ಹುಡುಗಾಟದ ಪಾಟ
ಐಬೇ ಬೇಡ, ಇವು ಹುಡುಗಾಟದ ಹಾಡುಗಳು(ಪಾಟಗಳು). ನೊ ನೊ ನೊ ನೊ ನೋ ಕಾಮೆಂಟ್ಸ್ ![]()
೧. ಏನೋ ಒಂಥರಾ, ಏನೋ ಒಂಥರಾ, ಈ ಪ್ರೀತಿಯು, ಈ ರೀತಿಯು ಶುರುವಾದ ಆನಂತರ.
೨. ಸ್ಟೈಲೋ ಸ್ಟೆಲೋ ಚಿಕುಲಾಕ ಚಿಕುಲಾಕ ಸ್ಟೈಲೋ ಸ್ಟೈಲೋ ಜಗಮಗ ಜಗ ಸ್ಟೈಲೋ ![]()
೩. ಮಂದಾಕಿಣಿಯೇ ನೀ ಸಿಡಿಲಿನ ಕಿಡಿಯೆ, ಮಂದಾಕಿನಿಯೇ ನಮ್ಮ ಸುಡಬೇಡ ತಡಿಯೇ - ಎಲ್ಲವೂ ಪಡ್ಡೆ ಹುಡುಗರ ಹಾಡುಗಳು
ಹಿಟ್ಟಾಗುವುದರಲ್ಲಿ ಐಬೇ ಬೇಡ.
ಮಾಧುರ್ಯ(??)
೪. ನೆನಪಾಗದೆ ನೆನಪಾಗದೆ ಏಏ, ಆ ಕ್ಷಣಗಳು
ಓವಿ ಮಾಧುರ್ಯ ಓಸಿ ಬೀಟ್ಸು
೫. ಅರೆ ಅರೆ ಸಾಗುತಿದೆ, ಪ್ರೀತಿಯ ಗಾಳಿಗೆ, ನಿನ್ನಯ ದೋಣಿಯು, ಎಲ್ಲಿಗೆ ಹೋಗುತಿದೆ. ಪ್ರೇಮಿಯ ಪಾಡು ಅಯ್ಯೋ ನೋಡಲಾರೆ. - ಸಖತ್ತಾಗಿದೆ.
೬. ಒಮ್ಮೊಮ್ಮೆ ಹೀಗೂ ಆಗುವುದು ಎಲ್ಲಿಯೋ ಮನಸು ಜಾರುವುದು - ಅಲೀಷಾ ಚಿನಾಯ್ ಹಾಡಿರುವುದು.
೭. ಇಷ್ಟು ಜನ ಚೆಲುವೇರಲ್ಲಿ, ನಮ್ಮ ಚೆಲುಚೆಲುವ ಯಾರೋ.
ಒಟ್ಟಿನಲ್ಲಿ ನನಗಂತೂ ತುಂಬಾ ಇಷ್ಟವಾಯಿತು. ಮುಂಗಾರು ಮಳೆಯ ನಂತರದ ತಾಂವನ್ನು ಇದು ತುಂಬುತ್ತದೆಯೇ ನೋಡಬೇಕು. ಎಲ್ಲ ಹಾಡುಗಳನ್ನು ಕನ್ನಡಆಡಿಯೋ.ಕಾಂನಿಂದ ಕೇಳಬಹುದು. ಈದಿನವೇ ಊಟದ ಹೊತ್ತಿನಲ್ಲಿ ಇದರ ಆಡಿಯೋ ಸಿಡಿ ಕೊಂಡುಕೊಳ್ಳುವೆ.

- Sunil Jayaprakash ರವರ ಬ್ಲಾಗ್
- Login or register to post comments
- 500 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಹುಡುಗಾಟದ ಪಾಟ
ಹಾಡುಗಳು ಚೆನ್ನಾಗಿವೆ. ಕೊರಲು ಕ್ವಾಲಿಟಿ ಚೆನ್ನಿದೆ.
ಉ: ಹುಡುಗಾಟದ ಪಾಟ
ಹಾಡುಗಳು ಚೆನ್ನಾಗಿವೆ..ಇದರಲ್ಲಿ 'ಮಂದಾಕಿನಿಯೇ' ಹಾಡು 'ಲಜ್ಜವತಿಯೇ' ಎಂಬ ಮಲಯಾಳೀ ಹಾಡಿನ ರಿಮೇಕು ಅಂತೆ..ಈ ಸಿನೆಮಾದ ಪ್ರಚಾರವನ್ನು ಟಿವಿಯಲ್ಲಿ ಪ್ರಾರಂಭಿಸಿದ್ದಾರೆ..ಸಿನೆಮಾನೂ ಚೆನ್ನಾಗಿರುವ ಹಾಗಿದೆ..
ಸಿನೆಮಾದ ಹಾಡುಗಳನ್ನು ಬಿಟ್ಟಿಯಾಗಿ ನೆಟ್ಟಿನಿಂದ ಇಳಿಸಿಕೊಂಡಿದ್ದೇನೆ..ಸಿಡಿ ತಗೋಬೇಕು..
ಉ: ಹುಡುಗಾಟದ ಪಾಟ
ಶಿವ ಅವರೆ, ನೀವು ಇದನ್ನು ತೋರಿದ ಮೇಲೆ, ನಾನು "ಲಜ್ಜಾವದಿಯೇ" ಹಾಡನ್ನು ಕೇಳಿ ನೋಡಿದೆ. "ಮಂದಾಕಿನಿಯೇ" ಎಂಬುದು ಮಲಯಾಳೀ ಹಾಡಿನ ರೀಮೇಕು. ಹಾಡಿದವರೂ ಕೂಡ ಜೆಸ್ಸಿ ಗಿಫ್ಟೇ. ನನಗೆ ಕಾಣಿಸಿದ(ಕೇಳಿಸಿದ) ವ್ಯತ್ಯಾಸವೇನೆಂದರೆ, ಮಲಯಾಳಿ ಹಾಡಿನಲ್ಲಿ ಹುಡುಗಿಯ ಧ್ವನಿ ಕೇಳಿಸಲಿಲ್ಲ. ಆದರೆ ಮಂದಾಕಿನಿಯೇ ಹಾಡಿನಲ್ಲಿ ವಸುಂಧರಾ ದಾಸ್ ಅವರ ಧ್ವನಿಯೂ ಇದೆ.
ಕುಚೇಷ್ಟೆಗೆ...ಮಂದಾಕಿನಿಯೇ ಹಾಡಿನ ಧಾಟಿಯಲ್ಲಿ ಜೆಸ್ಸಿ(ಜೆ) ಮತ್ತು ವಸುಂಧರಾ ದಾಸ್(ವ) ಹೀಗೆ ಹಾಡಿದರೆ ಹೇಗಿರುತ್ತೆ.
ಜೆ : ಮಂದಾಕಿನಿಯೇ ನೀ ರೀಮೇಕ್ ಕಿಡಿಯೇ,
ಜೆ : ಮಂದಾಕಿನಿಯೇ ನಮ್ಮ ಸುಡಬೇಡ ತಡಿಯೇ.
ವ : ಸುದೀಪ್ನದೂ, ನಾರಾಯಣ್ದೂ ರೀಮೇಕ್ನದೇ ಗುಂಗು,
ಜೆ : ಇದೇ ಪುಂಗು ಬೇರೆಯವ್ರ್ ಗೂ ಏಕೆ ಬಡಿತು ಬಂದು.
ವ : ಕದ್ದು ಕದ್ದು ಹಾಕ್ತಾರೆ,
ಜೆ : ಹೇ...ಪಾಪ ಇನ್ನೇನ್ ಮಾಡ್ತಾರೆ.
ವ : ಚೆನ್ನಾಗಿದ್ರೆ ಯಾವ ಟ್ಯೂನ್ನು ಸುಮ್ನೆ ಬಿಡರು ಎಂದು.
ಜೆ : ಮಂದಾಕಿನಿಯೇ ನೀ ರೀಮೇಕ್ ಕಿಡಿಯೇ.......................
ಇನ್ನು ತುಸು ದಿನಗಳ ನಂತರ, ಆಟೋ ಟ್ಯಾಕ್ಸಿಗಳ ಮೇಲೆ ಹಾಡುಗಾಟದ ಹಾಡುಗಳು ನಲಿದಾಡುವುದರಲ್ಲಿ ಐಬೇ ಇಲ್ಲ.
ಉ: ಹುಡುಗಾಟದ ಪಾಟ
ನೆನ್ನೆ ತಿಳಿದದ್ದೇನೆಂದರೆ, "ಸ್ಟೈಲೋ ಸ್ಟೈಲೋ" ಹಾಡು ಕೂಡ ಮಲಯಾಳಂನ "ಬೊಮ್ಮ ಬೊಮ್ಮ" ಎಂಬ ಹಾಡಿನ ರೀಮೇಕಂತೆ.
ಉ: ಹುಡುಗಾಟದ ಪಾಟ
"ಸ್ಟೈಲೋ ಸ್ಟೈಲೋ" ಹಾಡು ಮಲೆಯಾಳದ "ಬೊಮ್ಮ ಬೊಮ್ಮ" ಹಾಡಿನ ರೀಮೇಕ್, ಹೌದು. ಆದರೆ ನನ್ನ ಸಮಸ್ಯೆ ಏನೆಂದರೆ ಎಂಡಮ್ಮೋ, ಪಾರ, ಚೇಚಿ ಮುಂತಾದವುಗಳ ಅರ್ಥ ಗೊತ್ತಾಗುವುದಿಲ್ಲ. ಮೂಲ ಹಾಡಿನಲ್ಲಿ ಅವುಗಳಿಗೆ ನಿರ್ದಿಷ್ಟ ಅರ್ಥ ಇದ್ದಿರಬಹುದು.
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು