ಸಾಹಿತ್ಯ ವಿಚಾರ ಸಂಕೀರಣದಲ್ಲಾದ ಅಭಾಸಗಳು.
ಇದು ಹೋದ ಶನಿವಾರ ನಡೆದದ್ದು. ೪/೧೨/೨೦೦೫
ಅಂದು ಒಂದು ಕಾದಂಬರಿ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದೆ.
ಮೊದಲು ಸೋಮಶೇಖರ ರಾವ್ ರವರ "ಭ್ರಮಣ" ಕಾದಂಬರಿ ಬಿಡುಗಡೆ, ನಂತರ ಡಾ||ಸುಮತೀಂದ್ರ ನಾಡಿಗರ ವಿಚಾರ ಸಂಕೀರ್ಣ ಇತ್ತು. ಸೋಮಶೇಖರ ರಾವ್ ಯಾರೆಂದರೆ ಅದೆ ಮಾಯಾಮೃಗದ ಶಾಸ್ತ್ರಿ ಗಳ ಪಾತ್ರ ಮಾಡಿದ ದತ್ತಣ್ಣ ಅವರ ಅಣ್ಣ."ಭ್ರಮಣ" ಅವರ ಮೊದಲ ಕಾದಂಬರಿ.ಕಾದಂಬರಿ ಪ್ರಕಟಿಸಿದವರು ಸುಂದರ ಪ್ರಕಾಶನ.
ಹಾಗೆಯೇ ನಾನು, ಇಗೊ ಕನ್ನಡದ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರನ್ನ ನೊಡಿದೆ. ಚುಟುಕಾಗಿ ಮಾತನಾಡಿಸಿದೆ ಕೂಡ. ನನಗಂತೂ ಅತೀವ ಸಂತೋಷ ಆಯಿತು.
ಸೋಮಶೇಖರ ರಾವ್ ರವರು ಮಾತನಾಡಿ, ಕಾದಂಬರಿ ಬರೆಯಲು ಪ್ರೇರೇಪಿಸಿದ, ಛೇಡಿಸಿದ, ಕಾಡಿಸಿದ, ಬೈದ ಡಾ||ಸುಮತೀಂದ್ರ ನಾಡಿಗರಿಗೆ, ಸುಂದರ ಪ್ರಕಾಶನದ ಗೌರಿ ಸುಂದರ ರವರಿಗೆ, ಹಾಗು ತಮ್ಮ ಸಹೊದ್ಯೋಗಿ ಯಾಗಿದ್ದ ಮೂರ್ತಿ ರವರಿಗೆ ತಮ್ಮ ಕೃತಜ್ಞತೆ ಸಲ್ಲಿಸಿದರು.
ನಾನು ಹೋಗಿದ್ದಕ್ಕೆ ನನಗಾದ ಲಾಭ, ಕಾದಂಬರಿ, ೫೦% ರಿಯಾಯಿತಿ ದರದಲ್ಲಿ ಸಿಕ್ತು. ಕಾದಂಬರಿ ಅಂದೇ ಓದಿ ಮುಗಿಸಿಯಾಗಿದೆ.
ಆ ದಿನ, ಸರಿ ಕಾದಂಬರಿ ಬಿಡುಗಡೆಯಾಯ್ತು. ನಂತರ ಇತ್ತು ಡಾ||ಸುಮತೀಂದ್ರ ನಾಡಿಗರ ವಿಚಾರ ಸಂಕೀರ್ಣ. ನಾಲ್ಕು ವಿದ್ವಾಂಸರು ತಮ್ಮ ವಿಚಾರ ಮಂಡಿಸಿದರು. ಇದರಲ್ಲಿ ಭಾಗವಸಿದ ನಂತರ ನನ್ನಲ್ಲಿ ಹುಟ್ಟಿರುವ ಆಸೆಯೆಂದರೆ ಡಾ||ಸುಮತೀಂದ್ರ ನಾಡಿಗರ ಕಾವ್ಯ, ಪಂಚಭೂತ ವನ್ನ ಓದಬೇಕು ಅಂತ.
ಅಂದು ನಡೆದ ಸಮಾರಂಭದಲ್ಲಿ ಕೆಲವು ಅಭಾಸಗಳು ನೇರಿದ್ದವು.
೧. ಕಾರ್ಯಕ್ರಮದ ಪ್ರಾರಂಭದಲ್ಲಿ, ಸೋಮಶೇಖರರಾಯ ಮೊಮ್ಮಕ್ಕಳು ವಿಷ್ಣುಸಹಸ್ರನಾಮದ ಕೆಲವು ಶ್ಲೋಕಗಳನ್ನ ಹಾಡಿದರು. ಆದರೆ ಇದನ್ನು ನಾಲ್ಕು ಬಾರಿ ಭಗವದ್ಗೀತೆ ಅಂತ ಕಾರ್ಯಕ್ರಮದ ಉದ್ದಕ್ಕೂ ನಿರೂಪಕರು ಹೇಳುತ್ತಿದ್ದರು. ಇದರಿಂದ ರೋಸಿಹೋದ ಸಹೃದಯ ಕೇಳುಗರೊಬ್ಬರು , ಜೋರಾಗಿ ಹೇಳಿಯೆ ಬಿಟ್ಟರು. ಎಲ್ಲರಿಗೂ ಗೋಳ್ಳೆಂದು ನಗು.
೨. ವಿಚಾರ ಸಂಕೀರ್ಣ ದಲ್ಲಿ ವಿದ್ವಾಂಸರುಗಳು ವಿಚಾರ ಮಂಡಿಸುತ್ತಿದ್ದಾಗ, ಆಗಾಗ್ಗೆ ಸಭಿಕರ ಮೊಬೈಲು ರಿಂಗಣಿಸುತ್ತಿತ್ತು. ಅದೇನು ಮೋಹನೋ ಗೋತ್ತಿಲ್ಲ. ಸ್ತಬ್ದ ಸ್ತರದಲ್ಲಿ ತಮ್ಮ ಮೊಬೈಲು ಇಡಬಹುದು ಎಂಬುದು ಎಷ್ಟೋ ಜನಕ್ಕೆ ಗೋತ್ತಿಲ್ಲ ಅನ್ನಿಸುತ್ತೆ. ಒಂದು ಸಂಧರ್ಭದಲ್ಲಿ, ಸಭಿಕರು ಮೊಬೈಲಿನಲ್ಲಿ ಮಾತನಾಡುತ್ತಿ ಧ್ವನಿ,ಮೈಕಿನೊಂದಿಗೆ ಮಾತನಾಡುತ್ತಿದ್ದ ವಿಧ್ವಾಂಸರ ಧ್ವನಿಗಿಂತ ಜೋರಾಗಿತ್ತು. ಸಿಟ್ಟಿಗೆದ್ದ ವಿದ್ವಾಂಸರು ಆಚೆ ಹೋಗಿ ಎಂದು ಹೇಳಿದ ಘಟನೆ ಬಹಳ ಘಾಸಿಯಾಗುವಂತಿತ್ತು.

- Sunil Jayaprakash ರವರ ಬ್ಲಾಗ್
- Login or register to post comments
- 744 hits
- Email this blog





RSS:
ಪ್ರತಿಕ್ರಿಯೆಗಳು
ನಿಜ ಹೇಳಬೇಕೆಂದರೆ ಮತ್ತು ಇಷ್ಟಪಡುತ್ತೇನೆ
ಬಹುಪಾಲು ಭಾಷಣಗಾರರು ಬಹಳವಾಗಿ ಬಳಸುವ ಎರಡು ಮಾತುಗಳು ಎಂದರೆ "ನಿಜ ಹೇಳಬೇಕೆಂದರೆ" ಮತ್ತು "ಇಷ್ಟಪಡುತ್ತೇನೆ". ನಿಜ ಹೇಳಬೇಕೆಂದರೆ ಬಗ್ಗೆ ನಾನು ಈಗಾಗಲೇ ಬರೆದಿದ್ದೇನೆ (ಅಲ್ಲ, ಕುಟ್ಟಿದ್ದೇನೆ). ಯಾವುದೇ ಭಾಷಣ ಕೇಳಿ. ಭಾಷಣಗಾರರು ಆಗಾಗ "ನಾನು ಹೇಳಲು ಇಷ್ಪಡುತ್ತೇನೆ" ಅಥವಾ "ಇಲ್ಲಿ ತಿಳಿಸಲು ಇಷ್ಟಪಡುತ್ತೇನೆ" ಎಂದು ಹೇಳುತ್ತಿರುತ್ತಾರೆ. ಇಷ್ಟಪಡದ್ದನ್ನು ಯಾರಾದರೂ ಯಾಕೆ ಹೇಳುತ್ತಾರೆ? ಅಥವಾ ಇಷ್ಟಪಡದ್ದನ್ನು ಇಷ್ಟು ಹೊತ್ತು (ಅಂದರೆ ವೇದಿಕೆಯಲ್ಲಿದ್ದವರನ್ನು ಮತ್ತು ಕಾರ್ಯಕ್ರಮದ ಆಯೋಜಕರನ್ನು ಹೊಗಳಿದ್ದು) ಹೇಳಿದೆ. ಇನ್ನು ಇಷ್ಟಪಟ್ಟಿದ್ದನ್ನು ಹೇಳುತ್ತೇನೆ ಎಂದಿರಬಹುದೇ?
ಸಿಗೋಣ,
ಪವನಜ
-----------
Vishva Kannada
Think globally, Act locally