ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸಂಗೀತ ಪಾಠದ ಮೊದಲ ಗೀತೆ

ಮೊದಲೇ ಹೇಳಿಬಿಡುತ್ತೇನೆ. ನಾನು ಸಂಗೀತ ಕಲಿಯಲು ಪ್ರಾರಂಭಿಸಿರುವುದು ಬಹಳ ತಡವಾಗಿ. ಇಷ್ಟು ದಿನ ಮಾಯ ಮಾಳವ ಗೌಳ ರಾಗದ ಸ.ರಿ.ಗ.ಮ ಕಲಿಯುತ್ತಿದ್ದ, ನನಗೆ, ನೆನ್ನೆ ನಮ್ಮ ಮೇಷ್ಟ್ರು ಈ ದಿನ ಗೀತೆ ಪ್ರಾರಂಭಿಸಬಹುದು ಕಣ್ರೀ ನಿಮಗೆ ಎಂದು ಹೇಳಿದಾಗ, ಸ್ವಲ್ಪ ಉಬ್ಬಿಹೋದೆ. ಹಾಗೆಯೇ ಆಗಲಿ ಎಂದದಕ್ಕೆ ಸಂಗೀತ ಪಾಠದ ಮೊದಲ ಗೀತೆಯ ಸ್ವರ ಹೇಳಿಕೊಟ್ಟರು.

ಉತ್ಸಾಹದಲ್ಲಿ ನೆನ್ನೆ ಕಲಿತ ಗೀತೆಯ ಸ್ವರಗಳನ್ನು ಗೀಚಿರುವೆ.
ಈ ಸ್ವರಗಳು ಲಂಬೋದರ ಲಕುಮಿಕರಾ.....ಗೀತೆಯ ಸ್ವರಗಳು.

 ಮ  ಪ       ಸ*  ಸ* ರಿ        ರಿ* ಸ*        ದ  ಪ  ಮ  ಪ 
 ರಿ ಮ     ಪ  ಪ ದ  ಪ  ಮ  ಗ  ರಿ  ಸ 
 ಸ ರಿ     ಮ ---  ಗ  ರಿ  ರಿ  ರಿ  ಸ   ---
ರಿ ರಿ
ರಿ --- ರಿ ರಿ ರಿ ---

ಶ್ರೀ---          ಗ ಣ ನಾ ಥ                 ಸಿಂ ಧೂ               ರ ---ವ ರ್ಣ
ಕ ರು           ಣ ಸಾ ಗ ರ                  ಕ ರಿ                    ವ ದ --- ನ
ಲಂ ---        ಬೊ --- ದ ರ              ಲ ಕು                   ಮಿ ಕ ರ ---

ಅಂ ---        ಬಾ --- ಸು ತ              ಅಮ                    ರ ವಿ ನು ತ
ಲಂ ---        ಬೊ --- ದ ರ              ಲ ಕು                   ಮಿ ಕ ರ ---

( ಸ* )  = ಹೆಚ್ಚುಸ್ಥಾಯಿ ವರಸೆಯಲ್ಲಿನ ಸ (ಅವರೋಹಣದ ಸ ಅಲ್ಲ)
( ರಿ* )  = ಹೆಚ್ಚುಸ್ಥಾಯಿ ವರಸೆಯಲ್ಲಿನ ರಿ..(ಅವರೋಹಣದ ರ ಅಲ್ಲ)

Your rating: None Average: 5 (1 vote)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಇಲ್ಲೊಂದು ಕೇಳಿ ರಾಗ ಗುರುತಿಸಿ

tvsrinivas41's picture

ನೀವೂ ಸಂಗೀತ ಕಲಿಯುತ್ತಿರುವಿರಾ? ಹಾಗಿದ್ರೆ ನನ್ನ ತಾಣದಲ್ಲಿ ಒಂದು ಒಳ್ಳೆಯ ಭಜನೆ ಇದೆ. ಕೇಳಿ - ಆನಂದಿಸಿ. http://asraya.net/no...

ಮೊದಲ ಮೂರು ನನ್ನ ಮಗಳು ಹಾಡಿರೋದು. ನಂತರದ್ದು ಅವಳ ಗುರುಗಳದ್ದು. ಗುರುಗಳು ಹಾಡಿರುವ ರಾಗ ಗುರುತಿಸಿ

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

ನನ್ನ ಊಹೆ

chandrakanthkg's picture

ನಮಸ್ಕಾರ

ನನಗೆ ಹಿಂದುಸ್ಥಾನಿ ರಾಗಗಳ ಪರಿಚಯ ಕೊಂಚ ಕಡಿಮೆ. ಆದರೆ ಈ ಭಜನೆ ಮುಂಜಾನೆಯ ರಾಗ ಗುಣಕ್ರಿಯಲ್ಲಿದೆ ಎಂದು ನನ್ನ ಅನಿಸಿಕೆ.

ವಂದನೆಗಳು

ಚಂದ್ರಕಾಂತ್

ಭೈರವಿ

tvsrinivas41's picture

ಚಂದ್ರಕಾಂತರಿಗೆ ನಮಸ್ಕಾರಗಳು

ನೀವು ಕೊಟ್ಟ ತಾಣ ಬಹಳ ಉಪಯುಕ್ತವಾಗಿದೆಯಂತೆ. ಅದಕ್ಕಾಗಿ ಧನ್ಯವಾದಗಳು.
ನಾನು ಮೇಲೆ ತಿಳಿಸಿದ ಭಜನೆಯ ರಾಗ ಭೈರವಿಯೇ. ಅದನ್ನು ದೃಢೀಕರಿಸಲು ಇಲ್ಲಿ ನೋಡಬಹುದು
http://www.adwaitjos...

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

ಭೈರವ್ ರಾಗ, ಭೈರವಿಯಲ್ಲ.

beluru's picture

ಮಾಯಾ ಮಾಳವ ಗೌಳ ರಾಗ ಎಂದರೆ ಹಿಂದುಸ್ತಾನಿ ಪದ್ಧತಿಯಲ್ಲಿ ಭೈರವ್ ರಾಗ. ಭೈರವಿಯಲ್ಲ. ಭೈರವ್ ಮತ್ತು ಭೈರವಿ ಎರಡೂ ವಿಭಿನ್ನ ರಾಗಗಳು. ಆದ್ದರಿಂದ ಒಂದು ಅಕ್ಷರದಲ್ಲೂ ರಾಗದ ಹೆಸರೇ ಬೇರೆಯಾಗುವ ಸಾಧ್ಯತೆ ಇದೆ. ಇನ್ನೊಂದು ಉದಾಹರಣೆ ಎಂದರೆ ಹಿಂಡೋಲ್ ರಾಗವೇ ಬೇರೆ, ಹಿಂದೋಳ ರಾಗವೇ ಬೇರೆ. ಅಂದಹಾಗೆ ಭೈರವಿ ರಾಗದ ಸಮಾನ ಕರ್ನಾಟಕಿ ರಾಗ ಸಿಂಧುಭೈರವಿ ಎಂಬುದು ನನ್ನ ತಿಳಿವಳಿಕೆ.

Re: ಭೈರವ್ ರಾಗ, ಭೈರವಿಯಲ್ಲ.

ಶ್ರೀನಿಧಿ's picture

beluru wrote:
ಅಂದಹಾಗೆ ಭೈರವಿ ರಾಗದ ಸಮಾನ ಕರ್ನಾಟಕಿ ರಾಗ ಸಿಂಧುಭೈರವಿ ಎಂಬುದು ನನ್ನ ತಿಳಿವಳಿಕೆ.

ನನಗೆ ಇದರಲ್ಲಿ ಸ್ವಲ್ಪ ಸಂದೇಹ ಇದೆ. ಕೆಲವೆಡೆ ಭೈರವಿ(ಹಿಂದುಸ್ತಾನಿ)ಯು ಸಿಂಧುಭೈರವಿ ಎಂದೂ ಬೇರೆ ಕಡೆಗಳಲ್ಲಿ ಅದು ತೋಡಿ(ಹನುಮತೋಡಿ) ಎನ್ನುತ್ತಾರೆ. ಇದು ಹಿಂದುಸ್ತಾನಿ ಹಾಗೂ ಕರ್ನಾಟಕ ಸಂಗೀತದ ಸ್ವರಗಳ ಹೆಸರಿನಲ್ಲಿರುವ ವ್ಯತ್ಯಾಸದಿಂದ ಉಂಟಾಗಿರುವ ಗೊಂದಲ.

ಹಿಂದುಸ್ತಾನಿ ಸ್ವರಕ್ಕೆ ಸಮಾನ ಕರ್ನಾಟಕ ಸ್ವರಗಳು ಹೀಗಿವೆ.

೧ ಷಡ್ಜ್ - ಸ == ಷಡ್ಜ - ಸ
೨ ಕೊಮಲ್ ರಿಶಭ್ - ರಿ೧ == ಶುದ್ಧ ರ್‍ಇಶಭ - ರಿ೧
೩ ಶುದ್ಧ್ ರಿಶಭ್ - ರಿ೨ == ಚತುಶೃತಿ ರ್‍ಇಶಭ - ರಿ೨
೪ ಕೊಮಲ್ ಗಾಂಧಾರ್ - ಗ೧ == ಸಾಧಾರಣ ಗಾಂಧರ - ಗ೨
೫ ಶುದ್ಧ್ ಗಾಂಧಾರ್ - ಗ೨ == ಅಂತರ ಗಾಂಧರ - ಗ೩
೬ ಶುದ್ಧ್ ಮಧ್ಯಮ್ - ಮ೧ == ಶುದ್ಧ ಮಧ್ಯಮ - ಮ೧
೭ ತೀವ್ರ ಮಧ್ಯಮ್ - ಮ೨ == ಪ್ರತಿ ಮಧ್ಯಮ - ಂ೨
೮ ಪಂಚಮ್ - ಪ == ಪಂಚಮ - ಪ
೯ ಕೊಮಲ್ ದೈವತ್ - ದ೧ == ಶುದ್ಧ ದೈವತ - ದ೧
೧೦ ಶುದ್ಧ್ ದೈವತ್ - ದ೨ == ಚತುಶೃತಿ ದೈವತ - ದ೨
೧೧ ಕೊಮಲ್ ನಿಶಾದ್ - ನಿ೧ == ಕೈಶಿಕಿ ನಿಶಾದ - ನಿ೨
೧೨ ಶುದ್ಧ್ ನಿಶಾದ್ - ನಿ೨ == ಕಾಕಲಿ ನಿಶಾದ - ನಿ೩

ಈಗ ರಾಗ್ ಭೈರವಿ(ಹಿಂದುಸ್ತಾನಿ) ಆರೋಹಣ ಅವರೋಹಣ ಹೀಗಿದೆ..(ಹಿಂದುಸ್ತಾನಿ ಪದ್ಧತಿಯಲ್ಲಿ)
ಸ ರಿ೧ ಗ೧ ಮ೧ ಪ ದ೧ ನಿ೧ ಸ - ಸ ನಿ೧ ದ೧ ಪ ಮ೧ ಗ೧ ರಿ೧ ಸ

ಇದು ಕರ್ನಾಟಕ ಸಂಗೀತ ದಲ್ಲಿ
ಸ ರಿ೧ ಗ೨ ಮ೧ ಪ ದ೧ ನಿ೨ ಸ - ಸ ನಿ೨ ದ೧ ಪ ಮ೧ ಗ೨ ರಿ೧ ಸ

ಆಗುತ್ತದೆ. ಇದು ಹನುಮತೋಡಿ(ತೋಡಿ)ಯ ಆರೋಹಣ ಅವರೋಹಣ.

ಸಿಂಧುಭೈರವಿಯ ಆರೋಹಣ ಅವರೋಹಣ ಹೀಗಿದೆ.. (ಕರ್ನಾಟಕ ಪದ್ಧತಿ)
ಸ ರಿ೨ ಗ೨ ಮ೧ ಗ೨ ಪ ದ೧ ನಿ೨ ಸ - ಸ ನಿ೨ ದ೧ ಪ ಮ೧ ಗ೨ ರಿ೧ ಸ [ವಕ್ರ ರಾಗ]

ಆದ್ದರಿಂದ ಭೈರವಿ(ಹಿಂದುಸ್ತಾನ) ಕರ್ನಾಟಕ ಸಂಗೀತದ ಸಿಂಧುಭೈರವಿ ಅಲ್ಲ ಎಂದು ನನ್ನ ಅನಿಸಿಕೆ. ನನಗೆ ರಾಗಜ್ಞಾನ ಅಷ್ಟು ಚೆನ್ನಾಗಿಲ್ಲ..ಆದ್ದರಿಂದ ಎರಡೂ ರಾಗಗಳನ್ನು ಕೇಳಿ ವ್ಯತ್ಯಾಸ ಹೇಳಲಾಗುತ್ತಿಲ್ಲ.

ಸಂಗೀತ ಸುಧೆ ಹರಿಯಲಿ

ಶ್ರೀಶಕಾರಂತ's picture

ಸ* ರಿ* ಅಂದರೆ ಅವರೋಹಣದ ಸ್ವರಗಳು ಅಂದಿರಲ್ಲ... ಅವರೋಹಣದಲ್ಲಿ ತಗ್ಗು(ಮಂದ್ರ) ಸ್ಥಾಯೀ ಸ್ವರಗಳು ಬರುವುದಿಲ್ಲವೇ?

ತಾರಸ್ಥಾಯೀ ಸ್ವರಗಳು ಎಂದರೆ ಸೂಕ್ತ ಎಂದು ನನ್ನ ಭಾವನೆ...ಇರಲಿ...ಪುಸ್ತಕದಲ್ಲಿ ಬರೆಯುವಾಗ ತಾರಸ್ಥಾಯೀ ಸ್ವರವಾದರೆ ಸಾಧಾರಣ ಸ್ವರದ ಮೇಲೆ ಒಂದು ಚುಕ್ಕೆ ಇಡುತ್ತಾರೆ...

ಅತಿಮಂದ್ರವಾದರೆ ಕೆಳಗೆ ಒಂದು ಚುಕ್ಕಿ...ಸರಿಯೆ...ಇಲ್ಲಿ ಚುಕ್ಕಿ ಇಡಲು ಸಾಧ್ಯವಿಲ್ಲ ಬಿಡಿ...

ರಾಗಗಳ ಹೆಚ್ಚಿನ ಮಾಹಿತಿಗೆ --- ಶ್ರುತಿಲಕ್ಶಣ ಪ್ರಕಾಶಿನಿ ಎಂಬ ಪುಸ್ತಕವನ್ನ ಓದಿ...ಅಂಕಿತ(ಗಾಂಧಿ ಬಜಾರ್) ದಲ್ಲಿ ಸಿಗುತ್ತದೆ...

ಸಂತೋಷ ಸುನೀಲ ರೆ...ಇನ್ನೇನು ಒಂದೆರಡು ತರಗತಿಯಲ್ಲಿ...ಕೆರೆಯನೀರನ್ನು ಕೆರೆಗೆ ಚೆಲ್ಲುವಿರಿ...
ನಿರರ್ಗಳವಾಗಿ ಸಾಗಲಿ ನಿಮ್ಮ ಸಂಗೀತ ಪಠಣ.....

ನಾನು ಕಲಿಯುತ್ತಿದ್ದಾಗ ಮೊದಮೊದಲು ...ಸಿಂಧುರಾವಣ ಅನ್ನುತ್ತಿದ್ದೆ...ನಿಮ್ಮ ಸಂಪೂರ್ಣ ಗೀತೆಯ ವಿವರಣೆ ನೋಡಿ ಜ್ನಾಪಕಕ್ಕೆ ಬಂತು...

ಹಾ ಮಕ್ಕಳ ಕೂಟದಲ್ಲಿ ರಾಮನವಮಿ ಸಂಗೀತೋತ್ಸವ ಇದೆ...೧೦೦ ರೂ pass ಕೊಡುತ್ತಿದ್ದಾರೆ...ಬೇಗ ತೆಗೆದುಕೊಳ್ಳಿ...

ಉ: ಸಂಗೀತ ಸುಧೆ ಹರಿಯಲಿ

Sunil Jayaprakash's picture

ಶ್ರೀಶಕಾರಂತ wrote:
ಸ* ರಿ* ಅಂದರೆ ಅವರೋಹಣದ ಸ್ವರಗಳು ಅಂದಿರಲ್ಲ... ಅವರೋಹಣದಲ್ಲಿ ತಗ್ಗು(ಮಂದ್ರ) ಸ್ಥಾಯೀ ಸ್ವರಗಳು ಬರುವುದಿಲ್ಲವೇ? ತಾರಸ್ಥಾಯೀ ಸ್ವರಗಳು ಎಂದರೆ ಸೂಕ್ತ ಎಂದು ನನ್ನ ಭಾವನೆ...

ಧನ್ಯವಾದಗಳು ಶ್ರೀಶಕಾರಂತರವರೆ, ನಿಮ್ಮ ಅನುಮಾನ ದಿಟವಾಗಿದೆ. ವಿಚಾರಿಸಿ ನೋಡಿದೆ. ಸ* ರಿ* ಯನ್ನು ಉಚ್ಛಸ್ಥಾಯಿ ಅಥವಾ ಹೆಚ್ಚುಸ್ಥಾಯಿ ಸ್ವರಗಳು ಎನ್ನುತ್ತಾರಂತೆ. ತಪ್ಪನ್ನು ಸರಿಪಡಿಸಿರುವೆ

ಉ: ಇಲ್ಲೊಂದು ಕೇಳಿ ರಾಗ ಗುರುತಿಸಿ

hariharapurasridhar's picture

ಕೊಂಡಿ ತೆರೆಯುತ್ತಿಲ್ಲ ವಲ್ಲಾ?

ಹೆಚ್ಚಿನ ಮಾಹಿತಿ

chandrakanthkg's picture

ಇದು ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹಾ ಶ್ರೀ ಪುರಂದರದಾಸರ ರಚನೆ. ಈ ರಚನೆ 15ನೆ ಮೇಳಕರ್ತ ರಾಗವಾದ ಮಾಯಮಾಳವಗೌಳದಲ್ಲಿ ಜನಿತ ಮಲಹರಿ ರಾಗದಲ್ಲಿದೆ ಮತ್ತು ಇದರ ತಾಳ ರೂಪಕ.

ಆರೋಹಣ: ಸ ರಿ೧ ಮ೧ ಪ ದ೧ ಸ
ಅವರೋಹಣ: ಸ ದ೧ ಪ ಮ೧ ಗ೩ ರಿ೧ ಸ

ಸುನಿಲ್ ನಿಮ್ಮ ಸಂಗೀತ ವ್ಯಾಸಾಂಗ ಉತ್ತಮವಾಗಿ ಸಾಗಲಿ ಎಂದು ಹಾರೈಸುವೆ.

ನಮಸ್ಕಾರ

ಚಂದ್ರಕಾಂತ್

ಹಿಂದುಸ್ತಾನೀ!

tvsrinivas41's picture

ಚಂದ್ರಕಾಂತರಿಗೆ ನಮಸ್ಕಾರಗಳು.

ನೀವು ಹೇಳುತ್ತಿರುವುದು ಜಿತೇಂದ್ರ ಅಭಿಷೇಕಿ ಅವರ ಸರ್ವೋತ್ತಮ ಸರ್ವೇಶ್ವರ ಭಜನೆಯ ಬಗ್ಗೆಯಾ?

ಅದು ಹಿಂದುಸ್ತಾನೀ ರಾಗವಾದ ಭೈರವಿ ಅಲ್ಲವೇ?

ನನಗೆ ಸಂಗೀತದ ಜ್ಞಾನ ಎಳ್ಳಷ್ಜ್ಟೂ ಇಲ್ಲ. ಕೇಳಿ ಆನಂದಿಸುವುದು ಮಾತ್ರ ತಿಳಿದಿದೆಯಷ್ಟೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

ಗುಣಕ್ರಿ ರಾಗ

chandrakanthkg's picture

ನಮಸ್ಕಾರ ಶ್ರೀನಿವಾಸ್,

ಕ್ಷಮಿಸ ಬೇಕು ನನ್ನದು ಈ ವಿಷಯದಲ್ಲಿ ಅಲ್ಪ ಜ್ಞಾನ ಅದಲ್ಲದೆ ನನಗೆ ನಿಖರವಾಗಿ ರಾಗ ಗುರುತಿಸುವ ಕ್ಷಮತೆಯಿಲ್ಲ . ಆದರೆ ಗುಣಕ್ರಿ ಮತ್ತು ಭೈರವಿ ಬಹಳ ಹತ್ತಿರದ ರಾಗಗಳೆಂದು ಎಲ್ಲೊ ಓದಿದ ನೆನಪು. ಅಂತರ್ಜಾಲವನ್ನು ಜಾಲಾಡಿ ಗುಣಕ್ರಿ ರಾಗದ ಆರೋಹಣ ಅವರೋಹಣ ಹುಡುಕಿರುವೆ. ಕೇಳಿ ನೋಡಿ http://www.soundofindia.com/soundfiles/track_33.mp3

ವಂದನೆಗಳು

ಚಂದ್ರಕಾಂತ್

ನನಗೂ ಸಂಗೀತ ಗೊತ್ತಿಲ್ಲ

tvsrinivas41's picture

ನನಗೂ ಸಂಗೀತದ ಬಗ್ಗೆ ಏನೇನೂ ಗೊತ್ತಿಲ್ಲ. ನೀವೇ ಇನ್ನೂ ಪರವಾಗಿಲ್ಲ. ಆದರೆ ನೀವು ಕೊಟ್ಟಿರುವ ಕೊಂಡಿಯಲ್ಲಿರುವ ವಿಷಯಗಳನ್ನು ನನ್ನ ಮಗಳಿಗೆ ತಿಳಿಸುವೆ. ಅವಳು ಕರ್ನಾಟಕ ಸಂಗೀತ ಅಭ್ಯಾಸ ಮಾಡಿ ಈಗ ಹಿಂದುಸ್ತಾನಿ ಕಲಿಯುತ್ತಿದ್ದಾಳೆ.

ಉಪಯುಕ್ತ ಮಾಹಿತಿಯ ತಾಣ ತೋರಿಸಿದ್ದಕ್ಕೆ ತಮಗೆ ವಂದನೆಗಳು.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

ಕೀರ್ತನೆ

ಮಹೇಶ ಭೋಗಾದಿ's picture

ಸ್ವಾಮಿ ಸುನೀಲರೆ,

ಒಂದು ಸಲಹೆ/ಕೋರಿಕೆ, ನೀವು ಕಲಿಯುವ ಕೀರ್ತನೆಗಳಲ್ಲಿ ಬರುವ, ಆಸಕ್ತಿಮೂಡಿಸುವಂತ ಪದಗಳನ್ನು ಬರೆಯಿರಿ.

ಉದಾ: ಲಕುಮಿಕರ ಯಾರು ? ಲಂಬೋದರನ ಸ್ತುತಿಯಲ್ಲಿ, ಲಕುಮಿಯನ್ನು ಯಾಕೆ ಕೀರ್ತನಕಾರರು ಸ್ಮರಿಸಿದರು? ಮುಂತಾದವು.

ಧನ್ಯವಾದ!

ಸಂಗೀತ

ಮಹೇಶ ಭೋಗಾದಿ's picture

ನಾನು ಸಂಗೀತದ ಬಗ್ಗೆ ಏನನ್ನು ಕಲಿತಿಲ್ಲ. 

ಇದು ಸಂಗೀತಕ್ಕೆ ಸಂಬಂಧಿಸಿದ ಮಾತುಕತೆಯಾದ್ದರಿಂದ, ನನ್ನ ಕೆಲವು ಸಂಗೀತಕ್ಕೆ ಸಂಬಂಧಿಸಿದ ಗೊಂದಲಗಳನ್ನು ಪರಿಹರಿಸಿಕೊಳ್ಳಲು ಇಚ್ಛಿಸುವೆನು.

ಹಿಂದೂಸ್ತಾನಿ ಮತ್ತು ಕರ್ನಾಟಕ ಪದ್ದತಿಗಳು ಹೇಗೆ ವಿಭಿನ್ನವಾಗವೆ? ನನಗೆ ಕೇಳಲು ಎರಡು ಒಂದೆ  ತರಹ ಕೇಳಿಸುವುದು.

ನಾವು ಕೇಳುವ ಸಿನಿಮಾ ಹಾಡುಗಳ ಸಂಗೀತವನ್ನು, ಭಾರತೀಯ ಸಂಗೀತವೆಂದು, ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಮಾತ್ರ  ಹಿಂದೂಸ್ತಾನಿ ಮತ್ತು ಕರ್ನಾಟಕ ಎಂದು ವಿಭಾಗಗಳಿವೆ ತಿಳಿದಿದ್ದೇನೆ.

 ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕ ಪದ್ದತಿಗಳನ್ನು ಹೊರತುಪಡಿಸಿ, ಬೇರೆ ಯಾವ ಪದ್ದತಿಗಳು ಇಲ್ಲವೆ?

ಧನ್ಯವಾದ. 

 

  

ಉ: ಸಂಗೀತ

srinivasps's picture

ಅಹಹ! ಹಳೆಯ ಎಳೆ, ಹಂಸಾನಂದಿಗಳೇ...ಇಲ್ಲಿ ನೋಡಿ... :)

ಉ: ಸಂಗೀತ

Shamala's picture

ಹಳೆಯ ಎಳೆ ಹಾಗ೦ದರೇನು ? ಇದು ಮೊದಲು ಸ೦ಪದದಲ್ಲಿ ಚರ್ಚಿಸಲ್ಪಟ್ಟಿತ್ತೇ ?
ದಯವಿಟ್ಟು ತಿಳಿಸಿ..........

ಶ್ಯಾಮಲ

ಉ: ಸಂಗೀತ

chiruvijay's picture

೨೦೦೬ ರಲ್ಲೆ ಚರ್ಚಿಸಲ್ಪಟ್ಟಿದೆ.

ಉ: ಸಂಗೀತ

hariharapurasridhar's picture

ಶ್ರೀನಿವಾಸ್,
ಕರ್ನಾಟಕ/ಹಿಂದೂಸ್ಥಾನೀ ಸಂಗೀತದ ಆಡಿಯೋ ಕೊಂಡಿ ಕೊಡೀ ಪ್ಲೀಸ್.ನಾನೇನೂ ಸಂಗೀತ ಬಲ್ಲವನಲ್ಲಾ. ಕೇಳುವ ಆಸೆ ಇರುವವನು.ತಲೆದೂಗುವವನು.

ಉ: ಸಂಗೀತ ಪಾಠದ ಮೊದಲ ಗೀತೆ

kpbolumbu's picture

ರಚನೆ: ಪುರನ್ದರ ದಾಸರು
ರಾಗ: ಮಲಹರಿ
ತಾಳ: ರೂಪಕ - ಚತುರಶ್ರ (ಅನಿಲ್ ರಮೇಶ್ ಬರೆದುದನ್ನು ಓದಿರಿ.)

ಆರೋಹಣ : ಸ ರಿ1 ಮ1 ಪ ದ1 ಸ'
ಅವರೋಹಣ: ಸ' ದ1 ಪ ಮ1 ಗ2 ರಿ1 ಸ

ಅವರೋಹಣದಲ್ಲಿ ಒನ್ದು ಸ್ವರ ಹೆಚ್ಚು - ಅನ್ತರ ಗಾನ್ಧಾರ [ಗ2]

X X V X X V

1. II ಮ ಪ ದ ಸ' ಸ' ರಿ' I ರಿ' ಸ' ದ ಪ ಮ ಪ II
II ರಿ ಮ ಪ ದ ಮ ಪ I ದ ಪ ಮ ಗ ರಿ ಸ II
II ಸ ರಿ ಮ - ಗ ರಿ I ಸ ರಿ ಗ ರಿ ಸ -II

II ರಿ ಮ ಪ ದ ಮ ಪ I ದ ಪ ಮ ಗ ರಿ ಸII
II ಸ ರಿ ಮ - ಗ ರಿ I ಸ ರಿ ಗ ರಿ ಸ -II

II ಶ್ರೀ- ಗ ಣ ನಾ ಥ I ಸಿಂ ಧೂ ರ - ವ ರ್ಣII
II ಕ ರು ಣ ಸಾ ಗ ರ II ಕ ರಿ ವ ದ ನ - II
II ಲಂ - ಬೋ - ದ ರ I ಲ ಕು ಮಿ ಕ ರ -II

II ಅಂ - ಬಾ - ಸು ತ I ಅಮ ರ ವಿ ನು ತII
II ಲಂ - ಬೋ - ದ ರ I ಲ ಕು ಮಿ ಕ ರ - II

2. ಸಿದ್ಧ ಚಾರಣ ಗಣ ಸೇವಿತ
ಸಿದ್ಧಿ ವಿನಾಯಕ ತೇ ನಮೋ ನಮೋ

3. ಸಕಲ ವಿದ್ಯಾ ಆದಿಪೂಜಿತ
ಸರ್ವೋತ್ತಮ ತೇ ನಮೋ ನಮೋ

ಉ: ಸಂಗೀತ ಪಾಠದ ಮೊದಲ ಗೀತೆ

kpbolumbu's picture

ಸಂಗೀತ ಪಾಠ ಎಲ್ಲಿಯವರೆಗೆ ಬನ್ತು, ಸುನಿಲ್?

ಉ: ಸಂಗೀತ ಪಾಠದ ಮೊದಲ ಗೀತೆ

Sunil Jayaprakash's picture

ನಮ್ಮ ಮಾಸ್ತರಿಗೆ ಕಾಲು ಪೆಟ್ಟಾಗಿರುವುದರಿಂದ ಸದರಿ ನಾಲ್ಕು ತಿಂಗಳಿನಿಂದ ಅಭ್ಯಾಸ ನಿಂತಿದೆ.