ಭೈರಪ್ಪನವರ ಆವರಣವನ್ನು ಓದಿದ ನನ್ನ ಅನುಭವ
ಅಂತೂ ಇಂತೂ ನಾನೂ ಕೂಡ ಕಳೆದ ಶುಕ್ರವಾರ ಆವರಣವನ್ನು ಓದಿದ್ದಾಯಿತು. ಅಂದ ಹಾಗೆ ನಾನು ಕೊಂಡುಕೊಂಡ ಪುಸ್ತಕ ಆವರಣದ ನಾಲ್ಕನೆಯ ಮುದ್ರಣದ್ದು. ಗೆಳೆಯ ಶ್ಯಾಮ್ ಕಿಶೋರ್ ಪ್ರಸ್ತಾಪಿಸಿದ ಹಾಗೆ ಯಾವುದೇ ಪುಸ್ತಕ ಓದುವದಕ್ಕೆ ಹಿಂಜರಿಕೆಯ ಅಗತ್ಯವಿಲ್ಲವಷ್ಟೇ, ಆದರೆ ಆಯಾ ಕೃತಿ ವೈವಕ್ತಿಕವಾಗಿ ಇಷ್ಟವಾಗುವುದು ಬಿಡುವುದು ಅವರವರ ಮಾನಸಿಕ ಸಿದ್ಧತೆ ಮತ್ತು ಪ್ರಬುದ್ಧತೆಗಳನ್ನು ಅವಲಂಬಿಸಿರುತ್ತದೆ. ಆವರಣದ ವಿಷಯದಲ್ಲಿ ಇದು ಹೆಚ್ಚು ಅನ್ವಯವಾಗುತ್ತದೆ.
ನಾನು ಇಲ್ಲಿಯವರೆಗೆ ಭೈರಪ್ಪನವರ ಸುಮಾರು ೯ ಕಾದಂಬರಿಗಳನ್ನು ಓದಿದ್ದೇನೆ. ಗೃಹಭಂಗ, ಸಾರ್ಥ, ಧರ್ಮಶ್ರೀ, ಮತದಾನ, ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಪರ್ವ, ಅನ್ವೇಷಣ ಮತ್ತು ಆವರಣ.
ಆವರಣ ಓದುವಾಗ, ಇಸ್ಲಾಂ ಧರ್ಮೀಯರ ಆಚರಣೆಗಳ ಬಗ್ಗೆ ಮತ್ತು ಇಸ್ಲಾಮಿಕ್ ರಾಜಮನೆತನಗಳು (ಮುಖ್ಯವಾಗಿ ಮೊಘಲ್ ಸಾಮ್ರಾಜ್ಯದ ಕೆಲವು ಚಕ್ರವರ್ತಿಗಳು) ಹಿಂದುಗಳನ್ನು ನಡೆಸಿಕೊಳ್ಳುತ್ತಿದ್ದ ಬಗ್ಗೆ ನೇರ ನಿಷ್ಠುರವಾದ ಪ್ರಸ್ತಾಪಗಳಿರುವದರಿಂದ ಕೆಲವೆಡೆ ಕಸಿವಿಸಿವುಂಟಾಗುವದು ನಿಜ. ಆದರೆ ಭೈರಪ್ಪನವರು ಪ್ರಸ್ತಾಪಿಸಿರುವ ಹಾಗೆ, ಕಾದಂಬರಿಯ ಆಶಯ ಸತ್ಯದ ತಳಹದಿಯ ಮೇಲೆ ಈಗಿನವರ ಸ್ನೇಹ ಬಾಂಧವ್ಯಗಳು ಸ್ಥಾಪಿತವಾಗಬೇಕೆಂಬುದು. ಇದೇ ರೀತಿಯ ಮಾತು ಕೆಲವು ವರ್ಷಗಳ ಹಿಂದೆ ಪಾಕಿಸ್ತಾನದ ಮಹಿಳಾ ಮಂತ್ರಿಯೊಬ್ಬರೂ ಹೇಳಿದ್ದರು. ಭಾರತ ಮತ್ತು ಪಾಕಿಸ್ತಾನ ನಡುವಣ ನಡೆದ ಯುದ್ಧಗಳ ನಿಜವಾದ ಕಾರಣವನ್ನು ಪಾಕಿಸ್ತಾನೀಯರು ಅರ್ಥಮಾಡಿಕೊಳ್ಳದೆ ಕೇವಲ ಪಾಕಿಸ್ತಾನ ಸರ್ಕಾರದ ಇತಿಹಾಸದ ಪುಸ್ತಕಗಳನ್ನು ಓದುವದು, ತುಂಬಾ ಅಪಾಯಕಾರಿ ಎಂದು ಆ ಮಹಿಳೆ ಹೇಳಿದ್ದರು. ಆ ಮಹಿಳೆ ಯಾರು, ಯಾವಾಗ ಹೇಳಿದ್ದರು ಎಂಬುದು ನನ್ನ ನೆನಪಿನಲ್ಲಿ ಇಲ್ಲ.
ಹಿಂದಿನವರು ಮಾಡಿದ ತಪ್ಪುಗಳಿಗೆ ಈಗಿನವರು ಜವಾಬ್ದಾರರಲ್ಲ ಎಂದು ಭೈರಪ್ಪನವರು ಸ್ಪಷ್ಟಪಡಿಸಿದ್ದರೂ, ಜಪಾನೀಯರು ಕ್ಷಮೆ ಕೇಳಿದ ಪ್ರಸ್ತಾಪ ಸಮಂಜಸವೇ ? ಇದು ಸಾರ್ವಜನಿಕವಾಗಿ ಚರ್ಚೆಗೆ ಬರಬಹುದು. ಈಗಾಗಲೇ ಭೈರಪ್ಪನವರು ಆವರಣವನ್ನು ಕುರಿತಾದ ಸಾಕಷ್ಟು ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದಾರೆ. ನನ್ನ ಮತ್ತೊಂದು ಅನುಭವವೆಂದರೆ, ಈ ಹಿಂದು-ಇಸ್ಲಾಂ ನೆಲೆಯಲ್ಲಿ ಕಾದಂಬರಿಯ ಇನ್ನಿತರ ಕುತೂಹಲಕರ ವಿಷಯಗಳು ಮರೆಯಾಗಬಹುದು, ಉದಾ - ಆಧುನಿಕ ಶಿಕ್ಷಣವನ್ನು ಪಡೆದ ಯಾರಾದರೂ ಅನುಕಂಪದ ಹೊರತಾದ ಮಹಿಳಾವಾದಿಗಳಾಗಿರುತ್ತಾರೆ ಎಂಬುದು. ಈ ಮಾತಿಗೆ ತಕ್ಕ ತೂಕದ(??) ಪಾತ್ರವನ್ನೂ ಸೃಷ್ಟಿಮಾಡಿದ್ದಾರೆ ಭೈರಪ್ಪನವರು. ಹಾಂ! ಆವರಣದಲ್ಲಿ ಪ್ರಬುದ್ಧ ಪಾತ್ರಗಳಿರುವ ಹಾಗೆಯೇ, ಶಕ್ತಿಹೀನ ಪಾತ್ರಗಳೂ ಇವೆ. ಆವರಣದ ಪೂರ್ಣ ಅನುಭವ ಪಡೆಯಲು ಕಾದಂಬರಿಯನ್ನು ಕೊಂಡು ಓದಿ.
ಕಾದಂಬರಿಗಳನ್ನು ಹೋಲಿಸಿ ನೋಡುವದು ಅಷ್ಟು ತರವಲ್ಲವಾದರೂ, ಒಬ್ಬ ಓದುಗನಾಗಿ ನನಗೆ ಕೆಲವೆಡೆ ಆವರಣ ಸ್ವಲ್ಪ ಬೇಸರ ತರಿಸಿದ್ದು ಸುಳ್ಳಲ್ಲ. ಬಹುಶಃ ವೈದಿಕ ಧರ್ಮದ ಕುರಿತಾದ ಚರ್ಚೆಗಳು ಸಾರ್ಥದಲ್ಲಿದ್ದದ್ದು ಆ ಕಾದಂಬರಿ ಹೆಚ್ಚು ಇಷ್ಟವಾಗಲು ಒಂದು ಕಾರಣವಾಗಿದ್ದಿರಬಹುದು. ಮತ್ತು ಸಾರ್ಥದ ಹಿನ್ನೆಲೆಯಿಂದ ಆವರಣವನ್ನು ಓದಲು ಪ್ರಾರಂಭಿಸಿದ್ದು ಮತ್ತೊಂದು ಕಾರಣವಿದ್ದಿರಬಹುದು. ಕಾದಂಬರಿಯನ್ನು ಸಾರ್ಥದ ಹಿನ್ನೆಲೆಯಿಲ್ಲದೆ ಓದಿದರೆ ಬೇರೆ ಬೇರೆ ಅನಿಸಿಕೆಗಳು ಹೊರಹೊಮ್ಮಬಹುದು.
ಆವರಣದ ಕುರಿತಾಗಿ ಇಂಗ್ಲೀಷಿನಲ್ಲಿ ನೀಲಗ್ರೀವ ಅವರ ಬ್ಲಾಗ್ ಹಾಗು ಕನ್ನಡದಲ್ಲಿ ಬೇಳೂರ್ ಸುದರ್ಶನ ಅವರ ಬ್ಲಾಗ್ ಚೆನ್ನಾಗಿದೆ. ಓದಿ ನೋಡಿ. ಇನ್ನೂ ಯಾವುದಾದರು ರಿವ್ಯೂಗಳಿದ್ದರೆ ಅವುಗಳ ಬಗ್ಗೆ ಬೆಳಕು ಚೆಲ್ಲಿ. ಈ ಆವರಣ ಕಾದಂಬರಿ ಬಿಡುಗಡೆಯಾದ ಸಂದರ್ಭದಲ್ಲಿ, ಒಬ್ಬ ಓದುಗನಾಗಿ, ನನಗೆ ಮತ್ತೊಂದು ವಿಷಯದ ಪ್ರಸ್ತಾಪ ತುಂಬಾ ಉಚಿತವೆನಿಸಿತು. ಕೆಲವೇ ದಿನಗಳ ಹಿಂದೆ ವೈಭವ ಅವರು ಸಾಹಿತಿಗಳ ವೈಚಾರಿಕ ಜಗಳ ಎಂಬುದಾಗಿ ಬ್ಲಾಗಿದ್ದರು. ಆ ಬ್ಲಾಗ್ ಓದಿ ನೋಡಿ. ಆವರಣ ಕಾದಂಬರಿಯನ್ನು, ಒಬ್ಬ ಓದುಗ, ಸಾಹಿತಿಗಳ ವೈಚಾರಿಕ ಜಗಳ ಎಂದು ಭಾವಿಸುವುದಾದರೆ, ಅದಕ್ಕೆ ಓದುಗನೇ ಜವಾಬ್ದಾರನಾಗಬೇಕಾಗುತ್ತದೆ ![]()

- Sunil Jayaprakash ರವರ ಬ್ಲಾಗ್
- Login or register to post comments
- 1049 hits
- Email this blog





RSS:
ಪ್ರತಿಕ್ರಿಯೆಗಳು
Re: ಭೈರಪ್ಪನವರ ಆವರಣವನ್ನು ಓದಿದ ನನ್ನ ಅನುಭವ--- ಅನಿಸಿಕೆ
ಆವರಣವನ್ನು ಹಿಂದು-ಮುಸ್ಲಿಂ ನೆಲೆಯಲ್ಲಿ ನೋಡದೆ ಸತ್ಯ-ಸೌಂದರ್ಯ ನೆಲೆಯಲ್ಲಿ ಕಾದಂಬರಿಯನ್ನು ಆಸ್ವಾದಿಸಿದರೆ ಒಳ್ಳೇದು ಅನ್ಸುತ್ತೆ. ಏಕೆಂದರೆ ಭೈರಪ್ಪನವರೇ ಹೇಳುವಂತೆ ಸಾಹಿತ್ಯ ವೆಂಬುದು ಕಲೆ ಅಂದರೆ ಸೌಂದರ್ಯ. ಸೌಂದರ್ಯದ ಸಾರ್ಥಕತೆ ಸತ್ಯವನ್ನು ಹೊರಗೆಡಹುದರಲ್ಲೇ ಇದೆ. ಸತ್ಯಕ್ಕೂ ಸೌಂದರ್ಯಕ್ಕೂ ವೈರುಧ್ಯ ಬಂದರೆ ಆಗ ಸತ್ಯಕ್ಕೆ ಬೆಲೆ ಕೊಡಬೇಕು ಅಥವಾ ಬೇರೆ ಪದಗಳಲ್ಲಿ ಸಾಹಿತಿಯು ಸತ್ಯಕ್ಕೆ ನಿಷ್ಠೆ ತೋರಿಸಬೇಕು.
ಆಸಕ್ತರು ಭೈರಪ್ಪನವರ "ಸತ್ಯ ಮತ್ತು ಸೌಂದರ್ಯ" ಓದಿ ನೋಡಿ. ನಾನು ಓದಿದ್ದೇನೆ ಎಷ್ಟು ಅರ್ಥವಾಗಿದೆಯೊ ಗೊತ್ತಿಲ್ಲ
ಉ: ಭೈರಪ್ಪನವರ ಆವರಣವನ್ನು ಓದಿದ ನನ್ನ ಅನುಭವ
ಕನ್ನಡಪ್ರಭದ ಸಾಪ್ತಾಹಿಕ (ಮಾರ್ಚ್ ನಾಲ್ಕು) ಸಂಚಿಕೆಯಲ್ಲಿ ಕೆ. ಸತ್ಯನಾರಾಯಣರ ಲೇಖನ ಇದೆ, ಅನಾವರಣದ ಬಗ್ಗೆ. ನಾನು ಓದಿದ ಎಲ್ಲ ವಿಮರ್ಶೆಗಳಲ್ಲಿ ಇದು ಚೆನ್ನಾಗಿದೆ. ಜಿ.ಎಸ್.ಅಮೂರ ಸಂಯುಕ್ತ ಕರ್ನಾಟಕದಲ್ಲೂ, ಸುಮತೀಂದ್ರ ನಾಡಿಗರು ವಿಜಯಕರ್ನಾಟಕದಲ್ಲೂ ಬರೆದಿದ್ದಾರೆ. ಹೆಚ್ಚು ಕಡಿಮೆ ಒಂದೆರಡು ವಾರಗಳ ವ್ಯತ್ಯಾಸದಲ್ಲೇ ಈ ಎಲ್ಲ ಲೇಖನಗಳು ಬಂದಿವೆ.
ಉ: ಭೈರಪ್ಪನವರ ಆವರಣವನ್ನು ಓದಿದ ನನ್ನ ಅನುಭವ
Aram
Pardon my English.
After reading Aavarana, the question that arose in me was why the Hindus were unable to defend themselves against the Muslim onslaught and why they endured the Muslim rule for 700 years.
As Bhyrappa suggested in last Sunday's book release function (Aavaranada Avalokana), I put my question to Shri Navaratna S. Rajaram (phone: 080 - 26579985) who answered me satisfactorily.
He said, " It is not correct to say that Muslims were successful in India. Hinduism could never be completely annihilated. Muslims were successful in complete victory and subsequent total domination in countries like Egypt, Turkey, and Iran where prior to their invasion, different cultures existed. However, in India Muslims are still a minority. One of the main reasons for the Muslims' conquest and rule was the prevalent Buddhism in Bihar and Bengal. So, in these areas, Muslims could easily establish themselves. The Buddhists lacked the kshaatra teja and therefore were easily overtaken.
This premise supports my own unrelated argument that one should not be too good (like the Buddhists) and that in order to survive and remain independent we need to know how to safeguard ourselves.
ಉ: ಭೈರಪ್ಪನವರ ಆವರಣವನ್ನು ಓದಿದ ನನ್ನ ಅನುಭವ
ನನ್ನ ಅನಿಸಿಕೆಯಲ್ಲಿ, ಕೆಲವೊಮ್ಮೆ, ನಮ್ಮ ಸರ್ಕಾರ, ಚರಿತ್ರೆಯನ್ನು ಪುನರ್ ನಿರ್ಮಾಣಕ್ಕೆ ಒತ್ತು ನೀಡುತ್ತದೆ. ಸರಿ. ಆದರೆ, ನಿಜ, ಸತ್ಯಗಳ ಅಡಿಪಾಯವಿಲ್ಲದೆ ಇತಿಹಾಸ ತನ್ನ ಅರ್ಥ ಕಳೆದುಕೊಳ್ಳು ತ್ತದೆ. ಆದ್ದರಿಂದ ಆ ಕಟುಸತ್ಯವನ್ನು ಎಲ್ಲರೂ ಅರಿತು ಅದರ ಬಗ್ಗೆ ಅಯ್ಯೊ ಅವರು ಮಾಡಿದ್ದು ತಪ್ಪು, ಎನ್ನುವ ಉತ್ತರ ಕೊಟ್ಟರೆ ಅಂದು ಅವರು ತಮ್ಮ ಪಾಪ ಪ್ರಜ್ಞೆಯಿಂದ ಹೊರಗೆಬರಲು ಸಾಧ್ಯ. ಟಿಪ್ಪುಸುಲ್ತಾನನ ಧೋರಣೆಗಳಿಗೆ. ಔರಂಗಝೇಬನ ಮತಾಂಧತೆಯನ್ನು ಸಮಯಬಂದಾಗ ಖಂಡಿಸುವದರಲ್ಲಿ ತಪ್ಪೇನು ? ನಾವು, ಈಗಿನ ಒಳ್ಳೆಯವರನ್ನು ಖಂಡಿಸುತ್ತಿಲ್ಲವಲ್ಲ.
‘