ಆಳು ಕನ್ನಡ ತಾಯ್ ಬಾಳು ಕನ್ನಡ ತಾಯ್..ಆದರೆ ಕನ್ನಡಿಗರೊಡತಿ ಯಾರು
ತಿಳಿಯುತ್ತಿರಲಿಲ್ಲ ಆಗ ನನಗೆ, ಹೀಗೇಕೆ ಅವಳು ನೋಡುತ್ತಿದ್ದಳೆಂದು. ಅವಳು ಒಂದೆೇ ಸಮನೆ ನನ್ನನ್ನೆ ಎವೆಯಿಕ್ಕದೆ ನೋಡುತ್ತಿದ್ದಳು. ಒಂದು ಸಣ್ಣ ನಗೆಯನ್ನೂ ಬೀರಿದಳು. ತಕ್ಷಣ ತಿಳಿದಿರಲಿಲ್ಲ ನನಗೆ ಯಾಕೆಂದು.
ನಾನೇನು ತಪ್ಪು ಮಾಡಿದೆ. ನಾನು ಮಾಡಿದ್ದಾದರೂ ಏನನ್ನು. ಆಕೆಯಾಡುತ್ತಿದ್ದ ಮಾತಿನಿಂದಲೇ ತಿಳಿಯಿತು ಆಕೆ ಕನ್ನಡದವಳಲ್ಲವೆಂದು ಎಂದು. ಹಾಗೆಯೇ ಅಲ್ಲಿ ಯಾರೂ ಕನ್ನಡದವರಿರಲಿಲ್ಲ. ಗೇಟ್ ಕಾವಲುಗಾರನಿಂದ ಹಿಡಿದು ಆಫೀಸರ್ ತನಕ.
ಇರಲಿ..ವಿಷಯಕ್ಕೆ ಬರೋಣ
ಆಕೆ ಅಕೌಂಟು ವಿಭಾಗದಲ್ಲಿದ್ದಾಕೆ. ನಾನೋ ದುಡ್ಡು ಕಟ್ಟಲು ಅವಳ ಎದುರಿಗೆ ಕುಳಿತಿರುವಾತ. ಸುಮ್ಮನೆ ನಾನು ಕೊಟ್ಟಿರುವ ದುಡ್ಡನ್ನು ತೆಗೆದುಕೊಂಡು ರಶೀತಿ ಕೊಡುವುದನ್ನು ಬಿಟ್ಟು ಹಾಗೇಕೆ ನೋಡಬೇಕಿತ್ತು. ಹಾ! ನಿಮಗೆ ಒಂದು ಮಾತು ತಿಳಿಸುತ್ತೇನೆ. ನಾನು ಅಪ್ಲಿಕೇಷನ್ನಲ್ಲಿ ನನ್ನ ಸಹಿಯನ್ನು ಕನ್ನಡದಲ್ಲಿ ಮಾಡಿದ್ದೆ. ಬಹುಶಃ ಆಕೆ ಅದನ್ನು ನೋಡಿರಬಹುದು ಎಂದು ಊಹಿಸಿದೆ. ನಾನು ಅನಕ್ಷರಸ್ಥ ಎಂದವಳಿಗೆ ಅನಿಸಿರಬಹುದೇ. ಛೇ, ಛೇ, ಆ ಅಪ್ಲಿಕೇಷನ್ನಲ್ಲಿ ನನ್ನ ಇಂಗ್ಲೀಷ್ ಅಕ್ಷರಗಳು ಬಹಳ ದುಂಡಾಗಿತ್ತು. ಹಾಗಾಗಿ ನಾನು ಅನಕ್ಷರಸ್ಥ ಅಲ್ಲ ಎಂದು ಅವಳಿಗೆ ಖಾತ್ರಿಯಾಗಿರಲಿಕ್ಕೆ ಸಾಕು. ಆಕೆ ರಶೀತಿ ಬರೆಯುತ್ತಿದ್ದಾಗ ಸುಮ್ಮನೆ ಸುತ್ತಲೂ ಕಣ್ಣಾಡಿಸಿದೆ. ಆ ಕೊಠಡಿಯಲ್ಲಿ ನೇತಾಡುತ್ತಿದ್ದ ಒಂದು ಸಣ್ಣ ಸೂಚನೆ ಕಣ್ಣಿಗೆ ಬಿತ್ತು. ಖಾತ್ರಿಯಾಯಿತು ನನಗೆ ಏಕೆ ಅವಳು ಹಾಗೆ ನೋಡಿದಳೆಂದು. ಎಂಥ ಕಾಕತಾಳೀಯ ನೋಡಿ.
"अंग्रेजी पत्रों पर भी हिन्दी मे हस्ताक्षर कीजिये. हिन्दी को भढावा दीजिये" ಎಂಬ ಸೂಚನಾ ಫಲಕ ನೇತಾಡುತ್ತಿತ್ತು.
ಸಾರಾಂಶ : ಇಂಗ್ಲೀಷ್ ಅಪ್ಲಿಕೇಷನ್ ಗಳಲ್ಲೂ ಕೂಡ ಹಿಂದಿಯಲ್ಲಿ ಸಹಿ ಮಾಡಿರಿ. ಹಿಂದಿಯನ್ನು ಪೋಷಿಸಿರಿ.
ಹಾಗೆಂದ ಮಾತ್ರಕ್ಕೆ ಅವರೆಲ್ಲ ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂಬ ತೀರ್ಮಾನಕ್ಕೆ ಬರಬೇಡಿ. ಹಾಗೆಯೇ ಅಲ್ಲಿ ಉತ್ತರದವರೂ ಇರಲಿಲ್ಲ. ಅಲ್ಲಿದ್ದವರಿಗಿಂತ ನಾನು ಬಹಳ ಚೆನ್ನಾಗಿೆಯೇ ಹಿಂದಿ ಮಾತನಾಡಬಲ್ಲೆ, ಗ್ರಹಿಸಬಲ್ಲೆ. ಹಾಗೆಯೇ ಹಿಂದಿಯ ಬಗ್ಗೆ ಗೌರವವನ್ನೂ ಇಟ್ಟಿರುವೆ. ಅಲ್ಲಿ ಕಿವಿಗೆ ಬೀಳುತ್ತಿದ್ದುದ್ದು ಕನ್ನಡವೂ ಅಲ್ಲ, ಹಿಂದಿಯೂ ಅಲ್ಲ, ಇಂಗ್ಲೀಷೂ ಅಲ್ಲ. ನನಗೆ ತಿಳಿಯಿತು ಆಗ, ಆ ನಾಮಫಲಕ ಕೇವಲ ಕಣ್ಣಿಗೆ ಮಣ್ಣೆರಚುವ ತಂತ್ರ. ಕೇವಲ ಒಂದು ಭಾಷೆಯನ್ನು(ಕನ್ನಡ) ಮಾತನಾಡಲು ಇಚ್ಛೆಯಿಲ್ಲದಿರುವುದಕ್ಕೆ ಇಂತಹ ಫಲಕ ಹಾಕುವುದು ಎಷ್ಟರ ಮಟ್ಟಿಗೆ ಸರಿ. ಇದನ್ನು ನೋಡಿದ ನಂತರ ನನಗೆ ಜ್ಞಾಪಕಕ್ಕೆ ಬರುತ್ತಿರುವ ಹಾಡೆಂದರೆ.
ಆಳು ಕನ್ನಡ ತಾಯ್ ಬಾಳು ಕನ್ನಡ ತಾಯ್, ಕನ್ನಡಿಗರೊಡತಿ ಓ ರಾಜೇಶ್ವರೀೀೀಿ....
ಆದರೆ ಈ ರಾಜೇಶ್ವರಿ ಯಾರು....?
ಅಂದಹಾಗೆ, ನೀವು ಈ ಫಲಕವನ್ನು ನೋಡಬೇಕೆಂದಿದ್ದರೆ,
ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ, Sports Authority Of India ದ Accounts section ಹೋಗಿ ನೋಡಿ.

- Sunil Jayaprakash ರವರ ಬ್ಲಾಗ್
- Login or register to post comments
- 1024 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ನಾನು ಒಮ್ಮೆ
ನಾನು ಒಮ್ಮೆ shittybank ಒಂದಕ್ಕೆ ಖಾತೆ ತೆರೆಯಲು ಅರ್ಜಿ ಹಾಕುವಾಗ ಕನ್ನಡದಲ್ಲಿ ಸಹಿ ಮಾಡಿದ್ದಕ್ಕೆ ಅದನ್ನು ವಾಪಸ್ ಕಳುಹಿಸಿದ್ದರು. ಹಾಗಂತ ನಾನು ಕನ್ನಡದಲ್ಲಿ ಸಹಿ ಮಾಡುವುದನ್ನು ಬಿಡಲಿಲ್ಲಾ ಬಿಡಿ
.
ಎಷ್ಟೋ ಕಡೆ, ನನ್ನ ಸಹಿ ನೋಡಿದವರು ತಾವು ಪ್ರೇರಿತರಾಗಿ ಕನ್ನಡದಲ್ಲಿ ಸಹಿ ಮಾಡುವುದೂ ಉಂಟು.
--
btbytes.com - bytes of Bangalore, Kannada and Open Source.
ಕನ್ನಡದಲ್ಲಿ ಸಹಿ ಆಂದೋಲನ
ನಾವೆಲ್ಲ ಸಂಪದಿಗರು ನಡೆಸೋಣ!!
ಒಂದು ವಿಷಯ
ಒಂದು ಕಾಲದಲ್ಲಿ
ಸಂಸ್ಕೃತಬಲ್ಲವರು ಮಾತ್ರವೆ ಸುಸಂಸ್ಕೃತರು.
ದೇವನಾಗರಿಯಲ್ಲಿ ಬರೆದವರೆ ನಾಗರಿಕರು.
ಈಗ ಆಂಗ್ಲ.
ನನ್ನ ಅನುಭವದಲ್ಲಿ Airtel, Hutch, ಗಿರಾಕಿಸೇವೆ(customer care
) ಕರೆಮಾಡಿ ಕನ್ನಡದಲ್ಲಿ ಮಾತಾಡುವವರು ಸಿಗುವುದಿಲ್ಲ. ಒಂದು ಸರತಿಯಂತೂ ಒಬ್ಬ "I know Hindi, English and Tamil" ಅಂತ ಹೇಳಿದ್ದ.
ಎಂದಿನಿಂದಲೂ ಕನ್ನಡವು ಜನಸಾಮಾನ್ಯರ ಭಾಷೆಯಾಗೆ ಬೆಳೆದು ಉಳಿದು ಬಂದಿದೆ.
ಎಲ್ಲಿಯವರೆಗೆ ಕನ್ನಡಿಗರಲ್ಲಿ ಭಾಷಾಜಾಗೃತಿಬರುವುದಿಲ್ಲವೋ, ಅಲ್ಲಿಯವರೆಗೂ ಕನ್ನಡಕ್ಕೆ ಈ ಗತಿಯೆ.
ಕನ್ನಡದ ಸಹಿ
ಕನ್ನಡ ಸಹಿಯನ್ನು ಈ ಕೆಳಗಿನ ಕಡೆ ಅಗತ್ಯವಾಗಿ ಮಾಡೋಣ. ಇದು ಸೀಮಿತವಾದ ಪಟ್ಟಿ ಅಲ್ಲ, ಇಲ್ಲಿ ಅಗತ್ಯವಾಗಿ ಮಾಡಬಹುದು.
೧. ಕೊರಿಯರ್ ಗಳ confirmation letter ಮೇಲೆ.
೨. ದಿನಪತ್ರಿಕೆಯ ಮಾಸಿಕ ಬಿಲ್.
೩. ದೇವಸ್ಥಾನಗಳಿಗೆ ಛಂದಾ ನೀಡುವಾಗ.
೪. ಕೇಬಲ್ ಬಾಡಿಗೆ ನೀಡುವಾಗ.
೫. ಬ್ಯಾಂಕುಗಳ ಛಲನ್ಗಳ ಮೇಲೆ.
ಪ್ರದೀಪರವರು ಹೇಳಿದ ಹಾಗೆ ಬ್ಯಾಂಕುಗಳಲ್ಲೂ ಪ್ರಯತ್ನಿಸಬಹುದು. ನನ್ನ ಯು.ಕೆ. ಗೆಳೆಯರೊಬ್ಬರು ಅಲ್ಲಿಯ ಬ್ಯಾಂಕಿನಲ್ಲೂ ಕನ್ನಡದಲ್ಲಿ ಸಹಿ ಮಾಡುವರಂತೆ.