ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › Sunil Jayaprakash ರವರ ಬ್ಲಾಗ್

ಕರ್ನಾಟಕ ಮತ್ತು ತಮಿಳನಾಡು ನಡುವಣ ರಣಜಿ ಪಂದ್ಯದ updateಗಳು

January 4, 2007 - 2:12pm — Sunil Jayaprakash

ಈ ಬಾರಿ ರಣಜಿ ಅತ್ಯಂತ ಕುತೂಹಲಕಾರಿಯಾಗಿ ಮುಂದುವರಿಯುತ್ತಿದೆ. ಅದರಲ್ಲೂ ಕರ್ನಾಟಕವಂತೂ ಸ್ಥಿರವಾದ ಪ್ರದರ್ಶನ ನೀಡುತ್ತಿದೆ ಎನ್ನುವಾಗಲೇ ಕೆಲವು ವೇಳೆ ಎಡವುತ್ತಾ ಮುನ್ನಡೆದಿದೆ.

ಅಂದ ಹಾಗೆ ನಿಮಗೆ ತಿಳಿದಿರಬಹುದು. ರಣಜಿಯಲ್ಲಿ ಒಂದು ಪಂದ್ಯ ಗೆದ್ದರೆ ೪ ಅಂಕಗಳು ನೀಡಲಾಗುತ್ತದೆ. ಹಾಗೆಯೇ, ಪಂದ್ಯ ಡ್ರಾ ಆದಾಗ ಇನ್ನಿಂಗ್ಸ್ ಮುನ್ನಡೆ ಪಡೆದಿದ್ದ ತಂಡಕ್ಕೆ ೨ ಅಂಕಗಳನ್ನು ನೀಡಲಾಗುತ್ತದೆ.

೨೦೦೬-೦೭ರ ಋತುವಿನ ಮೊದಲ ಪಂದ್ಯ ಸೋತಾಗ ನನಗೆ ತುಂಬಾ ಬೇಸರವಾಗಿತ್ತು, ಹಾಗೆಯೇ ಕೋಪವೂ ಬಂದಿತ್ತು ಎನ್ನಿ Evil. ಆದರೆ ಆ ಪಂದ್ಯದ ನಂತರ ಸುಧಾರಿಸಿದ ನಮ್ಮವರು, ಎರಡು ಪಂದ್ಯಗಳನ್ನು ಗೆದ್ದು ಪೂರ್ಣ ಎಂಟು ಪಾಂಟುಗಳನ್ನು ಸಂಪಾದಿಸಿದರು. Cool

ಮುಂದಿನ ಪಂದ್ಯದಲ್ಲಿ ಇನ್ನಿಂಗ್ಸ್ ಮುನ್ನಡೆಯಿಂದ ೨ ಪಾಯಿಂಟ್ ಪಡೆದರು. ತುಂಬಾ ಕುತೂಹಲ ಸೃಷ್ಟಿಸಿದ್ದ ಆಂಧ್ರದ ವಿರುದ್ಧದ ನಾಲ್ಕನೆಯ ಪಂದ್ಯದಲ್ಲಿ ನಮ್ಮವರು ಸ್ವಲ್ಪ ಎಡವಿದರು. ಎದುರಾಳಿಗಳಿಗೆ ೨ ಪಾಯಿಂಟ್ ಬಿಟ್ಟುಕೊಟ್ಟರು. Sad

ಅದೆಲ್ಲ ಇರಲಿ, ಈಗ ಬಂದಿರುವ ಸುದ್ಧಿಯೆಂದರೆ, ಕರ್ನಾಟಕದವರು ತಮಿಳುನಾಡು ವಿರುದ್ಧದ ರಣಜಿ ಪಂದ್ಯದಲ್ಲಿ ೨೦೯ ರನ್ನುಗಳ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಪಡೆದಿದ್ದಾರೆ. Sticking out tongue ಸಂತೋಷಕರವಾದ ವಿಷಯ. ಇಂದು ಪಂದ್ಯದ ಮೂರನೆಯ ದಿನ.

ಅಂಕಪಟ್ಟಿಯಲ್ಲಿ ಕರ್ನಾಟಕ ಸದ್ಯಕ್ಕೆ ಮೂರನೆಯ ಸ್ಧಾನದಲ್ಲಿದೆ. ಅಂಕಪಟ್ಟಿಯನ್ನು ನೋಡಲು ಇಲ್ಲಿ ಎಡತಾಕಿ. ಈ ಬಾರಿ ಕರ್ನಾಟಕಕ್ಕೆ ಪ್ರಬಲ ಪೈಪೋಟಿ ನೀಡುತ್ತಿರುವವರೆಂದರೆ ಆಂಧ್ರ ಮತ್ತು ಬರೋಡ.

ಬನ್ನಿ, ಎಲ್ಲರೂ ಸೇರಿ ಕರ್ನಾಟಕ ರಣಜಿ ತಂಡಕ್ಕೆ ಶುಭವನ್ನು ಹಾರೈಸೋಣ. Smiling

~.~
  • Sunil Jayaprakash ರವರ ಬ್ಲಾಗ್
  • Login or register to post comments
  • 515 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 4, 2007 - 2:20pm — Sunil Jayaprakash

ಇತ್ತೀಚಿನ ಸುದ್ಧಿ: ರಣಜಿ ಪಂದ್ಯದ updateಗಳು

Sunil Jayaprakash's picture

ಕರ್ನಾಟಕ ತಂಡವು ತಮಿಳುನಾಡಿನ ಮೇಲೆ ಮಿಕ್ಕನ್ನು(ಫಾಲೋ ಆನ್-reminents) ಹೇರಿದೆ. ಎರಡನೆಯ ಇನ್ನಿಂಗ್ಸ್‌ನಲ್ಲಿ ಈಗಾಗಲೇ ನಮ್ಮವರು ತಮಿಳುನಾಡಿನ ೨ ವಿಕೇಟುಗಳನ್ನು ಉದುರಿಸಿದ್ದಾರೆ. ಆದರೆ ಈಗಲೇ ತುಂಬಾ ಹೊಗಳುವುದು ಬೇಡ. ಹೊನ್ನಶೂಲಕ್ಕೇರಿ ಬಿಟ್ಟಾರು ನಮ್ಮವರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 4, 2007 - 4:03pm — ಶಿವ

Re: ಇತ್ತೀಚಿನ ಸುದ್ಧಿ: ರಣಜಿ ಪಂದ್ಯದ updateಗಳು

ಶಿವ's picture

ನೀವು ಪರ್ವಾಗಿಲ್ಲ ಸಾರ್, ರಣಜಿ ಮ್ಯಾಚ್‍ಗಳನ್ನು ಇಷ್ಟೊಂದು ಕುತೂಹಲದಿಂದ ಫಾಲೋ ಮಾಡುತ್ತಿದ್ದೀರ!
ಕರ್ನಾಟಕ ಈ ಮ್ಯಾಚನ್ನು ಗೆಲ್ಲಬಹುದು..ಯಾವುದೋ ಕ್ರಿಕೆಟ್ (domestic)ರೇಟಿಂಗ್‍ನಲ್ಲಿ ರಾಬಿನ್ ಉತ್ತಪ್ಪ ಮೊದಲ ಸ್ಥಾನದಲ್ಲಿದ್ದಾನೆ ಅಂತೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 4, 2007 - 5:02pm — Sunil Jayaprakash

ಅಯ್ಯೋ, ದೃಷ್ಟಿ ಆಗಿಹೋಯ್ತು, ನೀವಾಳಿಸುವವರು ಯಾರಿಲ್ಲವೇ

Sunil Jayaprakash's picture

೨೨ಕ್ಕೇ ೨ ವಿಕೇಟುಗಳನ್ನು ಎಗರಿಸಿದ್ದ ಕರ್ನಾಟಕದವರು, ೩ನೇ ವಿಕೇಟನ್ನು ಉದುರಿಸಲು ಬಹಳ ಸಮಯ ತೆಗೆದುಕೊಂಡರು.

ದೃಷ್ಟಿ ಆಯ್ತೋ ಏನೋ ?

ಮೂರನೆಯ ದಿನದಾಟದ ಅಂತ್ಯಕ್ಕೆ ತಮಿಳುವಾಡು ತನ್ನ ೨ನೆಯ ಇನ್ನಿಂಗ್ಸಿನಲ್ಲಿ ೧೩೦ರನ್ನುಗಳನ್ನು ಗಳಿಸಿ ೩ ವಿಕೇಟನ್ನು ಕಳೆದುಕೊಂಡಿದೆ. ಇನ್ನೂ ೮೯ರನ್ನುಗಳ ಬಾಕಿ ತೀರಿಸಬೇಕಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 5, 2007 - 12:45pm — Sunil Jayaprakash

ರಣಜಿ: ನಾಲ್ಕನೆಯ ದಿನದಾಟದ ಊಟದವೇಳೆ

Sunil Jayaprakash's picture

ಕರ್ನಾಟಕದ ಮುನ್ನಡೆಗೆ ಹೇಮಂಗ್ ಬದಾನಿ ತಡೆಯೊಡ್ಡಿದ್ದಾರೆ. ತಮಿಳುನಾಡು ೨೦೪ ರನ್ನುಗಳನ್ನು ಕಲೆಹಾಕಿ ೪ ವಿಕೇಟುಗಳನ್ನು ಒಪ್ಪಿಸಿದೆ. ಇನ್ನೂ ೧೫ ರನ್ನುಗಳ ಬಾಕಿ ತೀರಿಸಬೇಕಿದೆ.

ನಮ್ಮವರಿಗೆ ದೃಷ್ಟಿಯಾಗದಿರಲಿ ಎಂಬ ಎಚ್ಚರಿಕೆಯನ್ನು ನೀಡುತ್ತಾ ಶುಭ ಹಾರೈಸೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 5, 2007 - 3:09pm — Sunil Jayaprakash

ರಣಜಿ: ನಾಲ್ಕನೆಯ ದಿನದಾಟದ ಚಹಾವಿರಾಮದ ವೇಳೆಗೆ

Sunil Jayaprakash's picture

ತಮಿಳುನಾಡು ೨೩೯ರನ್ನುಗಳನ್ನು ಗಳಿಸಿ ೮ ವಿಕೇಟುಗಳನ್ನು ಕಳೆದುಕೊಂಡಿದೆ. ಒಟ್ಟು ೨೦ ರನ್ನುಗಳ ಮುನ್ನಡೆ ಸಾಧಿಸಿದೆ. ಕೊನೆಯ ದಿನವಾದ ಇಂದು ಇನ್ನೂ ೨೦ ಓವರುಗಳು ಬಾಕಿಯಿದೆ. ಏನಾಗುತ್ತದೆಯೋ, ಬಹಳ ಕುತೂಹಲಕಾರಿಯಾಗಿದೆ.

ನಮ್ಮವರಿಗೆ ದೃಷ್ಟಿಯಾಗದಿರಲಿ ಎಂಬ ಎಚ್ಚರಿಕೆಯನ್ನು ನೀಡುತ್ತಾ ಶುಭ ಹಾರೈಸೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 5, 2007 - 5:22pm — Sunil Jayaprakash

ರಣಜಿ: ತಮಿಳುನಾಡು ವಿರುದ್ಧ ಗೆದ್ದ ಕರ್ನಾಟಕ

Sunil Jayaprakash's picture

ನಮ್ಮವರು ಗೆದ್ದೇ ಬಿಟ್ಟರು. ಎರಡನೆಯ ಇನ್ನಿಂಗ್ಸಿನಲ್ಲಿ ಕರ್ನಾಟಕದವರು ೨೮ರನ್ನುಗಳನ್ನು ಗಳಿಸಬೇಕಿತ್ತು. ಒಂದೂ ವಿಕೇಟನ್ನು ಒಪ್ಪಿಸದೇ ೩.೫ ಓವರುಗಳಲ್ಲಿ ಗುರಿಯನ್ನು ತಲುಪಿದರು.

ದೃಷ್ಟಿಯಾಗದ ರೀತಿಯಲ್ಲಿ ಶುಭಾಶಯ ಹೇಳಿರಿ. ಗೆಲುವಿನಲ್ಲಿ ಭಾಗವಹಿಸಿದೆ ಎಲ್ಲರಿಗೂ ಶುಭವಾಗಲಿ, ಈ ಹುರುಪು ಮುಂದಿನ ಎಲ್ಲ ಪಂದ್ಯಗಳಲ್ಲಿಯೂ ಇರಲಿ ಎಂದು ಶುಭ ಕೋರೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಣಜಿ
  • ಕರ್ನಾಟಕ ಮತ್ತು ಸೌರಾಷ್ಟ್ರ ನಡುವಣ ರಣಜಿ ಪಂದ್ಯ
  • ಈ ದಿನದ ಕ್ರಿಕೆಟ್ ಸುದ್ಧಿ - ಹಾ! ಎಚ್ಚರ ಇವು ಒಳ್ಳೆಯ ಸುದ್ಧಿಗಳು
  • ಕರ್ನಾಟಕ ಕ್ರಿಕೆಟ್ - ೪
  • ಕರ್ನಾಟಕ(ಬೆಂಗಳೂರು)ದಲ್ಲಿ ರಣಜಿ ಕ್ರಿಕೆಟ್
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಲಿನಕ್ಸಾಯಣ - ೧೬ - ಉಬುಂಟು ನನ್ನ ಭಾಷೆಯಲ್ಲಿ?
  • ಒದ್ದಾಡುವ ನೆನಪುಗಳು..
  • ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ..!
  • ನನ್ನ ಮುದ್ದು ಕೋತಿಗೆ !
  • ಅಮ್ಮ ನ ನೆನಪು ಮತ್ತು ಫಾರಿನ್ನು .:)
  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shashikannada
    ಉ: ಕನ್ನಡ ಭಾಷೆ ಎಷ್ಟು ಹಳೆಯದು?
    August 30, 2008 - 6:26pm
  • spruhi
    ಉ: ಅಮ್ಮ ನ ನೆನಪು ಮತ್ತು ಫಾರಿನ್ನು .:)
    August 30, 2008 - 6:21pm
  • spruhi
    ಉ: ಕನ್ನಡ ಮಾತಾಡಿ, ಮಜಾ ಮಾಡಿ
    August 30, 2008 - 6:16pm
  • cmariejoseph
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 5:56pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:48pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:39pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:35pm
  • csomsekraiah
    ಉ: ಬಿಡುಗಡೆಯ ನಂತರದ ಬೇಡಿಗಳು (೩)
    August 30, 2008 - 5:12pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 5:01pm
  • cmariejoseph
    ಉ: ಒಂದು ನಾಯಿ ಕತೆ
    August 30, 2008 - 5:00pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 45 ಅತಿಥಿಗಳು ಆನ್ಲೈನ್ ಇರುವರು.


"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."

— ಕುವೆಂಪು (ಹೀಗೆ ಪತ್ರಿಕೆ ಹಾಕುವ ಹುಡುಗನಿಗೆ ಬೈಯುತ್ತಿದ್ದರಂತೆ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator