ಕುಂಬ್ಳೆಗೆ ನೂರರ ನಲ್ಕೆ
ನನಗೆ ಕುಂಬ್ಳೆಯು ಆಡಿದ ಎಷ್ಟೋ ಪಂದ್ಯಗಳ ಬ್ಯಾಟಿಂಗ್ ನೆನಪಿನಲ್ಲಿದೆ. ಅದರಲ್ಲಿ ತುಂಬಾ ಅಂದರೆ ತುಂಬಾ ನೆನಪಿನಲ್ಲಿರುವುದು, ಅಜರುದ್ದೀನ್ ಜೊತೆಗೂಡಿ ಸೌತ್ ಆಫ್ರಿಕಾ ವಿರುದ್ಧ ಗಳಿಸಿದ್ದ ೮೮ ರನ್ನುಗಳು. ಈ ಪಂದ್ಯ ನಡೆಯುತ್ತಿದ್ದಾಗ ನಮ್ಮ ಶಾಲೆಯ, "ಸ್ಕೂಲ್ ಡೇ" ಪಿಟೀಲು ಚೌಡಯ್ಯ ಮೆಮೋರಿಯಲ್ ಹಾಲಿನಲ್ಲಿ ನಡೆಯುತ್ತಿತ್ತು
ರೇಡಿಯೋ ಇಟ್ಟುಕೊಂಡು ಸ್ಕೋರ್ ಕೇಳುತ್ತಾ ಸ್ಕೂಲ್ ಡೇನಲ್ಲಿ ಕಾಲ ಕಳೆದಿದ್ದೆವು, ಅಂದು. ಅಂದಿನ ಆಟದ ನಂತರ ಕುಂಬ್ಳೆ ಇಂದಿನ ಹಂತ ತಲುಪಲು ನಿಜಕ್ಕೂ ತುಂಬಾ ವರ್ಷ ಕಾದಿದ್ದಾನೆ. ಕುಂಬ್ಳೆಯ ಇಷ್ಟು ವರ್ಷದ ಕಾತರ ಇಂದು ಹಣ್ಣಾಗಿದೆ. ಕುಂಬ್ಳೆ ಇಂದಿನಿಂದ ೧೦೦ರ ಒಡೆಯ. (ಇದೀಗಷ್ಟೇ) ಇಂಗ್ಲೆಂಡ್ ವಿರುದ್ಧ ೧೦೦ ರನ್ ಗಳಿಸಿದ, ನಮ್ಮ ಕುಂಬ್ಳೆ. ಎಲ್ಲಕ್ಕಿಂತ ಖುಷಿ ಕೊಡುವುದು, ಕುಂಬ್ಳೆ ೧೦೦ರ ಗಡಿ ದಾಟಿದ್ದ ರೀತಿ. ಈ ರೀತಿ ನೂರರ ಗಡಿ ದಾಟುವುದು ತುಂಬಾ ತುಂಬಾ ಅಪರೂಪ.
ನಮ್ಮ ಕುಂಬಿಗೆ ಮತ್ತೊಮ್ಮೆ ಕೂರ್ಮೆಯ ಕಂಗ್ರಾಟ್ಸ್, ನಲ್ಕೆ.

- Sunil Jayaprakash ರವರ ಬ್ಲಾಗ್
- Login or register to post comments
- 538 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಕುಂಬ್ಳೆಗೆ ನೂರರ ನಲ್ಕೆ
ಕುಂಬ್ಲೆ-ಶ್ರೀನಾಥ್ ಬೆಂಗಳೂರಿನಲ್ಲಾಡಿದ ಜತೆಯಾಟ,ಅವರ ತಾಯಂದಿರ ಖುಷಿ, ಟಿ.ವಿ.ಯಲ್ಲಿ ನೋಡಿದ ಯಾರೂ ಮರೆತಿರಲಾರರು.ಪಾಕಿಸ್ತಾನದ ವಿರುದ್ಧ ೧೦ ವಿಕೆಟ್ ಪಡೆದುದು ಎರಡನೆಯದ್ದು.ಈ ದಿನದ ಸೆಂಚುರಿ ಸಂತೋಷದ ಹ್ಯಾಟ್ರಿಕ್
ಉ: ಕುಂಬ್ಳೆಗೆ ನೂರರ ನಲ್ಕೆ
ಇವತ್ತಿನದು ಜಂಬೋ ಹಂಡ್ರೆಡ್! ನಿದ್ರೆಗಣ್ಣಿನಲ್ಲಿ ನಾನೂ ಒಂದಷ್ಟು ಈ ವಿಷಯವಾಗಿಯೇ ನನ್ನ ಬ್ಲಾಗಿನಲ್ಲಿ ಬರೆದೆ... ಸಮಯವಾದರೆ ಓದಿ.
--
ನನ್ನ ಬ್ಲಾಗ್:
ಪರಿವೇಶಣ | PariveshaNa