Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › Sunil Jayaprakash ರವರ ಬ್ಲಾಗ್

ನಾನು ಕಾಗುಣಿತವನ್ನು ಕಲಿತ ಬಗೆ

January 6, 2007 - 3:07pm — Sunil Jayaprakash

ಬಹಳ ಹಿಂದೆ, ನನ್ನ ಅಕ್ಕನ ಕ್ಲಾಸಿನಲ್ಲಿ, ಮೇಷ್ಟರು ಅವಳ ಗೆಳತಿಗೆ, ಕಾಗುಣಿತ ಹೇಳಮ್ಮ ಅಂತ ಆಜ್ಞೆಯಿತ್ತರಂತೆ. ಆ ಹುಡುಗಿ ಕ, ಕಾ, ಕಿ, ಕೀ, ಕು.....ಅಂದದ್ದೇ ತಡ, ಸಾಕು ಸಾಕು ನಿಲ್ಸು, ಯಾರಮ್ಮ ನಿನಗೆ ಕಾಗುಣಿತ ಹೇಳಿಕೊಟ್ಟಿದ್ದು? ಅಂತ ಕೇಳಿದ್ದರಂತೆ. Laughing out loud

ಕರ್ನಾಟಕದಲ್ಲಿ ಬಹುಶಃ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯಲ್ಲಿ ಅಕ್ಷರಾಭ್ಯಾಸ ಮಾಡಿಸುತ್ತಾರೆ ಎಂದು ಕಾಣುತ್ತದೆ. ಇದರಲ್ಲಿ ಒಂದು ಸರಿ ಮತ್ತೊಂದು ತಪ್ಪು ಎನ್ನಲಾಗುವುದಿಲ್ಲ.

ಕನ್ನಡದ ಏತ್ವಗಳು ಎಂಬ ಚರ್ಚೆಯಲ್ಲಿ ಶ್ರೀಕಾಂತ ಮಿಶ್ರಿಕೋಟಿಯವರ ಟಿಪ್ಪಣಿಯನ್ನು ಓದಿದ ಮೇಲೆ ಮೇಲಿನ ಘಟನೆ ನೆನಪಿಗೆ ಬಂತು.

ಹೌದು, ನಾನು ಹೇಗೆ ಕಾಗುಣಿತ ಕಲಿತಿದ್ದೆ ಎಂದು ಜ್ಞಾಪಕ ಮಾಡಿಕೊಳ್ಳಲು ಯತ್ನಿಸಿದಾಗ ನಮ್ಮಮ್ಮ ಹೇಳಿಕೊಡುತ್ತಿದ್ದ ಕಾಗುಣಿತ ನೆನಪಿಗೆ ಬಂತು. ನೋಡಿ, ನಮ್ಮಮ್ಮ ನನಗೆ ಹೇಳಿಕೊಟ್ಟ ಕಾಗುಣಿತ ಈ ರೀತಿಯಿದೆ.

ಕ ತಲ್‌ಕಟ್ಟು ಕ (ತಲೆಕೆಡದಿದ್ದರೆ ಸಾಕು Eye-wink ).
ಕ ತಲ್‌ಕಟ್ಟಿನ್‌ದೀರ್ಘಾ ಕಾ
ಕ ಗುಡ್ಸು ಕಿ
ಕ ಗುಡ್ಸಿನ್‌ದೀರ್ಘಾ ಕೀ
ಕ ಕ್ಕೊಂಬು ಕು
ಕ ಕ್ಕೊಂಬಿನ್‌ದೀರ್ಘಾ ಕೂ
ಕ ಕ್ಕೊಟೃಸುಳಿ ಕೃ
ಕ ಕ್ಕೊಟೃಸುಳಿನ್‌ದೀರ್ಘಾ ಕೄ
ಕ ಕ್ಕೇತ್ವ ಕೆ
ಕ ಕ್ಕೇತ್ವನ್‌ದೀರ್ಘಾ ಕೇ
ಕ ಕ್ಕೈತ್ವ ಕೈ
ಕ ಕ್ಕೋತ್ವ ಕೊ
ಕ ಕ್ಕೋತ್ವನ್‌ದೀರ್ಘಾ ಕೋ
ಕ ಕ್ಕೌತ್ವ ಕೌ
ಕ ಕ್ಕೊಂದ್‌ಸೊನ್ನೆ ಕಂ
ಕ ಕ್ಕೆರೆಡ್‌ಸೊನ್ನೆ ಕಃ

