ಹೇಳೇ ರತ್ನಾS... ಅಕ್ಕರೆಯೊಲವಿನ ಮಾತ್ನS.
ಯಾರೀ ರತ್ನಾ, ಯಾವುದಾ ಅಕ್ಕರೆಯೊಲವಿನ ಮಾತು ಎಂದು ಯೋಚಿಸುತ್ತಿದ್ದೀರಾ. ತುಸು ತಡೆಯಿರಿ. ಗಾಂಧಿನಗರ ತನ್ನ ತಪ್ಪುಗಳಿಂದ ಕಿಂಚಿತ್ತಾದರೂ ಎಚ್ಚೆತ್ತಿಕೊಂಡಂತೆ ಕಾಣುತ್ತದೆ. ಎರಡು ವಾರಗಳ ಹಿಂದೆ ಬಿಡುಗಡೆಯಾದ "ಕಲ್ಲರಳಿ ಹೂವಾಗಿ" ನೋಡಿ ಆಚೆ ಬಂದಿರೆಂದರೆ ನಿಮ್ಮ ನೆನಪಿನಲ್ಲುಳಿಯುವ ಹಾಡಿನ ಸಾಲಿದು.
ಅತಿ ಕೆಟ್ಟ ಹಾಡುಗಳಿಂದಾಗಿ ಇತ್ತೀಚೆಗೆ ಕನ್ನಡದ ಒಂದು ಐತಿಹಾಸಿಕ ಚಿತ್ರ ತೋಪಾಗಿತ್ತು. ಆ ತಪ್ಪುಗಳನ್ನು ಸ್ವಲ್ಪಮಟ್ಟಿಗಾದರು ಸರಿಪಡಿಸಿಕೊಂಡಿದ್ದಾರೆ ನಮ್ಮ ಸಿನೆಮಾ ಮಂದಿ.
ಕಲ್ಲರಳಿ ಹೂವಾಗಿ ಚಿತ್ರವನ್ನು, ಚಿತ್ರದುರ್ಗದಲ್ಲಿ ಅಲ್ಲಿನ ಕೊನೆಯ ಪಾಳೇಗಾರ ಮದಕರಿನಾಯಕ ಮತ್ತು ಮೈಸೂರಿನಲ್ಲಿ ಹೈದರಲಿ ಆಡಳಿತ ನಡೆಸುತ್ತಿದ್ದ ಸಮಯದಲ್ಲಿ ನಡೆದಿರುವಂತೆ ಚಿತ್ರಸಲಾಗಿದೆ. ಅಂದ ಹಾಗೆ, ಈ ಚಿತ್ರವನ್ನು "ಅಯ್ಯೋ, ಇದೊಂದು ಹಿಂದು, ಮುಸ್ಲಿಮ್ ನಡುವಣ ಪ್ರೇಮ ಕಥೆ, ಇಂಥ ಎಷ್ಟೋ ಚಿತ್ರಗಳು ಈಗಾಗಲೇ ಬೇಕಾದಷ್ಟು ಬಂದು ಹೋಗಿವೆ", ಎಂಬ ನಿರ್ಣಯಕ್ಕೆ ಬಂದಿರಾದರೆ ಖಂಡಿತ ನಿಮಗಿಂತ ಮೂರ್ಖರಾರು ಇರುವುದಿಲ್ಲ. ಇನ್ನಿತರ ಹಿಂದು-ಮುಸ್ಲಿಂ ಪ್ರೇಮಕಥೆಗಳಲ್ಲಿ ಕಂಡುಬರುವ ಧರ್ಮದ ವಿಷಯವಾಗಿನ ಸಂಘರ್ಷ ಇಲ್ಲಿ ಎಲ್ಲಿಯೂ ಬರುವುದಿಲ್ಲ. ಇಡೀ ಚಿತ್ರದಲ್ಲಿ "ಒಂದು ರಾಜವಂಶದ ಕನ್ಯೆ" ವಿರೋಧಿ "ರಾಜ್ಯಾಡಿಳಿತವಿರುವೆಡೆ" ಸಿಕ್ಕಿಹಾಕಿಕೊಂಡಾಗ ಆಕೆಯಲ್ಲಿ ಉಂಟಾಗುವ ತಳಮಳಗಳನ್ನು ಮತ್ತು ಅನುಭವಿಸುವ ಸಂಕಟಗಳನ್ನು ಒಪ್ಪವಾಗಿ ಚಿತ್ರಿಸಲಾಗಿದೆ. ಈ ವಿಷಯದಲ್ಲಿ ನಿರ್ದೇಶಕರಾದ ಟಿ.ಎಸ್.ನಾಗಾಭರಣರಿಗೆ ಒಳ್ಳೆಯ(ಪೂರ್ಣ ಅಂಕಗಳನ್ನು ನೀಡುವುದಕ್ಕೆ ಆಗಲಿಲ್ಲ) ಅಂಕಗಳನ್ನು ನೀಡಬಹುದು.
ಚಿತ್ರದ ಕಥೆ ಆರಂಭವಾಗುವುದು,
ಓಡು ಬಾ, ಓಡು ಬಾರೋ, ತಿಂಗಳ ಮಾವ. ನಮ್ಮೂರಂದಾವಾ ನೋಡು ಬಾ, ನೋಡು ಬಾರೋ..
ಎಂದು ತನ್ನಪಾಡಿಗೆ ತಾನು ಹಾಡುತ್ತಾ ಬರುತ್ತಿರುವಾಗ, ನಮ್ಮ ಓಲೆಗಾರನಿಗೆ ಅರ್ಧಶವವಾಗಿ ಮಲಗಿರುವ ಆಗಿನ ಮೈಸೂರು ರಾಜವಂಶದ ಓರ್ವ ಕನ್ಯೆ ಸಿಗುತ್ತಾಳೆ. ಸುಮ್ಮನೆ ಆಕೆಯನ್ನು ತಮ್ಮ ಮನೆಯ ಆರೈಕೆಯ ಸುಪರ್ಧಿಗೆ ಒಪ್ಪಿಸಿಬಿಟ್ಟು ಸುಮ್ಮನಾಗಿಬಿಟ್ಟಿದಿದ್ದರೆ, ಸರಿಹೋಗುತ್ತಿತ್ತು. ಆದರೆ ಪಾಪ, ನಮ್ಮ ಹುಡುಗ ಯಾವ್ಯಾವುದೋ ಸುಳಿಯಲ್ಲಿ ಸಿಲುಕುತ್ತಾನೆ.
ಚಿತ್ರ ಚೆನ್ನಾಗಿದೆ ಅಂತ ಒಪ್ಪಿದರೂ, ಹೆವ್ವಿ ಶೆಖೆ(Heavvvvy ಶೆಖೆ ಅಂದರೆ - ತುಂಬಾ ಬೋರಿಂಗ್ ಅಂತೆ) ತರಿಸುವಂತ ಎರಡು ಸನ್ನಿವೇಶಗಳಿವೆ. ಅದರಲ್ಲೂ ಕೊನೆಯ ಸೀನ್‌ಅಂತೂ(ಸಂಭಾಷಣೆಗೆ ಒತ್ತುಕೊಟ್ಟಿದ್ದರಿಂದ ಹೀಗಾಗಿರಬಹುದು) ತುಂಬಾ ಹೆವಿಯಾಗಿದೆ.
ಸರಿ ಸಿನಿಮಾ ಚೆನ್ನಾಗಿದೆಯೋ, ಇಲ್ಲವೋ ಹೇಳಿಬಿಡಿ ಅಂತ ನೀವು ಕೇಳಿದರೆ, ಚಿತ್ರದ ಒಂದು ಹಾಡಿನಲ್ಲೇ ನಿಮ್ಮ ಬೇಕಿರುವ ಉತ್ತರ ಇದೆಯೆಂದು ಹೇಳುವೆ.
ಬೇಕುS ಬೇಡS ನಡುವೆ ನೋಡಾS, ಕಲ್ಲರಳಿ ಹೂವಾಗಿSS. ನಾನಂತೂ ಬೇಕು ಬೇಡದ ನಡುವಿನಿಂದ ಹೊರಬಂದು ಚಿತ್ರವನ್ನು ಇಷ್ಟಪಟ್ಟು ನೋಡಿದೆ. ನಿರಾಸೆಯಾಗಲಿಲ್ಲ.
ಅಂದ ಹಾಗೆ ಈ ಚಿತ್ರದಲ್ಲಿ ಜಯಂತಿ ಸತ್ತ ಬಂಡೆ ಕಾಣುತ್ತದೆ.
. ಹಾಗೆಯೇ ಕಲ್ಲರಲಿ ಹೂವಾಗಿ ಚಿತ್ರದ ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಅದರಲ್ಲೂ ಸಂಪಿಗೆಯ ಹಾಡು, ಕೆಲ ಕ್ಷಣಗಳ ಮಟ್ಟಿಗಾದರೂ ನಮ್ಮ ಚಿಕ್ಕ ಚೊಕ್ಕ ಚಿತ್ರದುರ್ಗವನ್ನು ನೆನಪಿಸುತ್ತವೆ. ಕೇಳಿ ನೋಡಿ. ಹಾಡುಗಳು ಇಷ್ಟವಾದರೆ ಸಿ.ಡಿ.ಯನ್ನೋ, ಕ್ಹಾಸೆಟ್ಟನ್ನೋ ಕೊಂಡುಕೊಳ್ಳಿ.

- Sunil Jayaprakash ರವರ ಬ್ಲಾಗ್
- Login or register to post comments
- 565 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
Re:
ಯಾವಾಗ್ ಹೋಗಿದ್ದೆ ಮಾರಾಯ? ನನ್ನನ್ನೂ ಕರೆಯೋದ್ ಅಲ್ವೆ?
ನಾನು ನಾಗಾಭರಣರ "ಚಿಗುರಿದ ಕನಸು" ಡಿವಿಡಿ ಹುಡುಕುತ್ತಿದ್ದೀನಿ. ಎಲ್ಲಿ ಸಿಗುತ್ತದೆ ಎಂಬುದು ಯಾರಿಗಾದರೂ ತಿಳಿದಿದ್ದರೆ ದಯವಿಟ್ಟು ತಿಳಿಸುವುದು.
"ಕಲ್ಲರಳಿ ಹೂವಾಗಿ" ಬಗ್ಗೆ ದಟ್ಸ್ ಕನ್ನಡದಲ್ಲಿ ಒಂದು ವಿಮರ್ಶೆ ಓದಿದ್ದೆ. ಅಲ್ಲೊಂದು ಚಿತ್ರಗಳ ಗ್ಯಾಲರಿ ಕೂಡ ಹಾಕಿದ್ದಾರೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಉ: ಹೇಳೇ ರತ್ನಾS... ಅಕ್ಕರೆಯೊಲವಿನ ಮಾತ್ನS.
ನಾನು ನೋಡಿದ್ದು ಚಿತ್ರ ಬಿಡುಗಡೆಯಾದ ಎರಡನೆಯ ದಿನ. ಆದರೆ ಆಡಿಯೋ ಸಿ.ಡಿ. ತಿಂಗಳ ಹಿಂದೆಯೇ ಕೊಂಡಿದ್ದೆ.
ಉ: ಹೇಳೇ ರತ್ನಾS... ಅಕ್ಕರೆಯೊಲವಿನ ಮಾತ್ನS.
'ಕಲ್ಲರಳಿ ಹೂವಾಗಿ'- ನಾನು ಕಳೆದ ವರ್ಷ ನೋಡಿದ ಒಳ್ಳೆಯ ಚಿತ್ರಗಳಲ್ಲೊಂದು..ಸಿನೆಮಾದ ಪ್ರಾರಂಭದಲ್ಲೇ 'ಓಡು ಬಾ, ಓಡು ಬಾರೋ, ತಿಂಗಳ ಮಾವ. ನಮ್ಮೂರಂದಾವಾ ನೋಡು ಬಾ, ನೋಡು ಬಾರೋ.." ಹಾಡು ಬರುತ್ತದೆ..ಅದನ್ನು ನೋಡುತಿದ್ದ ಹಾಗೆ ಗೊತ್ತಾಯಿತು, "ಇವತ್ತು ಪೈಸಾ ಪೂರ್ತಿ ವಸೂಲ್ ' ಅಂತ...ಈ ಸಿನೆಮಾದ ಯಶಸ್ಸು ಕ್ಯಾಮೆರಮ್ಯಾನ್ ವೇಣುವಿಗೆ ಕೂಡ ಸಲ್ಲಬೇಕು..ನಾಗಾಭರಣ ಚಿತ್ರಕತೆಯಲ್ಲಿ, ಸಿನೆಮಾ ಮಾಡುವಲ್ಲಿ ಶ್ರಮಪಟ್ಟಿದ್ದಾರೆ..ಪ್ರತಿಯೊಂದು ಚಿಕ್ಕ ವಿಷಯಗಳ ಬಗ್ಗೂ ಗಮನ ಹರಿಸಿದ್ದಾರೆ..ಡಿ.ಟಿ.ಏಸ್‍ನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ.. ಹಂಸಲೇಖರ ಸಂಗೀತ ಮತ್ತು ಹಾಡುಗಳು ಸೂಪರ್.ಎಲ್ಲಾ ನಟ ನಟಿಯರು ಚೆನ್ನಾಗಿ ನಟಿಸಿದ್ದಾರೆ..ಅದರಲ್ಲು ಉಮಾ ಮಹೇಶ್ವರಿ(ನಾಯಕಿ)ಯಂತೂ ಕಣ್ಣುಗಳ ಮೂಲಕವೇ ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸುತ್ತಾರೆ..ಇದು ಅವರ ಕಡೆಯ ಸಿನೆಮಾನು ಆಗಬಹುದು
..ಸುನೀಲ್ ಹೇಳಿದಂತೆ ಒಂದೆರಡು ಸೀನ್‍ಗಳು ಸ್ವಲ್ಪ ಬೋರಿಂಗ್..ನಾನು ಯಾವುದೇ ಸಿನೆಮಾವನ್ನು ಥಿಯೇಟರ್‍ನಲ್ಲಿ ಹೋಗಿ ಎರಡನೆಯ ಸರ್ತಿ ನೋಡುವುದಿಲ್ಲ..ಆದರೆ ಇದನ್ನು ನೋಡಲಿದ್ದೇನೆ..
..ಕ್ರಿಶ್, ಡಾನ್,ಧೂಮ್೨ ನೋಡಿದವರಂತು ಇದನ್ನು ನೋಡಲೇಬೇಕು,ಮಾಡಿದ ತಪ್ಪಿಗಾಗಿ
(ನಾನು ಕ್ರಿಶ್
ಮಾತ್ರ ನೋಡಿದ್ದೆ)..
Re: ಉ: ಹೇಳೇ ರತ್ನಾS... ಅಕ್ಕರೆಯೊಲವಿನ ಮಾತ್ನS.
ತುಂಬಾ ದಿನದ್ ನಂತರ ಎರಡು ಒಳ್ಳೆ ಚಿತ್ರಗಳು ಬಂದಿವೆ
ಕಲ್ಲರಳಿ ಹೂವಾಗಿ : ಚಿತ್ರ overall ಸಖತ್ತಾಗಿದೆ. ಆದ್ರೆ ನಾಗಾಭರಣ ಸ್ವಲ್ಪ ಚೌಕಾಸಿ ಮಾಡ್ದಾಗೆ ಕಾಣ್ಸುತ್ತೆ. ಒಂದು ನಾಯಕಿ
ವಿಷಯದಲ್ಲಿ - ಇನ್ನೂ ತೆಳ್ಳಗೆ, ಮುಗ್ದ ಮುಖ ಇರೋ ನಾಯಕಿನ ಆರಿಸಿದ್ರೆ ಚೆನ್ನಗಿರ್ತಿತ್ತು. ಉಮಾ ಮಹೇಶ್ವರಿ ಯಾಕೋ ಎರಡು ಮಕ್ಕಳ ತಾಯಿ ತರ
ಕಾಣ್ತಾರೆ
ಇನ್ನೊಂದು ಚೌಕಾಸಿ ವಿಷಯ ಅಂದ್ರೆ Climax. ಇನ್ನೂ ಸ್ವಲ್ಪ ಕರ್ಚು ಮಾಡಿ Grand ಆಗಿ ಮಾಡ್ಬೋದಿತ್ತು.
ಇನ್ನು ಚಿತ್ರದ ಸಂಗೀತ, ಕಥೆಗೆ ತಕ್ಕಂತೆ ತುಂಬಾ ಚೆನ್ನಾಗಿದೆ. ನನಗಿಷ್ಟವಾದ ಸಾಲು ಅಂದ್ರೆ - "ಶಿವಾS - ನಿನ್ನಿಷ್ಟ ನಿನಗೆಂತೋ , ನನ್ನಿಷ್ಟ
ನನಗಂತೆS"
"ಮುಂಗಾರು ಮಳೆ " ಇನ್ನೊಂದು ಚಿತ್ರ. ದೂಸ್ರಾ ಮಾತೇ ಇಲ್ಲ .. ಕಲ್ಲರಳಿ ಹೂವಾಗಿ ಚಿತ್ರಕ್ಕಿಂತಾ ಚೆನ್ನಾಗಿದೆ. Music CD ಕಣ್ ಮುಚ್ಕೊಂಡ್
ತಗೊಳ್ಳಿ. ಚಿತ್ರನಂತೂ Miss ಮಾಡ್ಲೇ ಬೇಡಿ.
Re: ಉ: ಹೇಳೇ ರತ್ನಾS... ಅಕ್ಕರೆಯೊಲವಿನ ಮಾತ್ನS.
ನಿಮ್ಮೆಲ್ಲರ ಪ್ರತಿಕಿಯೆ ಮತ್ತು ಪತ್ರಕರ್ತರ ವಿಮರ್ಶೆಗಳನ್ನು ಓದುತ್ತಿದ್ದರೆ "ಅಯ್ಯೋ! ನಾನೆಷ್ಟು ಮಿಸ್ ಮಾಡ್ಕೋತಾ ಇದ್ದೀನಿ ಅಂತ ಅನ್ನಿಸುತ್ತಿದೆ"
ಚಿತ್ರ ಕನಿಷ್ಠ ೧೦೦ ದಿನ ಓಡಲಿ ಅಂತ ಇಲ್ಲಿಂದಲೇ ಹಾರೈಸುತ್ತೀನಿ. ಬಹುಶಃ ನನಗೆ ಆಗ ಚಿತ್ರಮಂದಿರದಲ್ಲೇ ನೋಡುವ ಅವಕಾಶ ಸಿಕ್ಕರೂ ಸಿಗಬಹುದು! ಏನೋ, ಬೇಸಿಗೆಯಲ್ಲಿ ಬೀಸುವ ತಂಗಾಳಿಯ ತರಹ ಬರೋ ಕೆಲವು ಉತ್ತಮ ಚಿತ್ರಗಳನ್ನಾದರೂ ನಾವೆಲ್ಲ ನೋಡಿ, "ಓಡಿಸಿದರೆ" (ಬಾಕ್ಸ್ ಆಫೀಸ್ ದೃಷ್ಟಿಯಲ್ಲಿ ಸ್ವಾಮಿ, ತಪ್ಪು ತಿಳೀಬೇಡಿ) ಕನ್ನಡ ಚಿತ್ರರಂಗದಲ್ಲಿ ಪುನಃ "ರಮ್ಯ ಚೈತ್ರ ಕಾಲ" ಪ್ರಾರಂಭವಾಗುವುದೇನೋ?
- ಶ್ಯಾಮ್ ಕಿಶೋರ್ (ನನ್ನ ವೈಯಕ್ತಿಕ ಬ್ಲಾಗ್: http://manada-maatu.blogspot.com/index.html)