಮಱೀನಾ" ಹಾಡು ನೋಡ್ತಾ ಇರಿ.