ಅಂದ ಹಾಗೆ, ನೀವುಗಳು ಹೇಗೆ ಕನ್ನಡ ಕಾಗುಣಿತ ಕಲಿತಿರಿ ? ನಿಮ್ಗಳಿಗೂ ಕೂಡ ನಿಮ್ಮಮ್ಮ ಹೀಗೆಯೇ ಕನ್ನಡ ಹೇಳಿ ಕೊಟ್ಟಿದ್ದರೆ ? Smiling

Ornamental seperator
  • Sunil Jayaprakash ರವರ ಬ್ಲಾಗ್
  • Login or register to post comments
  • 448 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 6, 2007 - 4:02pm — shreekant.mishrikoti

Re: ನಾನು ಕಾಗುಣಿತವನ್ನು ಕಲಿತದ್ದು - ನೇರವಾಗೇ-ಕೋಳೀಕೆ ರಂಗ

shreekant.mishrikoti's picture

ನಾನು ಕಲಿತದ್ದು ನೇರವಾಗೇ
ಕ,ಕಾ,ಕಿ,ಕೀ, ಕು, ಕೂ ....... ಎಂದೇ

ಅಂದ ಹಾಗೆ ಕೋಳೀಕೆ ರಂಗ ಎಂಬ ಕೈಲಾಸಂ ಹಾಡು ಕೇಳಿದ್ದೀರಾ , ಅದ್ರಲ್ಲಿ ಕೋಳೀಕೆರಂಗದ ಕಾಗುಣಿತ ಹೇಳುತ್ತಾರೆ. ಇದನ್ನ ಹಾಡಕ್ ಬರ್ದಿದ್ದೋನು ಧಡ್ನನ್ಮಗಾ ಎಂದು ಮುಂದಿನ ಸಾಲು. ಕಾನ್ ಸ್ಟಾಂಟಿನೋಪ್ಲ್ ಎಂಬ ಇಂಗ್ಲೀಷ್ ಹಾದಿಗೆ ಪ್ರತಿಯಾಗಿ ಅವರು ಇದನ್ನು ರಚಿಸಿದ್ದಂತೆ.

ಆಮೇಲೆ ಇನ್ನೊಂದ್ವಿಷಯ .
ದಕ್ಷಿಣ ಕರ್ನಾಟಕದಲ್ಲಿ ಏಕೋ ಕ,ಕಾ ಅನ್ನು ಕಾ ಕಾS ಎಂದು, ಅ , ಆ ಅನ್ನು ಆ,ಆS ಎಂದು ಕಲಿಯುವ, ಕಲಿಸುವ , ಉಚ್ಚರಿಸುವ ಪದ್ಧತಿ ಇದೆ . ಏಕೆ ಎಂದು ಗೊತ್ತಿಲ್ಲ. ಗೊತ್ತಿದ್ದವರು ತಿಳಿಸಿ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
January 7, 2007 - 1:26am — bhatpp

Re: ನಾನು ಕಾಗುಣಿತವನ್ನು ಕಲಿತದ್ದು - ನೇರವಾಗೇ-ಕೋಳೀಕೆ ರಂಗ

bhatpp's picture

shreekant.mishrikoti wrote:
ಆಮೇಲೆ ಇನ್ನೊಂದ್ವಿಷಯ .
ದಕ್ಷಿಣ ಕರ್ನಾಟಕದಲ್ಲಿ ಏಕೋ ಕ,ಕಾ ಅನ್ನು ಕಾ ಕಾS ಎಂದು, ಅ , ಆ ಅನ್ನು ಆ,ಆS ಎಂದು ಕಲಿಯುವ, ಕಲಿಸುವ , ಉಚ್ಚರಿಸುವ ಪದ್ಧತಿ ಇದೆ . ಏಕೆ ಎಂದು ಗೊತ್ತಿಲ್ಲ. ಗೊತ್ತಿದ್ದವರು ತಿಳಿಸಿ.

ದಕ್ಷಿಣ ಕರ್ನಾಟಕಕ್ಕಿಂತ ಹೆಚ್ಚಾಗಿ ಶಿವಮೊಗ್ಗದಲ್ಲಿ ಈ ರೀತಿಯ ಬಳಕೆಯನ್ನು ನೋಡಿದ್ದೇನೆ, ಉದಾ: ಶಿವಮೊಗ್ಗ ಎಂದು ಬರೆದರೂ, ಅದನ್ನು ಉಚ್ಛಾರ ಮಾಡುವಾಗ, "ಶಿವಮೊಗ್ಗಾ" ಎಂದು ಹೇಳುವರು. ಹುಡುಗಿಯರ ಹೆಸರುಗಳನ್ನು ಬರೆಯುವುದರಲ್ಲೂ ಇದೇ ರೀತಿ, ಉದಾ: ಶೋಭಾ ಎಂಬುವಳ ಹೆಸರನ್ನು "ಶೋಭ" ಎಂದು ಬರೆದು "ಶೋಭಾ" ಎಂದು ಉಚ್ಛರಿಸುವರು (ಬಹಳ ಮಂದಿ)!

  • Login or register to post comments
  • link
  • Email this ಪ್ರತಿಕ್ರಿಯೆ
January 7, 2007 - 10:13am — Sunil Jayaprakash

ತಿಪ್ಪಾರಳ್ಳಿ ಬೋರನ್ ಅಣ್ಣನ್ ತಮ್ಮನ್ ದೊಡ್ಮಗ

Sunil Jayaprakash's picture

ಶ್ರೀಕಾಂತ ಮಿಶ್ರಿಕೋಟಿ wrote:
ಅಂದ ಹಾಗೆ ಕೋಳೀಕೆ ರಂಗ ಎಂಬ ಕೈಲಾಸಂ ಹಾಡು ಕೇಳಿದ್ದೀರಾ, ಅದ್ರಲ್ಲಿ ಕೋಳೀಕೆರಂಗದ ಕಾಗುಣಿತ ಹೇಳುತ್ತಾರೆ. ಇದನ್ನ ಹಾಡಕ್ ಬರ್ದಿದ್ದೋನು ಧಡ್ನನ್ಮಗಾ ಎಂದು ಮುಂದಿನ ಸಾಲು. ಕಾನ್ ಸ್ಟಾಂಟಿನೋಪ್ಲ್ ಎಂಬ ಇಂಗ್ಲೀಷ್ ಹಾದಿಗೆ ಪ್ರತಿಯಾಗಿ ಅವರು ಇದನ್ನು ರಚಿಸಿದ್ದಂತೆ.

ಎಂಥ ಒಳ್ಳೆಯ ಹಾಡನ್ನು ನೆನಪಿಗೆ ತಂದಿರಿ ಮಿಶ್ರಿಕೋಟಿಗಳೇ, ಕನ್ನಡ ಆಡಿಯೋ.ಕಾಂನಲ್ಲಿ ಈ ಹಾಡಿದೆ, ಕೇಳಿ ಮಜ್ಜಾ ಮಾಡಿ Laughing out loud - ( ಬೆಂಗಳೂರಿನ ಎಫ್.ಎಮ್.ಪ್ರಭಾವದಿಂದ)

ಕೇಳಿ ನಾನು ಕೋಳೀಕೇ ರಂಗಾSSS

ಈ ರೀತಿ ಕಚಗುಳಿ ಇಡುವ ಮತ್ತೆರಡು ಹಾಡುಗಳೆಂದರೆ,
೧. ಜಿ.ಪಿ.ರಾಜರತ್ನಂ ಅವರ ಯೆಂಡ ಎಡ್ತಿ ಕನ್ನಡಪದಗೊಳ್ ಅಂದ್ರೆ ರತ್ನಂಗ್ ಪ್ರಾಣ.
೨. ಬಿ.ಆರ್.ಲಕ್ಷಣರಾಯರ ಜಾಲಿಬಾರಿನಲ್ಲಿ ಕುಳಿತ ಪೋಲೀ ಹುಡುಗರು ಗೋಪಿಯನ್ನು ಪಾಪ ಗೇಲಿ ಮಾಡುತ್ತಿದ್ದರು.

  • Login or register to post comments
  • link
  • Email this ಪ್ರತಿಕ್ರಿಯೆ
January 7, 2007 - 12:52pm — ಶ್ರೀನಿಧಿ

ತಲಗೊಟ್ಟು

ಶ್ರೀನಿಧಿ's picture

ನಾನೂ ಕ್ ತಲಗೊಟ್ಟು ಕ ಅಂತಾನೆ ಕಲ್ತಿದ್ದು.
ತಲೆ ಕೊಟ್ಟೂ ಕೊಟ್ಟೂ ಬುದ್ಧಿ ಸವ್ದೋಗಿದೆ ಮಾರಾಯ್ರೆ

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾಗುಣಿತ
  • ಹೊಸ ಕನ್ನಡ ಕೀಬೋರ್ಡ್ ಬಂತಂತೆ
  • ನಂಗನ್ನಿಸಿದ್ದು.....
  • ಹಲಸಿನಕಾಯಿ ಕೊಟ್ಟೆಯೂ, "ಏಕೀಕರಣ" ಪುರಾಣವೂ
  • ಕನ್ನಡ - ಇಂಗ್ಲಿಷ್ ಭಾಷಾ ಕಲಿಕೆಯ ವಿಸ್ಮಯ-ವಿಚಾರ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 6 ಅತಿಥಿಗಳು ಆನ್ಲೈನ್ ಇರುವರು.

ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator