ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › Sunil Jayaprakash ರವರ ಬ್ಲಾಗ್

ಶಿಖರಸೂರ್ಯ

December 11, 2006 - 10:51pm — Sunil Jayaprakash

ಸಂಪದದಲ್ಲಿ ಪ್ರಕಟವಾಗಿದ್ದ ಇಂದಿನ ಕಾರ್ಯಕ್ರಮದ ವೇಳಾಪಟ್ಟಿಯನ್ನು ಸುದ್ಧಿಯನ್ನು ನೋಡಿದ್ದೆ. ಹೋಗಲಾಗುತ್ತದೆಯೋ ಇಲ್ಲವೋ ಎಂಬುದಾಗಿ ಬೆಳಗ್ಗಿನಿಂದಲೂ ಯೋಚಿಸುತ್ತಿದ್ದೆ. ಹೇಗಾದರಾಗಲೀ ಆಫೀಸಿನಿಂದ ಮನೆಗೆ ಹೋಗುವಾಗ ಹೋಗೋಣ ಎಂದುಕೊಂಡಿದ್ದೆ. ಎಷ್ಟೇ ಬೇಗ ಹೋಗೋಣ ಎಂದರೂ ನಾನು ಹೋಗುವ ವೇಳೆಗೆ ೬:೪೫ - ೭:೦೦ ಗಂಟೆಯಾಗಿತ್ತು. ಅಷ್ಟರಲ್ಲಿ ಡಾ. ಚಂದ್ರಶೇಖರ ಕಂಬಾರರ ಕಾದಂಬರಿ ಶಿಖರಸೂರ್ಯದ ಮೊದಲ ಬಿಡುಗಡೆಯಾಗಿ ಹೋಗಿತ್ತು. ಶಿಖರಸೂರ್ಯ, ಸುಮಾರು ವರ್ಷಗಳ(೨೪ ಇರಬೇಕು) ನಂತರ ಬಿಡುಗಡೆಯಾದ ಡಾ. ಚಂದ್ರಶೇಖರ ಕಂಬಾರರ ಕಾದಂಬರಿಯಿದು.

ನಾನು ಹೋಗುವಷ್ಟರಲ್ಲಿ ಶ್ರೀ ಎಚ್. ಎಸ್. ಶಿವಪ್ರಕಾಶ್ರವರ ಮಾತುಗಳು ಮುಗಿದುಹೋಗಿತ್ತು, ಹಾಗೆಯೇ ಡಾ| ಎಲ್. ಹನುಮಂತಯ್ಯನವರ ಮಾತು ಇನ್ನೇನು ಮುಗಿಯುವುದಲ್ಲಿತ್ತು. ನಾನು ಹೋಗಿ ಕುಳಿತಾಗ, ಎಲ್.ಹನುಮಂತಯ್ಯನವರು ಮಾತನಾಡುತ್ತಾ, ಶಿಖರಸೂರ್ಯದಲ್ಲಿ ಬರುವ ಭೀಕರತೆಯ ಬಗ್ಗೆ ವಿವರಿಸುತ್ತಿದ್ದರು. "ಸಾಮಾನ್ಯ ಜನರ ತಳಮಳಕ್ಕಿಂತ ರಾಜಕೀಯದವರ ತುಮುಲಗಳು ಅಧಿಕ ಎಂಬುದನ್ನು ಕಾದಂಬರಿಯುದ್ದಕ್ಕೂ ಗಮನಿಸಬಹುದು" ಎಂಬುದು ಅವರ ಅಭಿಪ್ರಾಯವಾಗಿತ್ತು. ನನ್ನ ಪುಣ್ಯಕ್ಕೆ ಶ್ರೀ ಸಿ. ಎನ್. ರಾಮಚಂದ್ರನ್ ರವರು ಇನ್ನೂ ಮಾತನಾಡಿರಲಿಲ್ಲ. ಸಿ.ಎನ್.ರಾಮಚಂದ್ರನ್ ರವರ ಮಾತುಗಳನ್ನು ಕೇಳುವಾಗ ಆನಂದವಾಗುತ್ತದೆ. ಇದಕ್ಕೆ ಬಹುಶಃ ಅವರು ಬಳಸುವ ಪದಗಳಲ್ಲಿರುವ ಸ್ಪಷ್ಟತೆ, ಮತ್ತು ಆ ಪದಗಳ ಉಚ್ಝಾರದ ಜೊತೆ ಅವರು ಪ್ರದರ್ಶಿಸುವ ಹಾವಭಾವ ಕೂಡ ಕಾರಣವಿರಬಹುದು.

ಸಿ.ಎನ್.ರಾಮಚಂದ್ರನ್ ರವರ ಮಾತುಗಳನ್ನು ನಾನು ಅರ್ಥ ಮಾಡಿಕೊಂಡ ರೀತಿಯಲ್ಲಿ ಇಲ್ಲಿ ಹಾಕಲು ಪ್ರಯತ್ನ ಪಟ್ಟಿದ್ದೇನೆ.

ಮಹತ್ವಾಕಾಂಕ್ಷೆಯುಳ್ಳ ಬರಹಗಾರರು ತಮ್ಮ ಕೃತಿಯಲ್ಲಿ ಎಲ್ಲವನ್ನೂ ಬರೆದುಬಿಡಬೇಕು ಎಂದು ಯೋಚಿಸುತ್ತಾರಂತೆ. ಶಿಖರಸೂರ್ಯದಲ್ಲಿ ಆಧುನಿಕತೆ, ಪುರಾಣ ಮತ್ತು ಚರಿತ್ರೆಗಳ ಹೂರಣವಿದೆಯಂತೆ. ಇದರಲ್ಲಿ ಬರುವ ಶಿವಪುರ(ರಿ) ಮತ್ತು ಕನಕಪುರ(ರಿ) ಎಂಬ ಊರುಗಳನ್ನು ಪ್ರಸ್ತಾಪಿಸುತ್ತಾ, ಆ ಎರಡು ಊರುಗಳ ತಾತ್ವಿಕ ನಿಲುವುಗಳು ಈಗಿನ ಜಗತ್ತಿನ (ವಿಶೇಷವಾಗಿ ನಮ್ಮ ದೇಶಕ್ಕೆ ಸಂಬಂಧಪಟ್ಟಂತಹ ಕೆಲವು ಸಂಗತಿಗಳನ್ನು) ಕೆಲವು ಸನ್ನಿವೇಶಗಳನ್ನು ಹೇಳುತ್ತವೆ ಎಂದು ಕೆಲವು ಉದಾಹರಣೆಯನ್ನು ನೀಡುತ್ತಾ ಹೇಳಿದರು. ಅನ್ನದಿಂದ ಚಿನ್ನದಿಂದ ಎಂಬುದು ಒಂದರ ನಿಲುವಾದರೆ ಮತ್ತೊಂದರದು ಚಿನ್ನದಿಂದ ಅನ್ನವಂತೆ. ಹಾಗೆಂದರೇನು ಎಂದು ತಿಳಿಯಲು ಇಡೀ ಕಾದಂಬರಿಯನ್ನು ಓದಬೇಕು.

ಒಟ್ಟಿನಲ್ಲಿ ಪುರಾಣ, ಚರಿತ್ರೆ, ಜನಪದ, ಆಧ್ಯಾತ್ಮ(ಆಧ್ಯಾತ್ಮ ಎನ್ನುವಾಗ ಸಿ.ಎನ್.ರಾಮಚಂದ್ರನ್ ಮೊಗದಲ್ಲಿ ನಗುವಿತ್ತು), ವಿಜ್ಞಾನಗಳನ್ನು ಒಳಗೊಂಡು ಹಾಗೆಯೇ ವಾಸ್ತವಯನ್ನು ಮಗ್ಗುಲಲ್ಲಿ ಇಟ್ಟುಕೊಂಡು, ವಾಸ್ತವಾಕ್ಕೆ ಹೊರತಾದ ವಿಷಯಗಳನ್ನು ಪ್ರತಿಪಾದಿಸುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.

ಕಾರ್ಯಕ್ರಮದ ಕೊನೆಯಲ್ಲಿ, ಅಂಕಿತ ಪುಸ್ತಕದ, ಪ್ರಕಾಶ ಕಂಬತ್ತಳ್ಳಿಯವರು ಡಾ. ಚಂದ್ರಶೇಖರ ಕಂಬಾರರನ್ನು ಅಭಿನಂದಿಸುತ್ತಾ, ತಮ್ಮ ಗುರುಗಳಿಗೆ ಜ್ಞಾನಪೀಠ ಪ್ರಶಸ್ತಿ ಬರಲಿ ಎಂದು ಆಶಿಸಿದರು.

ಚುಟುಕಾದ ವಿವರಣೆ


ಕಾರ್ಯಕ್ರಮ ಮುಗಿದ ನಂತರ, ಪುಸ್ತಕ ಮಳಿಗೆಗೆ ಹೆಜ್ಜೆ ಹಾಕಿದಾಗ, ಶಿಖರಸೂರ್ಯ ಕಣ್ಣಿಗೆ ಬಿತ್ತು. ಶಿಖರಸೂರ್ಯದ ಮುಖಪುಟದಲ್ಲಿ ಸೂರ್ಯನ ಐದು ಕಿರಣಗಳನ್ನು ಕಾಣಬಹುದು. ರೂ.೨೦೦ರ ಮುಖಬೆಲೆಯಿರುವ ಶಿಖರಸೂರ್ಯದಲ್ಲಿ ಸುಮಾರು ೪೧೨ ಪುಟಗಳಿವೆ. ಬಿಡುಗಡೆ ಸಮಾರಂಭವಾದ್ದರಿಂದ ಪುಸ್ತಕವನ್ನು ಶೇಕಡ ೧೦%ರ ರಿಯಾಯಿತಿಯಲ್ಲಿ ನೀಡುತ್ತಿದ್ದರು. ಶಿಖರಸೂರ್ಯನನ್ನು ಕೊಂಡುಕೊಂಡು ಮನೆಗೆ ಹಿಂದಿರುಗಿದೆ. ಓದಿದ ನಂತರ ನನ್ನ ಅಭಿಪ್ರಾಯಗಳನ್ನು ಎಲ್ಲರೊಡನೆ ಹಂಚಿಕೊಳ್ಳುವೆ. ಅಷ್ಟರಲ್ಲಿ ನೀವೂ ಕೂಡ ಸಾಧ್ಯವಾದರೆ ಓದಿ ನೋಡಿ.

ಕಾದಂಬರಿಯ ಹೆಸರು - ಶಿಖರಸೂರ್ಯ
ಬೆಲೆ - ರೂ. ೨೦೦
ಪ್ರಕಟಣೆ - ಅಕ್ಷರ ಪ್ರಕಾಶನ ಹೆಗ್ಗೋಡು (ಸಾಗರ) ಕರ್ನಾಟಕ
ಲೇಖಕರು - ಡಾ. ಚಂದ್ರಶೇಖರ ಕಂಬಾರ
ಅಕ್ಷರ ಜೋಡಣೆ - ಅಕ್ಷರ ಗಣಕ, ಹೆಗ್ಗೋಡು
ಮುದ್ರಣ - ಲಕ್ಷ್ಮಿ ಮುದ್ರಣಾಲಯ, ಚಾಮರಾಜಪೇಟೆ, ಬೆಂಗಳೂರು

~.~
  • Sunil Jayaprakash ರವರ ಬ್ಲಾಗ್
  • Login or register to post comments
  • 494 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 12, 2006 - 3:24am — hpn

Re: ಶಿಖರಸೂರ್ಯ

hpn's picture

ಚೆನ್ನಾಗಿ ಬರೆದಿದ್ದೀಯ ಮಾರಾಯ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 13, 2006 - 2:34am — satisharas

Re: ಶಿಖರಸೂರ್ಯ

satisharas's picture

sunil,

tumba chennagi barediddiri..

nimma next post ge kaaytha iddivi.. Smiling

- Satish

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಆಟೋ ನುಡಿ ೧೨
  • ಬೇಕನ್ (bacn) - ಅಂತರ್ಜಾಲದಲ್ಲಿ ಈಗ ಹೊಸ ಪದ
  • ಕಂಬಾರರ ಹೊಸ ಕಾದಂಬರಿ "ಶಿಖರಸೂರ್ಯ" ಬಿಡುಗಡೆ ಸಮಾರಂಭ
  • ಎಲ್ಲರಿಗೂ ಸ್ವಾಗತ!
  • ರೇಷ್ಮೆ ರುಮಾಲು
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
  • ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?
  • ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
  • ನಿನ್ನ ಮರೆಯಲು ಪ್ರಯತ್ನಿಸಿ ಸೋತಿದ್ದೀನಿ..:(
  • ಓದಿದ್ದು ಕೇಳಿದ್ದು ನೋಡಿದ್ದು-8
  • ಹೀಗೆ ಹೋಗಿ ಹಾಗೇ ಬಂದೆ: "ಯು ಆರ್ ಸೇಯಿಂಗ್ ಬರೀ ಸುಳ್ಳೇ": ಜೈ ಕರ್ನಾಟಕ ಮಾತೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 10:06am
  • anupkumart
    ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
    September 5, 2008 - 9:57am
  • anil.ramesh
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 9:40am
  • anil.ramesh
    ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
    September 5, 2008 - 9:37am
  • Sunil Jayaprakash
    ಉ: ಗಣಪನ ಗಂಡಾಂತರಗಳು ಅನೇಕ
    September 5, 2008 - 9:27am
  • Sunil Jayaprakash
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 8:54am
  • Sunil Jayaprakash
    ಉ: ’ಕೊಲಂಬಿಯ ಪೋಸ್ಟ್ ಆಫೀಸ್’
    September 5, 2008 - 8:53am
  • savithasr
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 8:00am
  • savithasr
    ಉ: ವಿನಾಯಕನ ಇ-ಮೇಲ್!
    September 5, 2008 - 7:48am
  • skakkilaya
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 7:39am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 42 ಅತಿಥಿಗಳು ಆನ್ಲೈನ್ ಇರುವರು.


ಮೊದಲು ಅಬ್ಯಾಸಗಳನ್ನು ನಾವು ಸೃಷ್ಟಿಸುತ್ತೇವೆ, ಅನಂತರ ಅಭ್ಯಾಸಗಳು ನಮ್ಮನ್ನು ಸೃಷ್ಟಿಸುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator