ಈ ದಿನದ ಆಟೋ ಸುದ್ಧಿ
ನನಗೆ ಈ ಆಟೋಗಳೆಂದರೆ ಅದೇನೋ ತುಂಬಾ ಕುತೂಹಲ. ಅದಕ್ಕೆ ಅನೇಕ ಕಾರಣಗಳಿದೆ. ಆಟೋ ಹಿಂಬದಿಯಲ್ಲಿ ಬರೆಯಲ್ಪಡುವ "ನುಡಿಮುತ್ತು"ಗಳನ್ನು ಓದುವ ಚಟವೂ ಕೂಡ ಅದರಲ್ಲೊಂದು.
ಇನ್ನು ಮೇಲೆ ನಾನು, ಈ "ನುಡಿಮುತ್ತುಗಳ" ಸಂಗ್ರಹ ಮಾಡಬೇಕೆಂದಿರುವೆ. ಸಾಧ್ಯವಾದರೆ ನೀವು ಕೂಡ ದಾಖಲಿಸುತ್ತಾ ಹೋಗಿ, ತುಂಬಾ ಮಜಾ ಬರುತ್ತದೆ.
ಈ ದಿನದ ಆಟೋನುಡಿ,
"ಮನಸ್ಸಿಗೆ ಬಂದವಳು, ಮನೆಗೆ ಬರುತ್ತಾಳಾ..?"
ಜಾಸ್ತಿ ಯೋಚಿಸಬೇಡಿ, ಬಂದೇ ಬರುತ್ತಾಳೆ ಎಂದು ಹೇಳೋಣ ಅಂತಿದ್ದೆ, ಆದರೆ ಅಷ್ಟರಲ್ಲಾಗಲೇ ಅವನು ಮಾರುದೂರ ಹೋಗಿಬಿಟ್ಟಿದ್ದ.

- Sunil Jayaprakash ರವರ ಬ್ಲಾಗ್
- Login or register to post comments
- 579 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: