ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

majavani

ಸಂಪದ › Sampada Blogs › Sunil Jayaprakash ರವರ ಬ್ಲಾಗ್

ಅರಳುತಿರೋ ಜೀವಗಳೆರೆಡು - ಮುಂಗಾರು ಮಳೆಯಲ್ಲಿ ನೆನೆಯುವ ಮುನ್ನ

January 9, 2007 - 11:39am — Sunil Jayaprakash

ನಿಜ್ವಾಗ್ಲೂ ಗೆಳೆಯರೆ, ಇದರ ಬಗ್ಗೆ ಬರೆಯಲೇಬೇಕು. ಈಗಾಗಲೇ ಇದರ ಬಗ್ಗೆ ಸಂಪದದಲ್ಲೇ ಇಬ್ಬರು ಬ್ಲಾಗಿದ್ದರೂ, (೧.kannadiga_1956 ಬ್ಲಾಗು, ೨. mrkryan ಬ್ಲಾಗು, ) ನನಗೆ ಸಮಾಧಾನವಾಗುತ್ತಿಲ್ಲ. ಇದರ ಬಗ್ಗೆ ಏನಾದರು ಹೊಸದಾಗಿ ಬರೆಯಲೇಬೇಕು ಎಂದನಿಸುತ್ತಿದೆ.

ನಾನು ಕೆಲವೇ ಕೆಲವು ಮಾತುಗಳನ್ನು ಬರೆಯುತ್ತೇನೆ.

೧. ಚಿತ್ರದ ಆರಂಭ - ಚಿತ್ರದ ಕಥೆ ಮೊದಲ ದೃಶ್ಯದಲ್ಲೇ ಪ್ರಾರಂಭವಾಗುತ್ತದೆ. ಎಷ್ಟೋ ಸಿನಿಮಾಗಳಲ್ಲಿ ಇಂಟರ್ವಲ್ ಇನ್ನೇನು ಪ್ರಾರಂಭವಾಗಬೇಕು ಆಗ ನಿಜವಾದ ಕಥೆ ಆರಂಭವಾಗುತ್ತದೆ (ಕೆಲವದರಲ್ಲಿ ಕಥೆಯೇ ಇರುವುದಿಲ್ಲ Jawdropping!), ಆದರೆ ಈ ಚಿತ್ರದಲ್ಲಿ ಎಲ್ಲವೂ ಸೀದಾಸಾದಾ.

೨.ಚಿತ್ರದ ಹಾಡುಗಳು

೨.೧ - ಚಿತ್ರದ ಹಾಡುಗಳು ತುಂಬಾ ಇಂಪಾಗಿದೆ. ಆದರೆ ಉಚ್ಛಾರಣೆ ಕೆಲವೆಡೆ ಅಭಾಸಗಳನ್ನುಂಟು ಮಾಡುವಂತಿದೆ. ಹಾಡುಗಳ ವೈಶಿಷ್ಟ್ಯವೆಂದರೆ ಭಾವನೆಗಳಿಗೆ ಒಪ್ಪವಾಗಿ ಕಳೆ ಕಟ್ಟಿಕೊಟ್ಟಿದೆ. ಕೆಲವು ಕಡೆ ವಯೋಲೀನ್ ಟ್ಯೂನುಗಳಿರುವುದರಿಂದ Cool ನನಗೆ ವೈಯಕ್ತಕವಾಗಿ ಮತ್ತಷ್ಟು ಇಷ್ಟವಾಯಿತು. ನೆನಪಿರಲಿ ಚಿತ್ರದ ಹಾಡುಗಳೂ ಕೂಡ ಇಂಥ ಮೋಡಿ ಮಾಡುವಲ್ಲಿ ಯಶಸ್ವಿಯಾಗಿತ್ತು. ಅಂದ ಹಾಗೆ ನಾನು ನೆನಪಿರಲಿ ಚಿತ್ರ ನೋಡಿದ್ದು ಸುಮಾರು ಬಿಡುಗಡೆಯಾದ ೧೨೫ ದಿನಗಳಾದ ಮೇಲೆ. ಅಷ್ಟು ದಿನವೂ ಅದರ ಹಾಡುಗಳನ್ನು ಕೇಳದ ದಿನವಿರಲಿಲ್ಲ. Smiling ಮುಂಗಾರು ಮಳೆಯೂ ಅಷ್ಟೇ, ದಿನವೂ ಕೇಳುತ್ತಲೇ ಇದ್ದೇನೆ. ನೀವುಗಳು ಯಾರಾದರು ಇನ್ನೂ ಕೇಳಿಲ್ಲವಾದರೆ, ಈಗಲೇ ಕೇಳಿ.

೨.೨ - ಈ ಚಿತ್ರದ ಆಡಿಯೋ ಸಿ.ಡಿಯಲ್ಲಿ ಸುಮಾರು ಏಳು ಹಾಡುಗಳು ಇದ್ದರೂ, ಚಿತ್ರದಲ್ಲಿ, ಕೇವಲ ನಾಲ್ಕು ಹಾಡುಗಳು ಮಾತ್ರವೇ ಪೂರ್ಣವಾಗಿ ಇದೆ. ಉಳಿದ ಹಾಡುಗಳ ಒಂದೆರೆಡು ಸಾಲುಗಳು ಮಾತ್ರವೇ ಪ್ರಸಾರವಾಗುತ್ತದೆ. ಚಿತ್ರದ ಹಾಡುಗಳನ್ನು ಆಡಿಯೋ ಸಿ.ಡಿ, ಅಥವಾ ಕ್ಯಾಸೆಟ್ಟುಗಳಲ್ಲಿಯೇ ಕೇಳಬೇಕು. ಚಿತ್ರದ ಹಾಡುಗಳನ್ನು ಕನ್ನಡ ಆಡಿಯೋ.ಕಾಂನಲ್ಲಿಯೂ ಕೇಳಬಹುದು. ಆದರೆ ನನ್ನ ವಿನಂತಿಯೇನೆಂದರೆ ನೀವು ಆಡಿಯೋ ಸಿ.ಡಿಯನ್ನು ಕೊಂಡುಕೊಳ್ಳಿ ಸುಮಾರು ೩೫-೫೦ರೂ. ದುಡ್ಡಿಗೆ ಖಂಡಿತವಾಗಿಯೂ ಮೋಸ ಆಗುವುದಿಲ್ಲ.

ಬಹುಶಃ ಇದು ಕನ್ನಡದಲ್ಲಿ ಟ್ರೆಂಡ್ ಸೆಟ್ಟರ್ ಆಗಿ ಮುಂದುವರಿಯಬಹುದು. ಅಂದರೆ ಮೂಲಚಿತ್ರದಲ್ಲಿ ಅದರ ಎರಡು ಸಾಲುಗಳನ್ನು ಮಾತ್ರವೇ ಕೇಳಿಸಿ, ಪೂರ್ತಿ ಹಾಡುಗಳನ್ನು ಆಡಿಯೋ ಸಿ.ಡಿ. ಕೇಸೆಟ್ಟುಗಳ ಮೂಲಕ ಜನರಿಗೆ ಸೇರುವಂತೆ ಮಾಡುವುದು. ನೋಡುಗರಿಗೆ ೨.೫ ಘಂಟೆ ಕೂತಿರುವುದೂ ತಪ್ಪುತ್ತದೆ. ಹಾಡು ಕೆಟ್ಟದಾಗಿದ್ದರೆ ಜನಗಳು ಬಯ್ಯುವುದೂ ತಪ್ಪುತ್ತೆ. Laughing out loud

೩. ಈ ಚಿತ್ರವನ್ನು ಹುಡುಗರು ನೋಡಲೇಬೇಕು. ಇಷ್ಟು ವರ್ಷ ಹುಡುಗಿಯರು ತಮ್ಮ ಭಾವನೆಗಳ ವ್ಯೂಹದಿಂದ ಹೊರಬರಲೆತ್ನಿಸಿ ಹುಡುಗರನ್ನು ಗೋಳಿಡಿಸುತ್ತಿದ್ದರು.Jawdropping! ಆದರೆ ಈ ಚಿತ್ರದಲ್ಲಿ ...ನೋ ಕಾಮೆಂಟ್ಸ್. Cool ಕಾಲೇಜು ಓದುತ್ತಿರುವ ನಿಮ್ಮ ಮಕ್ಕಳನ್ನು, ತಮ್ಮಂದಿರನ್ನು, ತಂಗಿಯರನ್ನು, ಅಥವಾ ಯಾರನ್ನೇ ಆದರೂ ಕರೆದುಕೊಂಡು ಹೋಗಿ.

೪. ಮುಖ್ಯವಾಗಿ ನಟ ಗಣೇಶ, ಇದರಲ್ಲಿ ಇವನನ್ನು ಯಾರಿಗೂ ಹೋಲಿಕೆ ಮಾಡಲಾಗಲಿಲ್ಲ. ಸಾಮಾನ್ಯವಾಗಿ, ಯಾರಾದರೂ ಒಬ್ಬರ ಹೊಸಬರು ಚಿತ್ರದಲ್ಲಿ ಮಾಡಿದಾಗ, "ಅವನು ಈ ಆಂಗಲ್ನಲ್ಲಿ ಅವನ್ ತರಹ ಕಾಣ್ತಾನೆ, ಅವನ ಡೈಲಾಗ್ ಇವನ್ ತರಹ ಇದೆ ಎನ್ನುವ ಮಾತುಗಳು ಬರುತ್ತವೆ. ಆದರೆ ಗಣೇಶನ ಮಾತುಗಳನ್ನೇ ಆಗಲೀ, ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯನ್ನಾಗಲೀ ಯಾರಿಗೂ ಹೋಲಿಸಲಾಗುವುದಿಲ್ಲ. ಬಹುಶಃ ಈ ರೀತಿಯ ಭಾವನಾತ್ಮಕ ಸನ್ನಿವೇಶಗಳನ್ನು ಹುಡುಗರು(ನೆನಪಿರಲಿ ಹುಡುಗರು, ಮಧ್ಯವಯಸ್ಕರು ಮತ್ತು ಮುದುಕರು Laughing out loud ಹುಡುಗರ ಪಾತ್ರ ಹಾಕುವುದಲ್ಲ) ಮಾಡಿಲ್ಲದಿರುವುದೋ ಏನೋ. ಅಲ್ಲದೇ ಈ ಚಿತ್ತದಲ್ಲಿ ಇವನಲ್ಲದೆ ಬೇರೆಯವನು ಮಾಡಿದ್ದರೆ ಹೇಗಿರುತ್ತತ್ತು ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಕಲ್ಲರಳಿ ಹೂವಾಗಿ ಚಿತ್ರದ ವಿಜಯ ರಾಘವೇಂದ್ರನಲ್ಲಿ ರಾಜ್ಕುಮಾರನನ್ನು ಕಂಡವರು ತುಂಬಾ ಮಂದಿ. :ಚಪ್ಪಾಳೆ:

೫. ಟಿಕೇಟುಗಳ ಬಗ್ಗೆ - ಈಗೀಗ ಫಿಲ್ಮಗಳು ಬ್ಲಾಕಿನಲ್ಲಿ ಎಷ್ಟಕ್ಕೆ ಮಾರಾಟವಾಗುತ್ತದೆ ಎನ್ನುವುದನ್ನವಲಂಬಿಸಿ ಚಿತ್ರದ ಗುಣಮಟ್ಟ ಅಳಿಯುವ ಪ್ರವೃತ್ತಿ ಜಾಸ್ತಿಯಾಗುತ್ತಿರುವುದರಿಂದ, ಕೊನೆಯ ಮಾಹಿತಿ. ೬:೩೦ಕ್ಕಿದ್ದ ಷೋಗೆ ನಾವುಗಳು ೫:೧೫ ಗೆ ಥಿಯೇಟರ್ರಿಗೆ ಹೋದರೂ ನಮಗೆ ಟಿಕೇಟು ಸಿಗಲಿಲ್ಲ,
೫.೧. ಬಾಲ್ಕನಿ ಟಿಕೇಟುಗಳು ಬ್ಲಾಕಿನಲ್ಲಿಯೂ ಸಿಗಲಿಲ್ಲ.
೫.೨. ಎರಡನೆ ದರ್ಜೆಯ ಟಿಕೇಟುಗಳ ಬೆಲೆ ೨.೫ ಪಟ್ಚು ಹೆಚ್ಚಿತ್ತು. ಕೊನಗೆ ನಾವು(ಅಣ್ಣಂದಿರು, ಅತ್ತಿಗೆಯಂದಿರು ಎಲ್ಲರೂ) ೯:೩೦ರ ಷೋವನ್ನು ಬಾಲ್ಕನಿಯಲ್ಲಿ, ನೋಡಿ, ಆನಂದಿಸಿ, ಭಾವಪರವಶರಾಗಿ ರಾತ್ರಿ ೧೨:೧೫ ಸಮಯಕ್ಕೆ ಮನೆ ಸೇರಿದೆವು.

ಕಿವಿಮಾತು


೧. ಮೊದಲು ಚಿತ್ರದ ಹಾಡುಗಳನ್ನು ಕೇಳಿ ನಂತರ ಸಿನಿಮಾ ನೋಡಿ. ಯಾವ ಸನ್ನಿವೇಶದಲ್ಲಿ ಯಾವ ಹಾಡು ಅಂತ ನೀವೇ ಊಹಿಸಬೇಕಾಗುತ್ತದೆ. ಮೊದಲೇ ಹೇಳಿದ ಹಾಗೆ ಚಿತ್ರದಲ್ಲಿ ಎಲ್ಲಾ ಹಾಡುಗಳ ಎಲ್ಲಾ ಸಾಲುಗಳು ಇಲ್ಲ.
೨. ಈ ಗಣೇಶ ಹೊಗಳಿಕೆಗಳ ಅಲೆಯಲ್ಲಿ ಕೊಚ್ಚಿಹೋಗದಿರಲಿ. ಯಾರ ದೃಷ್ಟಿಯೂ ಇವನ ಮೇಲೆ ಬೀಳದಿರಲಿ.
೩. ಒಟ್ಟಿನಲ್ಲಿ ಯದ್ವಾ-ತದ್ವಾ(ಈಗ ಕಾಮಿಡಿ ಟೈಮಾಗಿಟ್ಟಿದ್ದಾನೆ Eye-wink ) ಗಣೇಶ ತನ್ನತನವನ್ನು ಕಾಪಾಡಿಕೊಳ್ಳಲಿ ಎಂದು ಎಲ್ಲರೂ ಹಾರೈಸೋಣ.
~.~
  • Sunil Jayaprakash ರವರ ಬ್ಲಾಗ್
  • Login or register to post comments
  • 694 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 9, 2007 - 1:22pm — kannadiga_1956

Re: ಅರಳುತಿರೋ ಜೀವಗಳೆರೆಡು - ಮುಂಗಾರು ಮಳೆಯಲ್ಲಿ ನೆನೆಯುವ ಮುನ್ನ

kannadiga_1956's picture

ಕನ್ನಡದಲ್ಲಿ ಈ ರೀತಿಯ "ಸಾಹಿತ್ಯ" ಮೊದಲು ಎಂದೂ ನಾನು ಕೇಳಿರಲಿಲ್ಲ. ಜಯಂತ ಕಯ್ಕಿಣಿ ಅವರು ಬರೆದ ಎಲ್ಲ ಗೀತೆಗಳು ಎಷ್ಟು ಕೇಳಿದರೂ ಸಮಾದಾನವೇ ಇಲ್ಲ.  ನನಗಿಷ್ಟವಾದ ಸಾಲುಗಳನ್ನ ಇಲ್ಲಿ ಮತ್ತೊಮ್ಮೆ ಹಾಕ್ತಾ ಇದ್ದಿನಿ.

- "ಅರಳುತಿರೊ ಜೀವದ ಗೆಳೆಯ, ಸ್ನೇಹದಾ ಸಿಂಚನದಲ್ಲಿ. ಬಾಡದಿರು ಸ್ನೇಹದ ಹೂವೆ, ಪ್ರೇಮದ ಬಂಧನದಲ್ಲಿ "  (ಸ್ನೇಹ ಬಹಳಷ್ಟು ಸಾರಿ ಪ್ರೇಮದಲ್ಲಿ ಸಿಲುಕಿ ಬಾಡುವುದು ನಿಜ ಅಲ್ವ ?? )

- ಹಣೆಯಲಿ ಬರೆಯದ ನಿನ್ನ ಹೆಸರ, ಹ್ರುದಯದಿ ನಾನು ಕೊರೆದಿರುವೆ, ನಿನಗುಂಟೆ ಇದರ ಕಲ್ಪನೆ ?  (ಪ್ರೀತಿಯಲ್ಲಿ ಸೋಲು ಗೊತ್ತಿದ್ರೂ ಪ್ರಿತಿಯಲ್ಲಿ ಬೀಳೋದು.. ನಾವೂ ಇದನ್ನ ಮಾಡಿದ್ದೀವಿ ಅಲ್ವೆ ?)

- ಮುಳುಗುವವನ ಕೂಗು, ಚಾಚುವಂತೆ ಮಾಡಿದೆ ಕೈಯ, ಜಾರುತಿಹುದು ಈ ಹ್ರುದಯ ..

-ತಪ್ಪಿ ನನ್ನ ಅಪ್ಪಿಕೋ ಒಮ್ಮೆ - ಹಾಗೆ ಸುಮ್ಮನೆ  ; 

ಇನ್ನೂ ಬಹಳ ಇದೆ...  ಅಂದ ಹಾಗೆ ನಮ್ಮ ಕನ್ನಡದ ಕವಿಗಳು "ಕಾಲಕ್ಕೆ ತಕ್ಕಂತೆ" ಜಯಂತ ಅವ್ರು ಮಾಡ್ತಿರೋ ಹಾಗೆ ದ್ರುಶ್ಯ ಮಾಧ್ಯಮದಲ್ಲಿ ಸೇವೆ ಸಲ್ಸಿದ್ರೆ ಒಳ್ಳೆದು ಅಲ್ವ ?  ಈ ಕಾಲದಲ್ಲಿ ಎಲ್ರಿಗೂ readymade ಬೇಕು. ನಮ್ಮ ಸಾಹಿತಿಗಳೂ , ಕವಿಗಳೂ ಸ್ವಲ್ಪ adapt ಆಗ್ಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 13, 2007 - 12:36pm — Sunil Jayaprakash

ಮುಂಗಾರು ಮಳೆಯನ್ನು ಕುರಿತಾದ ವಿಜಯ ಕರ್ನಾಟಕದ ವರದಿ

Sunil Jayaprakash's picture

ಮುಂಗಾರು ಮಳೆಯನ್ನು ಕುರಿತು ವಿಜಯ ಕರ್ನಾಟಕದಲ್ಲಿ ಪ್ರತಾಪ್ ಸಿಂಹ ಒಂದು ಅಂಕಣ ಬರೆದಿದ್ದಾರೆ. ಬಿಡುವಾದಾಗ ಓದಿ ನೋಡಿ. ಹಾಗೆಯೇ, ಮುಂಗಾರು ಮಳೆಯ ಟಿಕೇಟನ್ನು ಮುಂಗಡವಾಗಿ ಕಾಯ್ದಿರಿಸುವುದನ್ನು ಕೂಡ ಮರೆಯಬೇಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೇಳೇ ರತ್ನಾS... ಅಕ್ಕರೆಯೊಲವಿನ ಮಾತ್ನS.
  • ೨ ಕಿ(ಕೊ)ಲ್ಲರ್ ಹಾಡುಗಳು
  • ಹುಡುಗಾಟದ ಪಾಟ
  • ವಿಶಿಷ್ಟ ಆಟೋ ನುಡಿ - ೬, ೭
  • "ಇಂತಿ ನಿನ್ನ ಪ್ರೀತಿಯ" ಅನಿಸಿಕೆಗಳು
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 10:13am
  • dhanu.vijai
    ಉ: ಕಚೇರಿ ಎಂಬ ನರಕ-೧
    August 30, 2008 - 9:32am
  • shreedevikalasad
    ಉ: ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್
    August 30, 2008 - 9:22am
  • Sunil Jayaprakash
    ಉ: ಕಾದಿರುವೆ ನಿನಗಾಗಿ
    August 30, 2008 - 9:11am
  • Smi
    ಉ: ಕಚೇರಿ ಎಂಬ ನರಕ-೧
    August 30, 2008 - 9:01am
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 8:46am
  • Aravinda
    ಉ: ತಿಳಿ ಹಾಸ್ಯ ಮರೆತಿಲ್ಲ!
    August 30, 2008 - 8:34am
  • pallavi.dharwad
    ಉ: ಕಚೇರಿ ಎಂಬ ನರಕ-೧
    August 30, 2008 - 7:39am
  • pallavi.dharwad
    ಉ: ಕಚೇರಿ ಎಂಬ ನರಕ-೧
    August 30, 2008 - 7:36am
  • pallavi.dharwad
    ಉ: ಕಚೇರಿ ಎಂಬ ನರಕ-೧
    August 30, 2008 - 7:14am
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 58 ಅತಿಥಿಗಳು ಆನ್ಲೈನ್ ಇರುವರು.


ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ!

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator